• Home
  • »
  • News
  • »
  • tech
  • »
  • Tech Tips: ಸ್ಮಾರ್ಟ್​​ಫೋನ್​ನ ಬ್ಯಾಕ್​ಕವರ್​ನ ಬಣ್ಣ ಬದಲಾಗುವುದು ಯಾಕೆ? ಈ ಮೂಲಕ ಸುಲಭವಾಗಿ ಸ್ವಚ್ಛಗೊಳಿಸಬಹುದು

Tech Tips: ಸ್ಮಾರ್ಟ್​​ಫೋನ್​ನ ಬ್ಯಾಕ್​ಕವರ್​ನ ಬಣ್ಣ ಬದಲಾಗುವುದು ಯಾಕೆ? ಈ ಮೂಲಕ ಸುಲಭವಾಗಿ ಸ್ವಚ್ಛಗೊಳಿಸಬಹುದು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮೊಬೈಲ್​ಗೆ ಬಳಸಲಾಗುವ ಬ್ಯಾಕ್​ಕವರ್​ಗಳು ಯಾಕೆ ಹಳದಿ ಬಣ್ಣಕ್ಕೆ ಬದಲಾಗುತ್ತದೆ. ಈ ಬದಲಾವಣೆಯ ಹಿಂದಿನ ರಹಸ್ಯ ಏನು? ಎಂಬುದಕ್ಕೆಲ್ಲಾ ಉತ್ತರ ಇಲ್ಲಿದೆ.

  • Share this:

    ತಂತ್ರಜ್ಞಾನ (Technology) ಮಾರುಕಟ್ಟೆಯಲ್ಲಿ ಹಲವಾರು ಕಂಪನಿಯ ಸಾಧನಗಳು ಬಿಡುಗಡೆಯಾಗುತ್ತಿರುತ್ತವೆ. ಇದನ್ನು ಗ್ರಾಹಕರು ಖರೀದಿಸುತ್ತಾರೆ. ಆದರೆ ಅದರ ರಕ್ಷಣೆಗಳಿಗೆ ಅದರದೇ ಆದಂತಹ ಕವರ್​ಗಳಿರುತ್ತದೆ (Cover). ಅದೇ ರೀತಿಯಲ್ಲಿ ಹಲವಾರು ಮಂದಿ ತಮ್ಮ ಸ್ಮಾರ್ಟ್​ಫೋನ್​ಗಳನ್ನು (Smartphone) ಸೇಫ್ಟಿಯಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಅದಕ್ಕೆ ಮುಖ್ಯವಾಗಿ ಬ್ಯಾಕ್​ಕವರ್​​ (Backcover)ಗಳನ್ನು ಅಳವಡಿಸುತ್ತಾರೆ. ಈ ಬ್ಯಾಕ್​ಕವರ್​​ಗಳು ಬೇರೆ ಬೇರೆ ರೀತಿಯಲ್ಲಿ ವೈವಿಧ್ಯಮಯವಾಗಿ ಇರುತ್ತದೆ. ಕೆಲವೊಬ್ಬರು ತಮ್ಮ ಸ್ಮಾರ್ಟ್​ಫೋನ್​ಗಳು ಇತರರಿಗೆ ಕಾಣುವಂತೆ  ಬ್ಯಾಕ್​ಕವರ್​ಗಳನ್ನು ಖರೀದಿಸುತ್ತಾರೆ. ಇದು ಸ್ವಲ್ಪ ದಿನಗಳವರೆಗೆ ಅದೇ ಬಣ್ಣದಲ್ಲಿರುತ್ತದೆ. ಆದರೆ ಕೆಲ ದಿನಗಳ ನಂತರ ಈ ರೀತಿಯ ಬ್ಯಾಕ್​ಕವರ್​​ಗಳು ಹಳದಿ ಅಥವಾ ಕಪ್ಪು ಬಣ್ಣಗಳಾಗುತ್ತವೆ. ಸಾಕಷ್ಟು ಜನರಿಗೆ ಇದಕ್ಕೆ ಕಾರಣಗಳೇನು ಎಂಬುದು ಗೊತ್ತಿಲ್ಲ. ಇದರ ಮಾಹಿತಿ ಇಲ್ಲಿದೆ.


    ಮೊಬೈಲ್​ಗೆ ಬಳಸಲಾಗುವ ಬ್ಯಾಕ್​ಕವರ್​ಗಳು ಯಾಕೆ ಹಳದಿ ಬಣ್ಣಕ್ಕೆ ಬದಲಾಗುತ್ತದೆ. ಈ ಬದಲಾವಣೆಯ ಹಿಂದಿನ ರಹಸ್ಯ ಏನು? ಎಂಬುದಕ್ಕೆಲ್ಲಾ ಉತ್ತರ ಈ ಕೆಳಗೆ ನೀಡಲಾಗಿದೆ.


    ಸೂರ್ಯನ ಶಾಖದಿಂದ ಈ ಬದಲಾವಣೆಗೆ ಕಾರಣ:


    ಈ ಸ್ಮಾರ್ಟ್​ಫೋನ್​ಗಳ ಟ್ರಾನ್ಸ್ಪರೆಂಟ್​​ ಕವರ್​​ಗಳನ್ನು ವಿಶೇಷವಾಗಿ ಥರ್ಮೋ ಪ್ಲಾಸ್ಟಿಕ್ ಪಾಲಿ ಯುರೆಥೇನ್​​ ಎಮಬ ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡಿ ತಯಾರಿಸಲಾಗುತ್ತದೆ. ಈ ಬ್ಯಾಕ್​ಕವರ್​ನಲ್ಲಿ ಬಳಸಲಾದ ಥರ್ಮೋ ಪ್ಲಾಸ್ಟಿಕ್​ ಪಾಲಿ ಯುರೆಥೇನ್​ ರಾಸಾಯನಿಕಗಳಿಗೆ ಸೂರ್ಯನ ಶಾಖವನ್ನು ತಡೆದುಕೊಳ್ಳುವಂತಹ ಶಕ್ತಿ ಇದಕ್ಕಿಲ್ಲ. ಆದ್ದರಿಂದ ಸೂರ್ಯನಿಂದ ಬರುವ ಯುವಿ ಕಿರಣಗಳು ಬ್ಯಾಕ್​ಕವರ್ ಹಳದಿ ಬಣ್ಣಕ್ಕೆ ತಿರುಗಲು ಕಾರಣ ಎಮದು ಸಂಶೋಧನೆ ಹೇಳುತ್ತದೆ.


    ಇದನ್ನೂ ಓದಿ: ಡಿಸೆಂಬರ್​ 2 ರಿಂದ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಐಕ್ಯೂ 11 5ಜಿ ಸ್ಮಾರ್ಟ್​ಫೋನ್!


    ಈ ರೀತಿಯಾದಾಗ ಹೊಸದರಂತೆ ಪರಿವರ್ತಿಸುವುದು ಹೇಗೆ?


    ಹೌದು, ಪ್ರತಿಯೊಬ್ಬರಿಗೂ ಬ್ಯಾಕ್​ಕವರ್​ಗಳು ಬಹಳಷ್ಟು ಸ್ವಚ್ಛವಾಗಿರಬೇಕೆಂದು ಇರುತ್ತದೆ. ಆದರೆ ಈ ರೀತಿಯ ಕವರ್​ಗಳು ತನ್ನಷ್ಟಕ್ಕೇ ಕೆಲವೊಮ್ಮೆ ಬಣ್ಣ ಕಳೆದುಕೊಂಡಾಗ ಏನು ಮಾಡಬೇಕೆಂದು ಬಳಕೆದಾರರಿಗೆ ತೋಚದೆ ಕೆಲವೊಬ್ಬರು ಬಿಸಾಡುತ್ತಾರೆ. ಇನ್ನು ಕೆಲವೊಬ್ಬರು ಸ್ವಚ್ಛಗೊಳಿಸಲು ಪ್ರಯತ್ನಿಸುತ್ತಿರುತ್ತಾರೆ.


    ಸಾಂಕೇತಿಕ ಚಿತ್ರ


    ಆದರೆ ನಿಮ್ಮ ಮೊಬೈಲ್​ನ ಬ್ಯಾಕ್​ಕವರು ಹಳದಿ ಬಣ್ಣಕ್ಕೆ ತಿರುಗಿದಾಗ ಬಿಸಿನೀರಿಗೆ ಎರಡರಿಂದ ಮೂರು ಹನಿಯಷ್ಟು ಪಾತ್ರೆ ತೊಳೆಯುವ ಸೋಪನ್ನು ಮಿಶ್ರಣ ಮಾಡಿ ಹಳೆಯದಾದ ಬ್ರಶ್ ನಿಂದ ಸರಿಯಾಗಿ ಉಜ್ಜಿ. ಈ ರೀತಿ ತೊಳೆದಾಗ ನಿಮ್ಮ ಬ್ಯಾಕ್ ಕವರ್ ಹಳದಿ ಬಣ್ಣ ಹೋಗಿ ಮತ್ತೆ ಹಿಂದೆ ಇದ್ದ ಬಣ್ಣಕ್ಕೆ ತಿರುಗುತ್ತದೆ.


    ಇನ್ನೊಂದು ಪ್ಲಾನ್ ಏನೆಂದರೆ ನಿಮ್ಮ ಕವರ್​​ ಅನ್ನು ಸೋಡಾದಿಂದಲು ತೊಳೆಯಬಹುದು. ಸೋಡಾವನ್ನು ಸ್ವಲ್ಪ ನೀರಿನೊಂದಿಗೆ ಮಿಶ್ರಣ ಮಾಡಿ ನಿಮ್ಮ ಕವರ್​ ಅನ್ನು ತೊಳೆದರೆ ಸುಲಭದಲ್ಲಿ ಹಳದಿ ಬಣ್ಣದಿಂದ ಹಿಂದೆ ಇದ್ದಂತಹ ಒರಿಜಿನಲ್ ಬಣ್ಣಕ್ಕೆ ಬದಲಾಗುತ್ತದೆ.


    ನಿಮ್ಮ ಸ್ಮಾರ್ಟ್​ಫೋನ್​ ಬಿಸಿಯಾಗದಂತೆಯೂ ತಡೆಯಬಹುದು:


    ಮುಖ್ಯವಾಗಿ ಸ್ಮಾರ್ಟ್​ಫೋನ್​ಗಳ ಅತಿಯಾದ ಬಳಕೆ ಒಳ್ಳೆಯದಲ್ಲ. ಇದರಿಂದ ನಿಮ್ಮ ಸ್ಮಾರ್ಟ್​ಫೋನ್​ ಬಿಸಿಯಾಗುವ ಸಾಧ್ಯತೆಗಳಿರುತ್ತದೆ. ನಿಮ್ಮ ಮೊಬೈಲ್​ ಅನ್ನು ಅತಿಯಾಗಿ ಬಳಕೆ ಮಾಡಿ ಆಗಲೇ ಚಾರ್ಜ್​ಗೆ ಇಡಬಾರದು ಇದರಿಂದ ನಿಮ್ಮ ಬ್ಯಾಟರಿ ಹಾನಿಯಾಗುವ ಸಾಧ್ಯತೆಗಳಿರುತ್ತದೆ.


    ಸಾಂಕೇತಿಕ ಚಿತ್ರ


    ನಿಮ್ಮ ಸ್ಮಾರ್ಟ್​ಫೋನ್​ ಅನ್ನು ನಿಮಗೆ ಕಂಪನಿಯಿಂದ ನೀಡಿದ ಚಾರ್ಜರ್​ನಿಂದಲೇ ಚಾರ್ಜ್ ಮಾಡಿ ಇಲ್ಲವಾದಲ್ಲಿ ನಿಮ್ಮ ಬ್ಯಾಟರಿ ದೀರ್ಘ ಬಾಳಿಕೆ ಬರುವುದಿಲ್ಲ. ಕೆಲವೊಬ್ಬರು ತಮ್ಮ ಮೊಬೈಲ್​ ವೇಗವಾಗಿ ಚಾರ್ಜ್​ ಆಗಬೇಕು ಅನ್ನುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಫಾಸ್ಟ್​ ಚಾರ್ಜರ್​ಗಳನ್ನು ಖರೀದಿಸುತ್ತಾರೆ. ಈ ರೀತಿ ಮಾಡಿದರೆ ಸ್ಮಾರ್ಟ್​ಫೋನ್​ನಲ್ಲಿರುವ ಬ್ಯಾಟರಿಗಳು ಹಾನಿಯಾಗುತ್ತದೆ.


    ಮುಖ್ಯವಾಗಿ ಹೇಳಬೇಕಾದರೆ ಸ್ಮಾರ್ಟ್​ಫೋನ್​ಗಳನ್ನು ರಾತ್ರಿಯಿಡೀ  ಚಾರ್ಜ್​​ನಲ್ಲಿ ಹಾಕಬಾರದು. ಅತಿಯಾದ ಚಾರ್ಜ್​ ಬ್ಯಾಟರಿಗೂ ಒಳ್ಳೆಯದಲ್ಲ, ಸ್ಮಾರ್ಟ್​ಫೋನಿಗೂ ಒಳ್ಳೆಯದಲ್ಲ.

    Published by:Prajwal B
    First published: