ಫಾರ್ವರ್ಡ್​ ಮೆಸೇಜ್​ನ್ನು ಕಂಡುಹಿಡಿಯಲು ವಾಟ್ಸಾಪ್​ನಿಂದ ಹೊಸ ಆಯ್ಕೆ

news18
Updated:June 9, 2018, 2:56 PM IST
ಫಾರ್ವರ್ಡ್​ ಮೆಸೇಜ್​ನ್ನು ಕಂಡುಹಿಡಿಯಲು ವಾಟ್ಸಾಪ್​ನಿಂದ ಹೊಸ ಆಯ್ಕೆ
Men pose with smartphones in front of displayed Whatsapp logo in this illustration September 14, 2017. REUTERS/Dado Ruvic
news18
Updated: June 9, 2018, 2:56 PM IST
ನವದೆಹಲಿ: ವರ್ಷಾರಂಭದಲ್ಲೇ ಮುಂದಿನ ದಿನಗಳಲ್ಲಿ ಮಹತ್ತರ ಬದಲಾವಣೆಯನ್ನು ನಿರೀಕ್ಷಿಸಿ ಎಂದು ಹೇಳಿದ್ದ ಫೇಸ್​ಬುಕ್​ ಒಡೆತನದ ವಾಟ್ಸಾಪ್​ ಇದೀಗ ನಕಲಿ ಸುದ್ದಿಗಳಿಗೆ ಬ್ರೆಕ್​ ಹಾಕಲು ಮುಂದಾಗಿದ್ದು, ಗುಂಪಾಗಿ ಫಾರ್ವರ್ಡ್​​ ಮಾಡುವ ಮೆಸೇಜ್​ಗಳಿಗೆ ಫಾರ್ವರ್ಡೆ​ಡ್​ ಎಂಬ ಹೊಸ ಲೇಬಲ್​ ಅಂಟಿಸಲು ಮುಂದಾಗಿದೆ.

ಪ್ರಸಕ್ತ ವಾಟ್ಸಾಪ್​ ಬೀಟಾ ವರ್ಶನ್​ (2.18.179)ನಲ್ಲಿ ಈ ಹೊಸ ಅಪ್​ಡೇಟ್​ ನೀಡಲಾಗಿದ್ದು, ಈ ಅಪ್​ಡೇಟ್​ನಲ್ಲಿ ವಾಟ್ಸಾಪ್​ ಬಳಕೇದಾರರು ಯಾವುದೇ ಮೆಸೇಜ್​ನನ್ನು ಫಾರ್ವರ್ಡ್​ ಮಾಡಿದರೆ ಆ ಮೆಸೇಜ್​ಗಳ ಮೇಲೆ ಫಾರ್ವರ್ಡ್​ ಎಂಬ ಲೇಬಲ್​ ಕಾಣಿಸಿಕೊಳ್ಳುತ್ತದೆ. ಈ ಲೇಬಲ್​ ಕಳುಹಿಸಿದ ಸಂದೇಶದ ಬಲಗಡೆ ಕಾಣಿಸುತ್ತದೆ.

2018ರ ಆರಂಭದಿಂದಲೇ ವಾಟ್ಸಾಪ್​ ಬಳಕೇದಾರರಿಗೆ ಹೊಸ ಹಾಗೂ ವಿಭಿನ್ನ ಫೀಚರ್​ಗಳನ್ನು ನೀಡುತ್ತಲೇ ಬಂದಿದೆ, ಗ್ರೂಪ್​ ವಿಡಿಯೋ ಕಾಲಿಂಗ್​, ವಾಟ್ಸಾಪ್​ ಪೇಮೆಂಟ್​, ಸೇರಿಂದತೆ ನೂತನ ಸೌಲಭ್ಯಗಳನ್ನು ವಾಟ್ಸಾಪ್​ನಲ್ಲಿ ಲಭ್ಯವಿದೆ. ವರದಿಗಳ ಪ್ರಕಾರ ಈ ಪಟ್ಟಿಗೆ ಫಾರ್ವರ್ಡೆಡ್​ ಮೆಸೇಜ್​ ಕೂಡಾ ಶೀಘ್ರದಲ್ಲೇ ಸೇರ್ಪಡೆಯಾಗಲಿದೆ ಎಂದು ಹೇಳಲಾಗಿದೆ.
First published:June 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...