• Home
 • »
 • News
 • »
 • tech
 • »
 • Facebook: ಭಾರತದ ಫೇಸ್​ಬುಕ್‌ ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ ನೀಡಲು ಕಾರಣವೇನು?

Facebook: ಭಾರತದ ಫೇಸ್​ಬುಕ್‌ ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ ನೀಡಲು ಕಾರಣವೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತದ ಮೆಟಾ (ಫೇಸ್‌ಬುಕ್) ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ ನೀಡಿದ್ದಾರೆ. ಭಾರತದ ಮೆಟಾ ಫೇಸ್​ಬುಕ್ ವ್ಯವಸ್ತೆಯನ್ನು ಉತ್ತಮವಾಗಿ ನಿರ್ವಯಿಸುತ್ತಿದ್ದರು. ಅದೇನೊ ಸಡನ್ ಆಗಿ ಫೇಸ್​ಬುಕ್​ಗೆ ರಾಜೀನಾಮೆ ಕೊಟ್ಟಿರುವ ಸಂಗತಿ ಬಾರಿ ಚರ್ಚಿಸುವಂತೆ ಮಾಡಿದೆ.

 • Share this:

  ಭಾರತದ ಮೆಟಾ (ಫೇಸ್​ಬುಕ್‌) (Facebook) ಮುಖ್ಯಸ್ಥ ಅಜಿತ್ ಮೋಹನ್ (Ajith Mohan) ರಾಜೀನಾಮೆ ನೀಡಿದ್ದಾರೆ. ಭಾರತದ ಮೆಟಾ ಫೇಸ್​ಬುಕ್‌ (Indian Meta Facebook) ವ್ಯವಸ್ತೆಯನ್ನು ಉತ್ತಮವಾಗಿ ನಿರ್ವಯಿಸುತ್ತಿದ್ದರು. ಅದೇನೊ ಸಡನ್ ಆಗಿ ಫೇಸ್ ಬುಕ್​ಗೆ ರಾಜೀನಾಮೆ (Resignation) ಕೊಟ್ಟಿರುವ ಸಂಗತಿ ಬಾರಿ ಚರ್ಚಿಸುವಂತೆ ಮಾಡಿದೆ. ಫೇಸ್​ಬುಕ್‌ ಬಳಕೆದಾರರು ಈ ಸಂಗತಿಯನ್ನು(Fact) ಕೇಳಿದ ಬಳಿಕ ಶ್ರಿ ಅಜಿತ್ ಮೋಹನ್ ರಾಜೀನಾಮೆ ನೀಡಿರುವ ಬಗ್ಗೆ ಮಾತನಾಡುತ್ತಿದ್ದಾರೆ. ಅಸಲಿ ಕಥೆ ಏನು ಅನ್ನೊದನ್ನು ತಿಳಿಯೋಣ ಬನ್ನಿ.


  ಮೆಟಾ ಪ್ಲಾಟ್‌ಫಾರ್ಮ್ಸ್​ನ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ ಘೋಷಿಸಿದ ವರದಿಗಳ ಪ್ರಕಾರ, ಮೋಹನ್ ಪ್ರತಿಸ್ಪರ್ಧಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಸ್ನ್ಯಾಪ್‌ಗೆ ಸೇರಲಿದ್ದಾರೆ. ಅಜಿತ್ ಮೋಹನ್ 2019 ರ ಜನವರಿಯಲ್ಲಿ ಫೇಸ್​ಬುಕ್‌ ಇಂಡಿಯಾಕ್ಕೆ ವ್ಯವಸ್ಥಾಪಕ ನಿರ್ದೇಶಕರಾಗಿ ಸೇರಿದ್ದರು. ಅವರ ಅಧಿಕಾರಿ ಸಮಯದಲ್ಲಿ ಫೇಸ್​ಬುಕ್‌ ಕಂಪನಿಗೆ ಎರಡು ಕೊಡುಗೆಗಳನ್ನು ನೀಡಿದ್ದರು. ಅದೇನು ಅಂದ್ರೆ  Whats app I Instagram. ಇದು ಭಾರತದಲ್ಲಿ 200 ಮಿಲಿಯನ್ ಬಳಕೆದಾರರನ್ನು ಸೇರಿಸಿದೆ. ಈ ಎರಡು ಉತ್ತಮ ಕೊಡುಗೆಯನ್ನು ನೀಡಿದ್ದ ಅಜಿತ್ ಮೋಹನ್ ಇನ್ಮುಂದೆ ಫೇಸ್ ಬುಕ್ ಸಂಸ್ಥೆಯಿಂದ ದೂರ ಸರಿದಿದ್ದಾರೆ.


  ಮೆಟಾದಲ್ಲಿ ಕೆಲಸ ಮಾಡುವ ಮೊದಲು, ಶ್ರೀ ಅಜಿತ್ ಮೋಹನ್ ನಾಲ್ಕು ವರ್ಷಗಳ ಕಾಲ ಸ್ಟಾರ್ ಇಂಡಿಯಾದ ವೀಡಿಯೊ ಸ್ಟ್ರೀಮಿಂಗ್ ಸೇವೆ ಹಾಟ್‌ಸ್ಟಾರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಬಳಿಕ 2018 ರಲ್ಲಿ ಅಜಿತ್ ಮೋಹನ್​ರವರು ಫೇಸ್​ಬುಕ್‌ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದರು. ಅದರೆ ಇದೀಗ ಫೇಸ್​ಬುಕ್​ ಸಂಸ್ಥೆಯನ್ನು ಬಿಟ್ಟು ಸ್ನ್ಯಾಪ್​ಚಾಟ್ ಎನ್ನುವ ಸಾಮಾಜಿಕ ಜಾಲತಾಣವಾದ ಸಂಸ್ಥೆಯನ್ನು ಸೇರಿಕೊಂಡಿದ್ದಾರೆ.


  Why Facebook India Chief Ajit Mohan Resigned
  ಸಾಂದರ್ಭಿಕ ಚಿತ್ರ


  ಇದನ್ನೂ ಓದಿ: Facebook: ಫೇಸ್​​ಬುಕ್​ ಉದ್ಯೋಗಿಗಳಿಗೆ ಬಿಗ್​ ಶಾಕ್​, 1200 ಮಂದಿಗೆ ಕೆಲಸ ಕಳೆದುಕೊಳ್ಳುವ ಭೀತಿ!


  ಇತ್ತೀಚಿಗೆ ಕೆಲವು ಸಾಮಾಜಿಕ ಜಾಲತಾಣದ ಸಂಸ್ಥೆಗಳಲ್ಲಿ ಎರಿಳಿತ ಕಂಡುಬರುತ್ತಿದೆ. ಉದಾರಹಣೆಗೆ ಟ್ವಿಟರ್ ಸಂಸ್ಥೆಯನ್ನು ಎಲೋನ್ ಮಸ್ಕ್ ಪಡೆದಿರುವುದು ಒಂದು ವಿಷಯವಾದರೆ. ಇತ್ತೀಚಿಗೆ ಟ್ವಿಟರ್ ಖಾತೆಯಲ್ಲಿ 54,000 ಸಾವಿರ ಖಾತೆಯನ್ನು ಬ್ಯಾನ್ ಮಾಡಲಾಗಿದೆ. ನೀಲಿ ಟಿಕ್ ಬೇಕಾದರೆ 20 ಡಾಲರ್ ನೀಡುವಂತಹ ಬದಲಾವಣೆಯಾಗುತ್ತಿದೆ. ಅದೆ ರೀತಿ ವಾಟ್ಸಾಪ್​ನಲ್ಲಿಯು ಕೆಲವೊಂದು ಹೊಸ ಫೀಚರ್​  ಗಳು ಬರುತ್ತಿದೆ. ಒಟ್ಟರೆ ಹೇಳಬೇಕಾದ್ರೆ ಎಲ್ಲ ಸಾಮಾಜಿಕ ಜಾಲತಾಣದಲ್ಲಿ ಬದಲಾವಣೆಯಾಗುತ್ತಿದೆ ಅನ್ನಬಹುದು.


  ಬಳಕೆದಾರರಿಗೆ ಫೇಸ್‌ಬುಕ್‌ ಎಚ್ಚರಿಕೆ


  ಸೋಶಿಯಲ್‌ ಮೀಡಿಯಾದಲ್ಲಿ ಫೇಸ್​ಬುಕ್‌ ಸುಮಾರು 400 ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದ ಖಾಸಗಿ ಲಾಗಿನ್ ವಿವರಗಳ ಡೇಟಾ ಹ್ಯಾಕ್ ಆಗಿರುವುದನ್ನು ಪತ್ತೆ ಹಚ್ಚಿದ ನಂತರ ಆಂಡ್ರಾಯ್ಡ್ ಮತ್ತು ಐಫೋನ್‌ ಬಳಕೆದಾರರಿಗೆ ಈ ಅಪ್ಲಿಕೇಶನ್‌ಗೆ ಸಂಬಂಧಿಸಿದಂತೆ ಎಚ್ಚರ ವಹಿಸಲು ಸಲಹೆ ನೀಡಿದೆ.


  ಇದನ್ನೂ ಓದಿ: Mark Zuckerberg: ಮೆಟಾವರ್ಸ್ ವಿಫಲತೆಯಿಂದ ಕುಸಿದ ಬಳಕೆದಾರರ ಸಂಖ್ಯೆ! ಜುಕರ್‌ಬರ್ಗ್ ಮುಂದಿನ ನಡೆ ಏನು?


  ಸ್ಮಾರ್ಟ್‌ಫೋನ್ ಬಳಕೆದಾರರಿಂದ ಖಾಸಗಿ ಲಾಗಿನ್‌ಗಳನ್ನು ಕದಿಯುತ್ತಿರುವ ಅಪ್ಲಿಕೇಶನ್‌ಗಳನ್ನು ಗುರುತಿಸಲಾಗಿದೆ ಎಂದು ಫೇಸ್​ಬುಕ್‌ ಹೇಳಿದೆ. ಈ ಅಪಾಯಕಾರಿ ಅಪ್ಲಿಕೇಶನ್‌ಗಳು ಅಧಿಕೃತ ಗೂಗಲ್‌ ಪ್ಲೇಸ್ಟೋರ್ ಮತ್ತು ಆ್ಯಪಲ್‌ ಆ್ಯಪ್​ಸ್ಟೋರ್​ಗಳಲ್ಲಿ ಇದ್ದು ಇವುಗಳನ್ನು ಪಟ್ಟಿ ಮಾಡಲಾಗಿದೆ ಎಂದಿದ್ದಾರೆ.


  ಅಲ್ಲದೇ ಈಗಾಗ್ಲೇ ಹಲವು ಬಳಕೆದಾರರು ಈ ಆ್ಯಪ್‌ಗಳನ್ನು ಹೊಂದಿದ್ದು, ತಕ್ಷಣ ಅನ್‌ಇನ್‌ಸ್ಟಾಲ್‌ ಮಾಡುವಂತೆ ಸೂಚಿಸಿದೆ.ಇಲ್ಲವಾದಲ್ಲಿ ನಮ್ಮೆಲ್ಲ ಡಾಟವನ್ನು ಕಳೆದುಕೊಳ್ಳಬೇಕಾಗುತ್ತದೆ. ಇದುವರೆಗೆ ಸುಮಾರು ಜನರ ಹಣ, ಡಾಕ್ಯುಮೆಂಟ್, ಇನ್ನಿತರ ವಿಷಯಗಳನ್ನು ಕಳೆದುಕೊಂಡಿರುವ ಉದಾರಹಣೆಗಳಿವೆ. ಹಾಗಗಿ ಈ ಸಮಯದಲ್ಲಿ ಎಚ್ಚರವಾಗಿರಬೇಕು.

  Published by:Harshith AS
  First published: