ಸದ್ಯ ಜಗತ್ತಿನಾದ್ಯಂತ ಮೆಟಾ (Meta) ಮಾಲೀಕತ್ವದ ಫೇಸ್ ಬುಕ್ (Facebook) ಹಾಗೂ ಸಾಮಾಜಿಕ ಮಾಧ್ಯಮ (Social Media) ದೈತ್ಯ ಟ್ವಿಟ್ಟರ್ (Twitter) ನಿಂದ ಏಕಾಏಕಿ ಉದ್ಯೋಗಿಗಳನ್ನು ವಜಾಗೊಳಿಸಿದ ಬಗ್ಗೆಯೇ ಸುದ್ದಿ. ಮೆಟಾ ತನ್ನ 11 ಸಾವಿರ ಉದ್ಯೋಗಿಗಳನ್ನು ವಜಾ ಗೊಳಿಸಿದರೆ ಟ್ವಿಟ್ಟರ್ ತನ್ನ ಅರ್ಧದಷ್ಟು ಉದ್ಯೋಗಿಗಳನ್ನು ಏಕಾಏಕಿ ಕೆಲಸದಿಂದ ಕಿತ್ತು ಹಾಕಿದೆ. ಆದರೆ ಇದನ್ನು ಊಹೆಯೂ ಮಾಡಿರದ ಉದ್ಯೋಗಿಗಳಿಗೆ ಈ ವಜಾಗೊಳಿಸುವಿಕೆ ದೊಡ್ಡ ಶಾಕ್ ನೀಡಿದೆ. ಬದುಕನ್ನು ಒಂದು ರೀತಿಯಲ್ಲಿ ಪ್ಲಾನ್ ಮಾಡಿಕೊಂಡವರಿಗೆ ಈ ಅನ್ ಪ್ಲಾನ್ಡ್ ಸಾಮೂಹಿಕ ವಜಾಗೊಳಿಸುವಿಕೆ ತೀವ್ರ ಆಘಾತ ನೀಡಿದೆ ಎಂದರೆ ಸುಳ್ಳಾಗೋದಿಲ್ಲ. ಹೀಗೆ ಕೆಲಸದಿಂದ ತೆಗೆಯಲ್ಪಟ್ಟವರಲ್ಲಿ ಒಬ್ಬೊಬ್ಬರದ್ದು ಒಂದೊಂದು ಕಥೆ. ಅದರಲ್ಲಿ ಕೆಲವರು ಹೇಳೋದನ್ನು ಕೇಳಿದ್ರೆ ಹೃದಯ ಕಲಕಿದಂತಾಗುತ್ತೆ.
ಇಂಥದ್ದೇ ಒಂದು ಕಥೆ ಭಾರತೀಯ ಮೂಲದ ಅನ್ನೆಕಾ ಪಟೇಲ್ ಅವರದ್ದು. ಫೇಸ್ ಬುಕ್ ನಲ್ಲಿ ಕಮ್ಯುನಿಕೇಶನ್ ಮ್ಯಾನೇಜರ್ ಆಗಿದ್ದ ಅನ್ನಿಕಾ ಪಟೇಲ್ ಲೇಆಫ್ ಇಮೇಲ್ ಸ್ವೀಕರಿಸಿದ್ದು ಬೆಳಗಿನಜಾವ 3 ಗಂಟೆ ಹೊತ್ತಿಗೆ.
ಅನ್ನೆಕಾ ಪಟೇಲ್ ಅವರ ಲಿಂಕ್ಡ್ಇನ್ ಪೋಸ್ಟ್:
ಅಷ್ಟಕ್ಕೂ ಅನ್ನೆಕಾ ಪಟೇಲ್ ಹೆರಿಗೆ ರಜೆಯಲ್ಲಿದ್ದರು. ತನ್ನ 3 ತಿಂಗಳ ಮಗಳಿಗೆ ಹಾಲುಣಿಸಲು ಬೆಳಗಿನ ಜಾವ ಎಚ್ಚರಗೊಂಡಿದ್ದಾರೆ. ಆ ಸಮಯದಲ್ಲಿ ಅವರಿಗೆ ಕೆಲಸದಿಂದ ವಜಾಗೊಳಿಸಲಾಗಿದೆ ಎಂಬ ಬಗ್ಗೆ ಇಮೇಲ್ ಬಂದಿರುತ್ತದೆ. ಅದನ್ನು ನೋಡುತ್ತಿದ್ದಂತೆಯೇ ನನಗೆ ಹೃದಯವೇ ಮುಳುಗಿದಂತೆ ಭಾಸವಾಯ್ತು ಎಂಬುದಾಗಿ ಅವರು ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ನಿಮ್ಮ ಐಫೋನ್ ಸ್ಲೋ ಆಗಿದ್ಯಾ? ಈ ಸೂಪರ್ ಟ್ರಿಕ್ ಫಾಲೋ ಮಾಡಿ, ಆಮೇಲೆ ಮ್ಯಾಜಿಕ್ ನೋಡಿ!
ಅನ್ನೆಕಾ ಪಟೇಲ್ ಅವರಿಗೆ ಬಂದ ಇಮೇಲ್:
“ಕಂಪನಿ ಗಮನಾರ್ಹ ಉದ್ಯೋಗ ಕಡಿತ ಮಾಡಬಹುದೆಂಬ ಬಗ್ಗೆ ನಾನು ಕೇಳಿದ್ದೆ. ಆದ್ದರಿಂದ ಮಾರ್ಕ್ ಜುಕರ್ಬರ್ಗ್ ರಿಂದ ಇಮೇಲ್ ಅನ್ನು ನಿರೀಕ್ಷಿಸುತ್ತಿದ್ದೆ. ಮಗಳು ಎಮಿಲಿಯಾ ಎದ್ದಾಗ ಆಕೆಗೆ ಹಾಲು ಕುಡಿಸಿ ಶುಶ್ರೂಶೆ ಮಾಡಿ ಮಲಗಿಸಿದೆ. ಆಗ ನನ್ನ ಮ್ಯಾನೇಜರ್ನಿಂದ ನನ್ನನ್ನು ವಜಾಗೊಳಿಸಲಾಗಿದೆ ಎಂಬ ಬಗ್ಗೆ ಸ್ಪಷ್ಟ ಸಂದೇಶ ಬಂದಿತು. ನಾನು ಮುಂಜಾನೆ 4:45ಕ್ಕೆ ಎಮಿಲಿಯಾಳನ್ನು ಮತ್ತೆ ಮಲಗಿಸಿ ಮುಂದೆ ಏನು ಮಾಡಬೇಕೆಂದು ಯೋಚಿಸುತ್ತಾ ಕುಳಿತೆ”.
ಈ ನಿರ್ಧಾರದ ಬಗ್ಗೆ ಅನ್ನೆಕಾ ಪಟೇಲ್ ಅವರ ಅಭಿಪ್ರಾಯ:
“ನಾನು ಒಂಬತ್ತು ವರ್ಷಗಳ ಹಿಂದೆ ಲಂಡನ್ನಿಂದ ಬೇರೆ ಏರಿಯಾಕ್ಕೆ ಹೋದಾಗಿನಿಂದ ಫೇಸ್ಬುಕ್ನಲ್ಲಿ (ಈಗ ಮೆಟಾ) ಕೆಲಸ ಮಾಡುವುದು ನನ್ನ ಕನಸಾಗಿತ್ತು. ಫೇಸ್ಬುಕ್ ಗುಂಪುಗಳ ಉತ್ಪನ್ನದಲ್ಲಿ 2.5 ವರ್ಷಗಳಿಂದ ಕೆಲಸ ಮಾಡಿದೆ. ಇದು ನನ್ನ ಜೀವನದ ಅತ್ಯಂತ ವಿಶೇಷ ದಿನಗಳು ಎಂದು ಹೇಳಿರುವ ಪಟೇಲ್ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ”.
ಹಾಗಾದರೆ, ಮುಂದೇನು ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ನನ್ನ ಹೆರಿಗೆ ರಜೆ ಫೆಬ್ರವರಿಯಲ್ಲಿ ಕೊನೆಗೊಳ್ಳಲಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ನಾನು ನನ್ನ ಸಮಯವನ್ನು ನನ್ನ ಮಗಳಿಗೆ ಮೀಸಲಿಡುವುದನ್ನು ಮುಂದುವರಿಸಲಿದ್ದೇನೆ ಮತ್ತು ಹೊಸ ವರ್ಷದಲ್ಲಿ ಮತ್ತೆ ಕೆಲಸ ಹುಡುಕುವುದಾಗಿ ಅವರು ಹೇಳಿದ್ದಾರೆ.
ಕೆಲಸಕ್ಕೆ ಸೇರಿದ 2 ದಿನಕ್ಕೇ ತೆಗೆದು ಹಾಕಿತು ಕಂಪನಿ!
ಇಂಥದ್ದೆ ಕಥೆ ಇನ್ನೊಬ್ಬ ಉದ್ಯೋಗಿ ಹಿಮಾಂಶು ವಿ ಅವರದ್ದು. ಅವರು ತಮ್ಮ ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ತಾನು ಹೊಸ ಮೆಟಾ ಕೆಲಸಕ್ಕಾಗಿ ಭಾರತದಿಂದ ಕೆನಡಾಕ್ಕೆ ತೆರಳಿದ್ದೇನೆ. ಸೇರಿದ ಎರಡು ದಿನಗಳ ನಂತರ ನನ್ನ ಪ್ರಯಾಣವು ಕೊನೆಗೊಂಡಿತು. ಏಕೆಂದರೆ ನಾನು ಭಾರಿ ವಜಾಗೊಳಿಸುವಿಕೆಯಿಂದ ಪ್ರಭಾವಿತನಾಗಿದ್ದೇನೆ. ನನ್ನಂತೆಯೇ ಅನೇಕ ಮಂದಿ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂಬುದಾಗಿ ಅವರು ಬರೆದಿದ್ದಾರೆ.
ಇನ್ನು, ಮೆಟಾ ಸಿಬ್ಬಂದಿಯನ್ನು ಶೇಕಡಾ 13 ರಷ್ಟು ಕಡಿತಗೊಳಿಸಿದರೆ, ಮತ್ತೊಂದು ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟರ್, ಹೊಸ ಮಾಲೀಕ ಎಲೋನ್ ಮಸ್ಕ್ ಅಡಿಯಲ್ಲಿ ತನ್ನ ಉದ್ಯೋಗಿಗಳನ್ನು ಅರ್ಧದಷ್ಟು ಕಡಿತಗೊಳಿಸಿದೆ. ನಷ್ಟವನ್ನು ತಡೆಯಲು ಈ ಕ್ರಮ ಅಗತ್ಯ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ