Sundar Pichai: ಎಲ್ಲರ ಕೆಲಸವನ್ನು AI​ ಇಂಜಿನಿಯರ್ಸ್​​ ಕಸಿದುಕೊಳ್ತಾ ಇದ್ದಾರಾ? ಗೂಗಲ್​ ಸಿಇಓ ಏನಂತಾರೆ?

ಸುಂದರ್ ಪಿಚೈ

ಸುಂದರ್ ಪಿಚೈ

ಗೂಗಲ್​ ಸಿಇಓ ಸುಂದರ್​ ಪಿಚೈ ಅವರು ಪಾಡ್​ಕಾಸ್ಟ್ ​​ ಒಂದರಲ್ಲಿ Artificial Intelligence ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

  • Share this:
  • published by :

ChatGPT ಬಂದ ನಂತರ ಕೃತಕ ಬುದ್ಧಿಮತ್ತೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಚಾಟ್​​ಬಾಟ್​ಗಳು ಎಂಜಿನಿಯರ್ಸ್ ಕೆಲಸಕ್ಕೆ ಹೊಡೆತ ಕೊಡಲಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಬಹುತೇಕ ಕ್ಷೇತ್ರದ ಕೆಲಸಗಾರರ ಉದ್ಯೋಗಕ್ಕೆ ಸಂಕಷ್ಟ ಎದುರಾಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಸಾಫ್ಟ್​​ವೇರ್ (Softare​) ದೈತ್ಯರ ಗ್ರಹಿಕೆ ಏನು? ಅನ್ನೋದ್ರ ಚರ್ಚೆ ಕೂಡ ಆಗ್ತಿದೆ. ಈ ನಿಟ್ಟಿನಲ್ಲಿ ಗೂಗಲ್​ ಸಿಇಓ ಸುಂದರ್​ ಪಿಚೈ (CEO Sundar Pichai) ಅವರು ಪಾಡ್​ಕಾಸ್ಟ್ (Podcast)​​ ಒಂದರಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಆ ಮೂಲಕ ಕೃತಕ ಬುದ್ಧಿಮತ್ತೆಯ ವ್ಯಾಪ್ತಿಯ ಬಗ್ಗೆ ಇನ್ನಷ್ಟು ಅರಿವು ಹೆಚ್ಚಿಸುವ ಪ್ರಯತ್ನ ಮಾಡಿದ್ದಾರೆ.


ಬರಹಗಾರರಿಗೆ ಕಷ್ಟ
ಚಾಟ್​ಜಿಪಿಟಿ, ಬಿಂಗ್​ ಎಐ ಮತ್ತು ಬಾರ್ಡ್​ ಈ AI ಕೃತಕ ಬುದ್ಧಿಮತ್ತೆ ಎಲ್ಲರಿಗೂ ಲಭ್ಯವಾಗುತ್ತಿದ್ದಂತೆ ಅನೇಕ ಉದ್ಯೋಗಗಳಿಗೆ ಹೊಡೆತ ಬೀಳುವ ಕಳವಳವಿದೆ. ಈ ಕೃತಕ ಬುದ್ಧಿ ಮತ್ತೆ ಚಾಟ್​ಬಾಟ್​ಗಳು ಕಂಟೆಂಟ್​ ರೈಟಿಂಗ್​​, ಕೋಡ್​ಗಳನ್ನು ಪರಿಶೀಲಿಸುವುದು ಮತ್ತು ಬರವಣಿಗೆಗೆ ಅನುಗುಣವಾಗಿ ಚಿತ್ರಗಳ ಸೃಜಿಸುವುದು ಇದೆಲ್ಲವನ್ನೂ ಮಾಡುವ ಕಾರಣ ಲೇಖಕರು, ಡಿಸೈನರ್ಸ್​​, ಸಾಫ್ಟ್​ವೇರ್​ ಎಂಜಿನಿಯರ್ಸ್ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.


ನ್ಯೂಯಾರ್ಕ್​​ಟೈಮ್ಸ್​​ನ ಪಾಡ್​ಕಾಸ್ಟ್​ ಸಂದರ್ಶನದಲ್ಲಿ ಸುಂದರ್​​​ ಪಿಚ್ಚೈ ಅವರು ಮಾತನಾಡುತ್ತಾ ಕೃತಕ ಬುದ್ಧಿಮತ್ತೆಗಳಾದ ಚಾಟ್​​​ಜಿಪಿಟಿ, ಬಾರ್ಡ್​​ ಬಗ್ಗೆಯೂ ಮಾತನಾಡಿದ್ದಾರೆ.


ಪ್ರೋಗ್ರಾಮಿಂಗ್​ ಖುಷಿ ಎನಿಸುತ್ತದೆ
ಇನ್ನೂ ಕೃತಕ ಬುದ್ಧಿಮತ್ತೆಗಳ ಋಣಾತ್ಮಕ ಪರಿಣಾಮಗಳ ಬಗ್ಗೆ ಕಳವಳನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಒಂದಿಷ್ಟು ಸಕಾರಾತ್ಮಕ ಅಂಶಗಳ ಬಗ್ಗೆಯೂ ಹೇಳಿದ್ದಾರೆ. ಸಾಫ್ಟ್​ವೇರ್​ ಎಂನಿಯರ್​ಗಳು ಸಾಮಾನ್ಯವಾಗಿ ನಿರ್ವಹಿಸುವ ಕೆಲವು ಬೋರಿಂಗ್​ ಟಾಸ್ಕ್​ಗಳು ಮತ್ತು ಪುನರಾವರ್ತಿತ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸುವ ಮೂಲಕ ಕೃತಕ ಬುದ್ಧಿ ಮತ್ತೆ ಪರಿಕರಗಳನ್ನು ಬಳಸುವುದರಿಂದ ಪ್ರೋಗ್ರಾಮಿಂಗ್​ ಹೆಚ್ಚು ಖುಷಿ ನೀಡಬಹುದು ಎನ್ನುತ್ತಾರೆ.


ಇದನ್ನೂ ಓದಿ: ಗೂಗಲ್ ಪಿಕ್ಸೆಲ್​ 7 ಸ್ಮಾರ್ಟ್​​​ಫೋನ್​ ಮೇಲೆ ಫ್ಲಿಪ್​ಕಾರ್ಟ್​​​ನಲ್ಲಿ ಭರ್ಜರಿ ರಿಯಾಯಿತಿ!


ಅಲ್ಲದೇ ಗೂಗಲ್​ ಟಾಕ್​ ಬರವಣಿಗೆಯನ್ನು ಬಹಳಷ್ಟು ಸುಲಭಗೊಳಿಸಿದೆ. ಪ್ರೋಗ್ರಾಮಿಂಗ್​ ಪರಿಕರಗಳಲ್ಲಿ ನಿರ್ಮಿಸಲಾದ AI ಸಹಾಯವು ಸಾಫ್ಟ್​​ವೇರ್​​ ಎಂಜಿನಿಯರ್​​ಗಳಿಗೆ ಪ್ರೋಗ್ರಾಮಿಂಗ್​​ ಪ್ರಕ್ರಿಯೆಯನ್ನು ಸುಗಮ ಮತ್ತು ಸರಳಗೊಳಿಸಿದೆ ಎನ್ನುತ್ತಾರೆ ಸುಂದರ್​ ಪಿಚ್ಚೈ.


ಚಾಟ್​ಜಿಪಿಟಿ ಮತ್ತು ಬಾರ್ಡ್​​ ರೀತಿಯ ಪರಿಕರಗಳ ಕಾರಣದಿಂದ ಪ್ರೋಗ್ರಾಮಿಂಗ್​​ ಹೆಚ್ಚು ಜನರಿಗೆ ಲಭ್ಯವಾಗುತ್ತಿದೆ. ಇದರಿಂದ ಬಳಕೆದಾರರು ಹೊಸ ವಿಷಯ ಸೃಷ್ಟಿಸಲು ಸಾಧ್ಯವಾಗುತ್ತದೆ. ಇದು ವಿಭಿನ್ನ ಪಾತ್ರಗಳ ರಚನೆಗೆ ಕಾರಣವಾಗಬಹುದು.


ಎಲ್ಲ ದೇಶದಲ್ಲೂ ಬಾರ್ಡ್​ ಇಲ್ಲ
ಬಾರ್ಡ್ ಅನ್ನು ಗೂಗಲ್​ ಎಲ್ಲಾ ದೇಶಗಳಲ್ಲಿ ಬಿಡುಗಡೆ ಮಾಡಿಲ್ಲ. ಕೆಲವು ಆಯ್ದ ದೇಶಗಳಲ್ಲಿ ಕೆಲವು ಬಳಕೆದಾರರಿಗಷ್ಟೇ ಇದು ಲಭ್ಯವಿದೆ. ಅಲ್ಲದೇ ಬಾರ್ಡ್​​ ಚಾಟ್​​ಜಿಪಿಟಿ , ಮೈಕ್ರೋಸಾಫ್ಟ್​​ನ ಬಿಂಗ್​ ಚಾಟ್​ಗಿಂತ ಭಿನ್ನವಾಗಿ ಆರಂಭವನ್ನು ಹೊಂದಿತ್ತು. ಗೂಗಲ್​ ತಂತ್ರಜ್ಞಾನ ಸುಧಾರಿಸಲು ಗೂಗಲ್​ ಕಾರ್ಯ ನಿರ್ವಹಿಸುತ್ತಿದೆ ಎಂದಿದ್ದಾರೆ. ಅಲ್ಲದೇ ಇನ್ನಿತರ ಕೃತಕ ಬುದ್ಧಿ ಮತ್ತೆಗೆ ಹೋಲಿಸಿದರೆ ಬಾರ್ಡ್​​ ಪ್ರಸ್ತುತ ರೇಸ್​​ನಲ್ಲಿ ಹಿಂದುಳಿದಿದೆ ಎನ್ನುತ್ತಾರೆ. ಅಲ್ಲದೇ ಕೆಲವು ದಿನಗಳಲ್ಲಿ ಬಾರ್ಡ್​​ ಸುಧಾರಿಸಲಿದೆ ಎನ್ನವುದನ್ನು ಹೇಳಿದ್ದಾರೆ.


ಚಾಟ್​ಜಿಪಿಟಿಯಲ್ಲಿ ಅಚ್ಚರಿ ಏನಿಲ್ಲ
ಇದೇ ಸಮಯದಲ್ಲಿ ಇನ್ನಿತರ OpenAIಗಳ ಬಗ್ಗೆ ಕೇಳಿದಾಗ ಅದರ ಬೆಳವಣಿಗೆ ಅವರಿಗೆ ಅಷ್ಟೇನು ಅಚ್ಚರಿ ಎನಿಸಲಿಲ್ಲವಂತೆ.
ಜಿಪಿ2 ಮತ್ತುಜಿಪಿ 3ಗಳು ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತಿವೆ. ಅದರ ಕಾರ್ಯಕ್ಷಮತೆಯನ್ನು ನಾವು ಗಮನಿಸುತ್ತಿದ್ದೇವೆ. ಅಲ್ಲದೇ ಅದರಲ್ಲಿ ಆಶ್ಚರ್ಯ ಪಡುವುದು ಏನಿಲ್ಲ ಎನ್ನುತ್ತಾರೆ.


ಇದನ್ನೂ ಓದಿ: ಬಂಗಾರದ ದರ ಹೆಚ್ಚಳ: ಬೆಳ್ಳಿಯಂತೂ ಮುಟ್ಟಂಗೇ ಇಲ್ಲ: ಹೀಗಿದೆ ಇಂದಿನ ರೇಟ್


ಅಲ್ಲದೇ ತಮ್ಮ ತಂದೆಯವರ 80 ನೇ ಹುಟ್ಟು ಹಬ್ಬವನ್ನು ಯೋಜಿಸಲು ಅವರು LaMDA ಚಾಲಿತ ಬಾರ್ಡ್​​​ ಬಳಸಿದ್ದಾರೆ. ಕೃತಕ ಬುದ್ಧಿಮತ್ತೆಗಳು ಕಲ್ಪನಾಶಕ್ತಿಯನ್ನು ಪ್ರಕಾಶಮಾನವಾಗಿಸಬಹುದು ಎಂದಿದ್ದಾರೆ.




ಒಟ್ಟಿನಲ್ಲಿ ಮಾನವನ ಸೃಷ್ಟಿಸುವ ಕಲೆ, ನಿರ್ಣಯಗಳು, ಕಲ್ಪನೆಗೆ ಸಂಬಂಧಿಸಿದ ವಿಷಯಗಳಲ್ಲಿ ಚಾಟ್​ಜಿಪಿಟಿ ಏನು ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಕೆಲವು ಕ್ಷೇತ್ರಗಳ ಉದ್ಯೋಗ ಮಾನವನ ಸ್ಪರ್ಶ ಬೇಕೇ ಬೇಕು. ಈ ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಅದರಲ್ಲಿ ಯಶಸ್ಸು ಗಳಿಸಬಹುದು.

top videos
    First published: