Whatsapp ಅಪ್ಡೇಟ್​: ಇನ್ಮುಂದೆ ಡಿಲೀಟ್​ ಆಗುವುದಿಲ್ಲ ನೀವು ಕಳುಹಿಸಿದ ಮೆಸೇಜ್​!: ಬಹುದೊಡ್ಡ ಬದಲಾವಣೆ

news18
Updated:October 15, 2018, 11:54 AM IST
Whatsapp ಅಪ್ಡೇಟ್​: ಇನ್ಮುಂದೆ ಡಿಲೀಟ್​ ಆಗುವುದಿಲ್ಲ ನೀವು ಕಳುಹಿಸಿದ ಮೆಸೇಜ್​!: ಬಹುದೊಡ್ಡ ಬದಲಾವಣೆ
  • Advertorial
  • Last Updated: October 15, 2018, 11:54 AM IST
  • Share this:
ನ್ಯೂಸ್​ 18 ಕನ್ನಡ

Whatsappನ ಪಾಪ್ಯುಲರ್​ ಫೀಚರ್​ ಎಂದೇ ಹೇಳಲಾಗುತ್ತಿದ್ದ ‘Delete for Everyone’ ನಲ್ಲಿ ಬಹುದೊಡ್ಡ ಬದಲಾವಣೆ ಮಾಡಲಾಗಿದೆ. ಈ ಫೀಚರ್​ನಲ್ಲಿ ವ್ಯಕ್ತಿಯೊಬ್ಬ ತಾನು ಕಳುಹಿಸಿದ್ದ ಮೆಸೇಜ್​ನ್ನು 1 ಗಂಟೆ, 8 ನಿಮಿಷ ಹಾಗೂ 16 ಸೆಕೆಂಡ್​ನೊಳಗೆ ಡಿಲೀಟ್​ ಮಾಡಬಹುದಿತ್ತು. ಇದರಿಂದಾಗಿ ಮೆಸೇಜ್​ ಕಳುಹಿಸಿದಾತ(Sender) ಹಾಗೂ ಮೆಸೇಜ್​ ಪಡೆದಾ(Receiver) ಇಬ್ಬರ ಮೊಬೈಲ್​ನಲ್ಲೂ ಆ ಮೆಸೇಜ್​ ಡಿಲೀಟ್​ ಆಗುತ್ತಿತ್ತು. ಈ ಹೊಸ ಅಪ್ಡೇಟ್​ನಲ್ಲಿ Whatsapp ಕಂಪೆನಿಯು Recipient limit ನಲ್ಲಿ ಬದಲಾವಣೆ ತಂದಿದೆ.

Recipient limit ಅಪ್ಡೇಟ್​ ಎಂದರೆ ಒಂದು ವೇಳೆ ನೀವು ಕಳುಹಿಸಿದ ಮೆಸೇಜ್​ ಡಿಲೀಟ್​ ಮಾಡುತ್ತೀರಿ ಎಂದಿಟ್ಟುಕೊಳ್ಳೋಣ. ಆದರೆ ನೀವು ಮೆಸೇಜ್​ ಕಳುಹಿಸಿದ ವ್ಯಕ್ತಿಗೆ ಬರೋಬ್ಬರಿ 13 ಗಂಟೆ, 8 ನಿಮಿಷ 16 ಸೆಕೆಂಟ್​ವರೆಗೂ ನೀವು ಮೆಸೇಜ್​ ಡಿಲೀಟ್​ ಮಾಡಿದ್ದೀರಿ ಎಂಬ ಸಂದೇಶ ಸಿಗುವುದಿಲ್ಲ. ಅಂದರೆ ಮೆಸೇಜ್​ ಡಿಲೀಟ್​ ಆಗುವುದಿಲ್ಲ ಎಂದಾಯ್ತು.

ಇದನ್ನೂ ಓದಿ: Whatsapp ಬಳಕೆದಾರರಿಗೆ ಕಹಿ ಸುದ್ದಿ: ತಲೆನೋವಾಗಲಿದೆ ಈ ನೂತನ ಪೀಚರ್​!

WABetaInfo ಮಾಡಿರುವ ಟ್ವೀಟ್​ ಅನ್ವಯ ರಿವೋಕ್​ ಮೆಸೇಜ್​ನ್ನು ದುರ್ಬಳಕೆ ಮಾಡಿ ವಾರ, ತಿಂಗಳು ಹಾಗೂ ವರ್ಷಗಳ ಹಿಂದೆ ಕಳುಹಿಸಿದ ಮೆಸೇಜ್​ ಡಿಲೀಟ್​ ಮಾಡುವವರನ್ನು ತಡೆಯಲು ಈ ಅಪ್ಡೇಟ್​ ಮಾಡಲಾಗಿದೆ ಎಂದು ತಿಳಿದು ಬಂದಿದೆ.




ಒಂದು ವೇಳೆ ಬಳಕೆದಾರರು 13 ಗಂಟೆ, 8 ನಿಮಿಷ 16 ಸೆಕೆಂಡ್​ಗಳೊಳಗೆ ನಿಮ್ಮ ಮೆಸೇಜ್​ ಪಡೆದುಕೊಂಡರೆ, ಈಗಲೂ 1 ಗಂಟೆ, 8 ನಿಮಿಷ 16 ಗಳಲ್ಲಿ ನೀವು ಕಳುಹಿಸಿದ ಮೆಸೇಜ್​ ಡಿಲೀಟ್​ ಮಾಡಬಹುದಾಗಿದೆ.



ಇದನ್ನು ಹೊರತುಪಡಿಸಿ Whatsapp ಇನ್ನೂ ನೂತನ 5 ಅಪ್ಡೇಟ್​ಗಳನ್ನು ಪರಿಚಯಿಸುತ್ತಿದೆ. ಇವುಗಳಲ್ಲಿ Swipe to Reply, WhatsApp ads for Status, WhatsApp ಸ್ಟಿಕರ್​ ಪ್ಯಾಕ್​ ಹಾಗೂ WhatsApp inline image ನಂತಹ ಫೀಚರ್​ ಒಳಗೊಂಡಿದೆ.

 
First published:October 15, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ