ನಕಲಿ ಸುದ್ಧಿಗೆ ಪರಿಹಾರ ನೀಡುವವರಿಗೆ ಸಿಗುತ್ತೆ 50 ಸಾವಿರ ಡಾಲರ್​!


Updated:July 6, 2018, 11:24 AM IST
ನಕಲಿ ಸುದ್ಧಿಗೆ ಪರಿಹಾರ ನೀಡುವವರಿಗೆ ಸಿಗುತ್ತೆ 50 ಸಾವಿರ ಡಾಲರ್​!

Updated: July 6, 2018, 11:24 AM IST
ನವದೆಹಲಿ:  ಕಳೆದ ಒಂದು ವರ್ಷದಿಂದ ವಾಟ್ಸಾಪ್​ನಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳ ಸಂಖ್ಯೆ ಏರುತ್ತಲೇ ಇವೆ. ಕೆಲ ದಿನಗಳ ಹಿಂದೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿಯಿಂದ ಕನಿಷ್ಟ 10ಕ್ಕೂ ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಇಂತಹ ಘಟನೆಯನ್ನು ತಡೆಗಟ್ಟಲು ಮುಂದಾದ ವಾಟ್ಸಾಫ್​ ಇದೀಗ ಹೊಸ ಯೋಜನೆ ರೂಪಿಸಿದೆ.

ಫೇಸ್​ಬುಕ್​ ಸ್ವಾಮ್ಯದ ವಾಟ್ಸಾಪ್​ ಮಕ್ಕಳ ಕಳ್ಳರು ವದಂತಿಯಂತಹ ಸುದ್ದಿಯನ್ನು ತಡೆಗಟ್ಟಲು ಪೂರ್ಣ ಪ್ರಮಾಣದ ಸಲಹೆ ಹಾಗೂ ಪರಿಹಾರ ನೀಡುವ ತಜ್ಞರಿಗೆ 50 ಸಾವಿರ ಡಾಲರ್​ ಬಹುಮಾನ ಘೋಷಿಸಿದೆ. 'ಇಂತಹ ಮಾಹಿತಿಯನ್ನು ತಡೆಗಟ್ಟುವ ತಜ್ಞರಿಗೆ ವಾಟ್ಸಾಪ್​ ತಾಂತ್ರಿಕ ವಿಭಾಗದಿಂದ ಸಂಪೂರ್ಣ ಸಹಕಾರ ನೀಡುತ್ತೇವೆ. ಆದರೆ ಇದರ ಸಂಪೂರ್ಣ ಹೊಣೆಯನ್ನು ತಜ್ಞರೇ ಹೊತ್ತುಕೊಳ್ಳಬೇಕು ಎಂದು ವಾಟ್ಸಾಪ್​ ಹೇಳಿದೆ.

ವಾಟ್ಸಾಪ್​ನ ಬಳಕೆ ಹೆಚ್ಚಾಗಿರುವ ದೇಶಗಳಾಗಿರುವ ಭಾರತ, ಬ್ರೆಜಿಲ್​, ಇಂಡೋನೇಶಿಯಾ, ಮೆಕ್ಸಿಕೋದಂತಹ ರಾಷ್ಟ್ರದ ತಜ್ಞರು ಈ ಯೋಜನೆಯಲ್ಲಿ ಭಾಗವಹಿಸಬಹುದು. ಇಲ್ಲಿ ಭಾಗವಹಿಸುವವರಿಗೆ ಎರಡು ದಿನದ ಕಾರ್ಯಗಾರವನ್ನು ವಾಟ್ಸಾಪ್​ ನಡೆಸಿಕೊಡುತ್ತದೆ. ಮೊದಲನೆ ದಿನದಂದು ವಾಟ್ಸಾಪ್​ನ ವ್ಯಾಪ್ತಿ ಕುರಿತು ಹೇಳಿದರೆ ಎರಡನೇ ದಿನದಂದು ತಜ್ಞರ ಅಭಿಪ್ರಾಯವನ್ನು ಸ್ವೀಕರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಿಕೊಂಡಿದೆ.

ಕಳೆದ ಒಂದು ವಾರದಲ್ಲಿ ವಾಟ್ಸಾಪ್​ನಲ್ಲಿ ಹರಡಿದ ನಕಲಿ ಸುದ್ದಿಯಿಂದ ಸುಮಾರು 15ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇಂತಹ ಸುದ್ದಿಗಳಿಗೆ ಕಡಿವಾಣ ಹಾಕಲು ಸಂಸ್ಥೆ ವಿಫಲವಾಗಿರುವುದನ್ನು ಖಂಡಿಸಿದ ಭಾರತ ಸರಕಾರ ಕೂಡಲೇ ಪರಿಹಾರ ನೀಡುವಂತೆ ತಾಕೀತು ಮಾಡಿತ್ತು.
First published:July 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ