ಕಂಪ್ಯೂಟರ್ (Computer) ಎಂಬುದು ಇತ್ತೀಚೆಗೆ ಬಹುಮುಖ್ಯ ಸಾಧನವಾಗಿಬಿಟ್ಟಿದೆ. ಯಾವುದೇ ಕೆಲಸಗಳನ್ನು ಮಾಡಬೇಕೆಂದರೂ ಈ ಸಾಧನ ಸಹಕಾರಿಯಾಗುತ್ತದೆ. ಯಾವುದೇ ಕಚೇರಿಗಳಿಗೆ ಹೋಗಲಿ, ಯಾವುದೇ ಅಂಗಡಿಗಳಿಗೆ ಹೋದರೂ ಈ ಕಂಪ್ಯೂಟರ್ ಇದ್ದೇ ಇರುತ್ತದೆ. ಆದರೆ ಈ ಕಂಪ್ಯೂಟರ್ ಬಳಕೆ ಮಾಡುವಾಗ ಇದರಲ್ಲಿ ಮೌಸ್ ಎಂಬುದು ಬಹಳ ಮುಖ್ಯ ಪಾತ್ರವಹಿಸುತ್ತದೆ. ಏಕೆಂದರೆ ಸ್ಕ್ರೀನ್ನ ಮೇಲೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ನ್ಯಾವಿಗೇಟ್ (Navigate) ಮಾಡಲು ಅಥವಾ ಯಾವುದೇ ಫೈಲ್ ಅನ್ನು ಓಪನ್ ಮಾಡಲು ಇದರಿಂದ ತುಂಬಾನೇ ಸುಲಭವಾಗುತ್ತದೆ. ಈ ಮೌಸ್ ಎಂಬುದು ನೋಡಲು ಸಣ್ಣ ಗಾತ್ರದಲ್ಲಿದ್ದರೂ ಇದರ ಕೆಲಸ ಮಾತ್ರ ಅಪಾರ. ಈ ಮೌಸ್ (Mouse) ಇಲ್ಲದಿದ್ದರೆ ಕಂಪ್ಯೂಟರ್ನಲ್ಲೇ ಬರುವಂತಹ ಕೀಬೋರ್ಡ್ನಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕಿತ್ತು.
ಇಷ್ಟೊಂದು ಸಣ್ಣ ಸಾಧನಕ್ಕೆ ಮೌಸ್ ಎಂಬ ಒಂದು ಪ್ರಾಣಿಯ ಹೆಸರು ಯಾಕೆ ಇಟ್ಟಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿರಬಹುದು. ವಿಶ್ವಾದ್ಯಂತ ಅನೇಕ ರೀತಿಯ ಪ್ರಾಣಿಗಳು ಮತ್ತು ವಸ್ತುಗಳು ಇದ್ದರೂ ಕೂಡ ಇದನ್ನು ಮೌಸ್ ಎಂದು ಏಕೆ ಹೆಸರಿಸಲಾಯಿತು? ಇದರ ಹಿಂದಿನ ಕಾರಣ ಏನು ಎಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.
ಮೌಸ್ ಇಲಿಯಂತೆ ಕಾಣುತ್ತದೆ
ಕಂಪ್ಯೂಟರ್ನಲ್ಲಿ ಬಳಸಲಾಗುವ ಮೌಸ್ಗೆ ಈ ಹೆಸರು ಬರಲು ಕಾರಣ ವೇನು ಎಂಬುದನ್ನು ಹೇಳುವುದಾದರೆ, ಮೌಸ್ ಅನ್ನು ಮೊದಲ ಬಾರಿಗೆ ಆವಿಷ್ಕಾರ ಮಾಡಿದಾಗ ಈ ಸಾಧನಕ್ಕೆ ಏನು ಹೆಸರನ್ನಿಡುವುದು ಎಂಬ ಎಲ್ಲಾ ತಂತ್ರಜ್ಞರಲ್ಲಿ ಮೂಡಿತು. ಆಗ ಮೌಸ್ ಒಂದು ಸಣ್ಣದಾಗಿರುವಂತಹ ಸಾಧನವಾಗಿದೆ. ಈ ಸಾಧನವನ್ನು ಆಚೆ ಈಚೆ ಸ್ಥಾನ ಬದಲಾಯಿಸಿದಾಗ ಇಲಿ ಓಡಾಡುತ್ತಿರುವಂತೆ ಕಾಣುತ್ತದೆ.
ಇನ್ನು ಈ ಸಾಧನದಲ್ಲಿ ಬಂದಂತಹ ವೈರ್ ಅನ್ನು ನೋಡುವಾಗ ಇಲಿಯ ಬಾಲವನ್ನು ನೋಡಿದಂತೆ ಅನಿಸುತ್ತದೆ. ಇಷ್ಟೇ ಅಲ್ಲದೇ ಇಲಿ ಎಲ್ಲಾ ಕೆಲಸಗಳನ್ನು ಬಹಳ ವೇಗವಾಗಿ ಮಾಡುತ್ತದೆ. ಅದೆ ರೀತಿ ಈ ಮೌಸ್ ಕೂಡ ವೇಗವಾಗಿ ಕಾರ್ಯನಿರ್ವಹಿಸುತದೆ. ಇಷ್ಟೆಲ್ಲಾ ಹೊಂದಾಣಿಕೆ ಮಾಡಿದ ನಂತರ ಈ ಸಾಧನಕ್ಕೆ ಮೌಸ್ ಎಂದು ಹೆಸರನ್ನಿಟ್ಟರು.
ವಿಶ್ವದ ಮೊದಲ ಮೌಸ್
ಇದನ್ನೂ ಓದಿ: 75 ಸಾವಿರದ ಸ್ಮಾರ್ಟ್ಫೋನ್ ಅನ್ನು ಕೇವಲ 15 ಸಾವಿರ ರೂಪಾಯಿಗೆ ಪಡೆಯಿರಿ! ಯಾವುದು ಆ ಸ್ಮಾರ್ಟ್ಫೋನ್?
ಆಮೆ ಎಂಬ ಹೆಸರನ್ನು ಹೊಂದಿದ್ದ ಇಲಿ
ಇಲಿ ಎಂಬ ಹೆಸರಿನ ಹಿಂದೆ ಮತ್ತೊಂದು ಅಚ್ಛರಿಯ ಕಥೆ ಇದೆ. ಈ ಕಥೆಯ ಪ್ರಕಾರ ಇಲಿಯನ್ನು ಮೊದಲು ಆಮೆ ಎಂದು ಕರೆಯಲಾಗುತ್ತಿತ್ತು. ಏಕೆಂದರೆ ಕಂಪ್ಯೂಟರ್ ಮೌಸ್ನ ಚಿಪ್ಪನ್ನು ನೋಡಿದರೆ ನಮಗೆ ಆಮೆಯ ನೆನಪಾಗುತ್ತದೆ. ಮೌಸ್ನ ಚಿಪ್ಪು ಅಷ್ಟು ಗಟ್ಟಿಯದ್ದಾಗಿದೆ. ಹಾಗೆ ಮೌಸ್ನ ಒಮ್ಮೆ ವಿನ್ಯಾಸವನ್ನು ನೋಡುವಾಗ ಆಮೆಯಂತೆಯೇ ಕಾಣುತ್ತದೆ. ಆದರೆ ಚಿಪ್ಪು ಒಂದು ಬಿಟ್ಟರೆ ಇದರ ಬೇರೆ ಲಕ್ಷಣಗಳೆಲ್ಲಾ ಇಲಿಯನ್ನು ಹೋಲುವುದರಿಂದ ಮೌಸ್ ಎಂಬ ಹೆಸರೇ ಜನಪ್ರಿಯತೆಯನ್ನು ಪಡೆಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ