ದೇಶದಾದ್ಯಂತ ಬೇಸಿಗೆ ಕಾಲ (Summer Season) ಬಂದಿದೆ. ಬಿಸಿಲ ತಾಪದಿಂದ ಹೊರಬರಲು ಮನೆಗಳಲ್ಲಿ ಎಸಿ, ಕೂಲರ್, ಫ್ಯಾನ್ ಗಳನ್ನು ಅಳವಡಿಸುವುದು ಸಾಮಾನ್ಯ. ಸೀಲಿಂಗ್ ಫ್ಯಾನ್ ಮನೆಯಲ್ಲಿರುವಂತಹ ಬಿಸಿಲಿನ ಶಾಖವನ್ನು ತೊಡೆದುಹಾಕಲು ಬಹಳಷ್ಟು ಸಹಕಾರಿಯಾಗುತ್ತದೆ. ಮನೆಯ ಪ್ರತಿಯೊಂದು ರೂಮ್ನಲ್ಲಿ ಎಸಿ ಅಥವಾ ಕೂಲರ್ ಅಳವಡಿಸಿದ್ದರೂ, ಕೋಣೆಯಲ್ಲಿ ಸೀಲಿಂಗ್ ಫ್ಯಾನ್ (Ceiling Fan) ಇರುವುದು ಕಡ್ಡಾಯವಾಗಿದೆ. ಆದರೆ, ಅನೇಕರು ತಮ್ಮ ಮನೆಯಲ್ಲಿ ಅಳವಡಿಸಿರುವ ಫ್ಯಾನ್ ಅಕ್ಕಪಕ್ಕದ ಸ್ಥಳದಲ್ಲಿ, ಮನೆಯಲ್ಲಿ ಅಳವಡಿಸಿರುವ ಫ್ಯಾನ್‌ಗಿಂತ ಕಡಿಮೆ ಗಾಳಿಯನ್ನು ನೀಡುತ್ತದೆ ಎಂದು ದೂರುತ್ತಾರೆ. ಎರಡೂ ಒಂದೇ ಕಂಪೆನಿಯಾಗಿದ್ದರೂ ತಮ್ಮ ಮನೆಯಲ್ಲಿ ಯಾಕೆ ಗಾಳಿ ಕಡಿಮೆ (Air Less Fan) ಬರುತ್ತದೆ ಎಂದು ಆಲೋಚಿಸುತ್ತಾರೆ.
ಹೌದು, ಪ್ರತಿಯೊಬ್ಬರ ಮನೆಯಲ್ಲೂ ಸೀಲಿಂಗ್ ಫ್ಯಾನ್ ಇದ್ದೇ ಇರುತ್ತದೆ. ಆದರೆ ದಿನಕಳೆದಂತೆ ಫ್ಯಾನ್ನಿಂದ ಬರುವಂತಹ ಗಾಳಿ ಕಡಿಮೆಯಾಗುತ್ತದೆ. ಜೊತೆಗೆ ಬೇರೆ ಮನೆಯ ಫ್ಯಾನ್ಗಳಿಗೆ ಹೋಲಿಸಿದ್ರೆ ನಮ್ಮ ಮನೆಯ ಫ್ಯಾನ್ನಲ್ಲಿ ಭಾರೀ ಕಡಿಮೆ ಪ್ರಮಾಣದಲ್ಲಿ ಗಾಳಿ ಬರುತ್ತಿದೆ ಎಂದು ಕಮಡುಕೊಳ್ಳುತ್ತಾರೆ. ಆದರೆ ಇದಕ್ಕೂ ಒಂದು ಬಲವಾದ ಕಾರಣವಿದೆ.
ಫ್ಯಾನ್ ಹೇಗೆ ಅಳವಡಿಸಬೇಕು?
ಫ್ಯಾನ್ ಮನೆಯಲ್ಲಿ ಅಳವಡಿಸುವಾಗ ಅದನ್ನು ಇಡುವಂತಹ ಎತ್ತರವು ಸಹ ತುಂಬಾ ಮುಖ್ಯವಾಗಿದೆ. ಉತ್ತಮ ಗಾಳಿ ಮತ್ತು ತಂಪಾಗಿಸಲು ಸರಿಯಾದ ಎತ್ತರದಲ್ಲಿ ಫ್ಯಾನ್ ಅನ್ನು ಫಿಕ್ಸ್ ಮಾಡುವುದು ಬಹಳ ಮುಖ್ಯ. ಇನ್ನು ಗಾಳಿ ಮಾತ್ರವಲ್ಲ, ಸುರಕ್ಷತೆಯ ದೃಷ್ಟಿಯಿಂದಲೂ ಸೂಕ್ತವಾದ ಎತ್ತರದಲ್ಲಿ ಫ್ಯಾನ್ ಅಳವಡಿಸುವುದು ಮುಖ್ಯವಾಗಿರುತ್ತದೆ. ಆದರೆ, ಆಶ್ಚರ್ಯವೆಂದರೆ ಕೋಣೆಯ ನೆಲದಿಂದ ಫ್ಯಾನ್ ಎಷ್ಟು ಎತ್ತರದಲ್ಲಿ ಅಳವಡಿಸಬೇಕು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.
ಇದನ್ನೂ ಓದಿ: ಐಪಿಎಲ್ ಪ್ರಿಯರಿಗೆ ವಿಶೇಷ ರೀಚಾರ್ಜ್ ಪ್ಲ್ಯಾನ್ ಪರಿಚಯಿಸಿದ ಜಿಯೋ! 40 ಜಿಬಿವರೆಗೆ ಡೇಟಾ ಉಚಿತ
ಎಷ್ಟು ಎತ್ತರದಲ್ಲಿ ಅಳವಡಿಸಬೇಕು?
ಒಂದು ಮನೆಯ ರೂಮ್ನ ನೆಲದಿಂದ ಫ್ಯಾನ್ ಅನ್ನು ಎಷ್ಟು ಎತ್ತರದಲ್ಲಿ ಅಳವಡಿಸಬೇಕು ಎಂಬುದು ಅದು ಆ ರೂಮ್ನ ಗಾತ್ರ, ಫ್ಯಾನ್ ಮತ್ತು ಮೋಟರ್ನ ಗಾತ್ರವನ್ನು ಅವಲಂಬಿಸಿರುತ್ತದೆ. ಇನ್ನು ಅಮೆರಿಕನ್ ಲೈಟಿಂಗ್ ಸೊಸೈಟಿಯ ಪ್ರಕಾರ, ಉತ್ತಮ ಗಾಳಿಗಾಗಿ ಫ್ಯಾನ್ ಅನ್ನು ನೆಲದಿಂದ 8 ರಿಂದ 9 ಅಡಿ ಎತ್ತರದಲ್ಲಿ ಅಳವಡಿಸಬೇಕು. ಇಷ್ಟು ಎತ್ತರದಲ್ಲಿ ಫ್ಯಾನ್ ಅಳವಡಿಸಿದಾಗ ಇಡೀ ರೂಮ್ಗೆ ಉತ್ತಮ ಗಾಳಿಯನ್ನು ನೀಡುವುದಲ್ಲದೇ, ಅಷ್ಟು ಎತ್ತರದಲ್ಲಿ ಅಳವಡಿಸಿರುವ ಫ್ಯಾನ್ ಸಂಪೂರ್ಣ ಸುರಕ್ಷಿತವಾಗಿರುತ್ತದೆ ಎನ್ನುತ್ತಾರೆ ತಜ್ಞರು. ಇನ್ನು ಇಷ್ಟು ಎತ್ತರದಲ್ಲಿ ಅಳವಡಿಸಿರುವ ಫ್ಯಾನ್ನಿಂದ ಮನೆಯವರಿಗೂ ಯಾವುದೇ ಸಮಸ್ಯೆಗಳಾಗುವುದಿಲ್ಲ.
ಫ್ಯಾನ್ ಅನ್ನು ಯಾವಾಗಲೂ ರೂಮ್ನ ಮಧ್ಯದಲ್ಲಿಯೇ ಅಳವಡಿಸಬೇಕು. ಏಕೆಂದರೆ ಈ ರೀತಿ ಅಳವಡಿಸುವುದರಿಂದ ಒಂದು ಕೋಣೆಯ ಸುತ್ತಲೂ ಗಾಳಿಯನ್ನು ನೀಡುತ್ತದೆ. ಇನ್ನು ಫ್ಯಾನ್ ಅನ್ನು ಎಂದಿಗೂ ಗೋಡೆಗೆ ಜೋಡಿಸಬಾರದು. ಇದರಿಂದ ಗೋಡೆಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗೆಯೇ ಫ್ಯಾನ್ ಯಾವಾಗಲೂ ಸೀಲಿಂಗ್‌ನಿಂದ ಕನಿಷ್ಠ 8 ಇಂಚುಗಳಷ್ಟು ದೂರದಲ್ಲಿರಬೇಕು. ಒಂದು ವೇಳೆ ನೀವು ಅಳವಡಿಸಿರುವ ಫ್ಯಾನ್ಸೀಲಿಂಗ್ಗೆ ಹತ್ತಿರವಾಗಿರುವುದರಿಂದ, ಫ್ಯಾನ್ ಕಡಿಮೆ ಗಾಳಿಯನ್ನು ನೀಡಬಹುದು.
ಫ್ಯಾನ್ಗೆ ಎಷ್ಟು ರೆಕ್ಕೆ ಇದ್ರೆ ಕರೆಂಟ್ ಕಡಿಮೆ ಎಳೆಯುತ್ತೆ?
ಸಾಮಾನ್ಯವಾಗಿ ನಮ್ಮ ಭಾರತದಲ್ಲಿ ಫ್ಯಾನ್ಗಳನ್ನು ಹೆಚ್ಚು ಬಳಸುತ್ತಾರೆ. ಅದರಲ್ಲಿಯೂ 3 ರೆಕ್ಕೆಯ ಫ್ಯಾನ್ಗಳನ್ನು ಹೆಚ್ಚಾಗಿ ಬಳಸುತ್ತಿದ್ದೇವೆ. ಏಕೆಂದರೆ, ಮಾರುಕಟ್ಟೆಯಲ್ಲಿ ಇವು ಹೆಚ್ಚಾಗಿ ಕಾಣಸಿಗುತ್ತವೆ. ಇನ್ನೂ ಎಷ್ಟು ರೆಕ್ಕೆಯ ಫ್ಯಾನ್ ಇದ್ರೆ ಕಡಿಮೆ ಕರೆಂಟ್ ಎಳೆಯುತ್ತೆ ಅಂತ ನಿಮಗೆ ಗೊತ್ತಿದ್ಯಾ? ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.
ಒಂದು ರೆಕ್ಕೆಯ ಫ್ಯಾನ್: ಯಾವುದೇ ಫ್ಯಾನ್ ಆದರೂ ರೆಕ್ಕೆ ಅದರ ವಿನ್ಯಾಸ, ಮೋಟಾರ್, ಹೊರಬರುವ ಗಾಳಿಯ ಹರಿವಿನ ಪ್ರಮಾಣ ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಒಂದು ರೆಕ್ಕೆಯ ಫ್ಯಾನ್ ಎಲ್ಲಿಯೂ ಹೆಚ್ಚಾಗಿ ಇರುವುದಿಲ್ಲ.ಅವು ಸಾಮಾನ್ಯವಾಗಿ ಒಂದೇ ಸ್ಥಳಕ್ಕೆ ಗಾಳಿಯನ್ನು ನಿರ್ದೇಶಿಸುತ್ತವೆ. ಆದ್ದರಿಂದ ಅವುಗಳನ್ನು ಕೈಗಾರಿಕಾ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
ಎರಡು ರೆಕ್ಕೆಯ ಫ್ಯಾನ್: ಎರಡು-ರೆಕ್ಕೆಯ ಫ್ಯಾನ್ಗಳನ್ನು ಮನೆಗಳಲ್ಲಿ ಬಳಸಲಾಗುತ್ತದೆ. ಇವು ಹೆಚ್ಚು ಗಾಳಿಯನ್ನು ನೀಡುತ್ತವೆ. ಇವುಗಳನ್ನು ಸಣ್ಣ ಕೋಣೆಗಳಿಗೆ ಮಾತ್ರ ಬಳಸಲಾಗುತ್ತೆ. ಇವು ಹೆಚ್ಚು ಗಾಳಿಯನ್ನು ನೀಡುವುದಿಲ್ಲ.
ಮೂರು ರೆಕ್ಕೆಯ ಫ್ಯಾನ್: ಮೂರು-ರೆಕ್ಕೆಯ ಫ್ಯಾನ್ ಮನೆ ಬಳಕೆಗೆ ಸೂಕ್ತವಾಗಿರುತ್ತದೆ. ಇದು ಎಲ್ಲಾ ಕಡೆಗಳಲ್ಲಿ ಸಮವಾಗಿ ಗಾಳಿಯನ್ನು ನೀಡುತ್ತಾರೆ. ವಿದ್ಯುತ್ ಬಳಕೆಯೂ ಕಡಿಮೆಯಾಗಿದೆ. ತುಂಬಾ ಚಿಕ್ಕದಲ್ಲದ ಕೋಣೆಗಳಿಗೆ ಈ ಫ್ಯಾನ್ಗಳು ಉತ್ತಮವಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ