10 ವರ್ಷದ ಬಳಿಕ ವೈಫೈ ಕ್ಷೇತ್ರದಲ್ಲಿ ಬಂದ ಭದ್ರತಾ ಅಪ್​ಡೇಟ್​ ಏನಿದೆ ಹೊಸತು?


Updated:June 27, 2018, 1:35 PM IST
10 ವರ್ಷದ ಬಳಿಕ ವೈಫೈ ಕ್ಷೇತ್ರದಲ್ಲಿ ಬಂದ ಭದ್ರತಾ ಅಪ್​ಡೇಟ್​ ಏನಿದೆ ಹೊಸತು?
Representational image

Updated: June 27, 2018, 1:35 PM IST
ಬರೋಬ್ಬರಿ 10 ವರ್ಷದ ಬಳಿಕ ವೈಫೈ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಾಗಿದ್ದು, ಹ್ಯಾಕರ್ಸ್​ಗಳಿಗೆ ಬುದ್ಧಿ ಕಲಿಸಲೆಂದೇ ಇದೀಗ ಈವರೆಗೆ ಬಳಸುತ್ತಿದ್ದ WP2 ಭದ್ರತಾ ವ್ಯವಸ್ಥೆಯ ಬದಲಾಗಿ WP3 ಭದ್ರತಾ ಪ್ರೋಟೋಕಾಲ್​ನ್ನು ಬಳಸಲು ವೈಫೈ ಅಲೈಯನ್ಸ್ ಸಂಸ್ಥೆ ತೀರ್ಮಾನಿಸಿದೆ.

WP3 ಈಗಿರುವ ಭದ್ರತಾ ವೈಶಿಷ್ಟ್ಯಗಳಿಂದ ಹತ್ತು ಪಟ್ಟು ಅಧಿಕ ಭದ್ರತೆಯನ್ನು ಹೊಂದಿದೆ, ಈ ಬಾರಿ ಬಂದಿರುವ ಹೊಸ ಅಪ್​ಡೇಟ್​ನಲ್ಲಿ ಎರಡು ವಿಧಗಳಿದ್ದು, ಉದ್ಯಮ ಕ್ಷೇತ್ರ ಮತ್ತು ಖಾಸಗಿ ಬಳಕೆಗೆ ವಿಶೇಷ ಅಪ್​ಡೇಟ್​ ನೀಡಲಾಗಿದೆ. ಆದರೆ ಈ ಹಿಂದೆ ಬಳಕೆ ಮಾಡುತ್ತಿದ್ದ  WP2ಗೆ ಸೇವೆಯನ್ನು ಪೂರೈಸುವುದಾಗಿ ವೈಫೈ ಅಲೈಯನ್ಸ್​ ಹೇಳಿದೆ.

ಏನಿದು  ವೈಫೈ ಅಲೈಯನ್ಸ್​  ಮತ್ತು WP3 ಹೇಗೆ ಕಾರ್ಯ ನಿರ್ವಹಿಸುತ್ತದೆ? 
ನಾವು   WP3 ಭದ್ರತಾ ಅಪ್​ಡೇಟ್​ ಕುರಿತು ಹೇಳುವ ಮೊದಲು ವೈಫೈ ಅಲೈಯನ್ಸ್​  ಕುರಿತು ತಿಳಿದುಕೊಳ್ಳೊಣ. ವೈಫೈ ಅಲೈಯನ್ಸ್​  ಎಂಬುದು ಏಕಾಧಿಪತ್ಯದ ಸಂಸ್ಥೆಯಾಗಿದ್ದು, ಬಳಕೆಗೆ ಯೋಗ್ಯವಾದ ವೈಫೈ ಡಿವೈಸ್​ಗಳನ್ನು ಪ್ರಮಾಣೀಕರಿಸುವ ಕೆಲಸ ಈ ಸಂಸ್ಥೆ ಮಾಡುತ್ತದೆ. ಹೀಗಾಗಿ ಯಾವುದೇ ಹೊಸ ವೈಫೈ ವ್ಯವಸ್ಥೆಯಿರುವ ವಸ್ತುಗಳು ಮಾರುಕಟ್ಟೆಗೆ ಬಂದರೆ ಇವುಗಳಿಗೆ ಪ್ರಮಾಣ ಪತ್ರ ಬೇಕೆಂದರೆ ಮೊದಲು ಈ ಸಂಸ್ಥೆ ಬಳಿಕ ರುಜು ಹಾಕಿಸಿಕೊಳ್ಳಬೇಕು. 10 ವರ್ಷಗಳ ಕಾಲ ವೈಫೈ ಅಲೈಯನ್ಸ್​ ನೀಡುತ್ತಿದ್ದ ಎಲ್ಲಾ WP2 ಭದ್ರತಾ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪಗಳಿದ್ದವು. ಇದೀಗ WP3 ಅಪ್​ಡೇಟ್​ನ್ನು ತರುವ ಮೂಲಕ ಹ್ಯಾಕರ್ಸ್​ಗಳಿಗೆ ಹೊಸ ಚಾಲೆಂಜ್​ ನೀಡಿದೆ.

WP3 ಹೇಗೆ ಕಾರ್ಯ ನಿರ್ವಹಿಸುತ್ತದೆ? 
ಈ ಬಾರಿ ಬಂದಿರುವ WP3 ಭದ್ರತಾ ಟೂಲ್ಸ್​ ಹೊಸ ಬಲಿಷ್ಟ cryptographic (ಕ್ರಿಪ್ಟೋಗ್ರಾಫಿಕ್​) ವ್ಯವಸ್ಥೆಯನ್ನು ಒಳಗೊಂಡಿದೆ. ಹೀಗಾಗಿ ಈ ಫೀಚರ್​ ಹ್ಯಾಕರ್ಸ್​ಗಳಿಗೆ ನಿಮ್ಮ ಪಾಸ್​ವರ್ಡ್​ನ್ನು ಊಹಿಸಲು ಕೂಡಾ ಅಸಾಧ್ಯವಾಗುತ್ತದೆ. ವೈಫೈ ಸೆಟ್ಟಿಂಗ್​ ಮಾಡುವ ಸಂದರ್ಭದಲ್ಲಿ ನೀವು ಅತ್ಯಂತ ಕಳಪೆ ಪಾಸ್​ವರ್ಡ್​ ನೀಡಿದ್ದರೆ ಬಲಿಷ್ಠ ಪಾಸ್​ವರ್ಡ್​ನ್ನು ವೈಫೈ ರೂಟರ್​ ನಿಮಗೆ ಸಲಹೆ ನೀಡುತ್ತದೆ.

ಇನ್ನು ಉದ್ಯಮ ಕ್ಷೇತ್ರದಲ್ಲಿ ಬಳಕೆಯಲ್ಲಿರುವ ವೈಫೈ ಡಿವೈಸ್​ಗಳಿಗೆ 192 ಬಿಟ್​ಗಳ ಗುಪ್ತಲಿಪಿ ಭದ್ರತೆಯನ್ನು ನೀಡಲಾಗಿದೆ, ಈ ಮೂಲಕ ನೀವು ನೆಟ್​ವರ್ಕ್​ ಮೂಲಕ ಮಾಡುವ ಯಾವುದೇ ವ್ಯಾವಹಾರಿಕ ಕೆಲಸ ಹಾಗೂ ಪಾಸ್​ವರ್ಡ್​ನ್ನು ಮೂರನೇ ವ್ಯಕ್ತಿಗೆ ಊಹಿಸಲೂ ಅಸಾಧ್ಯ.
Loading...

 
First published:June 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ