ಮೊಬೈಲ್ ಫೋನ್ಗಳು (Mobile Phones) ಹಲವು ವರ್ಷಗಳ ಹಿಂದೆ ಪ್ರಪಂಚದಾದ್ಯಂತ ಪ್ರಾರಂಭವಾದವು. ಈ ಮೊಬೈಲ್ ಫೋನ್ಗಳ ಬಿಡುಗಡೆಯಿಂದ ಮೊದಲಿಗೆ ಕೇವಲ ಕರೆಗಳ ಮೂಲಕ ಏನಾದರು ತಿಳಿಸುತ್ತಿದ್ದರು. ತದನಂತರ ಮೆಸೇಜ್ (Message) ಮಾಡುವ ಟ್ರೆಂಡ್ಗಳು (Trend) ಆರಂಭವಾಯಿತು. ಈ ಮೊಬೈಲ್ನಲ್ಲಿ ಸಂದೇಶ ಕಳುಹಿಸುವ ತಂತ್ರಜ್ಞಾನ (Technology) ಆರಂಭವಾದ ನಂತರ ಮೆಸೇಜ್ ಮೂಲಕ ಮೊಬೈಲ್ ಬಳಕೆದಾರರು ಸಂವಹನ ನಡೆಸಲು ಆರಂಭಿಸಿದರು. ಆ ಸಮಯದಲ್ಲಿ, ಎಸ್ಎಂಎಸ್ ಪ್ಯಾಕ್ ರೀಚಾರ್ಜ್ನ ಪ್ರತ್ಯೇಕ ಯೋಜನೆಯನ್ನು ಪರಿಚಯಿಸಲಾಯಿತು, ಅದರ ಮೂಲಕ ಅತ್ಯಂತ ಕಡಿಮೆ ವೆಚ್ಚದಲ್ಲಿ ಎಸ್ಎಂಎಸ್ (SMS) ಕಳುಹಿಸಲು ಅವಕಾಶ ನೀಡಲಾಯಿತು. ಹಾಗಿದ್ರೆ ಎಸ್ಎಮ್ಎಸ್ ಮೊದಲು ಆರಂಭವಾದಾಗ ಯಾರು ಮತ್ತು ಏನು ಮೆಸೇಜ್ ಮಾಡಿದ್ದಾರೆಂದು ನಿಮಗೆ ಕುತೂಹಲ ಇದೆಯಾ? ಹಾಗಿದ್ರೆ ಇದನ್ನು ಓದಿ.
ಈ ಮೆಸೇಜ್ ಮಾಡುವ ತಂತ್ರಜ್ಞಾನದಿಂದ ಯಾವುದೇ ಮಾಹಿತಿಯನ್ನು ಕಾಲ್ ಮುಖಾಂತರವೇ ಹೇಳಬೇಕಾಗಿಲ್ಲ. ಹಾಗಿದ್ರೆ 30 ವರ್ಷಗಳ ಹಿಂದೆ ವಿಶ್ವದಲ್ಲಿ ಮೊದಲ ಬಾರಿ ಮೆಸೇಜ್ ಮಾಡುವ ತಂತ್ರಜ್ಞಾನ ಆರಂಭವಾದಾಗ ಅದನ್ನು ಯಾರು ಮತ್ತು ಏನು ಮೆಸೇಜ್ ಮಾಡಿದ್ದಾರೆಂದು ಕೆಲವರಿಗೆ ಪ್ರಶ್ನೆ ಮೂಡಿತ್ತು. ಇದರ ಬಗ್ಗೆ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಮೊದಲ ಎಸ್ಎಮ್ಎಸ್ ಯಾರು ಮಾಡಿದ್ದು?
ಮೊದಲ ಎಸ್ಎಂಎಸ್ ಅನ್ನು ವೊಡಾಫೋನ್ ಎಂಜಿನಿಯರ್ ನೀಲ್ ಪ್ಯಾಪ್ವರ್ತ್ ಅವರು ತಮ್ಮ ಇತರ ಪಾಲುದಾರರಾದ ರಿಚರ್ಡ್ ಜಾರ್ವಿಸ್ಗೆ ಕಂಪ್ಯೂಟರ್ನಿಂದ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಆಗ ರಿಚರ್ಡ್ ಜಾರ್ವಿಸ್ ಕಂಪನಿಯ ನಿರ್ದೇಶಕರಾಗಿದ್ದರು. ಈ ಎಸ್ಎಮ್ಎಸ್ ಅವರಿಗೆ ಆರ್ಬಿಟಲ್ 901 ಹ್ಯಾಂಡ್ಸೆಟ್ನಲ್ಲಿ ಕಳುಹಿಸಲಾಗಿದೆ.
ಇದನ್ನೂ ಓದಿ: ಇಲ್ಲಿದೆ ನೋಡಿ ಹೈಗ್ರಾಫಿಕ್ಸ್ ಹೊಂದಿದ 10MB ಒಳಗಿನ ಗೇಮ್ಸ್ಗಳು! ಕಡಿಮೆ ರ್ಯಾಮ್ನ ಮೊಬೈಲ್ನಲ್ಲಿಯೂ ಆಡ್ಬಹುದು
ಕ್ರಿಸ್ಮಸ್ ಹಬ್ಬದ ಕುರಿತು ಸಂದೇಶ ರವಾನೆ
ಮೊದಲ ಬಾರಿಗೆ ನೀಲ್ ಪ್ಯಾಪ್ವರ್ತ್ ಅವರು ಜಾರ್ವಿಸ್ ಅವರಿಗೆ ತಮ್ಮ ಆರ್ಬಿಟಲ್ 901 ಹ್ಯಾಂಡ್ಸೆಟ್ನಲ್ಲಿ ಮೆಸೇಜ್ ಕಳುಹಿಸಿದರು. ಅದರಲ್ಲಿ ಕ್ರಿಸ್ಮಸ್ ಹಬ್ಬದ ಶುಭಾಶಯಗಳು ಎಂದು ಮೆಸೇಜ್ ಕಳುಹಿಸಿದ್ದಾರೆ.
ವೊಡಫೋನ್ನಿಂದ ಮೊದಲ ಟೆಕ್ಸ್ಟ್ ಮೆಸೇಜ್:
ಈ ಸಂದೇಶದಲ್ಲಿ 14 ಅಕ್ಷರಗಳನ್ನು ಬಳಸಲಾಗಿದೆ. ಇದನ್ನು 1992 ರಲ್ಲಿ ಮೊದಲಿಗೆ ಕಳುಹಿಸಲಾಗಿದೆ. ಪ್ರಪಂಚದ ಮೊದಲ ಟೆಕ್ಸ್ಟ್ ಮೆಸೇಜ್ ಅನ್ನು ವೊಡಾಫೋನ್ ಕಳುಹಿಸಿದೆ ಎಂದು ಹೇಳಲಾಗಿದೆ. ಫ್ರಾಂಕೋ-ಜರ್ಮನ್ ಜಿಎಸ್ಎಮ್ ಸಹಯೋಗದಲ್ಲಿ ಫ್ರೈಡೆಲ್ಮ್ ಹಿಲ್ಲರ್ಬ್ರಾಂಡ್ ಮತ್ತು ಬರ್ನಾರ್ಡ್ ಗಿಲ್ಬರ್ಟ್ ಅವರು 1984 ರಲ್ಲಿ ಎಸ್ಎಮ್ಎಸ್ ಪರಿಕಲ್ಪನೆಯನ್ನು ಮೊದಲು ರಚಿಸಿದವರಾಗಿದ್ದಾರೆ.
ನೀಲ್ ಪ್ಯಾಪ್ವರ್ತ್ ಅವರ ಮೆಸೇಜ್ಗೆ ಜಾರ್ವಿಸ್ ಅವರ ಯಾವುದೇ ಪ್ರತಿಕ್ರಿಯೆ ಇಲ್ಲ
ಜಾರ್ವಿಸ್ ಅವರು ಕೂಡ ಆರ್ಬಿಟೆಲ್ 901 ಹೆಸರಿನ ಫೋನ್ ಅನ್ನು ಹೊಂದಿದ್ದರು, ಅದರಲ್ಲಿ ಅವರು 'ಮೇರಿ ಕ್ರಿಸ್ಮಸ್' ಸಂದೇಶವನ್ನು ಸ್ವೀಕರಿಸಿದರು. ಆದರೆ ಅವರು ಈ ಸಂದೇಶಕ್ಕೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಲಿಲ್ಲ.
SMS ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?
ಈ ಎಸ್ಎಮ್ಎಸ್ಗಳನ್ನು ಕಳುಹಿಸಿದಾಗ ಅದು ಮೊದಲು ಆನ್ಲೈನ್ ಮೆಸೇಜ್ನಂತೆಯೇ ಕನ್ವರ್ಟ್ ಆಗುತ್ತದೆ. ತದನಂತರ ಅದು ಎಸ್ಎಮ್ಎಸ್ ಕೇಂದ್ರಕ್ಕೆ ತಲುಪುತ್ತದೆ. ಅಲ್ಲಿಂದ ಅದು ಯಾರಿಗೆ ಮೆಸೇಜ್ ಕಳುಹಿಸಿರುತ್ತಾರೊ ಅವರಿಗೆ ತಲುಪುತ್ತದೆ. ಈ ರೀತಿ ಎಸ್ಎಮ್ಎಸ್ ತಂತ್ರಜ್ಞಾನಗಲು ಕಾರ್ಯನಿರ್ವಹಿಸುತ್ತದೆ.
ಮೊದಲೆಲ್ಲಾ ಯಾವುದೇ ವಿಷಯವನ್ನು ದೂರದಲ್ಲಿ ಇದ್ದವರಿಗೆ ಹೇಳಬೇಕಿದ್ದರೆ ಪತ್ರಗಳ ಮೂಲಕ ಹೇಳುತ್ತಿದ್ದರು. ಸ್ವಲ್ಪ ಸಮಯಗಳ ಮೂಲಕ ಮೊಬೈಲ್ಗಳು ಮಾರುಕಟ್ಟೆಗೆ ಕಾಲಿಟ್ಟಿತು. ಆ ನಂತರ ಮೊಬೈಲ್ ಕರೆಗಳ ಮೂಲಕ ರೀಚಾರ್ಜ್ ಹಾಕಿ ವಿಷಯವನ್ನು ಒಬ್ಬರಿಂದ ಇನ್ನೊಬ್ಬರಿಗೆ ತಲುಪಿಸುತ್ತಿದ್ದರು. ಇದೀಗ ಮೆಸೇಜ್ ಮಾಡುವ ಪ್ರಕ್ರಿಯೆ ಬಂದಾಗಿನಿಂದ ಎಲ್ಲವೂ ಮೊಬೈಲ್ ಸಂದೇಶದ ಮೂಲಕವೇ ತಿಳಿಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ