• Home
 • »
 • News
 • »
 • tech
 • »
 • Wikipedia: ವಿಕಿಪೀಡಿಯಾದಲ್ಲಿ ಕನ್ನಡ  ಭಾಷೆಯ ನಿರ್ಲಕ್ಷ್ಯ- ಕನ್ನಡಿಗರ ಆಕ್ರೋಶ

Wikipedia: ವಿಕಿಪೀಡಿಯಾದಲ್ಲಿ ಕನ್ನಡ  ಭಾಷೆಯ ನಿರ್ಲಕ್ಷ್ಯ- ಕನ್ನಡಿಗರ ಆಕ್ರೋಶ

ವಿಕಿಪಿಡಿಯಾ

ವಿಕಿಪಿಡಿಯಾ

ಹೌದು ಕನ್ನಡ ಭಾಷೆ ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಅದರೆ ಈ ಭಾಷೆಯ ಬಳಕೆ ಕಡಿಮೆಯಾಗುತ್ತಿದೆ. ಅದರ ಜೊತೆಗೆ ವಿಕಿಪಿಡಿಯಾದ ಬಗ್ಗೆ ನೆಟ್ಟಿಗರು ಮಾತಾಡುವಂತಾಗಿದೆ. ಅದೇನು ಗೊತ್ತಾ?

 • Share this:

   ಹೌದು ಕನ್ನಡ ಭಾಷೆ (Kannada) ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದು. ಪಂಚ ದ್ರಾವಿಡ (Pancha Dravida) ಭಾಷೆಗಳಲ್ಲಿ(Language) ಕನ್ನಡಕ್ಕೆ ಅಗ್ರಪಂಕ್ತಿ. ಇಷ್ಟೆಲ್ಲ ಇದ್ದರೂ ಭಾಷಾ ಸಂವಹನಕ್ಕೆ ಹೋಲಿಕೆ (Comparison) ಮಾಡಿದರೆ ಕನ್ನಡ ಮಾತನಾಡುವವರ ಸಂಖ್ಯೆ ಬಹಳ ವಿರಳ. ವಿಶ್ವ ಮಾನವ ಕುವೆಂಪು (Kuvempu) ಹೇಳಿದಂತೆ ಎಲ್ಲಾದರೂ ಇರು ಎಂತಾದರೂ ಇರು ನೀನು ಕನ್ನಡದ ಕಂದನಾಗಿರು. ಬಹುಶಃ ಇಂದಿಗೆ ಈ ಮಾತು ಅಪ್ರಸ್ತುತ. ಇತರೆ ಭಾಷಾ ಪ್ರಭಾವದಿಂದಾಗಿ ಕನ್ನಡದ ಅಚ್ಚ ಸೊಗಡಿನ ಭಾಷೆಗಳು ನೆಲಕಚ್ಚಿದೆ ಎಂದರೆ ತಪ್ಪಾಗಲಾರದು. ಇತ್ತೀಚಿಗೆ ಕನ್ನಡ ಭಾಷೆ ಬಳಕೆ ಕಡಿಮೆಯಾಗುತ್ತಿದೆ. ಅದರ ನಡುವೆಯೇ ವಿಕಿಪೀಡಿಯಾದಲ್ಲಿ ಕನ್ನಡ ಭಾಷೆಯ ಅನುವಾದ ಸಿಗುತ್ತಿಲ್ಲ ಎನ್ನುವ ಕೂಗು ಕೇಳಿಬರುತ್ತಿದೆ.


  ಇಡೀ ಜಗತ್ತಿನಲ್ಲಿ 2000 ಕ್ಕಿಂತಲೂ ಅಧಿಕ ಭಾಷೆಗಳಿವೆ ಆದರೆ ಕನಿಷ್ಟ ಒಬ್ಬ ವ್ಯಕ್ತಿ ಕನ್ನಡವನ್ನು ಕಲಿಯುವುದು ಮುಖ್ಯವಾಗಿರುತ್ತದೆ. ಕನ್ನಡ ಮಾತೃಭಾಷೆ, ವ್ಯವಹಾರಿಕ ಭಾಷೆಯಾಗಿ ಒಂದಿಷ್ಟು ಭಾಷೆಯನ್ನು ಅರಿತಿರುತ್ತೆವೆ . ನಿಜಕ್ಕೂ ಭಾಷೆ ಇರುವುದೇ ಭಾವನೆಯ ಅಭಿವ್ಯಕ್ತಿಗಾಗಿ, ಸಂವಹನ ಮಾಧ್ಯಮಕ್ಕಾಗಿ. ಕಾಕತಾಳೀಯ ಎಂಬಂತೆ ನಮ್ಮಲ್ಲಿ ಆದಿವಾಸಿ ಸಮುದಾಯಗಳು ಇಂದಿಗೂ ಭಾಷೆ ಅರಿಯದೆ ಸಮಾಜದ ಮುನ್ನಲೆಗೆ ಬರುವಲ್ಲಿ ಸೋತಿವೆ. ಇದಕ್ಕೆ ಕಾರಣ ಏನೆಂದು ನೀವೊಮ್ಮೆ ಯೋಚಿಸಿ  ಕನ್ನಡವನ್ನು ಮೊದಲು ಆಡಳಿತ ಭಾಷೆಯನ್ನಾಗಿ ಮಾಡಿದ್ದೇ ಕದಂಬರು. ಹಾಗದರೆ ಕನ್ನಡ ಇತಿಹಾಸದ ಬಗ್ಗೆ ಬೇರೆ ದಾಖಲೆಗಳು ತಡಕಾಡುವ ಅವಸರ ಅನಗತ್ಯ. ರಾಷ್ಟ್ರೀಯ ಭಾಷಾ ನೀತಿಯೂ ಮುಂದೂದು ದಿನ ಪ್ರಾದೇಶಿಕ ಭಾಷಾ ಸಂಪತ್ತಿಗೆ ಹಾನಿ ತರುವ ಸಾಧ್ಯತೆಗಳಿವೆ ಎನ್ನುವುದು ಖಚಿತವಾಗುವ ದಿನ ಹತ್ತಿರ ಬರುತ್ತಿದೆ.


  ಕೆಲವು ವರ್ಷಗಳ ಹಿಂದೆ ವಿಕಿಪೀಡಿಯಾ ಹೇಗಿತ್ತು ಗೊತ್ತಾ?


  ಕೆಲವು ವರ್ಷಗಳ ಹಿಂದೆ ಕನ್ನಡದಲ್ಲಿ ಏನು ಗೂಗಲ್ ಮಾಡುತ್ತಿದ್ದಾಗ ಅದು ಹೋಗುತ್ತಿದ್ದುದು ಕನ್ನಡ ವಿಕಿಪೀಡಿಯಾದ ಪುಟಗಳಿಗೇ. ಹಾಗಂತ ಅಲ್ಲಿ ಇಂದುಕೂಡ ಮಾಹಿತಿಯ ಮಹಾಸಂಗ್ರಹವಿದೆ ಎಂದಲ್ಲ. ಅಂತರಜಾಲದ ಗೂಗಲ್ ಹುಡುಕಾಟಕ್ಕೆ ಸಿಗುವಂತಿದ್ದ ಕನ್ನಡ ಪಠ್ಯ ಕನ್ನಡ ವಿಕಿಪಿಡಿಯಾದಲ್ಲಷ್ಟೇ ಇತ್ತು. ಸದ್ಯ ಹಿಂದಿ, ತಮಿಳು, ತೆಲುಗು, ಮಲೆಯಾಳ, ಮರಾಠಿ ಸೇರಿದಂತೆ ದೇಶದ 21 ಭಾಷೆಗಳಲ್ಲಿ ವಿಕಿಪಿಡಿಯಾ ಲಭ್ಯವಿದೆ. ಆದರೆ ಇತರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ಪ್ರಗತಿ ಉತ್ತಮವಾಗಿಲ್ಲ ಎಂಬುದು ಒಪ್ಪಿಕೊಳ್ಳಬೇಕು.


  ವಿಕಿಪಿಡಿಯಾ


  ಇದನ್ನೂ ಓದಿ:  Twitter: ಎಲಾನ್ ಮಸ್ಕ್​ರಿಂದ ಮತ್ತೊಂದು ನಿರ್ಧಾರ! ಭಾರತದಲ್ಲಿ 54,000 ಕ್ಕೂ ಅಧಿಕ ಟ್ವಿಟರ್ ಖಾತೆ ಬ್ಯಾನ್


  ವಿಕಿಪಿಡಿಯಾದ ಸಾಲುಗಳು ಓದುವಂತಿಲ್ಲ


  ಕನ್ನಡ ವಿಕಿಪೀಡಿಯಾ 2004ರ ಜೂನ್ ತಿಂಗಳಲ್ಲಿ ಆರಂಭವಾಯಿತು. ಆದರೆ ಅಧಿಕೃತವಾಗಿ ಜನರ ಬಳಕೆಗೆ ಮುಕ್ತವಾಗಿದ್ದು 2004ರ ಸೆಪ್ಟೆಂಬರ್‌ನಲ್ಲಿ. ಈಗ ಕನ್ನಡ ವಿಕಿಪಿಡಿಯದ ಒಡಲಲ್ಲಿ ಅನೇಕ ಲೇಖನಗಳಿವೆ. ಆದರೆ, ಈ ಪೈಕಿ ಅನೇಕ ಲೇಖನಗಳು ಗೂಗಲ್ ಟ್ರಾನ್ಸಲೇಟ್ ಮಾದರಿಯಲ್ಲಿದ್ದು, ಓದುಗರಿಗೆ ಪರಿಪೂರ್ಣ ಮಾಹಿತಿ ನೀಡುತ್ತಿಲ್ಲ. ಅದರಲ್ಲಿರುವ ಪದಗಳು, ಸಾಲುಗಳು ಗಟ್ಟಿತನವನ್ನು ಹೊಂದಿಲ್ಲ ಎಂದೇ ಹೇಳಬಹುದು.


  ಇದನ್ನೂ ಓದಿ: Maruti Suzuki: ಕಾರು ಪ್ರಿಯರಿಗೆ ಗುಡ್​ ನ್ಯೂಸ್, ಕೈಗಟಕುವ ದರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಮಾರುತಿ ಸುಜುಕಿ!


  ಇಂದು ನಾವಷ್ಟೇ ಅಲ್ಲ ಕೋಟ್ಯಾಂತರ ಮಂದಿ ವಿಕಿಪೀಡಿಯಾದಿಂದ ಮಾಹಿತಿಯನ್ನು ಪಡೆದುಕೊಳ್ಳುವವರಿದ್ದಾರೆ. ಕನ್ನಡ ಕಲಿಯುವವರಿಗೆ, ಭಾಷಾಭಿಮಾನಿಗಳಿಗೆ ಹಾಗೂ ಅಗತ್ಯ ಮಾಹಿತಿ ಹುಡುಕುವವರಿಗೆ ವಿಕಿಪೀಡಿಯಾದಲ್ಲಿ ಕನ್ನಡ ಸಾಹಿತ್ಯ ಸೃಷ್ಟಿ ಮಾಡಬೇಕು. ಜನರಿಂದ ಜನರಿಗಾಗಿ ಜನರೇ ನಡೆಸುವ ವಿಶ್ವಕೋಶಕ್ಕೆ ಅಗತ್ಯ ಮಾಹಿತಿಗಳನ್ನು ಅಳವಡಿಕೆ ಮಾಡಬೇಕು. ಕನ್ನಡ ಭಾಷೆ ಹಾಗೂ ಸಂಸ್ಕೃತಿ, ಸಂಸ್ಕಾರಗಳನ್ನು ಅನ್ಯರಿಗೂ ಪರಿಚಯಿಸುವ ನಿಟ್ಟಿನಲ್ಲಿ ಕನ್ನಡ ವಿಕಿಪೀಡಿಯಾ ಇನ್ನಷ್ಟು ಬೆಳಯಬೇಕು. ಈ ಬೆಳವಣಿಗೆ  ಅದಷ್ಟು ಬೇಗ ಆಗಬೇಕು ಅನ್ನುವುದು ವಿಕಿಪೀಡಿಯಾ ಬಳಕೆದಾರರ ಆಶಯವಾಗಿದೆ.

  Published by:Harshith AS
  First published: