ಡಿಜಿಟಲ್​ ಕರೆನ್ಸಿ ತಯಾರಿಕೆಗೆ ಮುಂದಾದ ಫೇಸ್ಬುಕ್​!

Facebook: ಫೇಸ್ಬುಕ್​ ಬಿಟ್​ ಕಾಯಿನ್​ನಂತಿರುವ ಡಿಜಿಟಲ್​ ಕರೆನ್ಸಿಯನ್ನು ಜಾರಿಗೆ ತರಲು ಯೋಜನೆ ಹಾಕಿಕೊಂಡಿದೆ. ಜಗತ್ತಿನಾದ್ಯಂತ ಆನ್​ಲೈನ್​ ವ್ಯವಹಾರಕ್ಕಾಗಿ ‘ಲಿಬ್ರಾ‘ ಕರೆನ್ಸಿಯನ್ನು ಪ್ರಾರಂಭಿಸುತ್ತಿದೆ. ಮುಂದಿನ ದಿನಗಳಲ್ಲಿ ‘ಲಿಬ್ರಾ‘ ಕರೆನ್ಸಿ ಜಾರಿಗೆ ತರುವ ನಿರಿಕ್ಷೆಯಲ್ಲಿದೆ.

news18
Updated:June 19, 2019, 7:53 PM IST
ಡಿಜಿಟಲ್​ ಕರೆನ್ಸಿ ತಯಾರಿಕೆಗೆ ಮುಂದಾದ  ಫೇಸ್ಬುಕ್​!
ಫೇಸ್ಬುಕ್​ ‘ಲಿಬ್ರಾ‘ ಡಿಜಿಟಲ್​ ಕರೆನ್ಸಿ
news18
Updated: June 19, 2019, 7:53 PM IST
ಜಗತ್ತಿನಾದ್ಯಂತ ಅನೇಕ ಬಳಕೆದಾರರನ್ನು ಒಳಗೊಂಡ ಫೇಸ್ಬುಕ್​ ಇದೀಗ ‘ಲಿಬ್ರಾ‘ ಹೆಸರಿನ ಡಿಜಿಟಲ್​ ಕರೆನ್ಸಿಯೊಂದನ್ನು ತಯಾರಿಸಿದೆ. ಭವಿಷ್ಯದಲ್ಲಿ ಡಿಜಿಟಲ್​ ವ್ಯವಹಾರಕ್ಕಾಗಿ ನೂತನ ಯೋಜನೆಯನ್ನು ಅನಾವರಣಗೊಳಿಸಿದ್ದು,​  ಮುಂದಿನ ವರ್ಷದಲ್ಲಿ  ಪರಿಚಯಿಸಲಿದೆ.

ಮಾರ್ಕ್​ ಜುಕರ್​​ ಬರ್ಗ್​ ಒಡೆತನದ ಫೇಸ್ಬುಕ್​​ ಸಂಸ್ಥೆ ತನ್ನ ಬಳಕೆದಾರಿಗೆ ಒಂದಲ್ಲಾ ಒಂದು ಹೊಸ ವಿಚಾರವನ್ನು ಪರಿಚಯಿಸುತ್ತಾ ಬಂದಿದೆ. ಈ ಬಾರಿ ‘ ಲಿಬ್ರಾ‘ ಹೆಸರಿನ ಕರೆನ್ಸಿಯನ್ನು ಪ್ರಾರಂಭಿಸಲು ಯೋಜನೆ ಹಾಕಿಕೊಂಡಿದೆ. ಈ ಡಿಜಿಟಲ್​ ಕರೆನ್ಸಿಯ ಪ್ರಾರಂಭಕ್ಕೆ ಫೇಸ್​ಬುಕ್​ ಜೊತೆಗೆ ಪೇ ಪಾಲ್​, ಉಬರ್​, ಸ್ಟಾಟಿಫೈ, ವೀಸಾ ಮತ್ತು ಮಾಸ್ಟರ್​ ಕಾರ್ಡ್​  ಕೈಜೋಡಿಸಿದೆ.

ಇದನ್ನೂ ಓದಿ: Amala Paul Nude Photo: ಬೆತ್ತಲೆಯಾದ ನಟಿ ಅಮಲಾ ಪೌಲ್​: ಟ್ವೀಟ್​ ಮಾಡಿದ ನಿರ್ದೇಶಕ ರಾಮ್​ಗೋಪಾಲ್​ ವರ್ಮಾ

ಏನಿದು ಲಿಬ್ರಾ ಕರೆನ್ಸಿ?

ಫೇಸ್ಬುಕ್​ ಬಿಟ್​ ಕಾಯಿನ್​ನಂತಿರುವ ಡಿಜಿಟಲ್​ ಕರೆನ್ಸಿಯನ್ನು ಜಾರಿಗೆ ತರಲು ಯೋಜನೆ ಹಾಕಿಕೊಂಡಿದೆ. ಜಗತ್ತಿನಾದ್ಯಂತ ಆನ್​ಲೈನ್​ ವ್ಯವಹಾರಕ್ಕಾಗಿ ‘ಲಿಬ್ರಾ‘ ಕರೆನ್ಸಿಯನ್ನು ಪ್ರಾರಂಭಿಸುತ್ತಿದೆ. ಮುಂದಿನ ದಿನಗಳಲ್ಲಿ ‘ಲಿಬ್ರಾ‘ ಕರೆನ್ಸಿ ಜಾರಿಗೆ ತರುವ ನಿರಿಕ್ಷೆಯಲ್ಲಿದೆ.

ಲಿಬ್ರಾ ಕರೆನ್ಸಿ ಉಪಯೋಗವನು?
Loading...

ಪೇಸ್ಬುಕ್​ ಪರಿಚಯಿಸಲಿರುವ ಲಿಬ್ರಾ ಕರೆನ್ಸಿ ಜಗತ್ತಿನ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹಣದ ವರ್ಗವಣೆ ಸೌಲಭ್ಯವನ್ನು ನೀಡಲಿದೆ. ಅಂತೆಯೇ, ಅತಿ ಕಡಿಮೆ ಶುಲ್ಕದಲ್ಲಿ  ಜಾಗತಿಕ ಹಣದ ವ್ಯವಹಾರಕ್ಕಾಗಿ ‘ಲಿಬ್ರಾ‘ ಕಾಯಿನ್​ ಉಪಯೋಗಕ್ಕೆ ಬರಲಿದೆ.

ಆದರೆ ಭಾರತದಲ್ಲಿ ‘ಲಿಬ್ರಾ‘ ಕರೆನ್ಸಿಯ ಮೂಲಕ ಹಣಕಾಸು ವಹಿವಾಟು ನಡೆಸುವುದು, ಖರೀದಿಸುವುದು ಎಲ್ಲಾ ರೀತಿಯ ವ್ಯವಹಾರಗಳನ್ನು ಕಾನೂನು ಬಾಹಿರವೆಂದು ಪರಿಗಣಿಸಲಾಗಿದೆ. ಹೀಗಾಗಿ ಭಾರತದಲ್ಲಿ ಲಿಬ್ರಾ ಕರೆನ್ಸಿ ಚಾಲ್ತಿಗೆ ಬರುವುದು ಕಷ್ಟ ಎಂದು ಹೇಳಲಾಗಿದೆ.

First published:June 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...