ಭಾರತದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟ್ಟ್ಯಾಗ್ (FASTag) ಕಡ್ಡಾಯಗೊಳಿಸಲಾಗಿದೆ. ಫೆಬ್ರವರಿಯಿಂದ 15ರಿಂದ ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೆತರಲಾಗಿದೆ. ಎಲ್ಲ ಸವಾರರು ಫಾಸ್ಟ್ಟ್ಯಾಗ್ ಅಳವಡಿಸುವ ಮೂಲಕ ಟೋಲ್ಗೇಟ್ ಶುಲ್ಕವನ್ನು ಸುಲಭವಾಗಿ ಪಾವತಿಸಬಹುದಾಗಿದೆ. ನಗದು ವಹಿವಾಟನ್ನು ಸಡಿಲಗೊಳಿಸಲು ಮತ್ತು ಡಿಜಿಟಲ್ ಪಾವತಿಯನ್ನು ಹೆಚ್ಚಿಸಲು ಸರ್ಕಾರ ಫಾಸ್ಟ್ಟ್ಯಾಗ್ ಅನ್ನು ಸಕ್ರಿಯಗೊಳಿಸಿದೆ.
FASTag ಖರೀದಿಸುವುದು ಹೇಗೆ?ವಾಹನ ರಿಜಿಸ್ಟ್ರೇಷನ್ ದಾಖಲೆಯ ಮೂಲಕ ಫಾಸ್ಟ್ಟ್ಯಾಗ್ ಖರೀದಿಸಬಹುದಾಗಿದೆ. ಮಾತ್ರವಲ್ಲದೆ, ಅಮೆಜಾನ್.ಇನ್ ಮೂಲಕ ಫಾಸ್ಟ್ ಟ್ಯಾಗ್ ಖರೀದಿಸಬಹುದಾಗಿದೆ.
ಫಾಸ್ಟ್ಟ್ಯಾಗ್ಗಾಗಿ ಪಾವತಿ ಬ್ಯಾಂಕ್ ಸೇರಿದಂತೆ ಕೆಲವು ಬ್ಯಾಂಕ್ಗಳನ್ನು ಸಂಪರ್ಕಿಸಿ ಖರೀದಿಸಬಹುದಾಗಿದೆ. ಪ್ರಸ್ತುತ ಎಚ್ಡಿಎಫ್ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೋಟಕ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಪೇಟಿಎಂ ಪೇಮೆಂಟ್ ಬ್ಯಾಂಕ್ ಮೂಲಕ ಫಾಸ್ಟ್ಟ್ಯಾಗ್ ಖರೀದಿಸಬಹುದಾಗಿದೆ. ಅದಕ್ಕಾಗಿ ಬ್ಯಾಂಕ್ಗಳ ಅಧಿಕೃತ ವೆಬ್ಸೈಟ್ಗೆ ತೆರಳಿ ಫಾಸ್ಟ್ಟ್ಯಾಗ್ ರೀಚಾರ್ಜ್ ಮಾಡಬಹುದಾಗದೆ. ಅಷ್ಟು ಮಾತ್ರವಲ್ಲದೆ, ಪೇಟಿಎಂ ಮತ್ತು ಏರ್ಟೆಲ್ ಪೇಮೆಂಟ್ ಬ್ಯಾಂಕ್ ಅಪ್ಲಿಕೇಶನ್ ಮೂಲಕ ನೇರವಾಗಿ ಖರೀದಿಸಬಹುದಾಗಿದೆ.
FASTag ವೆಚ್ಚವೆಷ್ಟು?
ಎರಡು ವಿಷಯದ ಮೇಲೆ ಫಾಸ್ಟ್ಟ್ಯಾಗ್ ವೆಚ್ಚ ಅವಲಂಬಿತವಾಗಿರುತ್ತದೆ. ಮೊದಲನೆದಾಗಿ ವಾಹನದ ವರ್ಗ-ಕಾರು, ಜೀಪ್, ವ್ಯಾನ್, ಬಸ್ ಅಥವಾ ಟ್ರಕ್ ಇತ್ಯಾದಿ.
ಎರಡನೆಯದಾಗಿ ಬ್ಯಾಂಕ್ ಮೂಲಕ ಫಾಸ್ಟ್ಟ್ಯಾಗ್ ಖರೀದಿಸವವರಿಗೆ ಶುಲ್ಕ ಮತ್ತು ಭದ್ರತಾ ಠೇವಣಿ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.
ಫಾಸ್ಟ್ಟ್ಯಾಗ್ ರೀಚಾರ್ಜ್ ಮಾಡುವುದು ಹೇಗೆ?
ಇಂಟರ್ನೆಟ್ ಬ್ಯಾಂಕಿಂಗ್, ಕ್ರೆಡಿಟ್-ಡೆಬಿಟ್ ಕಾರ್ಡ್ ಅಥವಾ ಯುಪಿಐ ಬಳಸಿ ರೀಚಾರ್ಜ್ ಮಾಡಬಹುದಾಗಿದೆ. ಪೇಟಿಯಂ ಮತ್ತು ಫೋನ್ಪೇ ಮುಂತಾದ ಮೊಬೈಲ್ ವ್ಯಾಲೆಟ್ಗಳ ಮೂಲಕ ಸುಲಭವಾಗಿ ರೀಚಾರ್ಜ್ ಮಾಡಬಹುದಾಗಿದೆ.
ಅಷ್ಟು ಮಾತ್ರವಲ್ಲದೆ, ಅಮೆಜಾನ್ ಪೇ ಬಳಸಿ ಫಾಸ್ಟ್ಆ್ಯಗ್ ಖರೀದಿಸಬಹುದಾಗಿದೆ. ಏರ್ಟೆಲ್ ಪೇಮೆಂಟ್ ಬ್ಯಾಂಕ್, ಬ್ಯಾಂಕ್ ಅಫ್ ಬರೋಡಾ, ಸಿಟಿ ಯೂನಿಯನ್ ಬ್ಯಾಂಕ್, ಇಕ್ವಿಟಸ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಹೆಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಎಫ್ಸಿ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಕರೂರ್ ವ್ಯಾಸ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸೌತ್ ಇಂಡಿಯಾ ಬ್ಯಾಂಕ್ ಮೂಲಕ ರೀಜಾರ್ಚ್ ಮಾಡಬಹುದಾಗಿದೆ.
ಅದರ ಜೊತೆಗೆ ಅಮೆಜಾನ್ ಆ್ಯಕ್ಸಿಸ್ ಬ್ಯಾಂಕ್, ಪೇಟಿಯಂ ಪೇಮೆಂಟ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಇಂಡಿಯಾ ಜೊತೆಗೂ ಈ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ. ಸದ್ಯದಲ್ಲೇ ಈ ಬ್ಯಾಂಕ್ಗಳ ಮೂಲಕ ಫಾಸ್ಟ್ಟ್ಯಾಗ್ ರೀಚಾರ್ಜ್ ಮಾಡುವ ಅವಕಾಶ ಒದಗಿ ಬರಲಿದೆ.
ಅಮೆಜಾನ್ ಪೇ ಬಳಸುವವರು -ಬಿಲ್-ಫಾಸ್ಟ್ಟ್ಯಾಗ್ ಆಯ್ಕೆಯನ್ನು ಬಳಸುವ ಮೂಲಕ ಫಾಸ್ಟ್ಟ್ಯಾಗ್ ರೀಚಾರ್ಜ್ ಮಾಡಬಹುದಾಗಿದೆ.
ಸರ್ಕಾರ ಡಿಜಿಟಲ್ ಪಾವತಿಯತ್ತ ಹೆಚ್ಚು ಒತ್ತು ನೀಡುತ್ತಿದೆ. ಇಧಿಗ ಫಾಸ್ಟ್ಟ್ಯಾಗ್ ಅನ್ನು ಅಧಿಕೃತಗೊಳಿಸಿದೆ. ಈಗಾಗಲೇ ಸಾಕಷ್ಟು ಜನರು ಫಾಸ್ಟ್ಆ್ಯಗ್ ಅನ್ನು ಬಳಸುತ್ತಿದ್ದಾರೆ. ಇನ್ನು ಕೆಲವರು ಬಳಸದೆ ಹೆದ್ದಾರಿಯಲ್ಲಿರುವ ಟೋಲ್ ಗೇಟ್ ಬಳಿ ಪರದಾಡುತ್ತಿದ್ದಾರೆ. ಆದರೆ ಫಾಸ್ಟ್ಟ್ಯಾಗ್ ರೀಚಾರ್ಜ್ ಮಾಡುವ ಮೂಲಕ ಹೈವೆ ಟೋಲ್ಗಳಲ್ಲಿ ನೇರವಾಗಿ ಚಲಿಸಬಹುದಾಗಿದೆ.