• Home
  • »
  • News
  • »
  • tech
  • »
  • Smart Tv Company: ದೇಶದಲ್ಲಿ ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್​​ಟಿವಿ ಯಾವುದು? 2022 ಸಮೀಕ್ಷೆಯ ಕಂಪ್ಲೀಟ್ ವರದಿ ಇಲ್ಲಿದೆ

Smart Tv Company: ದೇಶದಲ್ಲಿ ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್​​ಟಿವಿ ಯಾವುದು? 2022 ಸಮೀಕ್ಷೆಯ ಕಂಪ್ಲೀಟ್ ವರದಿ ಇಲ್ಲಿದೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ದಿನದಿಂದ ದಿನಕ್ಕೆ ವಿಶೇಷ ಫೀಚರ್ಸ್​ಗಳುಳ್ಳ ಸ್ಮಾರ್ಟ್​ಟಿವಿಗಳನ್ನು ಕಂಪನಿಗಳು ಪರಿಚಯಿಸುತ್ತಾ ಇರುತ್ತದೆ. ಇದರಲ್ಲಿ ಶಿಯೋಮಿ, ಸ್ಯಾಮ್‌ಸಂಗ್‌, ಒನ್‌ಪ್ಲಸ್‌, ರೆಡ್ಮಿ ಸ್ಮಾರ್ಟ್‌ಟಿವಿಗಳು ಉತ್ತಮ ಜನಪ್ರಿಯತೆ ಪಡೆದುಕೊಂಡಿವೆ. ಹಾಗಿದ್ರೆ ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್​ಟಿವಿ ಯಾವುದೆಂಬುದನ್ನು ಇಲ್ಲಿ ತಿಳೀಯೋಣ.

ಮುಂದೆ ಓದಿ ...
  • Share this:

    ಭಾರತದಲ್ಲಿ ಸ್ಮಾರ್ಟ್​ಟಿವಿ (Smart Tv) ಮಾರುಕಟ್ಟೆಗಳು ಬಹಳಷ್ಟು ಉನ್ನತಮಟ್ಟದಲ್ಲಿ ಬೆಳೆಯುತ್ತಿವೆ. ಹಳೆಯ ಟಿವಿಗಳನ್ನು ಬಿಟ್ಟು ಸ್ಮಾರ್ಟ್​ಟಿವಿಗಳ ಮೇಲೆಯೆ ಜನರು ಹೆಚ್ಚು ಒಲವನ್ನು ತೋರಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ತಂತ್ರಜ್ಞಾನ (Technology) ಮಾರುಕಟ್ಟೆಯಲ್ಲಿ ಸ್ಮಾರ್ಟ್​​​ಟಿವಿಯ ಕಂಪನಿಗಳು ವ್ಯಾಪಕವಾಗಿ ಲಾಭಗಳಿಸಲು ಸಾಧ್ಯವಾಗಿದೆ ಎಂದು ಹೇಳಬಹುದು. ಈ ಸ್ಮಾರ್ಟ್​ಟಿವಿಗಳ ಮೇಲೆ ಬೇಡಿಕೆಯನ್ನು ನೋಡಿ ಹಲವಾರು ವಿಭಿನ್ನ ಫೀಚರ್ಸ್​ ಅನ್ನು ಒಳಗೊಂಡ ಸ್ಮಾರ್ಟ್​ಟಿವಿಗಳು ಮಾರುಕಟ್ಟೆಗೆ ಬಂದಿವೆ. ಇದೀಗ ತಂತ್ರಜ್ಞಾನ ಕಂಪನಿಗಳೂ ಕೆಲವೊಂದು ಸಾಧನಗಳ ಮಾರಾಟದ ಮೇಲೆ ಸಮೀಕ್ಷೆಯನ್ನು ನಡೆಸಿತ್ತು. ಈ ಮೂಲಕ ಅತೀ ಹೆಚ್ಚು ಸ್ಮಾರ್ಟ್​​ಟಿವಿ ಯಾವ ಬ್ರಾಂಡ್​ನಲ್ಲಿ ಸೇಲ್ ಆಗಿದೆ ಎಂಬ ವರದಿಯನ್ನು ಮಾಡಿದೆ.


    ಹೌದು, ಸ್ಮಾರ್ಟ್​ಟಿವಿಗಳು ಈಗ ಎಲ್ಲರ ಮನೆಯಲ್ಲೂ ಇದೆ. ಇದರ ಫೀಚರ್ಸ್​ ಅನ್ನು ನೋಡಿ ಜನರು ಆಕರ್ಷಿತರಾಗುತ್ತಾರೆ. ದಿನದಿಂದ ದಿನಕ್ಕೆ ವಿಶೇಷ ಫೀಚರ್ಸ್​ಗಳುಳ್ಳ ಸ್ಮಾರ್ಟ್​ಟಿವಿಗಳನ್ನು ಕಂಪನಿಗಳು ಪರಿಚಯಿಸುತ್ತಾ ಇರುತ್ತದೆ. ಇದರಲ್ಲಿ ಶಿಯೋಮಿ, ಸ್ಯಾಮ್‌ಸಂಗ್‌, ಒನ್‌ಪ್ಲಸ್‌, ರೆಡ್ಮಿ ಸ್ಮಾರ್ಟ್‌ಟಿವಿಗಳು ಉತ್ತಮ ಜನಪ್ರಿಯತೆ ಪಡೆದುಕೊಂಡಿವೆ. ಹಾಗಿದ್ರೆ ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್​ಟಿವಿ ಯಾವುದೆಂಬುದನ್ನು ಇಲ್ಲಿ ತಿಳೀಯೋಣ.


    ಕೌಂಟರ್​ಪಾಯಿಂಟ್​ ವರದಿಯ ಪ್ರಕಾರ


    ಸದ್ಯ ಇದೀಗ ಬಹಿರಂಗವಾಗಿರುವ ಕೌಂಟರ್‌ಪಾಯಿಂಟ್‌ ವರದಿಯ ಪ್ರಕಾರ ಶಿಯೋಮಿ ಭಾರತೀಯ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂದಿದೆ ಎಂದು ವರದಿಯಾಗಿದೆ. ಭಾರತದ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಶಿಯೋಮಿ ಬ್ರ್ಯಾಂಡ್‌ ಸಾಕಷ್ಟು ಫೀಚರ್ಸ್​ ಅನ್ನು ಒಳಗೊಂಡ ಸ್ಮಾರ್ಟ್​​ಟಿವಿಯನ್ನು ಬಿಡುಗಡೆ ಮಾಡಿದೆ. ಅದರಿಂದಲೇ ಶಿಯೋಮಿ ಮಾರುಕಟ್ಟೆಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.


    ಇದನ್ನೂ ಓದಿ: ಕೇವಲ 6 ಸಾವಿರ ರೂಪಾಯಿಗೆ 32 ಇಂಚಿನ ಸ್ಮಾರ್ಟ್​ಟಿವಿ ಖರೀದಿಸಿ


    ಭಾರತದ ಯಾವೆಲ್ಲಾ ಕಂಪನಿಗಳು ಯಾವ್ಯಾವ ಸ್ಥಾನದಲ್ಲಿದೆ?


    ಶಿಯೋಮಿ ಕಂಪನಿ


    ಶಿಯೋಮಿ ಕಂಪೆನಿ 2022ರ 3ನೇ ತ್ರೈಮಾಸಿಕದ ವರದಿಯ ಪ್ರಕಾರ ಅಗ್ರಸ್ಥಾನವನ್ನು ಗುರುತಿಸಿಕೊಂಡಿದೆ. 3ನೇ ತ್ರೈಮಾಸಿಕದ ವರದಿಯ ಪ್ರಕಾರ ಶಿಯೋಮಿ ಕಂಪನಿಯ ಉತ್ಪನ್ನದ ಮಾರಾಟದ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 38% ರಷ್ಟು ಹೆಚ್ಚಾಗಿದೆ.


    ಸಾಂಕೇತಿಕ ಚಿತ್ರ


    ಅದರಲ್ಲೂ ಫೆಸ್ಟಿವಲ್‌ ಸೀಸನ್‌ ಸೇಲ್‌, ಆಕರ್ಷಕ ರಿಯಾಯಿತಿ, ಹೊಸ ಮಾದರಿಯ ಟೆಕ್ನಾಲಜಿಯಿಂದ ಶಿಯೋಮಿ ಬ್ರಾಂಡ್​ನ ಟಿವಿಗಳು ಭಾರೀ ಬೇಡಿಕೆ ಪಡೆದುಕೊಂಡಿವೆ. ಸದ್ಯದ ಮಾಹಿತಿ ಪ್ರಕಾರ 2022ರ 3ನೇ ತ್ರೈಮಾಸಿಕದಲ್ಲಿ ಟಿವಿ ಮಾರುಕಟ್ಟೆಯಲ್ಲಿ ಶಿಯೋಮಿ 11% ಪಾಲನ್ನು ಪಡೆಯುವ ಮೂಲಕ ದೇಶದಲ್ಲಿ ನಂ. 1 ಸ್ಥಾನವನ್ನು ಪಡೆದುಕೊಂಡಿದೆ.


    ಸ್ಯಾಮ್‌ಸಂಗ್‌


    ಸ್ಯಾಮ್‌ಸಂಗ್‌ ಕಂಪನಿ ಕೂಡ ಶಿಯೋಮಿ ಕಂಪನಿಗೆ ಬಹಳಷ್ಟು ಪೈಪೋಟಿಯನ್ನು ನೀಡಿದೆ. ಸ್ಯಾಮ್​ಸಂಗ್​ ಕಂಪನಿ ಸ್ಮಾರ್ಟ್‌ಫೋನ್‌ ವಲಯದಲ್ಲಿ ಪೈಪೋಟಿ ನಡೆಸಿದಂತೆ ಸ್ಮಾರ್ಟ್‌ಟಿವಿ ವಲಯದಲ್ಲಿಯೂ ಕೂಡ ಪೈಪೋಟಿ ನಡೆಸುತ್ತಿದ್ದು, ಈ ವರ್ಷದ 3ನೇ ತ್ರೈಮಾಸಿಕದ ವರದಿಯ ಪ್ರಕಾರ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಅದರಂತೆ ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ಕಂಪನಿ 3ನೇ ತ್ರೈಮಾಸಿಕದಲ್ಲಿ 10% ಪಾಲನ್ನು ಪಡೆಯುವ ಮೂಲಕ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.


    ಸಾಂಕೇತಿಕ ಚಿತ್ರ


    ಎಲ್‌ಜಿ ಕಂಪೆನಿ


    ಎಲೆಕ್ಟ್ರಾನಿಕ್ಸ್‌  ಸಾಧನಗಳ ಮಾರಾಟದಲ್ಲಿ  ಬಹಳಷ್ಟು ಜನಪ್ರಿಯದಲ್ಲಿರುವ ಎಲ್​ಜಿ ಕಂಪೆನಿ ಭಾರತದಲ್ಲಿ ಈ ವರ್ಷದ 3 ನೇ ತ್ರೈಮಾಸಿಕದ ವರದಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ ಎಮದು ಹೇಳಿದೆ. ಈ ಅವಧಿಯಲ್ಲಿ ಎಲ್‌ಜಿ ಕಂಪೆನಿ 9% ಮಾರುಕಟ್ಟೆ ಪಾಲನ್ನು ಹೊಂದಿದೆ. ಎಲ್‌ಜಿ ಕಂಪೆನಿಯ ಜನಪ್ರಿಯತೆಯಲ್ಲಿ OLED ಟಿವಿಗಳು ಹೆಚ್ಚು ಮಾರಾಟವಾಗಿದೆ.


    ಒನ್‌ಪ್ಲಸ್‌


    ಇನ್ನು ಒನ್‌ಪ್ಲಸ್‌ ಕಂಪನಿ ಕೂಡ ಭಾರತದ ಸ್ಮಾರ್ಟ್‌ಟಿವಿ ಮಾರುಕಟ್ಟೆಯ ಟಾಪ್‌ ಐದು ಬ್ರ್ಯಾಂಡ್‌ಗಳಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಇದು 3ನೇ  ತ್ರೈಮಾಸಿಕದಲ್ಲಿ ತನ್ನ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ 89% ಮಾರುಕಟ್ಟೆ ಪಾಲನ್ನು ಪಡೆದಿದೆ. ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ 8.5% ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. ಇದರಲ್ಲಿ ಒನ್‌ಪ್ಲಸ್‌ Y1, Y1S ಮತ್ತು Y1S ಪ್ರೊ ಸರಣಿಯ ಸ್ಮಾರ್ಟ್‌ಟಿವಿಗಳು ಭಾರೀ ಬೇಡಿಕೆಗಳಿವೆ.

    Published by:Prajwal B
    First published: