ಕಾದು ಸುಸ್ತಾದ ಬಳಕೆದಾರರಿಗೆ ಕೊನೆಗೂ ಸಿಹಿ ಸುದ್ದಿ: Whatsappನಲ್ಲಿ ಶೀಘ್ರದಲ್ಲೇ ಬರಲಿವೆ ಈ ಫೀಚರ್ಸ್​


Updated:September 18, 2018, 1:57 PM IST
ಕಾದು ಸುಸ್ತಾದ ಬಳಕೆದಾರರಿಗೆ ಕೊನೆಗೂ ಸಿಹಿ ಸುದ್ದಿ: Whatsappನಲ್ಲಿ ಶೀಘ್ರದಲ್ಲೇ ಬರಲಿವೆ ಈ ಫೀಚರ್ಸ್​
  • Share this:
ನ್ಯೂಸ್​ 18 ಕನ್ನಡ

Whatsapp 2018ನೇ ವರ್ಷದ ಆರಂಭದಿಂದಲೂ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್​ಗಳನ್ನು ಪರಿಚಯಿಸುತ್ತಲೇ ಬಂದಿದೆ. ಈ ಆ್ಯಪ್​ ನಮ್ಮ ಅಗತ್ಯಗಳಲ್ಲೊಂದಾಗಿದೆ. ಹೀಗಿರುವಾಗ ಕಂಪೆನಿಯು ಸಮಯಕ್ಕೆ ತಕ್ಕಂತೆ ಇದರಲ್ಲಿ ಅಪ್ಡೇಟ್ಸ್​ಗಳನ್ನು ತಂದು ಚಾಟಿಂಗ್​ ಅನುಭವವನ್ನು ಅತ್ಯುತ್ತಮವಾಗಿಸುವುದರೊಂದಿಗೆ ಸುಲಭವಾಗಿಸಲು ಪ್ರಯತ್ನಿಸುತ್ತಿದೆ. ಇದೀಗ Whatsapp ಮತ್ತೊಂದು ನೂತನ​ ‘Swipe to reply’ ಎಂಬ ಫೀಚರ್​ನ್ನು ಪರಿಚಯಿಸಲು ಅಣಿಯಾಗಿದೆ. ಲಭ್ಯವಾದ ಮಾಹಿತಿ ಅನ್ವಯ ಸದ್ಯ ಇದರ ಟೆಸ್ಟಿಂಗ್​ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಹಾಗಾದ್ರೆ ಈ ಫೀಚರ್​ ಹೇಗೆ ಕಾರ್ಯ ನಿರ್ವಹಿಸುತ್ತದೆ? ಇಲ್ಲಿದೆ ವಿವರ

WaBetaInfo ನೀಡಿರುವ ಮಾಹಿತಿ ಅನ್ವಯ, ಇನ್ನು ಬರಲಿರುವ ಅಪ್ಡೇಟ್​ನಲ್ಲಿ ಬಳಕೆದಾರರು ಈ ಫೀಚರ್​ ಬಳಸಿಕೊಳ್ಳಬಹುದೆನ್ನಲಾಗಿದೆ. ಸದ್ಯ ಈ ಫೀಚರ್​ iOS ನಲ್ಲಿ ಈ ಮೊದಲಿನಿಂದಲೇ ನೀಡಲಾಗಿದ್ದು, ಶೀಘ್ರದಲ್ಲೇ ಆ್ಯಂಡ್ರಾಯ್ಡ್​ ಬಳಕೆದಾರರೂ ಇದನ್ನು ಉಪಯೋಗಿಸಬಹುದಾಗಿದೆ. ಬರಲಿರುವ ಈ ಫೀಚರ್​ನಿಂದ ಚಾಟಿಂಗ್​ ಮಾಡುವುದು ಇನ್ನೂ ಸುಲಭವಾಗಲಿದೆ. WhatsApp Swipe to Reply ಪೀಚರ್​ನಿಂದ ಯಾವುದೇ ಮೆಸೇಜ್​ಗೂ ವೇಗವಾಗಿ ರಿಪ್ಲೈ ನೀಡಬಹುದಾಗಿದೆ.ಅಂದರೆ ಇನ್ಮುಂದೆ ನೀವು ರಿಪ್ಲೈ ಮಾಡಲು ಒಂದು ಮೆಸೇಜನ್ನು ಒತ್ತಿ, ಬಳಿಕ ರಿಪ್ಲೈ ಆಪ್ಶನ್​ಗೆ ಹೋಗಿ ಮೆಸೇಜ್​ ಟೈಪ್​ ಮಾಡುವ ಕಷ್ಟ ತಪ್ಪುತ್ತದೆ. Whatsapp ಈಗಾಗಲೇ Play Beta Programme ನಲ್ಲಿ ಈ ಹೊಸ ಅಪ್ಡೇಟ್​ನ್ನು ಸಲ್ಲಿಸಿದೆ. ಕಂಪೆನಿಯ ಬೀಟಾ ವರ್ಶನ್​ 2.18.282 ನಲ್ಲಿ ಸ್ವೈಪ್​ ಟು ರಿಪ್ಲೈ ಫೀಚರ್​ ಈಗಾಗಲೇ ಸಿಗುತ್ತಿದೆ. ಆದರೆ ತಾಂತ್ರಿಕ ಕಾರಣಗಳಿಂದ ಇದನ್ನು ಇನ್ನೂ ಅಳವಡಿಸಿಲ್ಲ ಎಂದು ಹೇಳಲಾಗಿದೆ. ಟೆಸ್ಟಿಂಗ್​ ನಡೆಸಿ, ಬದಲಾವಣೆಗಳನ್ನು ತಂದ ಬಳಿಕವೇ ಇದನ್ನು ಆ್ಯಂಡ್ರಾಯ್ಡ್​ ಬಳಕೆದಾರರಿಗೆ ನಿಡಲಾಗುತ್ತದೆ ಎನ್ನಲಾಗಿದೆ. ಈ ಫೀಚರ್​ ಬಂದ ಬಳಿಕ ರಿಪ್ಲೈ ಕೊಡಲು ಬಯಸುವ ಮೆಸೇಜನ್ನು ಎಡ ಬದಿಗೆ ಸ್ವೈಪ್​ ಮಾಡಿದರೆ ಸಾಕು, ಬಳಿಕ ರಿಪ್ಲೈ ಟೈಪ್​ ಮಾಡಿ ಕಳುಹಿಸಬಹುದಾಗಿದೆ.

ಇದನ್ನು ಹೊರತುಪಡಿಸಿ Whatsapp ಮತ್ತೊಂದು ಹೊಸ ಪೀಚರ್​ ಪರಿಚಯಿಸುತ್ತಿದ್ದು, ಇದನ್ನು ಡಾರ್ಕ್​ ಮೋಡ್​ ಎಂದು ಹೆಸರಿಸಲಾಗುತ್ತದೆ ಎನ್ನಲಾಗಿದೆ. ‘Dark Mode’ ಫೀಚರ್​ಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿದ್ದು, ಬಳಕೆದಾರರೂ ಇದಕ್ಕಾಗಿ ಕಾಯುತ್ತಿದ್ದರು. ಇದೀಗ ಕಂಪೆನಿ ಶೀಘ್ರದಲ್ಲೇ ಪರಿಚಯಿಸಲು ಚಿಂತಿಸಿದೆ.

ಆದರೆ ‘Dark Mode’ ಆಪ್ಶನ್​ ಯಾವಾಗಿನಿಂದ iOS ಹಾಗೂ Android ನಲ್ಲಿ ಲಭ್ಯವಾಗುತ್ತದೆ ಎಂಬ ಕುರಿತಾಗಿ Whatsapp ಈವರೆಗೂ ಮಾಹಿತಿ ನೀಡಿಲ್ಲ. ಇನ್ನು ಈ ಆಪ್ಶನ್​ ಟೆಲಿಗ್ರಾಂ, ಟ್ವಿಟರ್​ನಂತಹ ಪ್ಲಾಟ್​ಫಾರ್ಮ್​ಗಳಲ್ಲಿ ಲಭ್ಯವಿದೆ ಎಂಬುವುದು ಗಮನಾರ್ಹ. Dark Mode ನಿಂದಾಗಿ OLED ಡೆಸ್ಪ್ಲೇ ಹೊಂದಿರುವ ಫೋನ್​ಗಳಲ್ಲಿ ಬ್ಯಾಟರಿ ಬಳಕೆ ಕಡಿಮೆ ಮಾಡುತ್ತದೆ. ಅಲ್ಲದೇ ಕಡಿಮೆ ಬೆಳಕಿನಲ್ಲಿ ಕೆಲಸ ಮಾಡುವುದರಿಂದ ಕಣ್ಣಿನ ಮೇಲೂ ಯಾವುದೇ ಪರಿಣಾಮ ಬೀರುವುದಿಲ್ಲ.
First published:September 18, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading