App Storeನಿಂದ ಹಳೆಯ ಆ್ಯಪ್​​ಗಳನ್ನು ತೆಗೆದುಹಾಕುತ್ತಿರುವ Apple; ಕಾರಣವೇನು?

Apple App Store: ಆ್ಯಪಲ್ ತನ್ನ ಐಫೋನ್ ಬಳಸುವ ಗ್ರಾಹಕರಿಗೆ ತನ್ನದೆ ಆದ ಪ್ರತ್ಯೇಕ ಸ್ಟೋರ್ ಹೊಂದಿದ್ದು ಅದನ್ನು ಆ್ಯಪ್-ಸ್ಟೋರ್ ಎಂದು ಕರೆಯಲಾಗುತ್ತದೆ. ಇಲ್ಲಿ ಆ್ಯಪಲ್ ಫೋನ್ ಗ್ರಾಹಕರು ತಮಗೆ ಬೇಕಾದ ಎಲ್ಲ ಹಳೆಯ/ಹೊಸ ಆ್ಯಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಆ್ಯಪ್-ಸ್ಟೋರ್

ಆ್ಯಪ್-ಸ್ಟೋರ್

 • Share this:
  ಹೊಸ ನೀರು ಬಂದಂತೆ ಹಳೆ ನೀರು ಹೋಗಲೇಬೇಕಲ್ಲವೆ...? ಇದು ಪ್ರಾಕೃತಿಕ ನಿಯಮವಾಗಿದ್ದರೂ ತಂತ್ರಜ್ಞಾನದಲ್ಲೂ(Technology) ಸಹ ಈ ನಿಯಮ ಚಾಲ್ತಿಯಲ್ಲಿದೆ ಎಂದರೂ ತಪ್ಪಾಗಲಾರದು. ಇಂದು ಡಿಜಿಟಲ್ (Digital) ಲೋಕದಲ್ಲಿ ಬಹುತೇಕ ಪ್ರತಿಯೊಬ್ಬರೂ ಸ್ಮಾರ್ಟ್ ಫೋನ್ (Smartphone) ಹೊಂದಿದ್ದು ಆ ಮೂಲಕ ಮನುಷ್ಯ ತಂತ್ರಜ್ಞಾನ ಅವನ ಬದುಕನ್ನು ಮತ್ತಷ್ಟು ಸುಸಜ್ಜಿತಗೊಳಿಸುವಂತೆ ಮಾಡಿಕೊಂಡಿದ್ದಾನೆ.

  ಸ್ಮಾರ್ಟ್ ಫೋನ್ ಎಂದಾಗ ಇಲ್ಲಿ, ಅದರಲ್ಲಿ ನಿತ್ಯ ಜೀವನದಲ್ಲಿ ಯಾವುದಾದರೂ ವಿಷಯಕ್ಕೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗಿರುವ ಆ್ಯಪ್ ಗಳು (Apps) ತುಂಬಾನೆ ಮಹತ್ವ ಹೊಂದಿರುತ್ತವೆ. ಈ ಆ್ಯಪ್ ಗಳು ಸಾಮಾನ್ಯವಾಗಿ ಸ್ಟೋರ್ ನಲ್ಲಿ ಲಭ್ಯವಿರುತ್ತವೆ ಹಾಗೂ ನಮಗೆ ಬೇಕಾದ ಆ್ಯಪ್ ಗಳನ್ನು ಸ್ಟೋರ್ ನಲ್ಲಿ ಹೋಗಿಯೇ ಡೌನ್ಲೋಡ್ (Download) ಮಾಡಿಕೊಳ್ಳಬೇಕಾಗಿರುತ್ತದೆ. ಆ್ಯಪಲ್ (Apple) ತನ್ನ ಐಫೋನ್ (Iphone) ಬಳಸುವ ಗ್ರಾಹಕರಿಗೆ ತನ್ನದೆ ಆದ ಪ್ರತ್ಯೇಕ ಸ್ಟೋರ್ ಹೊಂದಿದ್ದು ಅದನ್ನು ಆ್ಯಪ್-ಸ್ಟೋರ್ ಎಂದು ಕರೆಯಲಾಗುತ್ತದೆ. ಇಲ್ಲಿ ಆ್ಯಪಲ್ ಫೋನ್ ಗ್ರಾಹಕರು ತಮಗೆ ಬೇಕಾದ ಎಲ್ಲ ಹಳೆಯ/ಹೊಸ ಆ್ಯಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

  ಆದರೆ, ಇನ್ನು ಮುಂದೆ ಗ್ರಾಹಕರಿಗೆ ಹಳೆಯ ಆ್ಯಪ್ ಗಳು ಆ್ಯಪ್-ಸ್ಟೋರ್ ನಲ್ಲಿ ಸಿಗುವುದು ಕಷ್ಟವಾಗಬಹುದು, ಕಾರಣ ಆ್ಯಪಲ್ ತನ್ನ ಆ್ಯಪ್-ಸ್ಟೋರ್ ನಲ್ಲಿರುವ ಕೆಲ ಹಳೆಯ ಆ್ಯಪ್ ಗಳು ಅದರಲ್ಲೂ ವಿಶೇಷವಾಗಿ ಯಾವುದೇ ಅಪ್ಡೇಟ್ ಪಡೆಯದೆ ಇರುವ ಆ್ಯಪ್ ಗಳನ್ನು ತೆಗೆದುಹಾಕುತ್ತಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಆ್ಯಪಲ್ ಸಂಸ್ಥೆ ತನ್ನ ಸ್ಟೋರ್ ನಲ್ಲಿ ಔಟ್ ಡೇಟ್ ಆಗಿರುವ ಎಲ್ಲ ಆ್ಯಪ್ ಗಳನ್ನು ಈಗ ಯಾರು ಡೌನ್ಲೋಡ್ ಮಾಡಿಕೊಳ್ಳದೆ ಇರುವ ಕಾರಣ ತೆಗೆದು ಹಾಕುತ್ತಿರುವುದಾಗಿ ಹೇಳಿದೆ.

  ಈ ಕುರಿತು ಆ್ಯಪಲ್ ಸಂಸ್ಥೆಯು ತನ್ನ ಸ್ಟೋರ್ ನಲ್ಲಿರುವ ಕಳೆದ ಮೂರು ವರ್ಷಗಳಿಂದ ಹಾಗೆಯೇ ಇದ್ದು ಅಭಿವೃದ್ಧಿಪಡಿಸಲಾದವರಿಂದ ಯಾವುದೇ ರೀತಿಯ ಅಪ್ಡೇಟ್ ಪಡೆಯದೆ ಇರುವ ಆ್ಯಪ್ ಗಳನ್ನು ಗುರುತಿಸಲಾಗಿದ್ದು ಆ ಬಗ್ಗೆ ಆ ಆ್ಯಪ್ ಡೆವೆಲಪರ್ಸ್ ಗಳಿಗೆ "ನಿಮ್ಮ ಆ್ಯಪ್ ಅನ್ನು ಸ್ಟೋರ್ ನಿಂದ ತೆಗೆದು ಹಾಕುವ ಸಾಧ್ಯತೆಯಿದೆ" ಎಂಬ ಸಂದೇಶವನ್ನು ರವಾನಿಸುವ ಮೂಲಕ ಸೂಚನೆ ನೀಡಲಾಗಿದೆ ಎಂದು ಆ್ಯಪಲ್ ಹೇಳಿದೆ. ಈ ಮೂಲಕ ಆ್ಯಪಲ್ ಲೇಟೆಸ್ಟ್ ಆಗಿ ಶುಕ್ರವಾರದಂದು ನೀಡಿದ ಹೇಳಿಕೆಯ ಅನ್ವಯ ಅದು ಸ್ಟೋರ್ ನಲ್ಲಿ ಕಳೆದ 12 ತಿಂಗಳ ಅವಧಿಯಲ್ಲಿ ಅತಿ ಕಡಿಮೆ ಬಾರಿ ಡೌನ್ಲೋಡ್ ಮಾಡಿಕೊಳ್ಳಲಾದ ಅಥವಾ ಎಂದಿಗೂ ಡೌನ್ಲೋಡ್ ಆಗದೆ ಇರುವ ಆ್ಯಪ್ ಗಳನ್ನು ತೆಗೆದುಹಾಕುವುದಾಗಿ ತಿಳಿಸಿದೆ.

  ಇದನ್ನೂ ಓದಿ: Akshaya Tritiya 2022: ಗೂಗಲ್ ಪೇ, ಪೇಟಿಎಂ ಮೂಲಕ ಡಿಜಿಟಲ್ ಚಿನ್ನ ಖರೀದಿ ಮಾಡಿ..

  ಆದರೆ, ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಆ್ಯಪಲ್ ತನ್ನ ಸ್ಟೋರ್ ನಲ್ಲಿರುವ ಎಲ್ಲ ಹಳೆಯ ಆ್ಯಪ್ ಗಳನ್ನು ತೆಗೆದು ಹಾಕಿದರೂ ಸಹ ಆ ಆ್ಯಪ್ ಗಳನ್ನು ಈಗಾಗಲೇ ಡೌನ್ಲೋಡ್ ಮಾಡಿಕೊಂಡ ಗ್ರಾಹಕರು ಯಾವುದೇ ಅಡೆ-ತಡೆಗಳಲ್ಲಿದೆ ಅದನ್ನು ಬಳಸುವುದನ್ನು ಮುಂದುವರಿಸಬಹುದಾಗಿದೆ. ಇದಕ್ಕೂ ಮುಂಚೆ ಆ್ಯಪಲ್ ತನ್ನ ಈ ಬದಲಾವಣೆ ಮಾಡುತ್ತಿರುವುದರ ಬಗ್ಗೆ ಪ್ರೊಟೋಪಾಪ್ ನಂತಹ ಆಟಗಳ ಆ್ಯಪ್ ತಯಾರಕರಾದ ರಾಬರ್ಟ್ ಕಾಬ್ವೆ ಅವರು ಚಿಂತೆ ವ್ಯಕ್ತಪಡಿಸಿದ್ದರು.

  ಇದನ್ನೂ ಓದಿ: Vodafone Idea: 29 ರೂ.ವಿನ ಅಗ್ಗದ ಪ್ರೀಪೇಯ್ಡ್ ಪ್ಲಾನ್​ ಪರಿಚಯಿಸಿದ ವೊಡಾಫೋನ್ ಐಡಿಯಾ! ಇದರ ಪ್ರಯೋಜನವನ್ನು ತಿಳಿದುಕೊಳ್ಳಿ

  ಆದಾಗ್ಯೂ, ಆ್ಯಪಲ್ ಡೆವೆಲಪರ್ಸ್ ಗಳಿಗೆ ತೀವ್ರವಾಗಿ ಬೇಸರಗೊಳಿಸಿಲ್ಲ ಎಂದೇ ಹೇಳಬಹುದು. ಏಕೆಂದರೆ ಅದು ಬೇಕಿದ್ದರೆ ಡೆವೆಲಪರ್ಸ್ ಗಳು ತಮ್ಮ ಆ್ಯಪ್ ತೆಗೆದುಹಾಕದಂತೆ ಮನವಿ ಸಲ್ಲಿಸಬಹುದಾಗಿದೆ ಎಂದು ಹೇಳಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಆ್ಯಪಲ್ ಸಂಸ್ಥೆಯು, "ಇತ್ತೀಚೆಗೆ ನಮ್ಮಿಂದ ನೋಟಿಸ್ ಪಡೆದವರನ್ನು ಸೇರಿಸಿ ಎಲ್ಲ ಡೇವೆಲಪರ್ಸ್ ಗಳಿಗೆ ಅವಶ್ಯಕತೆಯಿದ್ದರೆ ತಮ್ಮ ಆ್ಯಪ್ ಗಳನ್ನು ಅಪ್ಡೇಟ್ ಮಾಡಲು 90 ದಿನಗಳ ಕಾಲ ಕಾಲಾವಕಾಶ ನೀಡಲಾಗುವುದು" ಎಂದು ಹೇಳಿದೆ. ಹಾಗಾಗಿ ತಮ್ಮ ಆ್ಯಪ್ ಗಳು ಸ್ಟೋರ್ ನಿಂದ ಹೋಗಬಾರದೆಂದರೆ ಆ ಡೆವೆಲಪರ್ಸ್ ಗಳು ಶೀಘ್ರವಾಗಿ ಅಪ್ಡೇಟ್ ಮಾಡಲು ಅವಕಾಶವಿದೆ.

  ಈಗಾಗಲೇ ತೆಗೆದುಹಾಕಲಾಗಿರುವ ಆ್ಯಪ್ ಗಳು ಒಂದು ವೇಳೆ ಕೆಲ ಗ್ರಾಹಕರ ಮೊಬೈಲ್ ನಲ್ಲಿ ಈಗಲೂ ಇದ್ದರೆ ಅವು ಎಂದಿನಂತೆ ತಮ್ಮ ಕಾರ್ಯಾಚರಣೆ ಮಾಡಲಿದೆಯಾದರೂ ಅದನ್ನು ಮತ್ತೆ ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನಲಾಗಿದೆ. ಆ್ಯಪ್ ಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಗ್ರಾಹಕರ ವಿಶ್ವಾಸವೇ ನಾವು ಈ ಸ್ಟೋರ್ ಅನ್ನು ಸಮರ್ಥವಾಗಿ ನಡೆಸಲು ಮಾನದಂಡವಾಗಿದೆ ಎಂದು ಆ್ಯಪಲ್ ಸಂಸ್ಥೆ ಈ ಸಂದರ್ಭದಲ್ಲಿ ನುಡಿದಿದೆ. ಆ್ಯಪಲ್ ತನ್ನ ಈ ತೆಗೆದುಹಾಕುವ ಪ್ರಕ್ರಿಯೆಯ ಮೂಲಕ ಕಳೆದ ಆರು ವರ್ಷಗಳಲ್ಲಿ 2.8 ಮಿಲಿಯನ್ ಗಿಂತಲೂ ಹೆಚ್ಚಿನ ಸಂಖ್ಯೆಯ ಆ್ಯಪ್ ಗಳನ್ನು ತೆಗೆದು ಹಾಕಿದೆ. ಒಟ್ಟಿನಲ್ಲಿ ನಿರಂತರವಾಗಿರುವ ಹೊಸತನ ಪ್ರಕ್ರಿಯೆಯೇ ಇಂದಿನ ತಂತ್ರಜ್ಞಾನಾಧಾರಿತ ಬದುಕಿನ ಪ್ರಥಮ ಆದ್ಯತೆ ಎನ್ನಬಹುದಷ್ಟೆ.
  Published by:Harshith AS
  First published: