Iphone 13 Pro: ಈ ಐಫೋನ್​ 13 ಪ್ರೊ ಬೆಲೆ 18 ಲಕ್ಷ! ಯಾಕಿಷ್ಟು ದುಬಾರಿ!

Iphone 13 Pro ಬೆಲೆ 1, 19, 900 ಎಂಬುದು ಗೊತ್ತೇ ಇದೆ. ಆದರೆ ಅದಕ್ಕಿಂತಲೂ ವಿಭಿನ್ನವಾದ ಅಂದರೆ 18 ಲಕ್ಷ ಬೆಲೆಯ ಐಫೋನ್ 13 ಪ್ರೊ ಮಾರುಕಟ್ಟೆಯಲ್ಲಿದೆ!. ಆದರೆ ಯಾಕಿಷ್ಟು ದುಬಾರಿ ಅನ್ನೋ ಕುತೂಹಲ ಕಾಡುತ್ತಿದೆಯಾ? ಇಲ್ಲಿದೆ ಮಾಹಿತಿ.

Iphone 13 Pro

Iphone 13 Pro

 • Share this:
  ಆ್ಯಪಲ್​ ಕಂಪನಿ ಜಾಗತಿಕವಾಗಿ ಹೆಸರು ಗಳಿಸಿಕೊಂಡಿರುವ ಸಂಸ್ಥೆ. ಮಾತ್ರವಲ್ಲದೆ, ದುಬಾರಿ ಐಫೋನ್​ಗಳನ್ನು ತಯಾರಿಸುವ ಸಂಸ್ಥೆಯಾಗಿ ಹೊರಹೊಮ್ಮಿದೆ. ಇತ್ತೀಚೆಗೆ ಆ್ಯಪಲ್​ ಕಂಪನಿ ಐಫೋನ್​ 13 ಸಿರೀಸ್ ಫೋನ್​ಗಳನ್ನು ಪರಿಚಯಿಸಿದೆ. Iphone 13 Pro ಬೆಲೆ 1, 19, 900 ಎಂಬುದು ಗೊತ್ತೇ ಇದೆ. ಆದರೆ ಅದಕ್ಕಿಂತಲೂ ವಿಭಿನ್ನವಾದ ಅಂದರೆ 18 ಲಕ್ಷ ಬೆಲೆಯ ಐಫೋನ್ 13 ಪ್ರೊ ಮಾರುಕಟ್ಟೆಯಲ್ಲಿದೆ!. ಆದರೆ ಯಾಕಿಷ್ಟು ದುಬಾರಿ ಅನ್ನೋ ಕುತೂಹಲ ಕಾಡುತ್ತಿದೆಯಾ? ಇಲ್ಲಿದೆ ಮಾಹಿತಿ. 

  ಕ್ಯಾವಿಯಾರ್​ ಹೆಸರಾಂತ ಕಂಪನಿಗಳಲ್ಲಿ ಒಂದು, ಈ ಸಂಸ್ಥೆ ದುಬಾರಿ ಐಫೋನ್​ಗಳನ್ನ ಸಿದ್ಧಮಾಡುತ್ತದೆ. ಜೊತೆಗೆ  ಐಫೋನ್​ ಕೇಸ್​ಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುತ್ತದೆ. ಅಂದಹಾಗೆಯೇ ಕ್ಯಾವಿಯರ್​ ಐಫೋನ್​ ಅನ್ನ ವಿಭಿನ್ನ ರೂಪಗೊಳಿಸಿ ಮತ್ತು ದುಬಾರಿಯನ್ನಾಗಿಸಿ ಮಾರುತ್ತದೆ. ಅದರಂತೆ ಇತ್ತೀಚೆಗೆ ಬಿಡುಗಡೆಗೊಂಡ Iphone 13 Pro, Iphone 13 Pro Max​ ಸರಣಿಯನ್ನು ರೋಲೆಕ್ಸ್​ ವಾಚ್​ ಮಾದರಿಗಳಂತೆ ಭಿನ್ನವಾಗಿ ಸಿದ್ಧಪಡಿಸಿದೆ.

  ಕ್ಯಾಮಿಯರ್​ ಒಟ್ಟು ಐದು ಮಾದರಿಗಳಲ್ಲಿ ಐಫೋನ್​ 13 ಸೀರೀಸ್​ ಅನ್ನ ಸಿದ್ಧಪಡಿಸಿದೆ. ಅದರಲ್ಲಿ ಐಫೋನ್​ 13 ಪ್ರೊ ಮತ್ತು ಐಫೋನ್​ 12 ಪ್ರೊ ಮ್ಯಾಕ್ಸ್​ ಸೇರಿವೆ. ಸ್ಟೊರೇಜ್​ ಆಯ್ಕೆ ಮೇಲೆ ಐಫೋನ್​ 13 ಪ್ರೊ ಮತ್ತು ಪ್ರೊ ಮ್ಯಾಕ್ಸ್​ ಅನ್ನು ಮಾರಾಟ ಮಾಡುತ್ತಿದೆ. ಗ್ರಾಹಕರಿಗಾಗಿ 4,79, 631 ರೂ ಮತ್ತು 18,50,640 ರೂ ದುಬಾರಿ ಬೆಲೆಗೆ ಸೇಲ್​ ಮಾಡುತ್ತಿದೆ.

  ರೋಲೆಕ್ಸ್‌ನ ರೋಲೆಕ್ಸ್ ಸೆಲ್ಲಿನಿ ಸಂಗ್ರಹದಿಂದ ಐಫೋನ್​ ಸಿದ್ಧಪಡಿಸಲಾಗಿದೆ. ಮಾತ್ರವಲ್ಲದೆ ಇದಕ್ಕೆ ಇಟಾಲಿಯನ್ ಆಭರಣವನ್ನು ಜೋಡಿಸಲಾಗಿದ್ದು ‘‘ಬೆನ್ವೆನುಟೊ’’ ಸೆಲ್ಲಿನಿ ಎಂದು ಇದಕ್ಕೆ ಹೆಸರಿಸಲಾಗಿದೆ. ಐಫೋನ್ 13 ಪ್ರೊ ಮೇಲೆ 18-ಕ್ಯಾರೆಟ್ ಬಿಳಿ ಚಿನ್ನದ ಮತ್ತು ಕೆಳಗಿನ ಭಾಗದಲ್ಲಿ ಕಂದು ಮೊಸಳೆಯ ಚರ್ಮದ ಬಣ್ಣವನ್ನು ಅಂಟಿಸಲಾಗಿದೆ. ಸುತ್ತುವರಿದ ಚೌಕಟ್ಟನ್ನು 18-ಕ್ಯಾರೆಟ್ ಗುಲಾಬಿ ಚಿನ್ನಕ್ಕೆ ಕಸ್ಟಮೈಸ್ ಮಾಡಲಾಗಿದೆ. ಹಾಗಾಗಿ ಇದರ ಬೆಲೆ ಅಂದಾಜು 18 ಲಕ್ಷ.

  ವೃತ್ತಿಪರ ರೇಸಿಂಗ್ ಪ್ರಿಯರಿಗಾಗಿ ರೋಲೆಕ್ಸ್ ಕಾಸ್ಮೊಗ್ರಾಫ್ ಡೇಟೋನಾ ವಾಚ್ ಸಿರೀಸ್​ನಿಂದ ಸ್ಫೂರ್ತಿ ಪಡೆದ ಈ ಐಫೋನ್​ 13 ಪ್ರೊ ಅನ್ನು ತಯಾರಿಸಲಾಗಿದೆ.  ಐಫೋನ್​ 13 ಪ್ರೊ ಮೇಲಿನ ಭಾಗದಲ್ಲಿ ವಿಭಿನ್ನ ಶೈಲಿಯನ್ನು ಹೊಂದಿದೆ, ಆದರೆ ಕೆಳಭಾಗವು ಕರ್ಣೀಯ ಕೌಂಟರ್ ನೇಯ್ಗೆಯೊಂದಿಗೆ ಕಾರ್ಬನ್ ಫೈಬರ್ ಅನ್ನು ಅಳವಡಿಸಿಕೊಂಡಿದೆ. ಹಾಗಾಗಿ ಇದರ ಬೆಲೆ. 5,20,400 ರೂ ಆಗಿದೆ.

  ಐಫೋನ್ 13 ಪ್ರೊ ಮೇಲೆ ಆಲಿವ್ ಕಿರಣಗಳ ಮಾದರಿಯಂತಹ ರೋಲೆಕ್ಸ್-ಡೇಟ್‌ಜಸ್ಟ್ ವಾಚ್ ಸಂಗ್ರಹ ವಿನ್ಯಾಸವನ್ನು ಕಾಣಬಹುದು. ಮೇಲಿನ ಭಾಗವು ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ ಮತ್ತು ಆಲಿವ್-ಹಸಿರು ಬಣ್ಣವನ್ನು ಕೂಡಿದೆ, ಇದಕ್ಕೆ ಟೈಟಾನಿಯಂ ಮತ್ತು ಚಿನ್ನದ ಲೇಪಿತ ಲೋಹವನ್ನು ಬಳಸಲಾಗಿದೆ. ಇದರ ಬೆಲೆ 5,03,400 ರೂ.

  ಇದನ್ನು ಓದಿ: YouTube Stop Working: ಸೆ. 27ರಿಂದ ಈ ಆ್ಯಂಡ್ರಾಯ್ಡ್​ ಫೋನ್​ಗಳಲ್ಲಿ ಯ್ಯುಟೂಬ್​ ಕಾರ್ಯನಿರ್ವಹಿಸುದಿಲ್ಲ!

  ಕೊನೆಯದಾಗಿ, 4,82,100 ರೂ ಬೆಲೆಯ "ಮೆರಿನ್​" ರೋಲೆಕ್ಸ್ ಕಲೆಕ್ಷನ್​ ಆಗಿದೆ. ಇದರಲ್ಲಿ ಟೈಟಾನಿಯಂ ಮತ್ತು ತಾಮ್ರದ ಒಳಸೇರಿಸಲಾಗಿದ್ದು, ಆಕರ್ಷಕವಾಗಿ ಕಾಣುತ್ತಿದೆ.

  vodafone ಆಫರ್!

  ಇತ್ತೀಚೆಗೆ ವೊಡಾಫೋನ್​ ಕಂಪನಿಯ ಅಧಿಕೃತ ವೆಬ್​ಸೈಟ್ ಮೂಲಕ ಐಫೋನ್ 13 ಅನ್ನು ಮುಂಚಿತವಾಗಿ ಆರ್ಡರ್ ಮಾಡಿದವರಿಗೆ ಆಫರ್​ ಘೋಷಿಸಿದೆ. ಮೊದಲ ದಿನದಲ್ಲಿ ಭಾರತದಲ್ಲಿಯೇ ಲಭ್ಯವಿರುವ ಐಫೋನ್​ 13 ಅನ್ನು ಪಡೆ ಗ್ರಾಹಕರಿಗೆ REDX ಪೋಸ್ಟ್‌ಪೇಯ್ಡ್ ಯೋಜನೆಗಳಾದ 1099 ರೂ.ವಿನ ರೆಡ್ಎಕ್ಸ್ ಪ್ಯಾಕ್, 1,699 ರೂ.ವಿನ ರೆಡ್‌ಕ್ಸ್ ಫ್ಯಾಮಿಲಿ ಪ್ಯಾಕ್ ಮತ್ತು 2,299 ರೂ.ವಿನ ರೆಡ್‌ಕ್ಸ್ ಫ್ಯಾಮಿಲಿ ಪ್ಲಾನ್ ನೊಂದಿಗೆ ಕೆಲವು ಕ್ಯಾಶ್‌ಬ್ಯಾಕ್ ಪ್ರಯೋಜನಗಳನ್ನು ಉದಗಿಸುತ್ತದೆ ಎಂದಿದೆ.
  First published: