Tech Layoffs: ಉದ್ಯೋಗ ಕಡಿತಕ್ಕೆ ಬ್ರೇಕ್ ಬೀಳೋದು ಯಾವಾಗ? ಸುಧಾರಿಸುತ್ತಾ ಕಂಪನಿಗಳ ಆರ್ಥಿಕ ಪರಿಸ್ಥಿತಿ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇ-ಕಾಮರ್ಸ್ ದೈತ್ಯ ಅಮೆಜಾನ್ 18,000 ಉದ್ಯೋಗಿಗಳನ್ನು ವಜಾಗೊಳಿಸಿತು. ಗೂಗಲ್‌ ಮೈಕ್ರೋಸಾಫ್ಟ್‌, ಟ್ವಿಟ್ಟರ್‌, ಡೆಲ್‌ ಟೆಕ್ನಾಲಜಿಸ್‌ ಕೂಡ ಉದ್ಯೋಗಿಗಳನ್ನು ಮನೆಗೆ ಕಳುಹಿಸಿತು. ಫೇಸ್‌ಬುಕ್‌ ಕೂಡ ಉದ್ಯೋಗ ಕಡಿತ ಮಾಡುತ್ತದೆ ಎನ್ನಲಾಗಿದೆ. ಈ ವಜಾಪ್ರಕ್ರಿಯೆ ಯಾವಾಗ ಕೊನೆಗೊಳ್ಳಬಹುದು ಎಂದು ಎಲ್ಲರಲ್ಲೂ ಪ್ರಶ್ನೆ ಮೂಡಿದೆ.

ಮುಂದೆ ಓದಿ ...
  • Trending Desk
  • 2-MIN READ
  • Last Updated :
  • Share this:

    ಐಟಿ ಉದ್ಯೋಗಿಗಳ (IT Employees) ಪಾಲಿಗೆ 2023ರ ಆರಂಭವು ಆತಂಕದಿಂದಲೇ ಆರಂಭವಾಗಿತ್ತು. ಈ ವರ್ಷದ ಆರಂಭದಲ್ಲಿ ಅನೇಕ ಕಂಪನಿಗಳು, ಅದರಲ್ಲೂ ವಿಶೇಷವಾಗಿ ಟೆಕ್ ಬಿಗ್ಗಿಗಳು, ಯುನಿಕಾರ್ನ್‌ಗಳು ಮತ್ತು ಸ್ಟಾರ್ಟ್‌ಅಪ್‌ಗಳು ಸಾವಿರಾರು ಉದ್ಯೋಗಿಗಳನ್ನು ಕೈ ಬಿಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೆಟಾ, ಗೂಗಲ್, ಅಮೆಜಾನ್ ಮತ್ತು ಮೈಕ್ರೋಸಾಫ್ಟ್‌ನಂತಹ (Microsoft) ಟೆಕ್ ದೈತ್ಯರಿಂದ ಹತ್ತು ಸಾವಿರ ಜನರನ್ನು ವಜಾಗೊಳಿಸಲಾಗಿದೆ. ಮೆಟಾ ಕಳೆದ ವರ್ಷ ಬೃಹತ್ 11,000 ಉದ್ಯೋಗ ಕಡಿತ ಮಾಡಿತು. ಇ-ಕಾಮರ್ಸ್ ದೈತ್ಯ ಅಮೆಜಾನ್ 18,000 ಉದ್ಯೋಗಿಗಳನ್ನು ವಜಾಗೊಳಿಸಿತು (Layoffs). ಗೂಗಲ್‌ ಮೈಕ್ರೋಸಾಫ್ಟ್‌, ಟ್ವಿಟ್ಟರ್‌, ಡೆಲ್‌ ಟೆಕ್ನಾಲಜಿಸ್‌ ಕೂಡ ಉದ್ಯೋಗಿಗಳನ್ನು ಮನೆಗೆ ಕಳುಹಿಸಿತು. ಫೇಸ್‌ಬುಕ್‌ ಕೂಡ ಉದ್ಯೋಗ ಕಡಿತ ಮಾಡುತ್ತದೆ ಎನ್ನಲಾಗಿದೆ.


    ಇನ್ನೂ ಕೆಲವರು ಕೆಲಸ ಉಳಿಸಿಕೊಂಡರೂ ಸಂಬಳ ಕಡಿತವನ್ನು ಅನುಭವಿಸುತ್ತಿದ್ದಾರೆ. ಇನ್ನೂ ಹಲವಾರು ಜನರ ಪ್ರಮೋಷನ್‌, ಸಂಬಳ ಹೆಚ್ಚಳ ಎಲ್ಲವನ್ನೂ ನಿಲ್ಲಿಸಲಾಗಿದೆ. ಈ ಮಧ್ಯೆ ಅನೇಕರನ್ನು ನೇಮಿಸಲಾಗಿದ್ದರೂ ಆನ್‌ಬೋರ್ಡಿಂಗ್ ವಿಳಂಬದಿಂದಾಗಿ ಇನ್ನೂ ಹೆಣಗಾಡುತ್ತಿದ್ದಾರೆ.


    2023 ರಲ್ಲಿ ಅಮೆಜಾನ್ ಉದ್ಯೋಗಿಗಳ ಸಂಬಳವನ್ನು 50% ರಷ್ಟು ಕಡಿತಗೊಳಿಸಬಹುದು ಎಂದು ವರದಿಗಳು ಹೇಳಿವೆ. ಮತ್ತೊಂದೆಡೆ, ಹಲವಾರು ಉದ್ಯೋಗಿಗಳು ವಿವಿಧ ಕಂಪನಿಗಳಿಂದ ನೇಮಕಗೊಂಡ ತಿಂಗಳುಗಳ ನಂತರವೂ ತಮ್ಮ ಆನ್‌ಬೋರ್ಡಿಂಗ್‌ಗಾಗಿ ಕಾಯುತ್ತಿದ್ದಾರೆ.


    ಇದನ್ನೂ ಓದಿ: ಸ್ಟಾರ್ ಪರ್ಫಾರ್ಮರ್ ಆಗಿ ಆಯ್ಕೆಯಾಗಿದ್ದವನಿಗೆ ಶಾಕ್, ಆತನನ್ನು ಕೆಲಸದಿಂದಲೇ ವಜಾ ಮಾಡಿದ ಗೂಗಲ್!


    ಉದ್ಯಮದ ಬೆಳವಣಿಗೆಯು ಹೆಚ್ಚಿನ ಹಣದುಬ್ಬರ, ಭೌಗೋಳಿಕ ರಾಜಕೀಯ ಒತ್ತಡ, ದರ ಏರಿಕೆ, ನಿರುದ್ಯೋಗ ದರ, ಜಾಗತಿಕ ಯುದ್ಧ, ಜೊತೆಗೆ ಹೆಚ್ಚಿನ ನಿರ್ಬಂಧಗಳೊಂದಿಗೆ ಹೋರಾಡುತ್ತಿದೆ. ಪ್ರಮುಖ ಆರ್ಥಿಕತೆಗಳು ಹಿಂಜರಿತದ ಅಂಚಿನಲ್ಲಿವೆ ಎನ್ನಲಾಗುತ್ತದೆ.


    ಪ್ರತಿದಿನ 2700ಕ್ಕೂ ಹೆಚ್ಚು ಜನರು ಕೆಲಸ ಕಳೆದುಕೊಂಡಿದ್ದಾರೆ!


    ಟೆಕ್ ವಜಾಗಳನ್ನು ಟ್ರ್ಯಾಕ್ ಮಾಡುವ Trueup.io ಡೇಟಾದ ಪ್ರಕಾರ, 2023 ರಲ್ಲಿ, ಇದುವರೆಗೆ ಟೆಕ್ ಕಂಪನಿಗಳಲ್ಲಿ 534 ಲೇಆಫ್‌ಗಳು ನಡೆದಿದ್ದು ಸುಮಾರು 153,005 ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅಂದರೆ ದಿನಕ್ಕೆ ಸುಮಾರು 2,732ರಷ್ಟು ಜನರು ವಜಾಗೊಂಡಿದ್ದಾರೆ. ಕಳೆದ ವರ್ಷ ಟೆಕ್ ಕಂಪನಿಗಳಲ್ಲಿ 1,535 ಲೇಆಫ್‌ಗಳು ನಡೆದಿದ್ದು, ಸುಮಾರು 241,176 ಜನರು ಪ್ರಭಾವಿತರಾಗಿದ್ದಾರೆ ಎಂದು ಡೇಟಾ ತೋರಿಸಿದೆ.


    ಕರ್ಮವಿ ಸಂಸ್ಥಾಪಕ ಉಜ್ಜಲ್ ಡೆ ಅವರು, ಸಾಂಕ್ರಾಮಿಕ ನಂತರ ಐಟಿ ವ್ಯವಹಾರಗಳು ಭಾರಿ ವಜಾಗಳನ್ನು ಮಾಡುತ್ತಿವೆ. ಏಕೆಂದರೆ ಬೇಡಿಕೆಗಳು ಸಾಮಾನ್ಯವಾಗುತ್ತಿವೆ. ಇದು ಸ್ಟಾರ್ಟ್‌ಅಪ್‌ಗಳು ಮತ್ತು SMB ಗಳನ್ನು ತಮ್ಮ ಬಾಟಮ್ ಲೈನ್‌ನಲ್ಲಿ ಕೇಂದ್ರೀಕರಿಸಲು ಮತ್ತು ಹೆಚ್ಚು ಸಂಪ್ರದಾಯಿಕ ನೇಮಕಾತಿ ತಂತ್ರವನ್ನು ಆಶ್ರಯಿಸುವಂತೆ ಮಾಡುತ್ತದೆ ಎಂಬುದಾಗಿ ಅಭಿಪ್ರಾಯ ಪಡುತ್ತಾರೆ.


    ಸಾಂಕೇತಿಕ ಚಿತ್ರ


    ಅಲ್ಲದೇ ಚಾಟ್‌ಬಾಟ್‌ಗಳಂತಹ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಳ್ಳುವುದರಿಂದ ಉತ್ಪಾದಕತೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಉದ್ಯೋಗಿಗಳ ಕೆಲಸವನ್ನು ಅದು ಕಡಿಮೆ ಮಾಡುತ್ತದೆ. ಅಲ್ಲದೇ ಹೆಚ್ಚು ಸವಾಲಿನ ಕಾರ್ಯಗಳನ್ನು ತೆಗೆದುಕೊಳ್ಳಲು ಅವಕಾಶ ನೀಡುತ್ತದೆ ಎಂಬುದಾಗಿ ಉಜ್ವಲ್‌ ಅಭಿಪ್ರಾಯ ಪಡುತ್ತಾರೆ.


    ಲೇಆಫ್‌ ಯಾವಾಗ ಕೊನೆಗೊಳ್ಳಬಹುದು?


    ಕರ್ಮವಿ ಸಂಸ್ಥಾಪಕ ಮತ್ತು ಸಿಇಒ ಉಜ್ಜಲ್ ಡೆ ಅವರು "2023 ರ ಮೊದಲಾರ್ಧದಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಅನಿಶ್ಚಿತತೆಯು ಕಾಡಲಿದೆ. ಆದರೆ ಈ ವರ್ಷದ ದ್ವಿತೀಯಾರ್ಧದಲ್ಲಿ ಚೇತರಿಕೆಯ ಚಿಹ್ನೆಗಳು ಕಾಣಬಹುದು. 2023 ರ ದ್ವಿತೀಯಾರ್ಧದಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಚೇತರಿಕೆ ನಿರೀಕ್ಷಿಸಲಾಗಿದೆ" ಎಂದು ಉಜ್ವಲ್‌ ಹೇಳುತ್ತಾರೆ.


    "5G ನಂತಹ ಮೂಲಸೌಕರ್ಯ ಅಭಿವೃದ್ಧಿಗಳು ಸ್ಮಾರ್ಟ್ ಸಿಟಿ ಉಪಕ್ರಮಗಳನ್ನು ವೇಗಗೊಳಿಸುತ್ತದೆ. ಇದು ಉತ್ಪಾದನೆ, ಸಾರಿಗೆ, ಆರೋಗ್ಯ ಮತ್ತು ರಿಟೇಲ್‌ ಕ್ಷೇತ್ರಗಳನ್ನು ಪರಿವರ್ತಿಸುತ್ತದೆ.




    ಸ್ವದೇಶಿ ಆರಂಭಿಕ ಪರಿಸರ ವ್ಯವಸ್ಥೆ ಮತ್ತು R&D ಹಬ್‌ಗಳು ಹೊಸ ವೇಗವನ್ನು ಪಡೆಯುತ್ತವೆ. ಎಡ್ಜ್ ಕಂಪ್ಯೂಟಿಂಗ್ AR/VR ನೊಂದಿಗೆ ಡೇಟಾ ಅನಾಲಿಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ ಪರಿಣತಿ ಹೊಂದಿದ ಟೆಕ್ ಪ್ರತಿಭೆಗಳಿಗೆ ಬೇಡಿಕೆಗಳು ಹೆಚ್ಚಾಗುತ್ತವೆ" ಎಂಬುದಾಗಿ ಉಜ್ಜಲ್ ಅಭಿಪ್ರಾಯ ಪಡುತ್ತಾರೆ. ಒಟ್ಟಾರೆ, ಸಾಮೂಹಿಕ ವಜಾಗೊಳಿಸುವಿಕೆಯು ಬಹುಶಃ 2023 ರ ದ್ವಿತೀಯಾರ್ಧದಲ್ಲಿ ಕೊನೆಗೊಳ್ಳಬಹುದು ಎಂಬ ನಿರೀಕ್ಷೆಯು ಟೆಕ್‌ ಉದ್ಯೋಗಿಗಳಲ್ಲಿ ಹೊಸ ಭರವಸೆ ಮೂಡಿಸುತ್ತಿದೆ.

    Published by:Prajwal B
    First published: