TikTok: ಬ್ಯಾನ್​ ಆಗಿರುವ ಟಿಕ್​ಟಾಕ್​ ಭಾರತಕ್ಕೆ ಮತ್ತೆ ಬರುತ್ತಾ? ಹೊಸ ಅಪ್ಡೇಟ್ ಏನಿದೆ?

ಟಿಕ್​​ಟಾಕ್ ಹಲವು ವಿಶೇಷತೆಯನ್ನು ಒಳಗೊಂಡಿತ್ತು. ಅರಲ್ಲಿ ಹುಡುಗಿಯರು ಹಾಡು ಅಥವಾ ಸಿನಿಮಾ ಡೈಲಾಗ್​​ಗೆ ನಟಿಸಿ ಅದನ್ನು ಈ ಫ್ಲಾಟ್​​ಫಾರ್ಮ್​ನಲ್ಲಿ ಶೇರ್​ ಮಾಡುತ್ತಿದ್ದರು. ಆದರೆ ಚೀನಾ ಕಣ್ಣು ಈ ಆ್ಯಪ್​ ಮೇಲಿದ್ದು, ಇದು ಬಳಕೆದಾರರಿಗೆ ಮುಂದೊಂದು ದಿನ ತೊಂದರೆ ನೀಡಬಹುದು ಎಂಬುದನ್ನು ತಿಳಿದು ಸರ್ಕಾರ ಈ ಆ್ಯಪ್​ ಅನ್ನು ಭಾರತಲ್ಲಿ ಸ್ಥಗಿತ ಮಾಡಿತು.

ಟಿಕ್​ ಟಾಕ್​

ಟಿಕ್​ ಟಾಕ್​

  • Share this:
    ಹಿಂದೊಮ್ಮೆ ಚೀನಾ ಮೂಲದ ಟಿಕ್‌ಟಾಕ್​​ ಭಾರತದಲ್ಲಿ ದೊಡ್ಡ ಮಟ್ಟಿನ ಸೌಂಡ್​ ಮಾಡಿತ್ತು, ಅನೇಕರು ಈ ಆ್ಯಪ್​ ಅನ್ನು ಬಳಸುತ್ತಿದ್ದರು. ಇದರಲ್ಲಿ ಫೀಚರ್ಸ್​ ಬಹು ಬಳಕೆದಾರರನ್ನು ಸೆಳೆದಿತ್ತು. ಭಾರತದಲ್ಲಿ ಹುಡುಗಿಯರು ಇದನ್ನು ಹೆಚ್ಚಾಗಿ ಬಳಸತೊಡಗಿದರು. ಆದರೆ ಟಿಕ್​​ಟಾಕ್ (TikTok)​ ಚೀನಾ (China) ಮೂಲದ್ದಾಗಿದ್ದು, ಇದು ಭಾರತೀಯ ಡೇಟಾ ಖದಿಯುತ್ತಿದೆ ಎಂಬ ಅಂಶ ಬೆಳಕಿಗೆ ಬಂತು. ಬಹುತೇಕ ಭಾರತೀಯ ಫೋನ್​ ಈ ಆ್ಯಪ್​  (App)ಇದ್ದ ಕಾರಣ, ಅವರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಸರ್ಕಾರ (Government) ಈ ಆ್ಯಪ್​ ಅನ್ನು ಭಾರತದಲ್ಲಿ ಬ್ಯಾನ್ (Ban)​ ಮಾಡಿತು. ಆದರೀಗ ವರ್ಷಗಳು ಉರುಳಿದಂತೆ ಟಿಕ್​​ಟಾಕ್ ಮತ್ತೆ ಮರಳಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಇದು ನಿಜವೇ? ಎಂಉ ತಿಳಿಯೋಣ

    ಟಿಕ್​​ಟಾಕ್​ ಹಲವು ವಿಶೇಷತೆಯನ್ನು ಒಳಗೊಂಡಿತ್ತು. ಅರಲ್ಲಿ ಹುಡುಗಿಯರು ಹಾಡು ಅಥವಾ ಸಿನಿಮಾ ಡೈಲಾಗ್​​ಗೆ ನಟಿಸಿ ಅದನ್ನು ಈ ಫ್ಲಾಟ್​​ಫಾರ್ಮ್​ನಲ್ಲಿ ಶೇರ್​ ಮಾಡುತ್ತಿದ್ದರು. ಆದರೆ ಚೀನಾ ಕಣ್ಣು ಈ ಆ್ಯಪ್​ ಮೇಲಿದ್ದು, ಇದು ಬಳಕೆದಾರರಿಗೆ ಮುಂದೊಂದು ದಿನ ತೊಂದರೆ ನೀಡಬಹುದು ಎಂಬುದನ್ನು ತಿಳಿದು ಸರ್ಕಾರ ಈ ಆ್ಯಪ್​ ಅನ್ನು ಭಾರತಲ್ಲಿ ಸ್ಥಗಿತ ಮಾಡಿತು. ಆದರೆ ಇದೇ ಹೆಸರಿನ ಸಾಕಷ್ಟು ಆ್ಯಪ್​ಗಳು ಗೂಗಲ್​ ಪ್ಲೇ ಸ್ಟೋರ್​ನಲ್ಲಿ ದೊರಕುತ್ತಿದೆ ಎಂಬುದನ್ನು ಗಮನಿಸಬೇಕಾಗಿದೆ.

    ಭಾರತದಲ್ಲಿ ಮತ್ತೆ ಸೌಂಡ್​​ ಮಾಡಲಿದೆಯಾ ಟಿಕ್​​ಟಾಕ್ ?

    ಕೆಲವು ತಿಂಗಳ ಹಿಂದೆ, ಟಿಕ್‌ಟಾಕ್‌ನ ಕಂಪನಿ ಬೈಟೆಡಾನ್ಸ್ ಭಾರತದಲ್ಲಿ ಟಿಕ್‌ಟಾಕ್ ಅನ್ನು ಮರುಪ್ರಾರಂಭಿಸುವುದು ಹೇಗೆ ಎಂದು ಮುಂಬೈ ಮೂಲದ ಕಂಪನಿಯೊಂದಿಗೆ ಮಾತನಾಡಿದೆ. ಈಗ, ಪ್ರಮುಖ ಇ-ಸ್ಪೋರ್ಟ್ಸ್ ಮತ್ತು ಗೇಮಿಂಗ್ ಕಂಪನಿಯಾದ ಸ್ಕೈಸ್ಪೋರ್ಟ್ಸ್ ಹೊಸದಾಗಿ ಟಿಕ್‌ಟಾಕ್ ಭಾರತದಲ್ಲಿ ಹಿಂತಿರುಗುತ್ತಿದೆ ಎಂದು ದೃಢಪಡಿಸಿದೆ ಅಂದರೆ ಮತ್ತೊಮ್ಮೆ ಭಾರತದಲ್ಲಿ ಜನರು ಈ ಕಿರು ವೀಡಿಯೊ ಅಪ್ಲಿಕೇಶನ್ ಅನ್ನು ಬಳಸುವ ಸಾಧ್ಯತೆ ಹೆಚ್ಚು ಇದೆ.

    ಇದನ್ನೂ ಓದಿ: Monsoon Life Hacks: ಈ ವಸ್ತುಗಳನ್ನು ಬಳಸಿ ಮಳೆಗಾಲದ ದುರ್ವಾಸನೆಗೆ ಟಾಟಾ ಬೈಬೈ ಹೇಳಿ

    ಸ್ಕೈಸ್ಪೋರ್ಟ್ಸ್‌ನ ಸಿಇಒ ಶಿವ್ ನಂದಿ ಈ ಬಗ್ಗೆ ಮಾತನಾಡಿದ್ದು, ಟಿಕ್‌ಟಾಕ್ ಭಾರತದಲ್ಲಿ ಮತ್ತೊಮ್ಮೆ ಪುನರಾಗಮನವನ್ನು ಮಾಡುತ್ತಿದೆ ಎಂದು ದೃಢಪಡಿಸಲಾಗಿದೆ ಎಂದು ಹೇಳಿದ್ದಾರೆ. ಇದು ಸಂಭವಿಸಿದಲ್ಲಿ ವೀಡಿಯೊ ಗೇಮ್ BGMI ಸಹ ಭಾರತದಲ್ಲಿ 100% ಹಿಂತಿರುಗುತ್ತದೆ ಎಂದು ಶಿವ ನಂದಿ ಹೇಳಿದ್ದಾರೆ. ಕೆಲವು ತಿಂಗಳ ಹಿಂದೆ, ಟಿಕ್​ಟಾಕ್​ ವಿಡಿಯೊ ಹಂಚಿಕೆ ವೇದಿಕೆಯನ್ನು ಭಾರತಕ್ಕೆ ಮರಳಿ ತರಲು ಬೈಟೆಡಾನ್ಸ್ ಹಿರನಂದಾನಿ ಗ್ರೂಪ್‌ನೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ET ವರದಿ ಹೇಳಿದೆ.

    ಆದರೆ ಭಾರತ ಸರ್ಕಾರ ಈ ಬಗ್ಗೆ ಏನನ್ನೂ ಹೇಳಿಲ್ಲ. ಭಾರತಕ್ಕೆ ಈ ಆ್ಯಪ್​ ಬರಲಿದೆಯಾ ಅಥವಾ ಮತ್ತೆ ಇದನ್ನು ಬ್ಯಾನ್​ ಮಾಡಲಿದೆಯಾ ಎಂದು ಕಾದು ನೋಡಬೇಕಿದೆ.

    ಇದನ್ನೂ ಓದಿ: Google Search down: ಗೂಗಲ್ ಸರ್ಚ್​ನಲ್ಲಿ ಸಮಸ್ಯೆ; ಕೆಲ ಹೊತ್ತು ಪರದಾಡಿದ ಬಳಕೆದಾರರು

    ಮತ್ತೆ ಸಮಸ್ಯೆ ತಂದೊಡ್ಡಲಿದೆಯಾ?

    ಭಾರತದಲ್ಲಿ ಟಿಕ್​​ಟಾಕ್​ ಸಾಕಷ್ಟು ಜನರು ಜೀವನಕ್ಕೆ ತೊಂದರೆ ನೀಡಿದೆ. ಅಂದರೆ ಕಂಪನಿಯು ಟಿಕ್​​ಟಾಕ್​ನಲ್ಲಿ ಎಲ್ಲಾ ಮಾಹಿತಿಯನ್ನು ಕಸಿದುಕೊಳ್ಳುತ್ತಿತ್ತು. ಬಳಕೆದಾರನ ಫೋಟೋ, ವಿಡಿಯೋ ಸೇರಿದಂತೆ, ಆತನ ಹೆಸರು ಸ್ಥಳ, ವಿಳಾಸದ ಮಾಹಿತಿಯೂ ಈ ಆ್ಯಪ್​ನಲ್ಲಿ ನಮೂದಿಸಬೇಕಾಗಿತ್ತು. ಆದರೆ ಚೀನಾ ಆ್ಯಪ್​ ಇದಾಗಿದ್ದು, ಎಲ್ಲಾ ಮಾಹಿತಿಗಳು ಚೀನಾಗೆ ರವಾನೆ ಆಗುತ್ತಿತ್ತು ಎಂಬುದನ್ನು ತಂತ್ರಜ್ಜರು ಗಮನಿಸಿದ್ದರು.

    ಮೊದಲಿಗೆ ಟಿಕ್​​ಟಾಕ್​ ಕಿರು ವಿಡಿಯೋ ತಂತ್ರಾಂಶವನ್ನು ಹೊಂದಿದ್ದರು. ಆ ಬಳಿಕ ಟಿಕ್​​ಟಾಕ್ ​ನಲ್ಲಿ ಮೂಲ ರೂಪುರೇಶೆಯು ಬದಲಾಯಿತು. ಅನೇಕರು ಇದನ್ನು ಹಣದ ಮೂಲವಾಗಿ ಬಳಸಲು ಮುಂದಾದರು. ಅಂದರೆ ಖಾಸಗಿ ವಿಡಿಯೋಗಳನ್ನು ಶೇರ್​ ಮಾಡುವ ಮೂಲಕ ಇದರಿಂದ ಹಣ ಗಳಿಸುವ ಕೆಲಸಕ್ಕೆ ಮುಂದಾದರು
    Published by:Harshith AS
    First published: