ಅಪ್​ಡೇಟ್ ಆಗಲಿದೆ ವಾಟ್ಸಪ್; ನಿಮ್ಮ ಹಳೆಯ ಸಂದೇಶ, ವಿಡಿಯೋಗಳನ್ನು ಸೇವ್​ ಮಾಡಿಕೊಳ್ಳಿ

Ganesh Nachikethu
Updated:August 20, 2018, 1:01 PM IST
ಅಪ್​ಡೇಟ್ ಆಗಲಿದೆ ವಾಟ್ಸಪ್; ನಿಮ್ಮ ಹಳೆಯ ಸಂದೇಶ, ವಿಡಿಯೋಗಳನ್ನು ಸೇವ್​ ಮಾಡಿಕೊಳ್ಳಿ
Ganesh Nachikethu
Updated: August 20, 2018, 1:01 PM IST


ನ್ಯೂಸ್​-18 ಕನ್ನಡ

ಬೆಂಗಳೂರು(ಆಗಸ್ಟ್​.20): ನಿಮ್ಮ ವಾಟ್ಸಪ್​ನಲ್ಲಿ ಇರುವ ಸಂದೇಶಗಳು ಹಾಗೂ ವಿಡಿಯೋಗಳನ್ನು ಆದಷ್ಟು ಶೀಘ್ರ ಸೇವ್​ ಮಾಡಿಕೊಳ್ಳಿ. ಏಕೆಂದರೆ, ವಾಟ್ಸಪ್​ನ ನೂತನ ವರ್ಷನ್ ನಿಮ್ಮ ವಾಟ್ಸಪ್​ನಲ್ಲಿರುವ ಎಲ್ಲ ಸಂದೇಶ, ಡಾಟಾಗಳನ್ನು ಡಿಲೀಟ್​ ಮಾಡಲಿದೆ.

ಫೇಸ್​ಬುಕ್​ ಒಡೆತನದ ವಾಟ್ಸಪ್​ ಕೇವಲ ಐದು ಜನರಿಗೆ ಮಾತ್ರ ಸಂದೇಶವನ್ನು ಫಾರ್ವಾರ್ಡ್​ ಮಾಡುವ ಫೀಚರ್​ ತಂದ ಬೆನ್ನಲ್ಲೇ ಮತ್ತೊಂದು ಹೊಸ ಫೀಚರ್​ ಅಪಡೇಟ್​​ನೊಂದಿಗೆ ಹೊರ ಬರುತ್ತಿದೆ. ಮಂದಿನ ವಾಟ್ಸಪ್​ ಅಪ್​ಡೇಟ್​ ವರ್ಷನ್ ಭಿನ್ನ ಮಾದರಿಯಲ್ಲಿದ್ದು, ಒಂದು ವರ್ಷದ ಹಿಂದಿನ ಹಳೆಯ ಡಾಟಾ ಅಳಿಸಿ ಹಾಕಲಿದೆ ಎನ್ನಲಾಗಿದೆ.

ನಮ್ಮ ವೈಯಕ್ತಿಕ ಡಾಟಾ ಸುರಕ್ಷಿತವಾಗಿರಿಸಲು ವಾಟ್ಸಪ್​ ಒಳ್ಳೆಯ ಉಪಕರವೆಂದೇ ತಜ್ಞರು ಹೇಳುತ್ತಿದ್ದರು. ಅಲ್ಲದೇ ಕೊನೆಯವರೆಗೂ ನಮ್ಮ ಪರ್ಸನಲ್​ ಡಾಟಾ, ವಿಡಿಯೋಮತ್ತು ಪೋಟೋಸ್, ಮೆಸೇಜ್​ಗಳನ್ನು​​ ವಾಟ್ಸಪ್​ ಸಂಸ್ಥೆ ಭದ್ರವಾಗಿ ಉಳಿಸಿಕೊಳ್ಳುತ್ತದೆ ಎನ್ನಲಾಗಿತ್ತು.

ಆದರೆ, ಸದ್ಯ ವಾಟ್ಸಪ್​ ನೂತನವಾಗಿ ಅಪ್​ಟೇಟ್​ ಆಗುತ್ತಿದೆ. ಮೊಬೈಲ್​ನಲ್ಲಿ ಡೇಟಾ ಸ್ಟೋರ್​ ಆಗುವ ಬದಲಿಗೆ, ಗೂಗಲ್​ ಡ್ರೈವ್​ನಲ್ಲಿ ಸ್ಟೋರ್​ ಆಗಲಿದೆ.​ ಗೂಗಲ್​ ಡ್ರೈವ್​ನಲ್ಲಿ ಸ್ಟೋರ್​ ಆಗಲಿರುವ ಡಾಟಾಗೆ ಮಿತಿಯಿಲ್ಲ. ಆದರೆ ಒಂದು ವರ್ಷಕ್ಕಿಂತ ಹೆಚ್ಚುಕಾಲ ನಮ್ಮ ಡಾಟಾ ಉಳಿಯುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಹೀಗಾಗಿ, ಅಧಿಕೃತವಾಗಿ ನಿಮ್ಮ ಹೊಸ ಅಪ್​ಡೇಟ್​ ವರ್ಶನ್​ ಕಾರ್ಯ ನವೆಂಬರ್​ 12ಕ್ಕೆ (2018) ಜಾರಿಯಾಗಲಿದ್ದು, ಈ ಫೀಚರ್​ ಎಲ್ಲಾ ವಾಟ್ಸಪ್​ ಬಳಕೆದಾರರಿಗೂ ಅನ್ವಯವಾಗಲಿದೆ. ಗೂಗಲ್​ ಡ್ರೈವ್​ನಲ್ಲಿ ಡಾಟಾ ಒಂದು ವರ್ಷಕ್ಕಿಂತ ಹೆಚ್ಚುಕಾಲ ಉಳಿಯದ ಕಾರಣ ಕೂಡಲೇ ನಿಮ್ಮ ವಾಟ್ಸಪ್​ ಹಳೆ ಡಾಟಾ ಬ್ಯಾಕಪ್​ ಮಾಡಿಕೊಳ್ಳಿ ಎಂದು ಹೇಳಲಾಗಿದೆ.
Loading...

ಬ್ಯಾಕಪ್ ಹೇಗೆ?: ನಿಮ್ಮ ಹಳೆಯ ಡಾಟಾ ಬೇಕಾದಲ್ಲಿ ಅವುಗಳ ಬ್ಯಾಕಪ್ ಇರಿಸಿಕೊಳ್ಳಬೇಕಾಗುತ್ತದೆ. ವಾಸ್ತವವಾಗಿ ಸ್ವಯಂಚಾಲಿತವಾಗಿ ಅದು ಫೋನ್‌ನಲ್ಲೇ ಬ್ಯಾಕಪ್ ಆಗುತ್ತದೆ. ಫೋನ್‌ನಲ್ಲಿ ಮೆಮೊರಿ ಕಡಿಮೆ ಇದೆ ಎಂದಾದರೆ, ಆನ್‌ಲೈನ್‌ನಲ್ಲಿ ಗೂಗಲ್ ಡ್ರೈವ್‌ಗೆ ಬ್ಯಾಕಪ್ ಇಟ್ಟುಕೊಳ್ಳುವ ವ್ಯವಸ್ಥೆ ಇದೆ.

ವಾಟ್ಸಪ್‌ನ ಸೆಟ್ಟಿಂಗ್ಸ್‌ಗೆ ಹೋಗಿ, Chats > Chat backup > Backup ಅಂತ ಕ್ಲಿಕ್ ಮಾಡಿ. ಗೂಗಲ್ ಡ್ರೈವ್ ಆಯ್ಕೆ ಮಾಡಿಕೊಂಡು, ಜಿಮೇಲ್ (ವಾಟ್ಸಪ್ ಬ್ಯಾಕಪ್‌ಗಾಗಿಯೇ ಪ್ರತ್ಯೇಕ ಜಿಮೇಲ್ ಖಾತೆ ತೆರೆದರೆ, ಹೆಚ್ಚು ಫೈಲುಗಳನ್ನು ಗೂಗಲ್ ಡ್ರೈವ್ ಎಂಬ ಆನ್‌ಲೈನ್ ಜಾಗದಲ್ಲಿ ಉಳಿಸಿಕೊಳ್ಳಬಹುದು) ಮೂಲಕ ಲಾಗಿನ್ ಆದರೆ, ಬ್ಯಾಕಪ್ ಇರಿಸಿಕೊಳ್ಳಬಹುದು.

First published:August 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...