• Home
 • »
 • News
 • »
 • tech
 • »
 • Smartphone: ಸ್ಮಾರ್ಟ್‌ಫೋನ್‌ನ ಹಿಂಭಾಗದ ಕ್ಯಾಮೆರಾ ಯಾವಾಗಲೂ ಎಡಭಾಗದಲ್ಲಿ ಏಕೆ ಇರುತ್ತದೆ? ಕಾರಣ ಗೊತ್ತಾ?

Smartphone: ಸ್ಮಾರ್ಟ್‌ಫೋನ್‌ನ ಹಿಂಭಾಗದ ಕ್ಯಾಮೆರಾ ಯಾವಾಗಲೂ ಎಡಭಾಗದಲ್ಲಿ ಏಕೆ ಇರುತ್ತದೆ? ಕಾರಣ ಗೊತ್ತಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪ್ರತೀ ಸ್ಮಾರ್ಟ್​ಫೋನ್​ನಲ್ಲಿ ಹಿಂಬದಿಯ ಕ್ಯಾಮೆರಾ ಎಡಭಾಗದಲ್ಲಿ ಫಿಕ್ಸ್​ ಮಾಡುತ್ತಾರೆ. ಆದರೆ ಈ ಕ್ಯಾಮೆರಾಗಳನ್ನು ಯಾಕೆ ಎಡಭಾಗದಲ್ಲಿ ಇಡುತ್ತಾರೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಹಾಗಿದ್ರೆ ಯಾಕೆ ಹೆಚ್ಚಿನ ಸ್ಮಾರ್ಟ್​ಫೋನ್​ಗಳಲ್ಲಿ ಎಡಭಾಗದಲ್ಲಿ ಫಿಕ್ಸ್ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಮುಂದೆ ಓದಿ ...
 • Share this:

  ಇಂದಿನ ಕಾಲಘಟ್ಟದಲ್ಲಿ ಬಹುತೇಕ ಎಲ್ಲರಿಗೂ ಸ್ಮಾರ್ಟ್‌ಫೋನ್ (Smartphone) ಅಗತ್ಯವಾಗಿದೆ. ಹೆಚ್ಚಿನ ಜನರು ಕಾಲ್​ನಲ್ಲಿ (Call) ಮಾತನಾಡಲು ಮತ್ತು ಮೆಸೇಜ್​ (Message)ಗಳನ್ನು, ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಶೇರ್ (Share) ಮಾಡಲು, ತೆಗೆಯಲು ಬಳಸುತ್ತಾರೆ. ಹಿಂದಿನ ವರ್ಷನ್​ನ ಸ್ಮಾರ್ಟ್‌ಫೋನ್‌ಗಳಲ್ಲಿ ಕೇವಲ ಒಂದೇ ಕ್ಯಾಮೆರಾ (Camera) ಆ್ಯಡ್ ಮಾಡುತ್ತಿದ್ದರು. ನಂತರ ಕೆಲವೊಂದು ತಂತ್ರಜ್ಞಾನದ ಬೆಳವಣಿಗೆಯ ಬದಲಾವಣೆಗಳಿಂದ ಇಂದು 2 ರಿಂದ 3 ಕ್ಯಾಮೆರಾಗಳನ್ನು ಆ್ಯಡ್​ ಮಾಡುತ್ತಿದ್ದಾರೆ. ಇನ್ನೂ ಕೆಲವು ಸ್ಮಾರ್ಟ್​ಫೋನ್​ಗಳಲ್ಲಿ 4 ಕ್ಯಾಮೆರಾಗಳೂ ಕಾಣಸಿಗುತ್ತಿವೆ. ಅದಕ್ಕಾಗಿಯೇ ಈಗಿನ ಫೋಟೋ, ವಿಡಿಯೋಗಳು ಹಿಂದಿನ ಫೋಟೋ, ವಿಡಿಯೋಗಳಿಗಿಂತ ಉತ್ತಮವಾಗಿ ಮೂಡಿಬರುತ್ತದೆ. ಕೆಲವೊಮ್ಮೆ ಈ ಕ್ಯಾಮೆರಾಗಳು ಡಿಎಸ್​ಎಲ್​ಆರ್​ (DSLR) ಕ್ಯಾಮೆರಾಗಳನ್ನು ಹೋಲುತ್ತದೆ.


  ಪ್ರತೀ ಸ್ಮಾರ್ಟ್​ಫೋನ್​ನಲ್ಲಿ ಹಿಂಬದಿಯ ಕ್ಯಾಮೆರಾ ಎಡಭಾಗದಲ್ಲಿ ಫಿಕ್ಸ್​ ಮಾಡುತ್ತಾರೆ. ಆದರೆ ಈ ಕ್ಯಾಮೆರಾಗಳನ್ನು ಯಾಕೆ ಎಡಭಾಗದಲ್ಲಿ ಇಡುತ್ತಾರೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಹಾಗಿದ್ರೆ ಯಾಕೆ ಹೆಚ್ಚಿನ ಸ್ಮಾರ್ಟ್​ಫೋನ್​ಗಳಲ್ಲಿ ಎಡಭಾಗದಲ್ಲಿ ಫಿಕ್ಸ್ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.


  ಮೊದಲು ಕ್ಯಾಮೆರಾಗಳು ಮಧ್ಯಭಾಗದಲ್ಲಿತ್ತು


  ಮೊದಲು ಸ್ಮಾರ್ಟ್​ಫೊನ್​ಗಳನ್ನು ತಯಾರಿಸುವಾಗ ಕ್ಯಾಮೆರಾಗಳನ್ನು ಮೊಬೈಲ್​ನ ಮಧ್ಯದಲ್ಲಿ ಇಟ್ಟಿದ್ದರು. ಆದರೆ ಹಿಂದೆ ಒಂದೇ ಕ್ಯಾಮೆರಾಗಳನ್ನು ಆ್ಯಡ್ ಮಾಡಿದ್ದರು. ಆದರೆ ಇಂದು ಅದರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಸ್ಮಾರ್ಟ್​ಫೋನ್​ತಯಾರಿ ಮಾಡುವಾಗ ಸ್ಮಾರ್ಟ್‌ಫೋನ್‌ನ ಸೌಂದರ್ಯವನ್ನು ಹೆಚ್ಚಿಸುವ ಕಾರಣಕ್ಕೆ ಸ್ಮಾರ್ಟ್​ಫೋನ್​ನ ಹಿಂಬದಿಯ ಸೈಡ್​ನಲ್ಲಿ ನೀಡಲಾಯಿತು. ಈ ವಿಧಾನವನ್ನು ಮೊದಲ ಬಾರಿಗೆ ಆ್ಯಪಲ್ ಕಂಪನಿಯು ಪ್ರಾರಂಭಿಸಿತು. ಇದು ಸ್ಮಾರ್ಟ್‌ಫೋನ್‌ನ ವಿನ್ಯಾಸವನ್ನು ಇನ್ನಷ್ಟು ಅಂದಗಾಣಿಸುತ್ತದೆ.


  ಇದನ್ನೂ ಓದಿ: ಮ್ಯೂಸಿಕ್​ ಪ್ರಿಯರಿಗೆ ಶುಭಸುದ್ದಿ, ಫಿಲಿಪ್ಸ್​ ಕಂಪನಿಯಿಂದ ಎರಡು ಸೌಂಡ್​ಬಾರ್​ ಬಿಡುಗಡೆ


  ಇದೂ ಕೂಡ ದೊಡ್ಡ ಕಾರಣವೇ
  ಸ್ಮಾರ್ಟ್‌ಫೋನ್‌ನ ಎಡಭಾಗಕ್ಕೆ ಹಿಂಭಾಗದ ಕ್ಯಾಮೆರಾವನ್ನು ನೀಡುವ ದೊಡ್ಡ ಕಾರಣವೆಂದರೆ ಲ್ಯಾಂಡ್‌ಸ್ಕೇಪ್ ಮೋಡ್. ವಾಸ್ತವವಾಗಿ, ಲ್ಯಾಂಡ್‌ಸ್ಕೇಪ್ ಮೋಡ್‌ನಲ್ಲಿ ಫೋಟೋ, ವಿಡಿಯೋಗಳನ್ನು ತೆಗೆಯುವಾಗ, ಬೆರಳುಗಳು ಕ್ಯಾಮೆರಾದ ಮೇಲೆ ಹೋಗುವುದಿಲ್ಲ, ಆದ್ದರಿಂದ ಇದೇ ಕಾರಣಕ್ಕೆ ಕ್ಯಾಮೆರಾವನ್ನು ಯಾವಾಗಲೂ ಎಡಭಾಗದಲ್ಲಿ ನೀಡಲಾಗುತ್ತದೆ.


  ಸಾಂಕೇತಿಕ ಚಿತ್ರ


  ಮತ್ತೊಂದೆಡೆ, ಅದು ಎಡಭಾಗದಲ್ಲಿರುವುದರಿಂದ, ಬೆರಳುಗಳು ಮತ್ತೆ ಮತ್ತೆ ಅದರ ಮೇಲೆ ಟಚ್​ ಆಗುವುದಿಲ್ಲ. ಒಂದು ವೇಳೆ ಕೈಬೆರಳುಗಳು ಕ್ಯಾಮರಾವನ್ನು ಟಚ್ ಆದಾಗ ಕ್ಯಾಮೆರಾ ಬ್ಲರ್​ ಆಗಿ ಕಾಣುತ್ತದೆ. ಇದರಿಂದ ಒಳ್ಳೆಯ ಪೋಟೋಗಳನ್ನು ಕ್ಲಿಕ್ ಮಾಡಲಾಗುವುದಿಲ್ಲ. ಅದಕ್ಕಾಗಿಯೇ ಹಿಂಭಾಗದ ಕ್ಯಾಮೆರಾ ಎಡಭಾಗದಲ್ಲಿದೆ.


  ಕ್ಯಾಮೆರಾ ಮಧ್ಯದಲ್ಲಿ ಇಟ್ಟಾಗ ಹಲವಅರು ಸಮಸ್ಯೆಗಳಾಗುತ್ತದೆ


  ಮೊದಲೆಲ್ಲಅ ಅನೇಕ ಕಂಪನಿಗಳು ಸ್ಮಾರ್ಟ್ಫೋನ್​ನಲ್ಲಿ ಕ್ಯಾಮೆರಾವನ್ನು ಮಧ್ಯಭಾಗದಲ್ಲಿ ನೀಡುತ್ತಿದ್ದವು. ವಾಸ್ತವವಾಗಿ ಇದು ಲೆನ್ಸ್​ನ ಮೇಲೆ ಕಲೆಗಳು ಆಗುತ್ತವೆ.  ಇದಲ್ಲದೆ, ಹೆಚ್ಚಿನ ಜನರು ಬಲಗೈಯಲ್ಲಿ ಸ್ಮಾರ್ಟ್‌ಫೋನ್  ಅನ್ನು ಇಟ್ಟುಕೊಳ್ಲುತ್ತಾರೆ, ಬಳಸುತ್ತಾರೆ. ಕ್ಯಾಮೆರಾ ಕೂಡ ಒಂದೇ ಕಡೆ ಇದ್ದರೆ ಬೆರಳುಗಳು ಕೂಡ ಲೆನ್ಸ್ ಮೇಲೆ ಟಚ್ ಆಗುತ್ತದೆ. ಇದರಿಂದ ಬೆವರು ಲೆನ್ಸ್​ ಮೇಲೆ ತಾಗಿ ಹಾಳಾಗುವ ಸಾಧ್ಯತೆ ಇರುತ್ತದೆ. ಇದಲ್ಲದೇ ಎಡಬದಿಯಲ್ಲಿ ಕ್ಯಾಮೆರಾಗಳನ್ನು ನೀಡುವುದರಿಂದ ಸ್ಮಾರ್ಟ್ ಫೋನ್ ನ ಅಂದವೂ ಕೂಡ ಹೆಚ್ಚುತ್ತದೆ.


  ಸಾಂಕೇತಿಕ ಚಿತ್ರ


  ಇದು ಸ್ಮಾರ್ಟ್​ಫೋನ್​ನ ಹಿಂಬದಿಯಲ್ಲಿ ಕ್ಯಾಮೆರಾವನ್ನು ಇಟ್ಟಾಗ ಆಗುವಂತಹ ತೊಂದರೆಗಳಾಗಿವೆ. ಆದರೆ ಇದುವರೆಗೆ ಯಾಕೆ ಎಡಬದಿಯಲ್ಲಿಯೇ ನಿರ್ದಿಷ್ಟವಾಗಿ ಕ್ಯಾಮೆರಾವನ್ನು ಇಡುವಂತಹ ಮೂಲ ಕಾರಣವನ್ನು ಯಾವುದೇ  ಕಂಪನಿಗಳು ಇದುವರೆಗೆ ತಿಳಿಸಿಲ್ಲ.


  ವಿಶೇಷ ರೀತಿಯ ಕ್ಯಾಮೆರಾಗಳು


  ಇತ್ತೀಚಿನ ಸ್ಮಾರ್ಟ್​ಫೋನ್​ಗಳು ಬಹಳಷ್ಟು ವಿಶೇಷ ರೀತಿಯ ಕ್ಯಾಮೆರಾಗಳನ್ನು ಹೊಂದಿದೆ. ಮೊದಲಿಗೆ ಕೇವಲ ಸಿಂಗಲ್​ ಕ್ಯಾಮೆರಾಗಳನ್ನು ಸ್ಮಾರ್ಟ್​ಫೋನ್​ಗಳು ಹೊಂದಿತ್ತು. ನಂತರ ಡ್ಯುಯಲ್ ಕ್ಯಾಮೆರಾಗಳು ಬಂದವು. ಇದೀಗ ಸ್ಮಾರ್ಟ್​ಫೋನ್​ಗಳಲ್ಲಿ ಟ್ರಿಪಲ್ ಕ್ಯಾಮೆರಾಗಳನ್ನು ನೀಡುತ್ತಿದ್ದಾರೆ

  Published by:Prajwal B
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು