Companies: ಫೇಸ್‌ಬುಕ್‌ನಂತಹ ಹೆಸರಾಂತ ಕಂಪನಿಗಳು ಹೆಸರು ಬದಲಾಯಿಸುತ್ತಿರುವುದಕ್ಕೆ ಕಾರಣಗಳೇನು? ಇಲ್ಲಿದೆ ವಿವರ

Companies Change Their Name: ನಮಗೆಲ್ಲರಿಗೂ ತಿಳಿದಿರುವಂತೆ ಸಾಮಾಜಿಕ ದೈತ್ಯ ಫೇಸ್‌ಬುಕ್ ತನ್ನ ಹೆಸರನ್ನು ಮೆಟಾ ಎಂದು ಬದಲಾಯಿಸಿಕೊಂಡಿದೆ. ಯಾವುದೇ ಸ್ಪರ್ಧೆ, ಉಚ್ಛಾರಣೆಗೆ ತೊಡಕು ಇಲ್ಲದೇ ಹೋದರೂ ಫೇಸ್‌ಬುಕ್ ಹೆಸರನ್ನು ಏಕೆ ಬದಲಾಯಿಸಿಕೊಂಡಿತು? ಎಂಬುದೇ ಇದೀಗ ಪ್ರಶ್ನೆಯಾಗಿ ಹೆಚ್ಚಿನವರನ್ನು ಕಾಡಿತ್ತು.

ಕಂಪನಿಗಳು

ಕಂಪನಿಗಳು

 • Share this:
  Companies Change Their Name: ಕಂಪನಿಯನ್ನು ಪ್ರಾರಂಭಿಸಿದವರಿಗೆ ಗೊತ್ತಿರುವಂತೆ ಸಂಸ್ಥೆಯ ಹೆಸರನ್ನು ಆಯ್ಕೆಮಾಡುವುದು ಎಂದರೆ ಕಷ್ಟಕರವಾದ ಕೆಲಸವಾಗಿದೆ. ಇದೇ ರೀತಿಯ ಹೆಸರನ್ನು ಬೇರೆ ಸಂಸ್ಥೆಗಳು ಬಳಸುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ ಅದೇ ರೀತಿ ಇತರ ಪ್ರತಿಸ್ಪರ್ಧಿ ಕಂಪನಿಗಳು (Company) ಇದೇ ಹೆಸರು ಇಟ್ಟಿದ್ದಾರೆಯೇ ಎಂಬುದನ್ನು ಅವಲೋಕಿಸಬೇಕಾಗುತ್ತದೆ. ಜನರು ಸಂಸ್ಥೆಯ ಹೆಸರನ್ನು (Company Name) ಉಚ್ಛರಿಸಬಲ್ಲರೇ, ಅವರಿಗೆ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವೇ ಮೊದಲಾದ ಅಂಶಗಳನ್ನು ನೋಡಬೇಕಾಗುತ್ತದೆ. ಇದೇ ರೀತಿ ಹಲವಾರು ವಿಧಾನಗಳಲ್ಲಿ ಯೋಚನೆ ಮಾಡಬೇಕಾಗುತ್ತದೆ.

  ನಮಗೆಲ್ಲರಿಗೂ ತಿಳಿದಿರುವಂತೆ ಸಾಮಾಜಿಕ ದೈತ್ಯ ಫೇಸ್‌ಬುಕ್ ತನ್ನ ಹೆಸರನ್ನು ಮೆಟಾ ಎಂದು ಬದಲಾಯಿಸಿಕೊಂಡಿದೆ. ಯಾವುದೇ ಸ್ಪರ್ಧೆ, ಉಚ್ಛಾರಣೆಗೆ ತೊಡಕು ಇಲ್ಲದೇ ಹೋದರೂ ಫೇಸ್‌ಬುಕ್ ಹೆಸರನ್ನು ಏಕೆ ಬದಲಾಯಿಸಿಕೊಂಡಿತು? ಎಂಬುದೇ ಇದೀಗ ಪ್ರಶ್ನೆಯಾಗಿ ಹೆಚ್ಚಿನವರನ್ನು ಕಾಡಿತ್ತು. ಕಾರ್ಪೊರೇಟ್ ವಲಯದಲ್ಲಿ ಈ ರೀತಿ ಪ್ರಖ್ಯಾತ ಸಂಸ್ಥೆಗಳು ಹೆಸರು ಬದಲಾಯಿಸುತ್ತಿರುವುದಕ್ಕೆ ಕೆಲವೊಂದು ಕಾರಣಗಳನ್ನು ಇಲ್ಲಿ ನೀಡಲಾಗಿದೆ.

  ಸಾಮಾಜಿಕ ಒತ್ತಡ:

  ಸಾಮಾಜಿಕ ಗ್ರಹಿಕೆಗಳು ವೇಗವಾಗಿ ಬದಲಾವಣೆಗೊಳ್ಳುತ್ತವೆ ಅದಕ್ಕೆ ತಕ್ಕಂತೆ ಕಂಪನಿಗಳು ಈ ವೇಗಕ್ಕೆ ಹೊಂದಿಕೊಳ್ಳುವಂತೆ ಸಿದ್ಧತೆಗಳನ್ನು ನಡೆಸುತ್ತವೆ. ಸಮಯಕ್ಕೆ ಸರಿಯಾಗಿ ಅವರು ಬದಲಾವಣೆಗೊಳ್ಳದಿದ್ದರೆ ಕೆಲವೊಂದು ಅಂಶಗಳು ಬದಲಾವಣೆಗೆ ಒಗ್ಗಿಕೊಳ್ಳುವಂತೆ ಅವುಗಳ ಮೇಲೆ ಒತ್ತಡ ಹೇರುತ್ತವೆ.

  ಸಮಯ ಕಳೆದಂತೆ, ಹೆಚ್ಚು ಬಹಿರಂಗವಾದ ನಕಾರಾತ್ಮಕ ಬಾಹ್ಯತೆಗಳನ್ನು ಹೊಂದಿರುವ ಕಂಪನಿಗಳು ಒತ್ತಡಕ್ಕೆ ಒಳಗಾಗಿವೆ-ವಿಶೇಷವಾಗಿ ESG ಹೂಡಿಕೆಯ ಯುಗದಲ್ಲಿ. ಟೋಟಲ್ ಮತ್ತು ಫಿಲಿಪ್ ಮೋರಿಸ್‌ನಲ್ಲಿ ಹೆಸರು ಬದಲಾವಣೆಯ ಹಿಂದೆ ಸಾಮಾಜಿಕ ಒತ್ತಡವಿದೆ. ಮೊದಲಿನ ಸಂದರ್ಭದಲ್ಲಿ, ಟೋಟಲ್ ಎನರ್ಜಿಸ್‌ಗೆ ಬದಲಾಯಿಸುವಿಕೆಯು ನವೀಕರಿಸಬಹುದಾದ ಶಕ್ತಿಯನ್ನು ಸೇರಿಸಲು ತೈಲ ಮತ್ತು ಅನಿಲವನ್ನು ಮೀರಿ ಕಂಪನಿಯ ಬದಲಾವಣೆಯನ್ನು ಸೂಚಿಸುತ್ತದೆ.

  ಕೆಲವು ಸಂದರ್ಭಗಳಲ್ಲಿ, ಕಂಪನಿಗಳು ತಮ್ಮ ಹೆಸರನ್ನು ಬದಲಾಯಿಸುವ ಕಾರಣವು ಹೆಚ್ಚು ಸೂಕ್ಷ್ಮವಾಗಿರುತ್ತದೆ.  ಜನಪ್ರಿಯತೆಯನ್ನು ಪುನಃ ಪಡೆದುಕೊಳ್ಳಲು:

  ಬೇರೆ ಬೇರೆ ಹಗರಣಗಳು, ಗುಣಮಟ್ಟದಲ್ಲಿನ ಕುಸಿತ ಹೀಗೆ ಬೇರೆ ಬೇರೆ ಕಾರಣಗಳಿಂದ ಬ್ರ್ಯಾಂಡ್‌ಗಳು ಕಾಲಾನಂತರದಲ್ಲಿ ಕುಸಿತವನ್ನು ಕಾಣುತ್ತವೆ. ಹೀಗಾದಾಗ ಹೆಸರು ಬದಲಾಯಿಸಿಕೊಂಡು ಸಂಸ್ಥೆಗಳು ಆ ನಕಾರಾತ್ಮಕ ಅಂಶವನ್ನು ಹೊರಹಾಲು ಪ್ರಯತ್ನಿಸುತ್ತವೆ.

  ಇದನ್ನು ಓದಿ: Best Smartphone for women: ಮಹಿಳೆಯರಿಗೆ ಸೂಕ್ತವೆನಿಸಿದ ಟಾಪ್ 10 ಅತ್ಯುತ್ತಮ ಸ್ಮಾರ್ಟ್​ಫೋನ್​ಗಳಿವು

  ಇನ್ನಷ್ಟು ಸಾಧನೆ:

  ವಿಶೇಷವಾಗಿ ಕಂಪನಿಗಳು ತ್ವರಿತ ವಿಸ್ತರಣೆಯ ಮೂಲಕ ಅಥವಾ ಹೊಸ ಉತ್ಪನ್ನ ಕೊಡುಗೆಗಳೊಂದಿಗೆ ಯಶಸ್ಸನ್ನು ಕಂಡುಕೊಳ್ಳುತ್ತವೆ. ನಿರಂತರ ಬೆಳವಣಿಗೆ ಮತ್ತು ಬದಲಾವಣೆಯ ಅವಧಿಯ ನಂತರ, ಪ್ರಸ್ತುತ ಹೆಸರು ತುಂಬಾ ಸೀಮಿತವಾಗಿದೆ ಅಥವಾ ಕಂಪನಿಯ ಸ್ಥಿತಿಯನ್ನು ನಿಖರವಾಗಿ ಪ್ರತಿಬಿಂಬಿಸುವುದಿಲ್ಲ ಎಂದು ಕಂಪನಿಯು ಕಂಡುಕೊಳ್ಳಬಹುದು. ಹೀಗಾದಾಗ ಕಂಪನಿಯು ಹೆಸರು ಬದಲಾವಣೆಯತ್ತ ಮುಖ ಮಾಡುತ್ತವೆ.

  ಚರ್ಚೆಯ ವಿಷಯವಾದ ಸ್ಟಾರ್ಟಪ್ ಹೆಸರುಗಳು:

  ಇನ್ನು ಕೆಲವೊಮ್ಮೆ ಹೆಸರಾಂತ ಕಂಪನಿಗಳು ಖ್ಯಾತಿಯನ್ನು ಪಡೆಯುತ್ತಿರುವಂತೆಯೇ ತಮ್ಮ ಸಂಸ್ಥೆಯ ಹೆಸರು ಸಣ್ಣದಾಯಿತು ಎಂಬ ಭಾವನೆ ಕಾಡತೊಡಗುತ್ತದೆ. ತಮ್ಮ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವ ಭರದಲ್ಲಿ ಸಂಸ್ಥೆಗಳು ಹೆಸರು ಬದಲಾವಣೆಯತ್ತ ಮಾರ್ಪಡುತ್ತವೆ.  ಟ್ರೇಡ್‌ಮಾರ್ಕ್ ಸಮಸ್ಯೆಗಳು:

  ಅನೇಕ ಕಂಪನಿಗಳು ಊಹಾತ್ಮಕ ಪ್ರಯೋಗಗಳು ಅಥವಾ ಪ್ಯಾಶನ್ ಯೋಜನೆಗಳಾಗಿ ಪ್ರಾರಂಭಿಸುತ್ತವೆ, ಒಂದು ಕಾರ್ಯಸಾಧ್ಯವಾದ, ಚೆನ್ನಾಗಿ ಪರಿಶೀಲಿಸಿದ ಹೆಸರು ಆದ್ಯತೆಯ ಪಟ್ಟಿಯಲ್ಲಿ ಹೆಚ್ಚಿರುವುದಿಲ್ಲ ಈ ಸಮಯದಲ್ಲಿ ಇದರ ಪರಿಣಾಮವಾಗಿ, ಹೊಸ ಕಂಪನಿಗಳು ಟ್ರೇಡ್‌ಮಾರ್ಕ್ ಸಮಸ್ಯೆಗಳನ್ನು ಎದುರಿಸಬಹುದು.

  ಹೆಸರಿನ ತಿದ್ದುಪಡಿ:

  ಒಮ್ಮೊಮ್ಮೆ ಸಂಸ್ಥೆಗಳು ಇಟ್ಟ ಹೆಸರನ್ನು ತಿದ್ದುಪಡಿ ಮಾಡುವ ಸಲುವಾಗಿ ಕೂಡ ಹೆಸರು ಬದಲಾವಣೆಯನ್ನು ರೂಢಿಸಿಕೊಳ್ಳುತ್ತವೆ. ಬ್ರ್ಯಾಂಡಿಂಗ್ ವಿಷಯದಲ್ಲಿ ಸಂಸ್ಥೆಯ ಹೆಸರು ಉತ್ತಮ ಫಲದಾಯಕತೆಯನ್ನು ಉಂಟುಮಾಡುತ್ತಿಲ್ಲ ಎಂಬ ಕಾರಣಕ್ಕಾಗಿ ಕೂಡ ಹೆಸರು ಬದಲಾವಣೆಯನ್ನು ಮಾಡುತ್ತವೆ.

  ಇದನ್ನು ಓದಿ: Samsung ಗ್ಯಾಲಕ್ಸಿ ನೋಟ್ ಸಿರೀಸ್ ಅನ್ನು ಸ್ಥಗಿತ ಮಾಡುತ್ತಾ? ಹಾಗಿದ್ರೆ ಮುಂದೇನು?

  ಫೇಸ್‌ಬುಕ್ ಹೆಸರನ್ನು ಏಕೆ ಬದಲಾಯಿಸುತ್ತಿದೆ?

  ಮುಖ್ಯವಾಗಿ ಬ್ರ್ಯಾಂಡ್ ಹಗರಣಗಳ ಕಾರಣದಿಂದ ಫೇಸ್‌ಬುಕ್ ಹೆಸರು ಬದಲಾವಣೆಯನ್ನು ಕೈಗೆತ್ತಿಕೊಂಡಿದೆ. ಕೆಲವೊಂದು ಗೌಪ್ಯತೆ ಸಮಸ್ಯೆಗಳು ಫೇಸ್‌ಬುಕ್ ಆದಾಯದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಿವೆ ಎಂಬ ಅಂಶ ಕೂಡ ಬೆಳಕಿಗೆ ಬಂದಿದೆ.

  ಹೆಸರು ಬದಲಾವಣೆಯ ಹಿಂದಿನ ಇತಿಹಾಸವನ್ನು ಕೆದಕಿದಾಗ 2014 ರಲ್ಲಿ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್ ತಯಾರಕ ಓಕ್ಯುಲಸ್ ಅನ್ನು ಸ್ವಾಧೀನಪಡಿಸಿಕೊಂಡಾಗ ಫೇಸ್‌ಬುಕ್ ಮೊದಲ ಬಾರಿಗೆ ತಮ್ಮ ಮಹತ್ವಾಕಾಂಕ್ಷೆಗಳನ್ನು ಸೂಚಿಸಿತು. ಕಂಪನಿಯ ಕಾರ್ಯಪಡೆಯ ಹೆಚ್ಚಿನ ಭಾಗವು ಈಗಾಗಲೇ ಮೆಟಾವರ್ಸ್ ಪರಿಕಲ್ಪನೆಯನ್ನು ನೈಜಗೊಳಿಸುವಲ್ಲಿ ಕೆಲಸ ಮಾಡುತ್ತಿದೆ ಮತ್ತು ಮುಂದಿನ ಐದು ವರ್ಷಗಳಲ್ಲಿ ಯುರೋಪ್‌ನಲ್ಲಿ 10,000 ಜನರನ್ನು ನೇಮಿಸಿಕೊಳ್ಳುವ ಯೋಜನೆ ಇದೆ.
  Published by:Harshith AS
  First published: