HOME » NEWS » Tech » WHY THE IPAD DOESNT HAVE A CALCULATOR STG HG

ಆ್ಯಪಲ್ ಐಪ್ಯಾಡ್‌ಗಳಲ್ಲಿ ಕ್ಯಾಲ್ಕ್ಯುಲೇಟರ್ ಆ್ಯಪ್ ಏಕಿಲ್ಲ ಗೊತ್ತಾ..?

ಸದ್ಯದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದ ಪ್ರಥಮ ಐಪ್ಯಾಡ್‍ನ ಕ್ಯಾಲ್ಕ್ಯುಲೇಟರ್‌ನ ವಿನ್ಯಾಸ, ಕಂಪೆನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ಗಮನಕ್ಕೆ ಬಂತು. ಅವರು, ಇನ್ನೇನು ಐಪಾಡ್ ಬಿಡುಗಡೆಗೆ ಒಂದು ತಿಂಗಳು ಇದೆ ಎನ್ನುವಾಗ ಫೋರ್‌ಸ್ಟಾಲ್‌ನನ್ನು ಭೇಟಿಯಾದರು. ಮತ್ತು ಅ್ಯಪಲ್ ಐಪ್ಯಾಡ್‍ನ ದೊಡ್ಡ ಪರದೆಗೆ ಹೊಂದಿಕೊಳ್ಳುವಂತಹ ಕ್ಯಾಲ್ಕ್ಯುಲೇಟರನ್ನು ಮರುವಿನ್ಯಾಸ ಮಾಡುವಂತೆ ಅಂತಿಮ ಸೂಚನೆ ನೀಡಿದರು.

news18-kannada
Updated:May 13, 2021, 5:13 PM IST
ಆ್ಯಪಲ್ ಐಪ್ಯಾಡ್‌ಗಳಲ್ಲಿ ಕ್ಯಾಲ್ಕ್ಯುಲೇಟರ್ ಆ್ಯಪ್ ಏಕಿಲ್ಲ ಗೊತ್ತಾ..?
Apple Explained / YouTube.
  • Share this:
ಎಲ್ಲಾ ರೀತಿಯ ಆ್ಯಪಲ್ ಐಫೋನ್‍ಗಳು, ಮ್ಯಾಕ್‍ಗಳು ಮತ್ತು ಅ್ಯಪಲ್ ವಾಚ್‍ಗಳಲ್ಲಿ ಕೂಡ ಸ್ಟಾಕ್ ಕ್ಯಾಲ್ಕ್ಯುಲೇಟರ್ ಆ್ಯಪ್‍ಗಳನ್ನು ಕಾಣಬಹುದು. ಹೀಗಿರುವಾಗ, ಆ್ಯಪಲ್​ ಐಪ್ಯಾಡ್‌ಗಳಲ್ಲಿ ಮಾತ್ರ ಈ ಪ್ರಾಥಮಿಕ ಮತ್ತು ಉಪಯುಕ್ತ ಟೂಲ್‍ನ್ನು ಸೇರಿಸುವುದರಲ್ಲಿ ಕಂಪೆನಿ ಏಕೆ ನಿರ್ಲಕ್ಷ್ಯ ವಹಿಸಿತು. ತಂತ್ರಜ್ನಾನದ ಮರುವ್ಯಾಖ್ಯಾನ ಮಾಡುವುದಾದರೆ, ತನ್ನ ಬಳಕೆದಾರರನ್ನು ಯಾವುದೇ ವಿಷಯದಲ್ಲಿ, ಯಾವತ್ತೂ ನಿರಾಸೆಗೊಳಿಸದ ಅತ್ಯಂತ ದೊಡ್ಡ ಬ್ರಾಂಡ್ ಎಂದರೆ ಅದು ಅ್ಯಪಲ್ ಎನ್ನಬಹುದು. ಸ್ಟೀವ್ ಜಾಬ್ಸ್ ಮತ್ತು ಸ್ಟೀವ್ ವಾಸ್‍ನೈಕ್ ಹುಟ್ಟು ಹಾಕಿದ ಅ್ಯಪಲ್ ಸಂಸ್ಥೆ, 1976ರಲ್ಲಿ ಕಂಪೆನಿಯ ಮೊಟ್ಟ ಮೊದಲ ಪ್ರೀ ಅಸೆಂಬಲ್ಡ್‌ ಕಂಪ್ಯೂಟರ್ ಅ್ಯಪಲ್ 1 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಹೊಸ ಸಂಚಲನವನ್ನು ಸೃಷ್ಟಿಸಿತ್ತು.

ಇನ್ನು 2007ರಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿದ ಐಫೋನ್, ಇಡೀ ಸ್ಮಾರ್ಟ್‌ಫೋನ್‌ ಇಂಡಸ್ಟ್ರಿಯ ರೂಪುರೇಖೆಯನ್ನು ಶಾಶ್ವತವಾಗಿ ಬದಲಾಯಿಸಿಬಿಟ್ಟಿತು. ಆದರೆ, 2010ರಲ್ಲಿ ಬಿಡುಗಡೆ ಮಾಡಿದ ಪ್ರಥಮ ಅ್ಯಪಲ್ ಐಪ್ಯಾಡ್‍ನಲ್ಲಿ ಮಾತ್ರ, ಸಾಮಾನ್ಯವಾಗಿ ಡಿಸ್​ಪ್ಲೇ ಪರದೆ ಹೊಂದಿರುವ ಎಲ್ಲಾ ಉಪಕರಣಗಳಲ್ಲಿ ಕಾಣಸಿಗುವ ಒಂದು ಕ್ಯಾಲ್ಕ್ಯುಲೇಟರ್ ಆ್ಯಪ್ ಇರಲಿಲ್ಲ. ನಾವು ಎಲ್ಲಾ ರೀತಿಯ ಅ್ಯಪಲ್ ಐಫೋನ್‍ಗಳು, ಮ್ಯಾಕ್‍ಗಳು ಮಾತ್ರವಲ್ಲ, ಅ್ಯಪಲ್ ವಾಚ್‍ಗಳಲ್ಲಿ ಕೂಡ ಸ್ಟಾಕ್ ಕ್ಯಾಲ್ಕ್ಯುಲೇಟರ್ ಆ್ಯಪ್‍ಗಳನ್ನು ಕಾಣಬಹುದು. ಹಾಗಿರುವಾಗ, ತನ್ನ ಐಪ್ಯಾಡ್ ಆವೃತ್ತಿಗಳಲ್ಲಿ ಮಾತ್ರ ಈ ಪ್ರಾಥಮಿಕ ಮತ್ತು ಉಪಯುಕ್ತ ಟೂಲ್‍ ಅನ್ನು ಸೇರಿಸುವುದರಲ್ಲಿ ಅ್ಯಪಲ್ ಕಂಪೆನಿ ಏಕೆ ನಿರ್ಲಕ್ಷ್ಯ ವಹಿಸಿತು?

ಸ್ಕಾಟ್‌ ಫೋರ್‌ಸ್ಟಾಲ್‌ ನೇತೃತ್ವದ ಸಾಫ್ಟ್‍ವೇರ್ ತಂಡ ಅ್ಯಪಲ್ ಐಪ್ಯಾಡ್‍ಗಾಗಿ ಪ್ರತ್ಯೇಕವಾಗಿ ಹೊಸ ಕ್ಯಾಲ್ಕ್ಯುಲೇಟರ್ ಆ್ಯಪ್‍ನ್ನು ವಿನ್ಯಾಸಗೊಳಿಸುವ ಬದಲು, ಐಫೋನ್‍ಗಳಲ್ಲಿ ಇದ್ದ ಕ್ಯಾಲ್ಕ್ಯುಲೇಟರ್ ಆ್ಯಪ್ ಆವೃತ್ತಿಯನ್ನೇ ಕೊಂಚ ಮೇಲ್ದರ್ಜೆಗೇರಿಸಿ ಬಳಸಿಕೊಂಡಿತು.

ಆದರೆ, ಸದ್ಯದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದ ಪ್ರಥಮ ಐಪ್ಯಾಡ್‍ನ ಕ್ಯಾಲ್ಕ್ಯುಲೇಟರ್‌ನ ವಿನ್ಯಾಸ, ಕಂಪೆನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ಗಮನಕ್ಕೆ ಬಂತು. ಅವರು, ಇನ್ನೇನು ಐಪಾಡ್ ಬಿಡುಗಡೆಗೆ ಒಂದು ತಿಂಗಳು ಇದೆ ಎನ್ನುವಾಗ ಫೋರ್‌ಸ್ಟಾಲ್‌ನನ್ನು ಭೇಟಿಯಾದರು. ಮತ್ತು ಅ್ಯಪಲ್ ಐಪ್ಯಾಡ್‍ನ ದೊಡ್ಡ ಪರದೆಗೆ ಹೊಂದಿಕೊಳ್ಳುವಂತಹ ಕ್ಯಾಲ್ಕ್ಯುಲೇಟರನ್ನು ಮರುವಿನ್ಯಾಸ ಮಾಡುವಂತೆ ಅಂತಿಮ ಸೂಚನೆ ನೀಡಿದರು. ಆದರೆ, ಬಿಡುಗಡೆಗೆ ಕೆಲವೇ ವಾರಗಳು ಬಾಕಿಯಿದ್ದವು, ಅಷ್ಟು ಕಡಿಮೆ ಅವಧಿಯಲ್ಲಿ ಮತ್ತೆ ಆರಂಭದಿಂದ ಹೊಸ ಕ್ಯಾಲ್ಕ್ಯುಲೇಟರ್ ಇಂಟರ್‌ ಸ್ಪೇಸನ್ನು ವಿನ್ಯಾಸ ಮಾಡುವುದು ತಮ್ಮಿಂದ ಸಾಧ್ಯವಿಲ್ಲ ಎಂಬುವುದು ಫೋರ್‌ಸ್ಟಾಲ್‌ ಮತ್ತು ಆತನ ತಂಡಕ್ಕೆ ತಿಳಿದಿತ್ತು. ಹಾಗಾಗಿ, ಹೊಸದಾಗಿ ಬಿಡುಗಡೆಯಾದ ಅ್ಯಪಲ್ ಐಪ್ಯಾಡನ್ನು ಕ್ಯಾಲ್ಕ್ಯುಲೇಟರ್ ಆ್ಯಪ್ ಇಲ್ಲದೆಯೇ ರವಾನಿಸಲಾಯಿತು.

ದುರಾದೃಷ್ಟವಶಾತ್, ಅ್ಯಪಲ್ ಐಪ್ಯಾಡ್ ಬಳಕೆದಾರರು ಸಿಕ್ಕಾಪಟ್ಟೆ ಜಾಹೀರಾತುಗಳ ಮೂಲಕ ಕಿರಿಕಿರಿಯುಂಟು ಮಾಡುವ ಇತರೆ ಕಂಪೆನಿಗಳ ಕ್ಯಾಲ್ಕ್ಯುಲೇಟರ್ ಆ್ಯಪ್‍ಗಳನ್ನು ಡೌನ್‍ಲೋಡ್ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಬೇರೆ ಬೇರೆ ಹೊಸ ರೀತಿಯ ಐಪ್ಯಾಡ್‍ಗಳು ಮಾರುಕಟ್ಟೆ ಪ್ರವೇಶಿಸಿವೆ. ಆದರೆ ಅ್ಯಪಲ್ ಮಾತ್ರ ತನ್ನ ಕಂಪ್ಯೂಟರ್ ಟ್ಯಾಬ್ಲೆಟ್‍ಗಳ ಆವೃತ್ತಿಗಳಲ್ಲಿ ಈ ಪ್ರಾಥಮಿಕ ಆ್ಯಪನ್ನು ಅಳವಡಿಸುವುದು ಇನ್ನೂ ಬಾಕಿ ಇದೆ.

Youtube Video
ಈ ಕುರಿತು ಯೂಟ್ಯೂಬರ್ ಮಾಕ್ರ್ಸ್ ಬ್ರೌನ್ಲೀ , ಸಂದರ್ಶನವೊಂದರಲ್ಲಿ ಆ್ಯಪಲ್‍ನ ಸಾಫ್ಟ್‌ವೇರ್‌ ಎಂಜಿನಿಯರಿಂಗ್ ವಿಭಾಗದ ಉಪಾಧ್ಯಕ್ಷ ಕ್ರೈಗ್ ಫೆಡರಿಗಿ ಅವರನ್ನು ಕೇಳಿದಾಗ, ಕಂಪೆನಿ “ಅತ್ಯುತ್ತಮ ಐಪ್ಯಾಡ್ ಕ್ಯಾಲ್ಕ್ಯುಲೇಟರ್ ಆ್ಯಪ್” ಅನ್ನು ವಿನ್ಯಾಸಗೊಳಿಸಲು ನಿರ್ಧರಿಸಿದೆ. “ನಾವದನ್ನು ಅತ್ಯಂತ ಉತ್ತಮವಾದ ರೀತಿಯಲ್ಲಿ ವಿನ್ಯಾಸಗೊಳಿಸಲು ಸಾಧ್ಯವಾಗುತ್ತದೆಯೋ, ಆಗಲೇ ಅದನ್ನು ತಯಾರಿಸುತ್ತೇವೆ” ಎಂದು ಉತ್ತರಿಸಿದ್ದಾರೆ.
First published: May 13, 2021, 5:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories