HOME » NEWS » Tech » WHATSAPP WEB TO GET VOICE VIDEO CALL NEW FEATURES COMING TO WHATSAPP NEXT WABETAINFO HG

WhatsApp Web: ವಾಟ್ಸ್ಆ್ಯಪ್ ವೆಬ್​ನಲ್ಲಿ ವಾಯ್ಸ್, ವಿಡಿಯೋ ಕರೆ!; ನೂತನ ಫೀಚರ್ ಯಾವಾಗ ಪರಿಚಯಿಸಲಿದೆ ಗೊತ್ತಾ?

WhatsApp Web: ವಾಟ್ಸ್​ಆ್ಯಪ್​ ಅನ್ನು ಹೋಲಿಸಿದರೆ ವಾಟ್ಸ್​ಆ್ಯಪ್​ ವೆಬ್​ನಲ್ಲಿ ಅಷ್ಟೊಂದು ಫೀಚರ್​ಗಳನ್ನ ನೀಡಿಲ್ಲ. ಅದರಲ್ಲೂ ವಾಯ್ಸ್​ ಮತ್ತು ವಿಡಿಯೋ ಕರೆ ಆಯ್ಕೆ ಎರಡು ಇಲ್ಲ. ಇದೀಗ ಗ್ರಾಹಕರಿಗಾಗಿ ಇವೆರಡು ಫೀಚರ್​ ಅನ್ನು ವಾಟ್ಸ್​ಆ್ಯಪ್​ ವೆಬ್​ನಲ್ಲಿ ಪರಿಚಯಿಸುವುದಾಗಿ ಚಿಂತಿಸಿದೆ.

news18-kannada
Updated:October 20, 2020, 3:12 PM IST
WhatsApp Web: ವಾಟ್ಸ್ಆ್ಯಪ್ ವೆಬ್​ನಲ್ಲಿ ವಾಯ್ಸ್, ವಿಡಿಯೋ ಕರೆ!; ನೂತನ ಫೀಚರ್ ಯಾವಾಗ ಪರಿಚಯಿಸಲಿದೆ ಗೊತ್ತಾ?
WhatsApp
  • Share this:
ಜಗತ್ತಿನ ಹೆಚ್ಚಿನ ದೇಶಗಳು ವಾಟ್ಸ್​ಆ್ಯಪ್​ ಬಳಸುತ್ತಿವೆ. ಹಾಗಾಗಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಆ್ಯಪ್​ಗಳಲ್ಲಿ ವಾಟ್ಸ್​ಆ್ಯಪ್ ಕೂಡ ಒಂದು ಎಂಬ  ಹೆಗ್ಗಳಿಕೆ ಅದರ ಮೇಲಿದೆ. ಸಂಸ್ಥೆ ಸ್ಮಾರ್ಟ್​ಫೋನ್​ಗೆಂದೇ ವಾಟ್ಸ್​​ಆ್ಯಪ್​ ಪರಿಚಯಿಸಿದರೆ, ಲ್ಯಾಪ್​ಟಾಪ್​, ಪಿಸಿ ಬಳಕೆದಾರರಿಗಾಗಿ ವ್ಯಾಟ್ಸ್​ಆ್ಯಪ್​ ವೆಬ್​ ಪರಿಚಯಿಸಿದೆ. ಹಾಗಾಗಿ ಹೆಚ್ಚಿನ ಬಳಕೆದಾರರು ಕ್ಯೂ ಆರ್​ ಕೋಡ್​ ಸ್ಕ್ಯಾನ್​ ಮಾಡಿ ತಮ್ಮ ಲ್ಯಾಪ್​ಟಾಪ್​ನಲ್ಲಿ ವಾಟ್ಸ್​ಆ್ಯಪ್​ ವೆಬ್​ ಬಳಸುತ್ತಿದ್ದಾರೆ.ವಾಟ್ಸ್​ಆ್ಯಪ್​ ಅನ್ನು ಹೋಲಿಸಿದರೆ ವಾಟ್ಸ್​ಆ್ಯಪ್​ ವೆಬ್​ನಲ್ಲಿ ಅಷ್ಟೊಂದು ಫೀಚರ್​ಗಳನ್ನ ನೀಡಿಲ್ಲ. ಅದರಲ್ಲೂ ವಾಯ್ಸ್​ ಮತ್ತು ವಿಡಿಯೋ ಕರೆ ಆಯ್ಕೆ ಎರಡು ಇಲ್ಲ. ಇದೀಗ ಗ್ರಾಹಕರಿಗಾಗಿ ಇವೆರಡು ಫೀಚರ್​ ಅನ್ನು ವಾಟ್ಸ್​ಆ್ಯಪ್​ ವೆಬ್​ನಲ್ಲಿ ಪರಿಚಯಿಸುವುದಾಗಿ ಚಿಂತಿಸಿದೆ. ಸದ್ಯದಲ್ಲೇ ನೂತನ ಫೀಚರ್​ ಅನ್ನು ಪರಿಚಯಿಸು ಸಾಧ್ಯತೆಯಿದೆ.

ವಾಟ್ಸ್​ಆ್ಯಪ್​ ಬಂದ ನಂತರ ಹೆಚ್ಚಿನವರು ಸಂಪರ್ಕ ಸಾಧಿಸಲು ವಾಯ್ಸ್​ ಮತ್ತು ವಿಡಿಯೋ ಕರೆಗಳನ್ನು ಬಳಸುತ್ತಿದ್ದಾರೆ. ಇದರಿಂದ ಅನೇಕ ಪ್ರಯೋಜನ ಸಿಕ್ಕಿದೆ. ಇದೀಗ ವಾಟ್ಸ್​ಆ್ಯಪ್​ ವೆಬ್​ ಬಳಕೆದಾರರಿಗೂ ಕೂಡ ಧ್ವನಿ ಕರೆ ಮಾಡುವ ಮತ್ತು ವಿಡಿಯೋ ಕರೆ ಮಾಡುವ ಫೀಚರ್​ ನೀಡಿದರೆ ಸುಲಭವಾಗಿ ಬಳಸಬಹುದಾಗಿದೆ.

ಇನ್ನು ವಾಬೇಟಾಇನ್ಫೋ ನೀಡಿದ ವರದಿಯಂತೆ ಮುಂದಿನ ದಿನಗಳಲ್ಲಿ ವಿಡಿಯೋ ಮತ್ತು ಧ್ವನಿ ಕರೆಗಳು ವಾಟ್ಸ್​ಆ್ಯಪ್​ ವೆಬ್​ ಕ್ಲೈನ್ಟ್​​ನಲ್ಲಿ ಬರಲಿದೆ ಎಂದು ಹೇಳಿದೆ.
Youtube Video

Amazon Prime: ಅಮೇಜಾನ್ ಪ್ರೈಂ ಸದಸ್ಯತ್ವ ಪಡೆಯುವುದು ಹೇಗೆ?; ಇಲ್ಲಿದೆ ಮಾಹಿತಿ
Published by: Harshith AS
First published: October 20, 2020, 2:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories