ಇತ್ತೀಚೆಗೆ ಬರುವ ಹೆಚ್ಚಿನ ಸ್ಮಾರ್ಟ್ಫೋನ್ಗಳು ( Smart Phone) ಅತ್ಯಂತ ಗಮಾರ್ನಹವಾದ ಪುರೋಗತಿಗಳನ್ನು ಪಡೆದುಕೊಂಡಿವೆ. ಮಡಿಸಬಹುದಾದ ಸ್ಮಾರ್ಟ್ಫೋನ್ಗಳು ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯನ್ನು (Market) ಆಳುತ್ತಿದ್ದು ಸ್ಯಾಮ್ಸಂಗ್ನ Z ಫೋಲ್ಡ್ ಮತ್ತು Z ಫ್ಲಿಪ್ ಸರಣಿಗಳು (Samsung) ಹೆಚ್ಚಿನ ಫೋನ್ ಪ್ರಿಯರನ್ನು ತನ್ನತ್ತ ಸೆಳೆಯುವಲ್ಲಿ ಸಫಲಗೊಂಡಿವೆ. ಆದರೆ ಈ ಫೋಲ್ಡೇಬಲ್ (Foldable) ಡಿವೈಸ್ಗಳ (Device) ವಿನ್ಯಾಸದ ಬಗ್ಗೆ ಅನೇಕ ಗ್ರಾಹಕರು ಸಂಶಯ ವ್ಯಕ್ತಪಡಿಸುತ್ತಿದ್ದು ಅವುಗಳ ಬಾಳಿಕೆ, ಪ್ರವೇಶ ಬೆಲೆಯ ಬಗ್ಗೆ ಸಮಂಜಸವಾಗಿ ಚಿಂತಿಸುತ್ತಾರೆ.
ಅದಾಗ್ಯೂ ಅತ್ಯುತ್ತಮ ಫೋಲ್ಡೇಬಲ್ ಡಿವೈಸ್ಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದು ತಜ್ಞರು ಉತ್ತಮ ಡಿವೈಸ್ಗಳ ವಿವರಣೆಯನ್ನು ನೀಡಿದ್ದಾರೆ.
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 4
ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ 8 ಪ್ಲಸ್ ಜೆನ್ 1 ಪ್ರೊಸೆಸರ್ ಅನ್ನು ಒಳಗೊಂಡಿದ್ದು ಮುಖ್ಯ ಡಿಸ್ಪ್ಲೇ 7.6 ಇಂಚುಗಳಾಗಿದ್ದು 2176x1812 ಪಿಕ್ಸೆಲ್ಗಳಾಗಿದೆ. ಡಿವೈಸ್ನ ಕವರ್ ಡಿಸ್ಪ್ಲೇ 6.2 ಇಂಚುಗಳಾಗಿದ್ದು, 2316x904 ಪಿಕ್ಸೆಲ್ಗಳಾಗಿವೆ.
ರ್ಯಾಮ್ ಸಂಗ್ರಹಣೆ 12GB ರ್ಯಾಮ್ ಜೊತೆಗೆ 256GB/512GB/1TB ಇಂಟರ್ನಲ್ ಆಯ್ಕೆಗಳಾಗಿವೆ. ಡಿವೈಸ್ 12 ಎಮ್ಪಿ ಅಲ್ಟ್ರಾವೈಡ್ ಕ್ಯಾಮೆರಾವನ್ನು ಹೊಂದಿದ್ದು 50 ಎಮ್ಪಿ ವೈಡ್ ಆ್ಯಂಗಲ್ ಕ್ಯಾಮೆರಾ ಇದೆ. 10MP ಕವರ್ ಸ್ಕ್ರೀನ್ ಕ್ಯಾಮೆರಾ, 4MP ಮುಖ್ಯ ಡಿಸ್ಪ್ಲೇ ಕ್ಯಾಮೆರಾವಾಗಿದೆ ಬ್ಯಾಟರಿ: 4,400mAh ಆಗಿದೆ.
ಮಾರುಕಟ್ಟೆಯಲ್ಲಿರುವ ಹಲವಾರು ಫೋಲ್ಡೇಬಲ್ ಫೋನ್ಗಳ ಪರೀಕ್ಷೆ ನಡೆಸಿದ್ದರೂ ಅವು ಯಾವುವೂ ಸ್ಯಾಮ್ಸಂಗ್ನ ಗ್ಯಾಲಕ್ಸಿ Z ಫೋಲ್ಡ್ 4 ಗೆ ಸರಿಸಮನಾಗಿಲ್ಲ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ. ಉತ್ತಮ ಟ್ಯಾಬ್ಲೆಟ್ ಅನುಭವವನ್ನು ನೀಡುವ ಈ ಡಿವೈಸ್ ನಯಗೊಳಿಸಬಹುದಾದ ಮಡಿಸುವ ಅನುಭವವನ್ನು ನೀಡಲಿದೆ. ಎಲ್ಲಿ ಬೇಕಾದರೂ ಇದನ್ನು ಕೊಂಡೊಯ್ಯಬಹುದಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 3
ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ 888 ಇದರಲ್ಲಿದ್ದು ಮುಖ್ಯ ಡಿಸ್ಪ್ಲೇ 7.6 ಇಂಚುಗಳು 2208x1768 ಪಿಕ್ಸೆಲ್ಗಳಾಗಿವೆ. ಕವರ್ ಡಿಸ್ಪ್ಲೇ 6.2 ಇಂಚುಗಳಾಗಿದ್ದು 2268x832 ಪಿಕ್ಸೆಲ್ಗಳಾಗಿದೆ. ಡಿವೈಸ್ ರ್ಯಾಮ್ ಹಾಗೂ ಸ್ಟೋರೇಜ್ 12GB ರ್ಯಾಮ್ ನೊಂದಿಗೆ 256GB/512GB ಸ್ಟೋರೇಜ್ ಅನ್ನು ಡಿವೈಸ್ ಪಡೆದುಕೊಂಡಿದೆ.
ಕ್ಯಾಮೆರಾ ವಿಶೇಷಗಳತ್ತ ನೋಡುವುದಾದರೆ 12MP ಅಲ್ಟ್ರಾ-ವೈಡ್, 12MP ವೈಡ್- ಆ್ಯಂಗಲ್, 12MP 2x ಟೆಲಿಫೋಟೋ, 10MP ಕವರ್ ಸ್ಕ್ರೀನ್, 4MP ಮುಖ್ಯ ಡಿಸ್ಪ್ಲೇಯಲ್ಲಿದೆ. ಡಿವೈಸ್ ಬ್ಯಾಟರಿ ಸಾಮರ್ಥ್ಯ 4,400mAh ಆಗಿದೆ.
ಗ್ಯಾಲಕ್ಸಿ ಜೆಡ್ ಫೋಲ್ಡ್ 4 ಡಿವೈಸ್ ಫೋಲ್ಡೇಬಲ್ ಚಾಂಪಿಯನ್ ಎಂಬ ಹೆಸರಿಗೆ ಅರ್ಹನಾಗಿದೆ. ಅದಾಗ್ಯೂ ಜೆಡ್ ಫೋಲ್ಡ್ 3 ಕೂಡ 4 ರಂತೆಯೇ ಕಿರಿದಾದ 6.2-ಇಂಚಿನ ಹೊರಗಿನ ಸ್ಕ್ರೀನ್ನಿಂದ ವಿಶಾಲವಾದ 7.6-ಇಂಚಿನ ಮುಖ್ಯ ಸ್ಕ್ರೀನ್ಗೆ ವಿಸ್ತರಿಸುವ ಲಭ್ಯತೆಯನ್ನು ಪಡೆದುಕೊಂಡಿದೆ. ಸ್ಯಾಮ್ಸಂಗ್ ತನ್ನ ಡಿವೈಸ್ನಲ್ಲಿ ನೀಡಿರುವ ಅದ್ಭುತ ಕ್ಯಾಮೆರಾ ಸಾಮರ್ಥ್ಯ ಉತ್ತಮ ಫೋಟೋಗಳನ್ನು ತೆಗೆಯಲು ಅನುಕೂಲಕರವಾಗಿದೆ.
OneUI ಸಾಫ್ಟ್ವೇರ್ ಮತ್ತು ಯೋಗ್ಯ ಗಾತ್ರದ 4,400mAh ಬ್ಯಾಟರಿಯಂತಹ ವೈಶಿಷ್ಟ್ಯಗಳ ಶ್ರೇಣಿಯೇ ಡಿವೈಸ್ನಲ್ಲಿದೆ. ಎಸ್ ಪೆನ್ ಸ್ಟೈಲಸ್ ಬೆಂಬಲಿಸುವ ಮೊದಲ ಮಡಿಸಬಹುದಾದ ಸ್ಯಾಮ್ಸಂಗ್ನ ಡಿವೈಸ್ ಜೆಡ್ 3 ಆಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫ್ಲಿಪ್ 4
ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ 8 ಪ್ಲಸ್ ಜೆನ್ 1 ಅನ್ನು ಡಿವೈಸ್ ಹೊಂದಿದ್ದು, ಮುಖ್ಯ ಡಿಸ್ಪ್ಲೇ 6.7 ಇಂಚುಗಳು 2640x1080 ಪಿಕ್ಸೆಲ್ಗಳಾಗಿವೆ. ಫೋಲ್ಡೇಬಲ್ ಡಿವೈಸ್ನ ಕವರ್ ಡಿಸ್ಪ್ಲೇ 1.9 ಇಂಚುಗಳಾಗಿದ್ದು 512x260 ಪಿಕ್ಸೆಲ್ಗಳು ಎಂದೆನಿಸಿದೆ. ಇನ್ನು ರ್ಯಾಮ್ ಸ್ಟೋರೇಜ್ನತ್ತ ಗಮನಹರಿಸುವುದಾದರೆ 8 ಜಿಬಿ ರ್ಯಾಮ್ ಅನ್ನು ಡಿವೈಸ್ ಹೊಂದಿದ್ದು 128GB/256GB/512GB ಆಂತರಿಕ ಸ್ಟೋರೇಜ್ ಹೊಂದಿದೆ ಎರಡು ಕ್ಯಾಮೆರಾಗಳಿದ್ದು 12MP ರಿಯರ್ ಹಾಗೂ 10MP ಸೆಲ್ಫಿ ಕ್ಯಾಮೆರಾ ಡಿವೈಸ್ನಲ್ಲಿದೆ. 3,700mAh ಬ್ಯಾಟರಿ ಫೋನ್ನಲ್ಲಿದೆ.
ಸ್ಯಾಮ್ಸಂಗ್ನ ಫೋಲ್ಡೇಬಲ್ ಡಿವೈಸ್ಗಳು ಈ ಶ್ರೇಣಿಯ ಫೋನ್ಗಳಲ್ಲೇ ಉನ್ನತ ಸ್ಥಾನವನ್ನು ಹೊಂದಬಹುದು. Z ಫ್ಲಿಪ್ 4 ಫೋನ್ ವ್ಯಾಪಕ ಶ್ರೇಣಿಯ ಬಳಕೆದಾರರ ಮೆಚ್ಚಿನ ಡಿವೈಸ್ ಎಂದೆನಿಸಿದೆ. ವಿವಿಧ ಬಣ್ಣಗಳೊಂದಿಗೆ Z ಫ್ಲಿಪ್ 4 ಅನ್ನು ಸ್ಯಾಮ್ಸಂಗ್ ಬಿಡುಗಡೆ ಮಾಡಿದ್ದು ಕಸ್ಟಮೈಸ್ ಆಯ್ಕೆಯನ್ನು ಬಳಕೆದಾರರಿಗೆ ಒದಗಿಸುತ್ತದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫ್ಲಿಪ್ 3
ಕ್ಯಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ 888 ಅನ್ನು ಡಿವೈಸ್ ಹೊಂದಿದ್ದು ಮುಖ್ಯ ಡಿಸ್ಪ್ಲೇ 6.7 ಇಂಚುಗಳು 2640x1080 ಪಿಕ್ಸೆಲ್ಗಳಾಗಿವೆ. ಕವರ್ ಡಿಸ್ಪ್ಲೇ 1.9 ಇಂಚುಗಳಾಗಿದ್ದು 512x260 ಪಿಕ್ಸೆಲ್ಗಳು ಎಂದೆನಿಸಿದೆ. ರ್ಯಾಮ್ ಹಾಗೂ ಸ್ಟೋರೇಜ್ನತ್ತ ನೋಟ ಹರಿಸುವುದಾದರೆ 8 ಜಿಬಿ ರ್ಯಾಮ್ ಹಾಗೂ 128GB/256GB ಆಂತರಿಕ ಸ್ಟೋರೇಜ್ ಅನ್ನು ಡಿವೈಸ್ ಪಡೆದುಕೊಂಡಿದೆ. ಕ್ಯಾಮೆರಾಗ ವಿಶೇಷತೆಯೆಂದರೆ ಡಿವೈಸ್ 12MP ರಿಯರ್ ಹಾಗೂ 10MP ಸೆಲ್ಫಿಯನ್ನು ಹೊಂದಿದೆ. 3,300mAh ಬ್ಯಾಟರಿ ಡಿವೈಸ್ನಲ್ಲಿದೆ.
ಕಡಿಮೆ ಬೆಲೆಯ ಉತ್ತಮ ಫೋಲ್ಡೇಬಲ್ ಡಿವೈಸ್ ಹುಡುಕುತ್ತಿದ್ದೀರಿ ಎಂದಾದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ Z ಫ್ಲಿಪ್ 3 ಉತ್ತಮ ಆಯ್ಕೆ ಎಂದೆನಿಸಲಿದೆ. ಜಲಪ್ರತಿರೋಧಕ, ಕ್ಯಾಲ್ಕಾಮ್ ಸಾಮರ್ಥ್ಯ ಡಿವೈಸ್ನ ಮಹತ್ವವನ್ನು ಸಾರಿದೆ. ಕ್ಯಾಮೆರಾ ಪರಿಕರಗಳಿಗೆ ತ್ವರಿತ ಬಳಕೆಗಾಗಿ ಸಾಧನದ ಹೊರಭಾಗದಲ್ಲಿ 1.9-ಇಂಚಿನ ಒಂದೇ ರೀತಿಯ ಕವರ್ ಸ್ಕ್ರೀನ್ ಅನ್ನು ಹೊಂದಿದೆ.
ಹುವಾವೆ ಮ್ಯಾಟ್ XS 2
888 ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ ಅನ್ನು ಡಿವೈಸ್ ಪಡೆದುಕೊಂಡಿದ್ದು 7.8 ಇಂಚುಗಳು 2200x2480 ಪಿಕ್ಸೆಲ್ಗಳ ಡಿಸ್ಪ್ಲೇಯನ್ನು ಒಳಗೊಂಡಿದೆ. 8GB/12GB ರ್ಯಾಮ್ ಅನ್ನು ಫೋನ್ ಅನ್ನು ಹೊಂದಿದ್ದು 256GB/512GB ಆಂತರಿಕ ಸ್ಟೋರೇಜ್ ಅನ್ನು ಡಿವೈಸ್ ಒಳಗೊಂಡಿದೆ. ಡಿವೈಸ್ 13 ಎಮ್ಪಿ ಅಲ್ಟ್ರಾ ವೈಡ್ ಹಾಗೂ 50MP ವೈಡ್- ಆ್ಯಂಗಲ್ ಕ್ಯಾಮೆರಾ ಹೊಂದಿದೆ ಅಂತೆಯೇ 8MP 3x ಟೆಲಿಫೋಟೋ, 10.7MP ಮುಂಭಾಗ ಕ್ಯಾಮೆರಾ ಜೊತೆಗೆ 4,880mAh ಬ್ಯಾಟರಿ ಪಡೆದಿದೆ.
ಅತ್ಯುತ್ತಮ ಫೋಲ್ಡೇಬಲ್ ಫೋನ್ ಯಾವುದು?
ಅತ್ಯುತ್ತಮ ಫೋಲ್ಡಬಲ್ ಫೋನ್ ಸ್ಯಾಮ್ಸಂಗ್ನ ಗ್ಯಾಲಕ್ಸಿ Z ಫೋಲ್ಡ್ 4. ಸ್ಯಾಮ್ಸಂಗ್ನ ಇತ್ತೀಚಿನ Z ಫೋಲ್ಡ್ ಉತ್ತಮ ಕಾರ್ಯಕ್ಷಮತೆಯನ್ನು ಪಡೆದುಕೊಂಡಿದ್ದು ತಂತ್ರಾಂಶಗಳ ವಿಷಯದಲ್ಲಿ ಅದ್ಭುತವಾಗಿದೆ ಜೊತೆಗೆ ಹೊಸ ಮತ್ತು ಶಕ್ತಿಯುತ ಪ್ರೊಸೆಸರ್, ಪ್ರಕಾಶಮಾನವಾದ ಡಿಸ್ಪ್ಲೇ ಮತ್ತು ಉತ್ಪಾದಕತೆಗಾಗಿ ಆ್ಯಂಡ್ರಾಯ್ಡ್ 12L ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.
ನಿಮಗೆ ಸರಿಹೊಂದುವ ಉತ್ತಮ ಫೋಲ್ಡೇಬಲ್ ಫೋನ್ ಯಾವುದು?
ಹೆಚ್ಚಿನ ಫೋಲ್ಡೇಬಲ್ ಡಿವೈಸ್ಗಳು ಫೋನ್ ಹಾಗೂ ಮಿನಿ ಟ್ಯಾಬ್ಲೆಟ್ ಅನುಭವವನ್ನು ನೀಡುತ್ತವೆ ಹಾಗಿದ್ದರೆ ನಿಮಗೆ ಸರಿಹೊಂದುವ ಫೋನ್ ಹೇಗಿರಬೇಕು ಎಂಬ ಆಯ್ಕೆಯನ್ನು ನೀವು ಮಾಡಬೇಕು. ಫೋಲ್ಡೇಬಲ್ ಫೋನ್ ನಿಮಗೆ ಏಕೆ ಬೇಕು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ನೀವು ಇವುಗಳ ಆಯ್ಕೆಯನ್ನು ಮಾಡಬೇಕು.
ಜಲ ಪ್ರತಿರೋಧಕ ಫೋನ್ಗಳ ಆಯ್ಕೆ ನಿಮ್ಮದಾಗಿದ್ದರೆ ಅದಕ್ಕೆ ಸೂಕ್ತ ಫೋಲ್ಡೇಬಲ್ ಆಯ್ಕೆಮಾಡಿ. ಇನ್ನು ಸ್ಟೈಲಸ್ ಜೊತೆಗೆ ಫೋಲ್ಡೇಬಲ್ ಬಳಸಬೇಕು ಎಂದಿದ್ದರೆ ಜೆಡ್ ಫೋಲ್ಡ್ 4 ಹಾಗೂ ಜೆಡ್ ಫೋಲ್ಡ್ 3 ನಿಮ್ಮ ಆಯ್ಕೆಯಾಗಿರಲಿ.
ಫೋಲ್ಡೇಬಲ್ ಡಿವೈಸ್ಗಳ ಆಯ್ಕೆಮಾಡುವುದು ಹೇಗೆ?
ಮಾರುಕಟ್ಟೆಯಲ್ಲಿರುವ ಇತ್ತೀಚಿನ ಡಿವೈಸ್ಗಳ ವಿಮರ್ಶೆಗಳನ್ನು ಆಧರಿಸಿ ಉತ್ತಮ ಫೋಲ್ಡೇಬಲ್ ಆಯ್ಕೆಮಾಡಿ ಎಂದು ತಂತ್ರಜ್ಞ ZDNET ನ ಮೊಬೈಲ್ ತಂಡವು ತಿಳಿಸಿದೆ. ಆದಷ್ಟು ರೇಟಿಂಗ್ಗಳತ್ತ ಗಮನಹರಿಸಿ ಮತ್ತು ಇತರ ಬಳಕೆದಾರರ ಕಾಮೆಂಟ್ಗಳನ್ನು ಪರಿಶೀಲಿಸಿ ಎಂದು ತಂಡ ತಿಳಿಸಿದೆ.
ಮಡಿಸಬಹುದಾದ ಫೋನ್ಗಳಿಗೆ ವಿಮೆ ಮತ್ತು ವಾರಂಟಿ ಹೇಗೆ ಕೆಲಸ ಮಾಡುತ್ತದೆ?
ಫೋಲ್ಡೇಬಲ್ ಡಿವೈಸ್ಗಳಿಗೂ ವಾರಂಟಿ ಹಾಗೂ ವಿಮೆ ಇತರ ಫೋನ್ಗಳಂತೆಯೇ ಇರುತ್ತದೆ. Galaxy Z ಫ್ಲಿಪ್ 4 ಅಥವಾ Z ಫೋಲ್ಡ್ 4 ಗೆ ಸ್ಯಾಮ್ಸಂಗ್ನ ಮಾಲೀಕತ್ವದ ಸೇವೆಗಳನ್ನು ಅನ್ವಯಿಸಬಹುದಾಗಿದೆ.
ಫೋಲ್ಡೇಬಲ್ ಫೋನ್ಗಳ ಬೆಲೆ ಎಷ್ಟು?
ಇಂತಹ ಫೋನ್ಗಳ ನಿರ್ಮಾಣಕ್ಕೆ ಸುಧಾರಿತ ತಂತ್ರಜ್ಞಾನಗಳ ಅಗತ್ಯವಿರುವುದರಿಂದ ಇತರ ಸ್ಮಾರ್ಟ್ಫೋನ್ಗಳಿಗಿಂತ ದುಬಾರಿಯಾಗಿವೆ. ಇದೀಗ ಹೆಚ್ಚು ಹೆಚ್ಚು ಫೋಲ್ಡೇಬಲ್ ಡಿವೈಸ್ಗಳ ಆಯ್ಕೆ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದು ರೂ 1 ಲಕ್ಷಕ್ಕಿಂತ ಮೇಲ್ಪಟ್ಟ ದರದಲ್ಲಿ ದೊರೆಯಲಿದೆ. ಇನ್ನು ನಿಮ್ಮ ಆಯ್ಕೆಗಳಿಗೆ ಅನುಗುಣವಾಗಿ ಬೆಲೆಗಳು ಮಾರ್ಪಾಡುಗೊಳ್ಳಬಹುದು ಎಂಬುದನ್ನು ಗಮನಿಸಿ.
ಇದನ್ನೂ ಓದಿ: IPhone Updates: ಐಫೋನ್ನಲ್ಲಿ ವಾಟ್ಸಪ್ ಅವತಾರ್ ಅಪ್ಡೇಟ್ಸ್ ಲಭ್ಯ: ಈ ಸ್ಟಿಕ್ಕರ್ಸ್ ಕ್ರಿಯೇಟ್ ಮಾಡುವುದು ಹೇಗೆ?
ಆ್ಯಪಲ್ ಕಂಪನಿ ಫೋಲ್ಡೇಬಲ್ ಡಿವೈಸ್ ತಯಾರಿಸಲಿದೆಯೇ?
ಆ್ಯಪಲ್ ಕಂಪನಿಇದುವರೆಗೆ ಯಾವುದೇ ಮಹತ್ವದ ಹೇಳಿಕೆಗಳನ್ನು ನೀಡಿಲ್ಲ. ಆದಾಗ್ಯೂ, ಭವಿಷ್ಯದಲ್ಲಿ ಆಪಲ್ ಮಡಿಸಬಹುದಾದ ಸ್ಮಾರ್ಟ್ಫೋನ್ ಕ್ಷೇತ್ರದಲ್ಲಿ ಹೊಸ ಡಿವೈಸ್ಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿರಬಹುದು. ಮಾರುಕಟ್ಟೆಗೆ ಈ ಬಿಡುಗಡೆಗಳು ಹೆಚ್ಚಿನ ಸ್ಪರ್ಧೆಯನ್ನೊಡ್ಡಲಿದ್ದು ಉತ್ತಮ ಡಿವೈಸ್ಗಳ ಬೇಡಿಕೆಯನ್ನು ಹೆಚ್ಚಿಸಲಿದೆ.
ಫೋಲ್ಡೇಬಲ್ ಫೋನ್ ಏಕೆ ಅವಶ್ಯಕ
90 ಹಾಗೂ 2000 ದ ದಶಕದಲ್ಲಿದ್ದ ಫ್ಲಿಪ್ ಫೋನ್ಗಳ ಅದೇ ಅವತರಣಿಕೆ ಈ ಫೋಲ್ಡೇಬಲ್ ಡಿವೈಸ್ಗಳಾಗಿವೆ. ಕಾಲದೊಂದಿಗೆ ಬದಲಾವಣೆಯನ್ನು ಬಯಸುವವರು ಎಲ್ಲರೂ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಸುಧಾರಣೆಯೊಂದಿಗೆ ಬದಲಾಗುತ್ತಿರಬೇಕು. ಇತರ ಟಚ್ಸ್ಕ್ರೀನ್ ಸ್ಮಾರ್ಟ್ಫೋನ್ಗಿಂತ ಇನ್ನಷ್ಟು ಹೊಸ ಆಯ್ಕೆಗಳಿಗೆ ನೀವು ಅನ್ವೇಷಣೆ ಮಾಡುತ್ತಿದ್ದರೆ ಫೋಲ್ಡೇಬಲ್ ಡಿವೈಸ್ ಉತ್ತಮವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ