• Home
 • »
 • News
 • »
 • tech
 • »
 • Google-Facebook: ಗೂಗಲ್, ಫೇಸ್‌ಬುಕ್ ವೈಫಲ್ಯಕ್ಕೆ ಕಾರಣ ಯಾರು? ಖರ್ಚು ಮಾಡಿದ್ದು ಹೆಚ್ಚಾಯ್ತಾ?

Google-Facebook: ಗೂಗಲ್, ಫೇಸ್‌ಬುಕ್ ವೈಫಲ್ಯಕ್ಕೆ ಕಾರಣ ಯಾರು? ಖರ್ಚು ಮಾಡಿದ್ದು ಹೆಚ್ಚಾಯ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಟೆಕ್​ನ ದೊಡ್ಡ ಕಂಪನಿಗಳು ನಿಧಾನವಾಗಿ ವಿಫಲವಾಗುತ್ತಿರುವುದು ಹಾಗೂ ನಷ್ಟದ ಸ್ಥಿತಿಯಲ್ಲಿ ಮುಂದುವರಿಯುತ್ತಿರುವುದು ಕಂಡುಬರುತ್ತಿದೆ. ಆಕರ್ಷಕ ಕಚೇರಿ, ಉದ್ಯೋಗಿಗಳಿಗೆ ನೀಡುವ ಸವಲತ್ತುಗಳು, ಸಂಬಳದೊಂದಿಗೆ ಇನ್ನಿತರ ಸೌಲಭ್ಯಗಳು, ರಜಾದಿನದ ಸೌಲಭ್ಯ ಹೀಗೆ ಟೆಕ್ ಕಂಪನಿಗಳು ಉದ್ಯೋಗಿಗಳನ್ನು ಆಕರ್ಷಿಸಲು ವ್ಯಯಿಸಿದ ಖರ್ಚುವೆಚ್ಚಗಳಿಗೆ ಮಿತಿಯೇ ಇಲ್ಲ.

ಮುಂದೆ ಓದಿ ...
 • Share this:

  ಗೂಗಲ್ (Google) ಸಿಇಒ ಸುಂದರ್ ಪಿಚೈ (Sundar Pichai) ಉದ್ಯೋಗಿಗಳೊಂದಿಗೆ ಸಭೆ ನಡೆಸಿ ಮಹತ್ವದ ಕಂಪನಿಗೆ ಸಂಬಂಧಿಸಿ ಮಹತ್ವದ ಕರೆ ನೀಡಿದ್ದಾರೆ. ಕಂಪನಿಯ ಉತ್ಪಾದಕತೆಯಲ್ಲಿ 20% ದಷ್ಟು ಸುಧಾರಣೆಯಾಗಬೇಕು ಎಂದು ಅವರು ಸೂಚನೆ ಕೊಟ್ಟಿದ್ದರು. ಇದು ಗೂಗಲ್ ಉದ್ಯೋಗಿಗಳಲ್ಲಿ ಇರಿಸು ಮುರಿಸು ಉಂಟುಮಾಡಿದ್ದಂತೂ ನಿಜ. ಈಗ ಇದರ ಬೆನ್ನಲ್ಲೇ ಮೆಟಾ (Meta) ಸ್ಥಾಪಕ ಸಿಇಒ (CEO) ಮಾರ್ಕ್ ಜುಕರ್‌ಬರ್ಗ್ (Mark Zuckerberg) ತಂಡದಲ್ಲಿ ಅಗತ್ಯವಿರುವವರನ್ನು ಮಾತ್ರವೇ ಉಳಿಸಿಕೊಳ್ಳಿ ಎಂದು ನಿರ್ದೇಶಕರಿಗೆ ತಿಳಿಸಿದ್ದರು. ಅಂತೆಯೇ ಕಂಪನಿಯು (Company) ಇನ್ನಷ್ಟು ಉತ್ಪಾದಕೆಯಿಂದ ಕಾರ್ಯನಿರ್ವಹಿಸಲಿದ್ದು ಕೆಲಸ ಮಾಡಲು ಆಸಕ್ತಿ ಇರುವವರು ಮಾತ್ರವೇ ಉಳಿದುಕೊಳ್ಳಬಹುದು ಎಂದು ಸೂಚ್ಯವಾಗಿ ತಿಳಿಸಿದ್ದರು. ಅದೇ ರೀತಿ 12,000 ಉದ್ಯೋಗಿಗಳನ್ನು ಕಂಪನಿ ವಜಾಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ ಎಂಬುದಾಗಿಯೂ ಸೂಚಿಸಿದೆ.


  ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದಾಗ ಟೆಕ್​ನ ದೊಡ್ಡ ಕಂಪನಿಗಳು ನಿಧಾನವಾಗಿ ವಿಫಲವಾಗುತ್ತಿರುವುದು ಹಾಗೂ ನಷ್ಟದ ಸ್ಥಿತಿಯಲ್ಲಿ ಮುಂದುವರಿಯುತ್ತಿರುವುದು ಕಂಡುಬರುತ್ತಿದೆ. ಆಕರ್ಷಕ ಕಚೇರಿ, ಉದ್ಯೋಗಿಗಳಿಗೆ ನೀಡುವ ಸವಲತ್ತುಗಳು, ಸಂಬಳದೊಂದಿಗೆ ಇನ್ನಿತರ ಸೌಲಭ್ಯಗಳು, ರಜಾದಿನದ ಸೌಲಭ್ಯ ಹೀಗೆ ಟೆಕ್ ಕಂಪನಿಗಳು ಉದ್ಯೋಗಿಗಳನ್ನು ಆಕರ್ಷಿಸಲು ವ್ಯಯಿಸಿದ ಖರ್ಚುವೆಚ್ಚಗಳಿಗೆ ಮಿತಿಯೇ ಇಲ್ಲ.


  Who is responsible for the failure of Google and Facebook Why do tech founders blame others


  ಸಮಸ್ಯೆಗೆ ಸಿಲುಕಿರುವ ಉದ್ಯೋಗಿಗಳು

  ಇದಕ್ಕೆ ಆಕರ್ಷಿತಗೊಂಡ ಟೆಕ್ ಪ್ರತಿಭೆಗಳು ಗಾಳಕ್ಕೆ ಸಿಕ್ಕ ಮೀನಿನಂತೆ ಸಿಲುಕಿಕೊಂಡರು. ಇಂತಹ ಸಂಸ್ಥೆಗಳಲ್ಲಿ ಕೆಲಸ ಮಾಡುವುದು ದೊಡ್ಡ ಅದೃಷ್ಟವೆಂದೇ ಭಾವಿಸಿದರು. ಆದರೆ ಟೆಕ್ ಕಂಪನಿಗಳ ದೊಡ್ಡತನಕ್ಕೆ ಬೆಲೆ ತರುತ್ತಿರುವುದು ಉದ್ಯೋಗಿಗಳಾಗಿದ್ದು, ಹೆಚ್ಚುವರಿ ಕೆಲಸ , ಸೌಲಭ್ಯಗಳ ಕಡಿತ, ಕೆಲಸದಿಂದ ವಜಾ ಮಾಡುವುದು ಮೊದಲಾದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.


  ಇಂತಹ ದೊಡ್ಡ ಸ್ಥಾಪನೆಗಳ ಮುಖ್ಯಸ್ಥರು ಕೂಡ ತಮ್ಮ ಕಾರ್ಯಕ್ಷಮತೆಯ ಮೇಲೆ ನಂಬಿಕೆ ಇಡುವ ಬದಲಿಗೆ ಉದ್ಯೋಗಿಗಳ ಮೇಲೆ ಆ ಒತ್ತಡವನ್ನು ಹೊರಿಸುತ್ತಿದ್ದಾರೆ. ನಷ್ಟಕ್ಕೆ ಹೊಣೆಗಾರರಾಗಿ ಅವರನ್ನು ಗುರಿಯಾಗಿಸುತ್ತಿದ್ದಾರೆ. ಫೇಸ್‌ಬುಕ್ ವಿಷಯದಲ್ಲಿ ನುರಿತ ಹಾಗೂ ನಿಷ್ಟಾವಂತ ಜನರನ್ನು ಜುಕರ್‌ಬರ್ಗ್ ಕೈಬಿಟ್ಟಿದ್ದೇ ಇಂದಿನ ಸೋಲಿಗೆ ಕಾರಣ ಎಂಬುದಾಗಿ ಆರ್ಥಿಕ ವಲಯ ತಿಳಿಸುತ್ತಿದೆ.


  ಇದನ್ನೂ ಓದಿ: ವಿಶ್ವದ ಮೊದಲ ಎಲೆಕ್ಟ್ರಿಕ್‌ ವಿಮಾನ ಹಾರಾಟ ಯಶಸ್ವಿ! ಇಲ್ಲಿದೆ ಮಾಹಿತಿ

  ಮೆಟಾದ ಕಾರ್ಯವಿಭಾಗದಲ್ಲಿ ನುರಿತ ಹಾಗೂ ನಿಷ್ಟೆಯಿಂದ ಕೆಲಸ ಮಾಡುವವರ ಬದಲಿಗೆ ಸೋಮಾರಿಗಳು ಹಾಗೂ ಸೃಜನಶೀಲತೆಯ ಕೊರತೆ ಎದುರಿಸುವವರೇ ತುಂಬಿಕೊಂಡಿದ್ದಾರೆ.


  Google CEO recently addressed questions of employees at Google s weekly all hands meeting stg asp

  ಇನ್ನು ಗೂಗಲ್ ಕಥೆ ಕೂಡ ಇದೇ ರೀತಿ ಇದೆ. ಟ್ರಿಲಿಯನ್ ಡಾಲರ್ ಮೌಲ್ಯದ ಕಂಪನಿಯು ಫೇಸ್‌ಬುಕ್‌ಗಿಂತ ಹೆಚ್ಚು ಸಾಮರ್ಥ್ಯಶಾಲಿಯಾಗಿದೆ. ಆದರೆ ತನ್ನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗದೇ ಆರ್ಥಿಕ ಕುಸಿತದ ಹೊಡೆತವನ್ನು ನೇರವಾಗಿ ಉದ್ಯೋಗಿಗಳ ಮೇಲೆ ಹೊರಿಸುವ ಕೆಲಸ ಮಾಡುತ್ತಿದೆ.


  ಕಂಪನಿಯ ವ್ಯವಹಾರ ಮಾದರಿಯು 20 ವರ್ಷಗಳ ಹಿಂದೆ ಇದ್ದಂತೆಯೇ ಇದ್ದು, 174,000 ಉದ್ಯೋಗಿಗಳು ಸಂಸ್ಥೆಯಲ್ಲಿ ಯಾವ ರೀತಿಯ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಎಂಬುದು ಚಕಿತಗೊಳಿಸುವ ಅಂಶವಾಗಿದೆ. ಇದರಲ್ಲಿ 21% ಉದ್ಯೋಗಿಗಳನ್ನು ಕಳೆದ ವರ್ಷವಷ್ಟೇ ಕಂಪನಿ ಆಯ್ಕೆಮಾಡಿದೆ. ಆಲ್ಫಾಬೆಟ್ 2015 ರಲ್ಲಿ ಹುಟ್ಟಿಕೊಂಡ ಸಂಸ್ಥೆಯಾಗಿದ್ದು ಹೊಸ ಯೋಜನೆಗಳನ್ನು ಅನ್ವೇಷಿಸುವ ಭರವಸೆ ನೀಡಿತು. ಗೂಗಲ್ ಇದರ ಒಂದು ಅಂಗಸಂಸ್ಥೆಯಾಗಿದೆ.


  ಇದನ್ನೂ ಓದಿ: 5G ಸೇವೆಯಲ್ಲಿ ಜಿಯೋ ದಾಖಲೆ! ಗ್ರಾಹಕರಿಗೆ ಸಿಗಲಿದೆ ಬಿಗ್ ಅಪ್ಡೇಟ್

  ಹಡಗಿನೊಂದಿಗೆ ಮುಳುಗುತ್ತಿರುವ ನಾವಿಕ


  ಆಲ್ಫಾಬೆಟ್, ಫೇಸ್‌ಬುಕ್ ಪ್ರಸ್ತುತ ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳಿಗೆ ಕಾರಣ. ಉದ್ಯೋಗದಲ್ಲಿರುವ ಅಸಮರ್ಥ ಉದ್ಯೋಗಿಗಳಲ್ಲ. ಬದಲಿಗೆ ಕಳಪೆ ನಿರ್ವಹಣೆಯಿಂದಲೇ ಎರಡು ಟೆಕ್ ಸಂಸ್ಥೆಗಳು ಏಕಸ್ವಾಮ್ಯವಾಗಿ ಪ್ರಮುಖ ಮಾರುಕಟ್ಟೆಗಳಲ್ಲಿ ಸ್ಥಾನಗಳನ್ನು ಆಕ್ರಮಿಸಿಕೊಂಡಿದೆ.


  ಸಾವಿರಾರು ಉದ್ಯೋಗಿಗಳನ್ನು ನೇಮಿಸಿಕೊಂಡ ನಂತರ ವ್ಯವಹಾರ ಮಂದಗತಿಯಲ್ಲಿದೆ ಹಾಗೂ ಹೆಚ್ಚು ಬಲಯುತವಾಗಿದೆ ಎಂದು ಪಿಚೈ ಅಂಗೀಕರಿಸಿದ್ದಾರೆ. ಆದರೆ ಈ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಪಿಚೈ ಸಮರ್ಥರೇ ಅಸಮರ್ಥರೇ ಎಂಬುದು ಇಲ್ಲಿ ಪ್ರಶ್ನಾತೀತವಾಗಿದೆ. ಬದಲಾವಣೆಯ ಹೊಣೆಗಾರಿಕೆಯನ್ನು ತಪ್ಪಿಸಿಕೊಳ್ಳುವುದರ ಬದಲಿಗೆ ಏನನ್ನಾದರೂ ಹೇಗೆ ಮಾಡಬಹುದು ಎಂಬುದರ ಕಡೆ ಗಮನ ಹರಿಸುವುದು ಗೆಲುವಿನ ತಂತ್ರವಾಗಿದೆ.


  ಗೂಗಲ್ ಹಾಗೂ ಫೇಸ್‌ಬುಕ್ ಎರಡೂ ಬೆಳವಣಿಗೆ ಕಾಣುವ ಸ್ಟಾರ್ಟಪ್‌ಗಳಲ್ಲ ಸಾಮಾನ್ಯವಾಗಿ ಇವುಗಳು ನಷ್ಟದಲ್ಲಿಯೇ ಕಾರ್ಯನಿರ್ವಹಿಸುತ್ತವೆ. ಇವುಗಳಿಗೆ ಬಾಹ್ಯ ಬಂಡವಾಳದ ನೆರವು ದೊರೆಯುತ್ತದೆ ಹೀಗಾಗಿ ಹಣ ಉಳಿಸುವುದು ಅಷ್ಟೊಂದು ಮಹತ್ವವಾಗಿರುವುದಿಲ್ಲ.

  Published by:Divya D
  First published: