• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Samsung Smartphones: ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​​22 ಮತ್ತು ಗ್ಯಾಲಕ್ಸಿ 23 ಸ್ಮಾರ್ಟ್​​​ಫೋನ್​​ಗಳಲ್ಲಿ ಬೆಸ್ಟ್​ ಯಾವುದು?

Samsung Smartphones: ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​​22 ಮತ್ತು ಗ್ಯಾಲಕ್ಸಿ 23 ಸ್ಮಾರ್ಟ್​​​ಫೋನ್​​ಗಳಲ್ಲಿ ಬೆಸ್ಟ್​ ಯಾವುದು?

ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​​​22 ಮತ್ತು ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​​​23 ಸ್ಮಾರ್ಟ್​​ಫೋನ್​

ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​​​22 ಮತ್ತು ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​​​23 ಸ್ಮಾರ್ಟ್​​ಫೋನ್​

ಸ್ಯಾ,ಮ್​ಸಂಗ್​ ಕಂಪೆನಿಯಿಂದ ಇತ್ತೀಚೆಗೆ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​23 ಸೀರಿಸ್​ನ ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಿತ್ತು. ಆದರೆ ಕಳೆದ ಬಾರಿ ಇದೆ ಸೀರಿಸ್​ನಲ್ಲಿ ಗ್ಯಾಲಕ್ಸಿ ಎಸ್​22 ಮೊಬೈಲ್​ ಅನ್ನು ಬಿಡುಗಡೆ ಮಾಡಿದೆ. ಆದರೆ ಈ ಎರಡು ಸ್ಮಾರ್ಟ್​​​ಫೋನ್​ಗಳಲ್ಲಿ ಯಾವುದು ಬೆಸ್ಟ್​ ಎಂಬ ಪ್ರಶ್ನೆ ಮೂಡಿರಬಹುದು. ಈ ಬಗ್ಗೆ ಉತ್ತರ ಸಿಗ್ಬೇಕಾದ್ರೆ ಈ ಲೇಖನವನ್ನು ಓದಿ.

ಮುಂದೆ ಓದಿ ...
  • Share this:

    ಸ್ಮಾರ್ಟ್​​​ಫೋನ್​ಗಳು ಟೆಕ್​ ಮಾರುಕಟ್ಟೆಗಳು ಬಹಳಷ್ಟು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯಾಗಲು ಕಾರಣವಾದ ಸಾಧನಗಳು ಅಂತಾನೇ ಹೇಳ್ಬಹುದು. ಸ್ಮಾರ್ಟ್​​ಫೋನ್​ ಎಂಬ ಚಿಕ್ಕ ಸಾಧನ ಈಗ ಏನನ್ನೂ ಸಹ ಕ್ಷಣಮಾತ್ರದಲ್ಲಿ ಮಾಡಿಮುಗಿಸಬಹುದು. ಇತ್ತೀಚೆಗೆ ಸ್ಮಾರ್ಟ್​​​ಫೋನ್ (​Smartphones) ಪ್ರತಿಯೊಬ್ಬರ ಅಗತ್ಯ ಸಾಧನವಾಗಿಬಿಟ್ಟಿದೆ. ಮಾರುಕಟ್ಟೆಯಲ್ಲಿ ಹಲವಾರು ಸ್ಮಾರ್ಟ್​ಫೋನ್ ಕಂಪೆನಿಗಳಿವೆ. ಅದರಲ್ಲಿ ಜನಪ್ರಿಯ ಕಂಪೆನಿಯೆಂದರೆ ಸ್ಯಾಮ್​ಸಂಗ್ (Samsung Company)​. ಇದು ತನ್ನ ಕಂಪೆನಿಯಿಂದ ಹಲವಾರು ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಲಟ್ಟೆಯಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕಳೆದ ವರ್ಷ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​22  (Galaxy s22)ಸ್ಮಾರ್ಟ್​​​ಫೋನ್​ ಅನ್ನು ಬಿಡುಗಡೆ ಮಾಡುವ ಮೂಲಕ ಭಾರೀ ಸಂಚಲನ ಮೂಡಿಸಿತ್ತು. ಇದೇ ಸೀರಿಸ್​ನಿಂದ ಈ ಬಾರಿ ಮತ್ತೊಂದು ಹೊಸ ಗ್ಯಾಲಕ್ಸಿ ಎಸ್​​23 ಸ್ಮಾರ್ಟ್​​​ಫೋನ್ (Galaxy S23) ಅನ್ನು ಬಿಡುಗಡೆ ಮಾಡಿದೆ.


    ಸ್ಯಾ,ಮ್​ಸಂಗ್​ ಕಂಪೆನಿಯಿಂದ ಇತ್ತೀಚೆಗೆ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​23 ಸೀರಿಸ್​ನ ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಿತ್ತು. ಆದರೆ ಕಳೆದ ಬಾರಿ ಇದೆ ಸೀರಿಸ್​ನಲ್ಲಿ ಗ್ಯಾಲಕ್ಸಿ ಎಸ್​22 ಮೊಬೈಲ್​ ಅನ್ನು ಬಿಡುಗಡೆ ಮಾಡಿದೆ. ಆದರೆ ಈ ಎರಡು ಸ್ಮಾರ್ಟ್​​​ಫೋನ್​ಗಳಲ್ಲಿ ಯಾವುದು ಬೆಸ್ಟ್​ ಎಂಬ ಪ್ರಶ್ನೆ ಮೂಡಿರಬಹುದು. ಈ ಬಗ್ಗೆ ಉತ್ತರ ಸಿಗ್ಬೇಕಾದ್ರೆ ಈ ಲೇಖನವನ್ನು ಓದಿ.


    ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​​23 ಸ್ಮಾರ್ಟ್​​​ಫೋನ್​


    ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್​23 ಸ್ಮಾರ್ಟ್‌ಫೋನ್‌ 6.1 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡೈನಾಮಿಕ್ ಅಮೋಲ್ಡ್​ 2X ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್​​ಪ್ಲೇಯು 120Hz ರಿಫ್ರೆಶ್‌ ರೇಟ್‌ ಅನ್ನು ಪಡೆದಿದೆ. ಹಾಗೆಯೇ 240Hz ಗೇಮಿಂಗ್ ಟಚ್ ಸಾಮರ್ಥ್ಯವನ್ನು ಸಹ ಒಳಗೊಂಡಿದೆ. ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​​23 ಸ್ಮಾರ್ಟ್​​​ಫೋನ್​ನ ಡಿಸ್​ಪ್ಲೇ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ವನ್ನು ಆ್ಯಡ್ ಮಾಡಲಾಗಿದೆ.




    ಇನ್ನು ಈ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್‌ ಬೆಂಬಲ ಹೊಂದಿದ್ದು, 8ಜಿಬಿ ರ್‍ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬಿಡುಗಡೆಯಾಗಿದೆ. ಈ ಸ್ಮಾರ್ಟ್​​​ಫೋನ್​ ಆಂಡ್ರಾಯ್ಡ್‌ 13 ಓಎಸ್‌ ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ 3,900mAh ಬ್ಯಾಟರಿ ಬ್ಯಾಕಪ್ ಅನ್ನು ಸಹ ಹೊಂದಿದೆ.


    ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​​22 ಸ್ಮಾರ್ಟ್​​ಫೋನ್​


    ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್​22 ಸ್ಮಾರ್ಟ್‌ಫೋನ್‌ 6.1 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡೈನಾಮಿಕ್ ಅಮೋಲ್ಡ್​ 2X ಡಿಸ್‌ಪ್ಲೇಯನ್ನುಪಡೆದಿದೆ. ಜೊತೆಗೆ ಈ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ + ನಿಂದ ರಕ್ಷಿಸಲಾಗಿದೆ. ಇನ್ನು ಈ ಫೋನ್ ಆಕ್ಟಾ ಕೋರ್ 4nm ಎಸ್​​ಓಸಿ ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, 8 ಜಿಬಿ ರ್‍ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಆಯ್ಕೆಯನ್ನು ಪಡೆದಿದೆ. ಇನ್ನು ಈ ಸ್ಮಾರ್ಟ್​​ಫೋನ್​ ಆಂಡ್ರಾಯ್ಡ್‌ 12 ಓಎಸ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ 3,700mAh ಬ್ಯಾಟರಿ ಬ್ಯಾಕಪ್ ಅನ್ನು ಪಡೆದಿದೆ.


    ಗ್ಯಾಲಕ್ಸಿ ಎಸ್​23 ಮತ್ತು ಗ್ಯಾಲಕ್ಸಿ ಎಸ್​22 ಸ್ಮಾರ್ಟ್​​ಫೋನ್​ನ ಪ್ರೊಸೆಸರ್ ಸಾಮರ್ಥ್ಯ


    ಪ್ರೊಸೆಸರ್ ವಿಭಾಗದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್​22 ಫೋನ್‌ಗಿಂತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್​23 ಫೋನ್​ ಅಪ್‌ಗ್ರೇಡ್ ಪ್ರೊಸೆಸರ್​ ಅನ್ನು ಹೊಂದಿದೆ. ಗ್ಯಾಲಕ್ಸಿ ಎಸ್​22 ಫೋನ್ Exynos 2200 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದರೆ, ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್​23 ಫೋನಿನಲ್ಲಿ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್​ 2 ಪ್ರೊಸೆಸರ್ ಅನ್ನು ಹೊಂದಿದೆ. ಇದರೊಂದಿಗೆ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಸಹ ಒದಗಿಸಲಾಗಿದೆ. ನೂತನ ಪ್ರೊಸೆಸರ್‌ ಹಿಂದಿನ ಪ್ರೊಸೆಸರ್‌ಗಿಂತ ಉತ್ತಮವಾಗಿದೆ ಎಂದು ಹೇಳ್ಬಹುದು.


    ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​​​22 ಮತ್ತು ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​​​23 ಸ್ಮಾರ್ಟ್​​ಫೋನ್​


    ಕ್ಯಾಮೆರಾ ಯಾವುದು ಉತ್ತಮ?


    ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್​​ ಸೀರಿಸ್​ನ ಫೋನ್‌ಗಳಲ್ಲಿ ಕ್ಯಾಮೆರಾ ಪ್ರಮುಖ ಫೀಚರ್ಸ್​ಗಳಲ್ಲಿ ಒಂದಾಗಿದೆ. ಆದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್​​23 ಫೋನಿನಲ್ಲಿ, ಗ್ಯಾಲಕ್ಸಿ ಎಸ್​22 ಫೋನ್‌ಗಿಂತ ಹೆಚ್ಚಿನ ಕ್ಯಾಮೆರಾ ಸೆನ್ಸಾರ್ ಫೀಚರ್​ ಅನ್ನು ನೀಡಲಾಗಿಲ್ಲ. ಸ್ಯಾಮ್​ಸಂಗ್ ಕಂಪೆನಿಯಿಂದ ಬಿಡುಗಡೆಯಾದ ಹೊಸ ಫೋನ್‌ ಸಹ ಹಿಂದಿನ ಫೋನ್‌ನಂತೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್​ ಸೆನ್ಸಾರ್‌ನಲ್ಲಿದೆ. ಆದ್ರೆ ಸೆಲ್ಫಿ ಕ್ಯಾಮೆರಾ 12 ಮೆಗಾ ಪಿಕ್ಸೆಲ್​ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದಿದೆ. ಆದರೆ ಗ್ಯಾಲಕ್ಸಿ ಎಸ್​22 ಫೋನಿನಲ್ಲಿ ಸೆಲ್ಫಿ ಕ್ಯಾಮೆರಾವು 10 ಮೆಗಾ ಪಿಕ್ಸೆಲ್​ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ.


    ಇದನ್ನೂ ಓದಿ: 18 ಸಾವಿರ ವೆಚ್ಚದಲ್ಲಿ ಎಲೆಕ್ಟ್ರಿಕ್ ಸೈಕಲ್ ತಯಾರಿಸಿದ ಐಟಿಐ ಸ್ಟೂಡೆಂಟ್, ಒಮ್ಮೆ ಚಾರ್ಜ್ ಮಾಡಿದ್ರೆ 80 ಕಿಲೋಮೀಟರ್ ಓಡಾಟ


    ಬ್ಯಾಟರಿ ಯಾವುದು ಬೆಸ್ಟ್​?


    ಬ್ಯಾಟರಿ ವಿಭಾಗದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್​22 ಫೋನ್‌ಗಿಂತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್​23 ಫೋನಿನಲ್ಲಿ ಬ್ಯಾಟರಿ ವಿಭಾಗದಲ್ಲಿ ಹಾಗೇನು ಬದಲಾವಣೆಗಳನ್ನು ಮಾಡಿಲ್ಲ. ಗ್ಯಾಲಕ್ಸಿ ಎಸ್​22 ಫೋನ್ 3,700mAh ಬ್ಯಾಟರಿ ಬ್ಯಾಕಪ್​ ಅನ್ನು ಒಳಗೊಂಡಿದ್ದು, ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್​23 ಫೋನ್ 3,900mAh ಬ್ಯಾಟರಿ ಬ್ಯಾಕಪ್ ಅನ್ನು ಅಳವಡಿಸಲಾಗಿದೆ. ಈ ಮೂಲಕ ಹೊಸ ಸ್ಮಾರ್ಟ್​​ಫೋನ್​ನಲ್ಲಿ ಬ್ಯಾಟರಿ ಬ್ಯಾಕಪ್ ಅನ್ನು 200mAh ನಷ್ಟು ಹೆಚ್ಚಿಸಲಾಗಿದೆ.

    Published by:Prajwal B
    First published: