WhatsApp: ಆ್ಯಂಡ್ರಾಯ್ಡ್, ಐಓಎಸ್‌ಗಳ ಎಂಡ್-​ ಟು-ಎಂಡ್​​ ಎನ್​ಕ್ರಿಪ್ಟ್ ಬ್ಯಾಕ್ ಅಪ್​ಗಳಿಗೆ ವಾಟ್ಸ್​ಆ್ಯಪ್ ಸಪೋರ್ಟ್​​​

WhatsApp: ಕೆಲವು ವಾರಗಳ ಬಳಿಕ ವಾಟ್ಸಾಆ್ಯಪ್ ತನ್ನ ಬಳಕೆದಾರರಿಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್‌ಗಳು ಲಭ್ಯವಿರುತ್ತವೆ ಎಂದು ಘೋಷಿಸಿತು. ಆ ವೈಶಿಷ್ಟ್ಯವು ಈಗಾಗಲೇ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹೊಸ ಅಪ್‌ಡೇಟ್‌ನೊಂದಿಗೆ ಐಓಎಸ್ ಮತ್ತು ಆ್ಯಂಡ್ರಾಯ್ಡ್ ಸಾಧನಗಳಿಗೆ ಬಿಡುಗಡೆ ಮಾಡಲಾಗುವುದು.

WhatsApp

WhatsApp

  • Share this:
    WhatsApp end-to-end encryption: ಎಂಡ್​ -ಟು-ಎಂಡ್ ಎನ್‌ಕ್ರಿಪ್ಶನ್ ಮತ್ತು ಭದ್ರತೆಯೂ ವಾಟ್ಸಾಆ್ಯಪ್​ನ ಯುಎಸ್​​ಪಿಗಳಲ್ಲಿ ಒಂದಾಗಿದೆ. ಆದರೆ ಈ ವರ್ಷದ ಆರಂಭದಲ್ಲಿ ಗೂಗಲ್ ಡ್ರೈವ್ (Google Drive) ಅಥವಾ ಐಕ್ಲೌಡ್‌ನೊಂದಿಗೆ (iCloud)  ವಾಟ್ಸಾಆ್ಯಪ್‌ನ ಏಕೀಕರಣವನ್ನು ಇತ್ತೀಚೆಗೆ ಟೀಕಿಸಲಾಗಿದೆ. ಏಕೆಂದರೆ ಈ ಕ್ಲೌಡ್ ಆಧಾರಿತ ಪ್ಲಾಟ್‌ಫಾರ್ಮ್‌ಗಳಲ್ಲಿ ಇನ್‌ಸ್ಟಂಟ್ ಮೆಸೇಜಿಂಗ್ ಆ್ಯಪ್‌ ತೆಗೆದುಕೊಳ್ಳುವ ಬ್ಯಾಕಪ್‌ಗಳು ಚಾಟ್‌ಗಳಂತೆಯೇ ಎನ್‌ಕ್ರಿಪ್ಶನ್ (encryption) ರಕ್ಷಣೆಯನ್ನು ಹೊಂದಿರುವುದಿಲ್ಲ.

    ಕೆಲವು ವಾರಗಳ ಬಳಿಕ ವಾಟ್ಸಾಆ್ಯಪ್ ತನ್ನ ಬಳಕೆದಾರರಿಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್‌ಗಳು ಲಭ್ಯವಿರುತ್ತವೆ ಎಂದು ಘೋಷಿಸಿತು. ಆ ವೈಶಿಷ್ಟ್ಯವು ಈಗಾಗಲೇ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹೊಸ ಅಪ್‌ಡೇಟ್‌ನೊಂದಿಗೆ ಐಓಎಸ್ ಮತ್ತು ಆ್ಯಂಡ್ರಾಯ್ಡ್ ಸಾಧನಗಳಿಗೆ ಬಿಡುಗಡೆ ಮಾಡಲಾಗುವುದು. ನಿಜವಾದ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಮೆಸೇಜಿಂಗ್ ಅನುಭವವನ್ನು ನೀಡುವ ಅಂತಿಮ ಹಂತ ಇದು" ಎಂದು ವಾಟ್ಸಾಆ್ಯಪ್ ಹೇಳುತ್ತದೆ.

    "ಎಂಡ್​ಕ್ರಿಪ್ಟ್​ ಮಾಡಿದ ಬ್ಯಾಕಪ್ ಸೇವೆಗಳೊಂದಿಗೆ ವಾಟ್ಸ್‌ಆ್ಯಪ್‌ನ ಸ್ಕೇಲ್‌ನಲ್ಲಿ ಬೇರೆ ಯಾವುದೇ ಮೆಸೇಜಿಂಗ್ ಸೇವೆಯು ವಾಟ್ಸ್​​ ಆ್ಯಪ್​​ನಂತೆ ಕೆಲಸ ಮಾಡುವುದಿಲ್ಲ. ಜನರ ಸಂದೇಶಗಳನ್ನು ಕಳುಹಿಸುವುದು, ಕ್ಲೌಡ್‌ನಲ್ಲಿ ರವಾನಿಸಿ ಸ್ವೀಕರಿಸುವ ಮತ್ತು ಸಂಗ್ರಹಿಸುವವರೆಗೆ ಯಾರು ನೀಡದ ಭದ್ರತೆಯನ್ನು ನೀಡುತ್ತದೆ ಎಂದು ಸಂಸ್ಥೆಯು ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿಕೊಂಡಿದೆ.

    ಹಲವು ವರ್ಷಗಳಿಂದ, ನಾವು, ಗ್ರಾಹಕರು ತಮ್ಮ ವಾಟ್ಸಾಆ್ಯಪ್ ಸಂಭಾಷಣೆಗಳನ್ನು ಬ್ಯಾಕಪ್ ಮಾಡಲು ಅವಕಾಶ ನೀಡಿದ್ದೇವೆ. ಹಾಗಾಗಿ ಅವರು ತಮ್ಮ ಫೋನ್ ಕಳೆದುಕೊಂಡರೆ ಅಥವಾ ಫೋನ್ ವರ್ಗಾಯಿಸಿದರೆ ಅವುಗಳನ್ನು ಮತ್ತೆ ಪಡೆದುಕೊಳ್ಳಬಹುದು. ಅದನ್ನು ಬಯಸುವವರಿಗೆ ಭದ್ರತೆಯ ಹೆಚ್ಚುವರಿ ಮಟ್ಟವಾಗಿ, ನಾವು ಈಗ ಐಒಎಸ್ ಮತ್ತು ಆ್ಯಂಡ್ರಾಯ್ಡ್ ಬಳಕೆದಾರರಿಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್ ಅನ್ನು ಸ್ಥಾಪಿಸುವ ಆಯ್ಕೆಯನ್ನು ಹೊರತರುತ್ತಿದ್ದೇವೆ.

    Read Also: Feature phones: ದೀಪಾವಳಿ ಹಬ್ಬಕ್ಕೆ ಹೊಸ ಫೋನ್ ಖರೀದಿಸುವವರಿಗೆ ಇಲ್ಲಿದೆ ಅತ್ಯುತ್ತಮ ಫೀಚರ್ ಫೋನ್‌ಗಳು

    ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಬಳಸಿ ಯಾರಾದರೂ ತಮ್ಮ ಸಂಭಾಷಣೆಯ ಇತಿಹಾಸವನ್ನು ಬ್ಯಾಕಪ್ ಮಾಡಲು ನಿರ್ಧರಿಸಿದರೆ, ಅವರು ಮಾತ್ರ ಅದಕ್ಕೆ ಪ್ರವೇಶವನ್ನು ಹೊಂದಿರುತ್ತಾರೆ. ವಾಟ್ಸಾಆ್ಯಪ್ ಕೂಡ ಯಾರಿಗೂ ಅದನ್ನು ಡೀಕ್ರಿಪ್ಟ್ ಮಾಡಲು ಸಾಧ್ಯವಾಗುವುದಿಲ್ಲ. "ವಾಟ್ಸಾಆ್ಯಪ್ ಅಥವಾ ಬ್ಯಾಕಪ್ ಸೇವಾ ಪೂರೈಕೆದಾರರು (ಆಪಲ್ ನಂತಹ) ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಕೀ ಅಥವಾ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್‌ಗೆ ಪ್ರವೇಶವನ್ನು ಹೊಂದಿರುವುದಿಲ್ಲ" ಎಂದು ವರದಿ ಹೇಳುತ್ತದೆ.

    Read Also: Facebook: ಆಂತರಿಕ ಗುಂಪುಗಳನ್ನು ಖಾಸಗಿಯನ್ನಾಗಿಸಲು ನಿರ್ಧರಿಸಿದ ಫೇಸ್‌ಬುಕ್.. ಇದರ ಹಿಂದಿರುವ ಕಾರಣವೇನು ಗೊತ್ತೇ?

    ಪಾಸ್‌ವರ್ಡ್ ಅಥವಾ 64-ಅಂಕಿಯ ಎನ್‌ಕ್ರಿಪ್ಶನ್ ಕೀ ಬಳಸಿ ನಿಮ್ಮ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್ ಅನ್ನು ನೀವು ಈಗ ರಕ್ಷಿಸಬಹುದು. "ನಿಮ್ಮ ಬ್ಯಾಕಪ್‌ಗಳನ್ನು ಅನ್‌ಲಾಕ್ ಮಾಡಲು ಅಗತ್ಯವಿರುವ ಕೀ ಅನ್ನು ವಾಟ್ಸಾಆ್ಯಪ್ ಅಥವಾ ನಿಮ್ಮ ಬ್ಯಾಕಪ್ ಸೇವಾ ಪೂರೈಕೆದಾರರಿಗೆ ನೋಡಲು ಅಥವಾ ಪ್ರವೇಶಿಸಲು ಸಾಧ್ಯವಾಗುವುದಿಲ್ಲ" ಎಂದು ಕಂಪನಿ ಎಚ್ಚರಿಸಿದೆ.

    ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್ ಹೇಗೆ ಮಾಡುವುದು?

    ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್ ಮಾಡಲು ಬಳಕೆದಾರರು ಮೊದಲು ವಾಟ್ಸಾಆ್ಯಪ್‌ನ ಇತ್ತೀಚಿನ ಆವೃತ್ತಿಯನ್ನು ಬಳಸುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು. ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್ ಮಾಡಲು, ಸೆಟ್ಟಿಂಗ್‌ಗಳು> ಚಾಟ್ಸ್> ಚಾಟ್ ಬ್ಯಾಕಪ್‌ಗಳು> ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್‌ಗೆ ಹೋಗಿ ಮತ್ತು ಪ್ರಾಂಪ್ಟ್‌ಗಳನ್ನು ಅನುಸರಿಸಿ ರಚಿಸಬಹುದಾಗಿದೆ.
    First published: