ಯಾರೇ ಆಗಲಿ ಯಾವುದೇ ಭಯಾನಕ ಘಟನೆಗಳ ಬಗ್ಗೆ ಕೇಳಿದ್ರೆ ಅಚ್ಚರಿಯಾಗೋದು ಗ್ಯಾರಂಟಿ. ನಾವೆಲ್ಲರೂ ಹೆಚ್ಚಾಗಿ ಕಾಡು, ವ್ಯಕ್ತಿಯ (Humon), ಮನೆಯ ಕೆಲವೊಂದು ಭಯಾನಕ ಘಟನೆಗಳನ್ನು ಕೇಳಿರುತ್ತೇವೆ. ಇದರಿಂದ ಎಷ್ಟೋ ಜನರು ಭಯ ಕೂಡ ಆಗಿದ್ದಾರೆ. ಇನ್ನು ಕೆಲವೊಂದು ಸ್ಥಳಗಳ ಬಗ್ಗೆ ಕೇಳುವಾಗಲೇ ಭಯ (Fear) ಆಗಲು ಆರಂಭವಾಗುತ್ತದೆ. ಆದರೆ ಈ ಸ್ಥಳಗಳಿಗೂ ಏನಾಗುತ್ತದೆ ಎಂದು ಹೋದವರು ಹಿಂದೆ ಬಂದದ್ದೇ ಕಡಿಮೆ. ಇನ್ನೂ ಕೆಲವರು ಅಲ್ಲಿನ ಸ್ಥಳಗಳ ಬಗ್ಗೆ ಸತ್ಯಾ ಅಸತ್ಯತೆಯ ಬಗ್ಗೆ ತಿಳಿದು ವಾಪಾಸ್ ಬಂದವರೂ ಇದ್ದಾರೆ. ಆದರೆ ಇಲ್ಲೊಂದು ಇದೇ ರೀತಿಯಲ್ಲಿ ಭಯಾನಕ ಫೋನ್ ನಂಬರ್ (Terrible phone number) ಸಹ ಇದೆ. ಇದರ ಕಥೆ ಕೇಳಿದ್ರೆ ಒಮ್ಮೆ ನಿಮ್ಮನ್ನೇ ಹುಬ್ಬೇರಿಸುವಂತೆ ಮಾಡುತ್ತೆ.
ಹೌದು, ಹೆಚ್ಚಿನವರ ಮೊಬೈಲ್ ಸಂಖ್ಯೆ ಸಾಮಾನ್ಯವಾಗಿಯೇ ಇರುತ್ತದೆ. ಆದರೆ ಇಲ್ಲೊಂದು ಫೋನ್ ನಂಬರ್ ನೋಡಲೂ ವಿಚಿತ್ರವಾಗಿದೆ ಮತ್ತು ಇದರ ಕಥೆಯೂ ಸ್ವಲ್ಪ ವಿಚಿತ್ರವಾಗಿದೆ. ಇನ್ನು ಈ ಫೋನ್ ನಂಬರ್ ಅನ್ನು ಯಾರು ಬಳಸುತ್ತಾರೋ ಅವರು ಸಾವಿನ ಸುಳಿಗೆ ಸಿಗುವುದು ಮಾತ್ರ ಗ್ಯಾರಂಟಿ.
ಸಾವಿಗೆ 0888888888 ನಂಬರ್ ಕಾರಣ
ಬಲ್ಗೇರಿಯಾದಲ್ಲಿ ಈ ನಂಬರ್ ಮೊದಲು ಬಳಕೆಯಲ್ಲಿತ್ತಂತೆ. ಬಲ್ಗೇರಿಯಾದ ಮೊಬಿಟೆಲ್ ಕಂಪನಿಯ ಸಿಇಒ ಮೊದಲು 0888888888 ಈ ಮೊಬೈಲ್ ನಂಬರ್ ಅನ್ನು ಖರೀದಿಸಿದ್ದರು. ಇದನ್ನು ಬಳಸುತ್ತಿದ್ದ ವ್ಲಾಡಿಮಿರ್ ಗೆಸಾನೋವ್ ಎಂಬವರು 2001ರಲ್ಲಿ ಸಾವನ್ನಪ್ಪಿದ್ದರು. ಕ್ಯಾನ್ಸರ್ ಬಂದು ಸಾವನ್ನಪ್ಪಿದ್ದಾನೆ ಎಂದು ದೇಶದೆಲ್ಲೆಡೆ ಸುದ್ದಿಯಾಯಿತು. ಆದರೆ ಈ ಮೊಬೈಲ್ ನಂಬರೇ ಈ ಸಾವಿಗೆ ಕಾರಣವೆಂದು ಮಾಧ್ಯಮಗಳು ಆ ಸಂದರ್ಭದಲ್ಲಿ ವರದಿ ಮಾಡಿದ್ದವು.
ಇದನ್ನೂ ಓದಿ: ಶೀಘ್ರದಲ್ಲೇ ಬ್ಯಾನ್ ಆಗಲಿದೆ 10 ಅಂಕಿಗಳ ಮೊಬೈಲ್ ನಂಬರ್ಗಳು! ಟ್ರಾಯ್ನಿಂದ ಮಹತ್ವದ ನಿರ್ಧಾರ
ಕುಖ್ಯಾತ ಡ್ರಗ್ ಡೀಲರ್ ಸಾವು
ಇದಾದ ನಂತರ ಈ ಸಂಖ್ಯೆಯನ್ನು ದಿಮಿತ್ರಿವ್ ಹೆಸರಿನ ಕುಖ್ಯಾತ ಡ್ರಗ್ ಡೀಲರ್ ಖರೀದಿ ಮಾಡಿದ್ದರು. 2003ರಲ್ಲಿ ಅವರನ್ನು ಹೊಡೆದು ಸಾಯಿಸಲಾಯಿತು. ಸಾವಿನ ವೇಳೆ ಈ ಸಂಖ್ಯೆ ದಿಮಿತ್ರಿವ್ ಬಳಿಯೇ ಇತ್ತು. ಇವರ ಸಾವಿನ ಬಳಿಕ ಈ ನಂಬರ್ ಮತ್ತೆ ಜನಪ್ರಿಯ ವ್ಯಾಪಾರಿಯೊಬ್ಬರು ಕೈಗೆ ಸೇರಿದೆ. ಆ ಸಂಖ್ಯೆಯನ್ನು ಬಳಕೆ ಮಾಡಿದ ನಂತರ ಅವರೂ ಸಹ ನಿಗೂಢವಾಗಿಯೇ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ