• Home
 • »
 • News
 • »
 • tech
 • »
 • Google Doodle: ಗೂಗಲ್​ ಡೂಡಲ್​ನಲ್ಲಿಂದು ಕಾಣಿಸ್ತಿರೋ ಸನ್​ ಕ್ವೀನ್​​​ ಮಾರಿಯ ಟೆಲ್ಕೆಸ್​ ಯಾರು? ರಾಣಿ ಹಿಂದಿನ ರಹಸ್ಯ ಇದು?

Google Doodle: ಗೂಗಲ್​ ಡೂಡಲ್​ನಲ್ಲಿಂದು ಕಾಣಿಸ್ತಿರೋ ಸನ್​ ಕ್ವೀನ್​​​ ಮಾರಿಯ ಟೆಲ್ಕೆಸ್​ ಯಾರು? ರಾಣಿ ಹಿಂದಿನ ರಹಸ್ಯ ಇದು?

ಗೂಗಲ್ ಡೂಡಲ್​ ಮಾರಿಯಾ ಟೆಲ್ಕೆಸ್​

ಗೂಗಲ್ ಡೂಡಲ್​ ಮಾರಿಯಾ ಟೆಲ್ಕೆಸ್​

ಗೂಗಲ್ ಡೂಡಲ್ ಪ್ರತೀ ದಿನ ಆ ದಿನದ ವಿಶೇಷತೆಯನ್ನು ಬಿಂಬಿಸುವ ಚಿತ್ರವನ್ನು ಅಥವಾ ವಿಡಿಯೋವನ್ನು ಬಳಕೆದಾರರು ನೋಡುವಂತೆ ನೀಡುತ್ತದೆ. ಇಂದು ಗೂಗಲ್​ ಡೂಡಲ್​ನಲ್ಲಿ ನಾವೆಲ್ಲರೂ ಸನ್​ ಕ್ವೀನ್​ ಎಂಬ ಬಿರುದನ್ನು ಪಡೆದು ವಿಜ್ಞಾನಿಯಾಗಿರುವ ಮಾರಿಯಾ ಟೆಲ್ಕೆಸ್​ ಅವರ ಹುಟ್ಟುಹಬ್ಬದ ಸಂಭ್ರಮವನ್ನು ನೋಡಬಹುದು. ಹಾಗಿದ್ರೆ ಮಾರಿಯಾ ಟೆಲ್ಕೆಸ್​ ಯಾರು, ಇವರ ಸಾಧನೆಗಳೇನು? ಎಂಬುದನ್ನು ನಾವಿಲ್ಲಿ ತಿಳಿಯೋಣ.

ಮುಂದೆ ಓದಿ ...
 • Share this:

  ಪ್ರಪಂಚದಲ್ಲಿ ದೊಡ್ಡ ಟೆಕ್​​ ಕಂಪನಿಯಾಗಿರುವ (Tech Company) ಸರ್ಚ್​ ಇಂಜಿನ್ ಗೂಗಲ್ (Search Engine Google)​ ಏನಾದರೊಂದು ವಿಶೇಷತೆಯನ್ನು ಗ್ರಾಹಕರಿಗೆ ಪರಿಚಯಿಸುವುದರಿಂದ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಗೂಗಲ್​ ತನ್ನ ವೆಬ್​ಸೈಟ್​ನಲ್ಲಿ ಡೂಡಲ್ ಎಂಬ ಒಂದು ಫೀಚರ್ಸ್​ ಅನ್ನು ಒಳಗೊಂಡಿದೆ. ಈ ಗೂಗಲ್​ ಡೂಡಲ್ ಮೂಲಕ ಅನಿಮೇಶನ್​ ವಿಡಿಯೋ ಅಥವಾ ಫೋಟೋಗಳನ್ನು ಹಾಕುವ ಮೂಲಕ ದಿನದ ವಿಶೇಷತೆಯ ಬಗ್ಗೆ ಜನರಿಗೆ ತಿಳಿಸುತ್ತದೆ. ಅದೇ ರೀತಿ ಇಂದು ಗೂಗಲ್​ ಡೂಡಲ್​ನಲ್ಲಿ (Google Doodle) ಸೌರ ಶಕ್ತಿ ಸಾಧನಗಳ ಉತ್ಪಾದನೆಯಲ್ಲಿ ಬಹಳ ಪ್ರಸಿದ್ಧಿಯನ್ನು ಪಡೆದ ಮಾರಿಯಾ ಟೆಲ್ಕೆಸ್​ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದೆ. ಅಷ್ಟಕ್ಕೂ ಇವರ ಸಾಧನೆಗಳೇನು? ಮಾರಿಯಾ ಟೆಲ್ಕೆಸ್​ ಯಾರು ಎಂಬುದನ್ನು ಈ  ಕೆಳಗೆ ನೋಡೋಣ.


  ಗೂಗಲ್ ಡೂಡಲ್ ಪ್ರತೀ ದಿನ ಆ ದಿನದ ವಿಶೇಷತೆಯನ್ನು ಬಿಂಬಿಸುವ ಚಿತ್ರವನ್ನು ಅಥವಾ ವಿಡಿಯೋವನ್ನು ಬಳಕೆದಾರರು ನೋಡುವಂತೆ ನೀಡುತ್ತದೆ. ಇಂದು ಗೂಗಲ್​ ಡೂಡಲ್​ನಲ್ಲಿ ನಾವೆಲ್ಲರೂ ಸನ್​ ಕ್ವೀನ್​ ಎಂಬ ಬಿರುದನ್ನು ಪಡೆದು ವಿಜ್ಞಾನಿಯಾಗಿರುವ ಮಾರಿಯಾ ಟೆಲ್ಕೆಸ್​ ಅವರ ಹುಟ್ಟುಹಬ್ಬದ ಸಂಭ್ರಮವನ್ನು ನೋಡಬಹುದು. ಹಾಗಿದ್ರೆ ಮಾರಿಯಾ ಟೆಲ್ಕೆಸ್​ ಯಾರು, ಇವರ ಸಾಧನೆಗಳೇನು? ಎಂಬುದನ್ನು ನಾವಿಲ್ಲಿ ತಿಳಿಯೋಣ.


  ಮಾರಿಯಾ ಟೆಲ್ಕೆಸ್​​ ಯಾರು?


  ಗೂಗಲ್​ ಡೂಡಲ್ ಪುಟದ ಪ್ರಕಾರ , ಮಾರಿಯಾ ಟೆಲ್ಕೆಸ್​ ಸೌರಶಕ್ತಿಯ ಪ್ರವರ್ತಕರಾಗಿದ್ದರು ಮತ್ತು ಟೆಕ್ನಾಲಜಿ ಕ್ಷೇತ್ರದಲ್ಲಿ ಅವರ ಅತ್ಯುತ್ತಮ ಕೊಡುಗೆಗಳಿಗಾಗಿ ಅವರನ್ನು ಹೆಚ್ಚಾಗಿ ದಿ ಸನ್​ ಕ್ವೀನ್​ ಎಂಬ ಬಿರುದನ್ನು ನೀಡಲಾಯಿತು.


  ಇದನ್ನೂ ಓದಿ: ವಿಶೇಷ ಫೋಟೋದೊಂದಿಗೆ ಫಿಫಾ ಫುಟ್​​​ಬಾಲ್ ವಿಶ್ವಕಪ್ ಆಚರಿಸಿದ ಗೂಗಲ್ ಡೂಡಲ್! ಇಲ್ಲಿದೆ ನೋಡಿ ಆ ಇಮೇಜ್


  ಸೂರ್ಯನ ಶಕ್ತಿಯಿಂದ ಜನರ ಜೀವನವನ್ನು ಬದಲಾವಣೆ ಮಾಡಬಹುದು ಎಂದು ಯೋಚಿಸಿದ ಮೊದಲ ವ್ಯಕ್ತಿಗಳಲ್ಲಿ ಮಾರಿಯಾ ಟೆಲ್ಕೆಸ್​ ಕೂಡ ಒಬ್ಬರು. ಆದ್ದರಿಂದ ಮಾರಿಯಾ ಟೆಲ್ಕೆಸ್ ಅವರು ಜನರ ಉಪಯೋಗಕ್ಕಾಗಿ ಸೌರ ಶಕ್ತಿಯಿಂದ ಜನರಿಗೆ ಸಹಾಯಕವಾಗುವ ಸಾಧನಗಳನ್ನು ತಯಾರಿಸಿದ ವ್ಯಕ್ತಿಗಳಲ್ಲಿ ಒಬ್ಬರು.


  ಗೂಗಲ್ ಡೂಡಲ್​ ಮಾರಿಯಾ ಟೆಲ್ಕೆಸ್​


  ಸನ್​ಕ್ವೀನ್​ ಮಾರಿಯಾ ಟೆಲ್ಕೆಸ್​​ ಅವರ ಪರಿಚಯ


  ಡಾ ಟೆಲ್ಕೆಸ್ ಅವರು 1900 ಡಿಸೆಂಬರ್​ 12 ರಲ್ಲಿ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಜನಿಸಿದರು ಮತ್ತು ಬುಡಾಪೆಸ್ಟ್‌ನ ಈಟ್ವೊಸ್ ಲೊರಾಂಡ್ ವಿಶ್ವವಿದ್ಯಾಲಯದಲ್ಲಿ ಭೌತಿಕ ರಸಾಯನಶಾಸ್ತ್ರ (Physical Chemistry) ಅನ್ನು ಅಧ್ಯಯನ ಮಾಡಿದರು. 1920 ರಲ್ಲಿ ಬಿಎ ಪದವಿ ಪಡೆದರು ಮತ್ತು 1924 ರಲ್ಲಿ ಪಿಎಚ್‌ಡಿ ಮಾಡಿ ಮುಗಿಸಿದರು.


  ತದನಂತರದಲ್ಲಿ ಮಾರಿಯಾ ಟೆಲ್ಕೆಸ್​ ಅವರು ಯುನೈಟೆಡ್ ಸ್ಟೇಟ್​​ಗೆ ತೆರಳಿದರು ಅಲ್ಲಿ ಬಯೋಫಿಸಿಸ್ಟ್ ಉದ್ಯೋಗಕ್ಕೆ ಸೇರಿದರು. 1937ರಲ್ಲಿ ಯುಸ್​ ನ ಪ್ರಜೆಯಾದರು. ಡಾ. ಮಾರಿಯಾ ಟೆಲ್ಕೆಸ್​ ಅವರು ನಂತರದಲ್ಲಿ ಸೌರಶಕ್ತಿ ಸಮಿತಿಯ ಸದಸ್ಯರಾಗಿ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (MIT) ತಮ್ಮ ವೃತ್ತಿಜೀವನವನ್ನು ಮುಂದುವರೆಸಿದರು.


  ಸನ್​​ಕ್ವೀನ್​ ಅವರ ಸಾಧನೆಗಳು


  ಮಾರಿಯಾ ಟೆಲ್ಕೆಸ್​ ಅವರು ತಮ್ಮ ಸೃಜನಶೀಲತೆಯಿಂದ ಸೌರಶಕ್ತಿಯಿಂದ ಬಿಸಿಯಾಗುವಂತಹ ಮನೆ, ಸಾಧನಗಳನ್ನು ತಯಾರಿಸಿದರು. ಈ ಮೂಲಕ ಬಹಳಷ್ಟು ಪ್ರಸಿದ್ಧಿಯನ್ನು ಪಡೆದರು. ಎರಡನೆಯ ಮಹಾಯುದ್ಧದ ಸಮಯದಲ್ಲಿ, ಸಮುದ್ರದ ನೀರನ್ನು ತಾಜಾ ನೀರಾಗಿ ಪರಿವರ್ತಿಸುವ ಸೌರ ಡಿಸ್ಟಿಲರ್ ಅನ್ನು ಅಭಿವೃದ್ಧಿಪಡಿಸಲು ಮತ್ತು ಅದಕ್ಕೆ ಸಹಾಯ ಮಾಡಲು ಯುಎಸ್​ ಸರ್ಕಾರದಿಂದ ಸನ್​ಕ್ವೀನ್​ಗೆ ಮನವಿ ಮಾಡಿದರು. ಇದರ ಅನ್ವೇಷಣೆಯಾದ ನಂತರ ಈ ಜೀವ ಉಳಿಸುವ ಸಾಧನವನ್ನು ಫೆಸಿಫಿಕ್​ನಲ್ಲಿ ನೆಲೆಸಿರುವ ಸೈನಿಕರು ತಮ್ಮ ಸೆಕ್ಯುರಿಟಿಗಾಗಿ ಬಳಸಿದರು.


  ಗೂಗಲ್ ಡೂಡಲ್​ ಮಾರಿಯಾ ಟೆಲ್ಕೆಸ್​


  ಸಂಶೋಧನೆಯ ನಂತರ ಸಂಶೋಧನಾ ಪ್ರಾಧ್ಯಾಪಕರಾದರು


  ಈ ಎಲ್ಲಾ ಆವಿಷ್ಕಾರದ ನಂತರ ಮಾರಿಯಾ ಟೆಲ್ಕೆಸ್​ ಅವರು ಮ್ಯಾಸಚೂಸೆಟ್ಸ್​ ಇನ್​​​ಸ್ಟಿಟ್ಯೂಟ್​ ಆಫ್ ಟೆಕ್ನಾಲಜಿಯಲ್ಲಿ ಸಂಶೋಧನ ಪ್ರಾಧ್ಯಾಪಕಾರಾದರು. ಇದರ ನಂತರ ಮಅರಿಯಾ ಟೆಲ್ಕೆಸ್​ ಮತ್ತು ಎಮ್​​ಐಟಿ ಸಹೋದ್ಯೋಗಿಗಳು ಸೆರಿಕೊಂಡು ವಾಸಿಸುವ ಉದ್ದೇಶದಿಂದ ಸೌರ-ಬಿಸಿ ಮನೆಗಳನ್ನು ತಯಾರಿಸುವ ಕೆಲಸಕ್ಕೆ ತಯಾರಾದರು. ಆದರೆ ಬೇಸರದ ಸಂಗತಿಯೆಂದರೆ ರಚಿಸಿದ ವಿನ್ಯಾಸ ತಪ್ಪಾಯಿತು ಮತ್ತು ಸಮಿತಿಯಿಂದ ತೆಗೆದುಹಾಕಲಾಯಿತು. ಆದರೆ ಇವರ ಛಲ ಬಿಡದೆ ಇದನ್ನು ಮುಂದುವರಿಸಿದರು.


  ವಿಫಲತೆಯಿಂದ ಸಫಲತೆಯನ್ನು ಪಡೆದ ಸನ್​ಕ್ವೀನ್


  1948 ರಲ್ಲಿ, ಲೋಕೋಪಕಾರಿಗಳಿಂದ ಖಾಸಗಿ ಹಣವನ್ನು ಪಡೆದುಕೊಂಡ ನಂತರ, ಅವರು ವಾಸ್ತುಶಿಲ್ಪಿ ಎಲೀನರ್ ರೇಮಂಡ್ ಅವರ ಸಹಾಯವನ್ನು ಪಡೆದು ಡೋವರ್ ಸನ್ ಹೌಸ್ ಅನ್ನು ರಚಿಸಿದರು. ಈ ಸೌರ ಮನೆ ಬಹಳಷ್ಟು ಜನಪ್ರಿಯತೆಯನ್ನು ಪಡೆದು ಕೊಂಡಿತು ನಂತರ ಈ ಸುದ್ದಿಗಳೆಲ್ಲಾ ಮಾಧ್ಯಮಗಳಲ್ಲಿ ಪ್ರಚಾರವಾಯಿತು. ಆ ನಂತರ ಜನಗಳ ಬಳಿಯೂ ಸೌರಶಕ್ತಿ ಎಂಬ ಪದ ಬರಲಾರಂಭಿಸಿತು.


  ಇವೆಲ್ಲಾ ಆದ ನಂತರ ಮಾರಿಯಾ ಟೆಲ್ಕೆಸ್​ ಅವರು ಸನ್​ ಓವನ್ ಎಂಬ ಸಾಧನವನ್ನು ತಯಾರಿಸಿದರು ಇದು ಈಗಲೂ ಬಳಕೆಯಲ್ಲಿದೆ.

  Published by:Prajwal B
  First published: