ಮೊಬೈಲ್​ ಬ್ಯಾಟರಿ ಉಳಿಸಲು ಇಲ್ಲಿವೆ ಕೆಲ ಸರಳ ಟಿಪ್ಸ್​​

ಕೆಲವೊಮ್ಮೆ ಚಾರ್ಜ್​ ಹಾಕಿದಾಗ ಶೇ.100 ಎಂದು ತೋರಿಸುತ್ತಿರುವ ಬ್ಯಾಟರಿ ನೋಡ ನೋಡುತ್ತಿದ್ದಂತೆ ಬ್ಯಾಟರಿ ಸಾಯುವ ಹಂತ ತಲುಪಿ ಬಿಡುತ್ತದೆ. ಇದಕ್ಕೆ ಮೊಬೈಲ್​ನಲ್ಲಿರುವ ಕೆಲ ಆ್ಯಪ್​ಗಳೂ ಕಾರಣ.

news18
Updated:February 7, 2019, 7:20 PM IST
ಮೊಬೈಲ್​ ಬ್ಯಾಟರಿ ಉಳಿಸಲು ಇಲ್ಲಿವೆ ಕೆಲ ಸರಳ ಟಿಪ್ಸ್​​
ಪ್ರಾತಿನಿದಿಕ ಚಿತ್ರ
  • News18
  • Last Updated: February 7, 2019, 7:20 PM IST
  • Share this:
ಮೊಬೈಲ್​ ಬಳಕೆ ಹೆಚ್ಚಿದಂತೆ ಅವುಗಳ ಫೀಚರ್​ಗಳ ಸಂಖ್ಯೆಯೂ ಹೆಚ್ಚುತ್ತಿದೆ. ಕಂಪ್ಯೂಟರ್​ನಲ್ಲಿ ಮಾಡುವ ಕೆಲ ಕೆಲಸಗಳನ್ನು ಈಗ ಮೊಬೈಲ್​ನಲ್ಲೇ ಮಾಡಬಹುದು. ಕಾರಣ, 6ಜಿಬಿ ರ‍್ಯಾಮ್ ಹಾಗೂ , 8 ಜಿಬಿ ರ‍್ಯಾಮ್ ಮೊಬೈಲ್​ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹೀಗಿದ್ದರೂ ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ ಬ್ಯಾಟರಿ ಬ್ಯಾಕಪ್​.

ಹೆಚ್ಚು ರ‍್ಯಾಮ್ ಹೊಂದಿದ್ದರೆ ಮೊಬೈಲ್​ ಹ್ಯಾಂಗ್​ ಆಗುವುದು ಕಡಿಮೆ. ಅಷ್ಟೇ ಅಲ್ಲ, ಕೆಲ ಗೇಮ್​ಗಳನ್ನು ಆಡಲು ಇದು ಸಹಾಯಕಾರಿ. ಕೆಲವೊಮ್ಮೆ ಚಾರ್ಜ್​ ಹಾಕಿದಾಗ ಶೇ.100 ಎಂದು ತೋರಿಸುತ್ತಿರುವ ಬ್ಯಾಟರಿ ನೋಡ ನೋಡುತ್ತಿದ್ದಂತೆ ಬ್ಯಾಟರಿ ಸಾಯುವ ಹಂತ ತಲುಪಿ ಬಿಡುತ್ತದೆ. ಇದಕ್ಕೆ ಮೊಬೈಲ್​ನಲ್ಲಿರುವ ಕೆಲ ಆ್ಯಪ್​ಗಳೂ ಕಾರಣ.

ಅದಕ್ಕೆ ನೀವು ಮಾಡಬೇಕಾದುದು ಇಷ್ಟೇ. ಮೊದಲು ಮೊಬೈಲ್​ ಸೆಟ್ಟಿಂಗ್​ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಬ್ಯಾಟರಿ ಆಯ್ಕೆ ಕ್ಲಿಕ್​ ಮಾಡಿ. ಅದರಲ್ಲಿ ಆ್ಯಪ್​ಗಳ ಮಾಹಿತಿ ಆಯ್ಕೆ ಮಾಡಿಕೊಳ್ಳಿ. ಪ್ರತಿ ಆ್ಯಪ್​ನಲ್ಲೂ ಶೇಕಡಾ ಚಿಹ್ನೆ ಇರುತ್ತದೆ. ಅದರಲ್ಲಿ ಯಾವ ಆ್ಯಪ್​ ಹೆಚ್ಚು ಬ್ಯಾಟರಿ ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವ ವಿಚಾರ ತಿಳಿಯಲಿದೆ. ಇದರ ಜೊತೆಗೆ 'ಟೆಕ್ನಿಕಲ್​ ಗುರೂಜಿ' ಯೂಟ್ಯೂಬ್​ ಚಾನೆಲ್​ನಲ್ಲಿ ತೋರಿಸಲಾದ ಕೆಲ ಟಿಪ್ಸ್​​ಗಳು.

First published:February 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ