WhatsApp Fathers Day Special Stickers: ಅಪ್ಪನಿಗೆ ಶುಭಾಶಯ ತಿಳಿಸಲು ‘ಪಪ್ಪಾ ಮೆರಾ ಪಪ್ಪಾ‘ ಸ್ಟಿಕ್ಕರ್ ಡೌನ್ಲೋಡ್ ಮಾಡಿ
Fathers Day 2021: ಅಪ್ಪಂದಿರ ವಿಶೇಷ ದಿನದಂದು ವ್ಯಾಟ್ಸ್ಆ್ಯಪ್ ಪರಿಚಯಿಸಿರುವ ಈ ಸ್ಟಿಕ್ಕರ್ ಅನ್ನು ಭಾರತ ಮತ್ತು ಇಂಡೋನೋಷ್ಯಾದಲ್ಲಿ ಮಾತ್ರ ಪರಿಚಯಿಸಲಾಗಿತ್ತು. ಆದರೀಗ ಎಲ್ಲರಿಗೂ ಬಳಕೆಗೆ ಸಿಗುತ್ತಿದೆ.
ವಿಶ್ವ ಅಪ್ಪಂದಿರ ದಿನದ ವಿಶೇಷ ದಿನವಾದ ಇಂದು ಶುಭಕೋರಲು ಫೇಸ್ಬುಕ್ ಒಡೆತನದ ವ್ಯಾಟ್ಸ್ಆ್ಯಪ್ ಹೊಸ ಸ್ಟಿಕ್ಕರ್ ಅನ್ನು ಪರಿಚಯಿಸಿದೆ. ‘ಪಪ್ಪಾ ಮೆರಾ ಪಪ್ಪಾ’ ಹೆಸರಿನಲ್ಲಿ ಸ್ಟಿಕ್ಕರ್ ಅನ್ನು ಪರಿಚಯಿಸಿದ್ದು, ಇದು ಬಾಲಿವುಡ್ನ ಜನಪ್ರಿಯ ಹಾಡಿನ ಹೆಸರಾಗಿದೆ.
ಅಂದಹಾಗೆಯೇ ಅಪ್ಪಂದಿರ ವಿಶೇಷ ದಿನದಂದು ವ್ಯಾಟ್ಸ್ಆ್ಯಪ್ ಪರಿಚಯಿಸಿರುವ ಈ ಸ್ಟಿಕ್ಕರ್ ಅನ್ನು ಭಾರತ ಮತ್ತು ಇಂಡೋನೋಷ್ಯಾದಲ್ಲಿ ಮಾತ್ರ ಪರಿಚಯಿಸಲಾಗಿತ್ತು. ಆದರೀಗ ಎಲ್ಲರಿಗೂ ಬಳಕೆಗೆ ಸಿಗುತ್ತಿದೆ. ಪಪ್ಪಾ ಮೇರಾ ಪಪ್ಪಾ ಸ್ಟಿಕ್ಕರ್ ಅನ್ನು ಬಳಸುವ ಮೂಲಕ ತಂದೆಗೆ ವಿಶೇಷವಾಗಿ ಶುಭಾಶಯ ಕೋರಬಹುದಾಗಿದೆ.
‘ಪಪ್ಪಾ ಮೇರಾ ಪಪ್ಪಾ’ ಸ್ಟಿಕ್ಕರ್ ಸಂಗ್ರಹದಲ್ಲಿ ಕನ್ನಡಕ ಮತ್ತು ಮೀಸೆ ಹೊಂದಿರುವ ಕಂದು ಬಣ್ಣದ ಮನುಷ್ಯನ ಚಿತ್ರ. ಮಗುವನ್ನು ತಬ್ಬಿಕೊಂಡ, ಅವರೊಂದಿಗೆ ಗಾಳಿಪಟ ಹಾರಿಸುವ, ಸೂಪರ್ ಹೀರೋ ತಂದೆಯ ಸ್ಟಿಕ್ಕರ್ ಅನ್ನು ರಚಿಸಲಾಗಿದೆ. ವಾಟ್ಸ್ಆ್ಯಪ್ ಬಳಕೆದಾರರು ತಮ್ಮ ಅಪ್ಲಿಕೇಶನ್ ಅನ್ನು ನವೀಕರಿಸುವ ಮೂಲಕ ಪಡೆಯಬಹುದಾಗಿದೆ. ಐಒಎಸ್ ಮತ್ತು ಆ್ಯಂಡ್ರಾಯ್ಡ್ ಬಳಕೆದಾರರಿಗೆ ಸ್ಟಿಕ್ಕರ್ ಪ್ಯಾಕ್ ಸಿಗಲಿದೆ.
ಸ್ಟಿಕ್ಕರ್ ಡೌನ್ಲೋಡ್ ಬಳಸುವುದು ಹೇಗೆ?
-ಬಳಕೆದಾರರು ಪ್ರತ್ಯೇಕ ಚಾಟ್ ವಿಂಡೋ ಅಥವಾ ಗ್ರೂಪ್ ಚಾಟ್ ವಿಂಡೋ ತೆರೆಯಬೇಕು
- ನಂತರ ಎಮೋಜಿ/ ಸ್ಟಿಕ್ಕರ್ಗಳ ಬಟನ್ ಟ್ಯಾಪ್ ಮಾಡಬೇಕು
-ಇದಾದ ಬಳಿಕ ಸ್ಟಕ್ಕರ್ಗಳನ್ನು ಆರಿಸಿರಿ, ಹೊಸ ಸ್ಟಿಕ್ಕರ್ ವಿಭಾಗವನ್ನು ಬ್ರೌಸ್ ಮಾಡಲು ಮೆನುವಿನಲ್ಲಿ + ಐಕಾನ್ ಟ್ಯಾಪ್ ಮಾಡಿ
- ನಂತರ ಇತ್ತೀಚಿನ ಸ್ಟಿಕ್ಕರ್ ಪ್ಯಾಕ್ ವಿಭಾಗದ ಮೇಲ್ಭಾಗದಲ್ಲಿ ಕಾಣಿಸುತ್ತದೆ.
- ಡೌನ್ಲೋಡ್ ಮೇಲೆ ಟ್ಯಾಪ್ ಮಾಡಿ.
Published by:Harshith AS
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ