ಹಿಂದೊಮ್ಮೆ ಮೊಬೈಲ್ ಫೋನುಗಳು (Mobile Phone) ಎಲ್ಲೆಡೆ ಸಾರ್ವತ್ರಿಕವಾದಾಗ ಎಸ್ಎಮ್ಎಸ್ (SMS) ಗಳದ್ದೇ ಜಮಾನಾ ಎಂಬಂತಾಗಿತ್ತು. ದಿನಗಳೆದಂತೆ ತಂತ್ರಜ್ಞಾನದ ಪ್ರಗತಿಯಾಗಿ ಸ್ಮಾರ್ಟ್ಫೋನುಗಳು (Smartphone), ಡೇಟಾ ಪ್ಯಾಕ್ (Data Pack) ಲಭ್ಯತೆ ಹಾಗೂ ವಾಟ್ಸ್ಆ್ಯಪ್ಗಳು (WhatsApp) ಬಂದು ದೂರ-ಸಂವಹನ ಕ್ಷೇತ್ರದಲ್ಲಿ ಕ್ರಾಂತಿಯೇ ಉಂಟಾಯಿತು. ಅದರಲ್ಲೂ ವಿಶೇಷವಾಗಿ ಮೊಬೈಲ್ ಫೋನುಗಳಲ್ಲಿ ವಾಟ್ಸ್ಆ್ಯಪ್ ಎಂಬುದು ಅವಿಭಾಜ್ಯ ಅಂಗವಾಗತೊಡಗಿತು. ಈಗ ವಾಟ್ಸ್ಆ್ಯಪ್ ಎಷ್ಟು ಜನಪ್ರಿಯ ಹಾಗೂ ಅವಲಂಬಿತ ಆ್ಯಪ್ ಆಗಿದೆ ಎಂದರೆ ಅದನ್ನು ಬಿಟ್ಟು ಬದುಕಲು ಊಹಿಸಲು ಆಗದು.
ಈಗ ಎಲ್ಲರದ್ದು ವಾಟ್ಸ್ಆ್ಯಪ್ ಜೀವನ ಎಂಬಂತೆಯೇ ಆಗಿದೆ. ಏಕೆಂದರೆ ವಾಟ್ಸ್ಆ್ಯಪ್ನಲ್ಲಿ ಕೇವಲ ಸಂಭಾಷಣೆ ಅಂದರೆ ಚಾಟ್ ಅಷ್ಟೆ ಅಲ್ಲದೆ ಚಿತ್ರ/ವಿಡಿಯೋಗಳ ವಿನಿಮಯ, ಧ್ವನಿ ಸಂವಹನ, ವಿಡಿಯೋ/ಆಡಿಯೋ ಕರೆ ಮುಂತಾದವುಗಳೆಲ್ಲವನ್ನು ಮಾಡಬಹುದಾಗಿದೆ. ಆದರೆ ವಾಟ್ಸ್ಆ್ಯಪ್ ಚಾಟ್ ಭಾಗ ತೆರೆದೇ ಇದನ್ನು ಮಾಡಬೇಕಾಗಿದ್ದುದು ಅವಶ್ಯಕ. ಆದರೆ, ಇನ್ನು ಮುಂದೆ ಇದೂ ಸಹ ಅಗತ್ಯ ಎಂದು ಹೇಳುವ ಸಮಯ ತೊಲಗಲಿದೆ.
ಏಕೆಂದರೆ ವಾಟ್ಸ್ಆ್ಯಪ್ ಇನ್ನೊಂದು ವೈಶಿಷ್ಟ್ಯ ಒದಗಿಸಲು ಮುಂದಾಗಿದ್ದು ಈ ಮೂಲಕ ಅದು ಡೆಸ್ಕ್ಟಾಪ್ ವರ್ಷನ್ ಮೇಲೆ ಕೆಲಸ ಮಾಡುತ್ತಿದೆ. ಶೀಘ್ರದಲ್ಲೇ ಧ್ವನಿ ವಿನಿಮಯ, ಧ್ವನಿ ಸಂದೇಶ ಮುಂತಾದವುಗಳು ವಾಟ್ಸ್ಆ್ಯಪ್ನ ಡೆಸ್ಕ್ಟಾಪ್ ವಿಭಾಗದಲ್ಲಿ ದೊರೆಯಲಿವೆ ಎಂದು ಹೇಳಲಾಗಿದೆ.
ಇದು ಒಂದು ವೈಶಿಷ್ಟ್ಯವಾದರೆ, ಇನ್ನೊಂದು ವೈಶಿಷ್ಟ್ಯವೆಂದರೆ ಶೀಘ್ರದಲ್ಲೇ ನಿಮ್ಮ ಮೊಬೈಲ್ನಲ್ಲಿರುವ ವಾಟ್ಸ್ಆ್ಯಪ್ ತನ್ನ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿ ಪ್ರತ್ಯೇಕವಾಗಿ ನೀವು ನಿರಂತರವಾಗಿ ಚಾಟ್ ಮಾಡುವವರ ವಿವರ ಹಾಗೂ ಇತ್ತೀಚೆಗೆ ಚಾಟ್ ಮಾಡಿದ ಬಗ್ಗೆ ವಿವರವನ್ನು ಪ್ರತ್ಯೇಕವಾಗಿ ತೋರಿಸಲಿದೆ. ಅಲ್ಲದೆ, ಬಿಸಿನೆಸ್ ಡೈರೆಕ್ಟರಿಗಳನ್ನು ಒಂದೆಡೆ ಸ್ಟ್ರೀಮ್ ಲೈನ್ ಮಾಡಲು ವಾಟ್ಸ್ಆ್ಯಪ್ ಕೆಲಸ ಮಾಡುತ್ತಿದೆ. ಅಂದರೆ ಇದರ ಪರಿಣಾಮವಾಗಿ ಬಿಸಿನೆಸ್ ಸಂಸ್ಥೆಯು ತನ್ನ ಬಳಕೆದಾರನನ್ನು ಸಂಪರ್ಕಿಸಲು ಬಯಸಿದಾಗ ವಿಶೇಷವಾದ ಸಂದೇಶ ನಿಮಗೆ ವಾಟ್ಸ್ಆ್ಯಪ್ನಲ್ಲಿ ಬರಲಿದೆ. ಇವೆಲ್ಲ ವೈಶಿಷ್ಟ್ಯಗಳ ಪರೀಕ್ಷೆ ಈಗ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ಇದನ್ನು ಓದಿ: Smartphone ಇಂಟರ್ನೆಟ್ ಸ್ಲೋ ಇದೆಯಾ? ವೇಗಗೊಳಿಸಲು ಈ ಟ್ರಿಕ್ ಅನುಸರಿಸಿ
ಬಳಕೆದಾರರ ತಂತ್ರಾಂಶ ಅಥವಾ ಆ್ಯಪ್ಗಳಲ್ಲಿ ಸೇರಿಸಲಾಗುವ ವೈಶಿಷ್ಟ್ಯಗಳನ್ನು ಶೋಧಿಸುವ ಸಂಸ್ಥೆಯಾದ ವಾಬೆಟಾಇನ್ಫೋ, ವಾಟ್ಸ್ಆ್ಯಪ್ನ ಈ ವೈಶಿಷ್ಟ್ಯವನ್ನು ಶೋಧಿಸಿದ್ದು ಈ ಬಗ್ಗೆ ಸ್ಕ್ರೀನ್ ಶಾಟ್ ಒಂದನ್ನು ಹಂಚಿಕೊಂಡಿದೆ. ಅದರ ಬಗ್ಗೆ ಪೋಸ್ಟ್ ಮಾಡಿರುವ ಸಂಸ್ಥೆ ಈ ರೀತಿ ಹೇಳುತ್ತದೆ, "ವಾಟ್ಸ್ಆ್ಯಪ್ ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್ ಅದರಲ್ಲೂ ನಿರ್ದಿಷ್ಟವಾಗಿ 'ನಿರಂತರ ಚಾಟ್ ಮಾಡಿರುವ' ಹಾಗೂ 'ಇತ್ತೀಚೆಗೆ ಚಾಟ್ ಮಾಡಿರುವ' ಅಂಶಗಳಿಗೆ ಸಂಬಂಧಿಸಿದಂತೆ ಕೆಲವು ಮಾರ್ಪಾಡುಗಳನ್ನು ಅನುಷ್ಠಾನಗೊಳಿಸಿದೆ. "
ಇವುಗಳನ್ನು ಹೊರತುಪಡಿಸಿ ವಾಟ್ಸ್ಆ್ಯಪ್ ಸಂಸ್ಥೆಯು ತನ್ನ ಡೆಸ್ಕ್ಟಾಪ್ ವರ್ಷನ್ ತಂತ್ರಾಂಶಕ್ಕಾಗಿ ಗ್ಲೋಬಲ್ ಆಡಿಯೋ ಪ್ಲೇಯರ್ ಅಡಕಗೊಳಿಸುವತ್ತ ಪರೀಕ್ಷೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಬಳಕೆದಾರರು ಬೇರೆ ಚಾಟ್ ಅನ್ನು ಪ್ರವೇಶಿಸಿದಾಗಲೂ ಆಡಿಯೋ ಸಂದೇಶ ಆಲಿಸಲು ಅನುಕೂಲವಾಗುವಂತಹ ವೈಶಿಷ್ಟ್ಯವನ್ನು ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ಪರಿಚಯಿಸಲಿದೆ. ನೀವು ಚಾಟ್ ವಿಭಾಗದಿಂದ ಹೊರ ಬಂದಾಗ ಈ ಆಡಿಯೋ ಸಂದೇಶ ಪ್ಲೇ ಆಗುವುದು ನಿಲ್ಲುತ್ತದೆ. ಈಗಾಗಲೇ ಐಒಎಸ್ ವೇದಿಕೆಯ ಮೇಲೆ ಇದನ್ನು ಪರೀಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ವಾಟ್ಸ್ಆ್ಯಪ್ ಈ ವೈಶಿಷ್ಟ್ಯವನ್ನು ಇತ್ತೀಚಿಗಷ್ಟೇ ತನ್ನ ಡೆಸ್ಕ್ಟಾಪ್ ವರ್ಷನ್ನಲ್ಲಿ ಪರೀಕ್ಷೆ ಮಾಡಿತ್ತು.
ಇದನ್ನು ಓದಿ: Samsung ಸ್ಮಾರ್ಟ್ಫೋನ್ ಖರೀದಿಸುವ ಪ್ಲಾನ್ ಇದೆಯಾ? ಕೇವಲ 499 ರೂ.ಗೆ ಇಲ್ಲಿ ಸಿಗುತ್ತೆ ನೋಡಿ
ಇನ್ನು ಮುಂದೆ ನೀವು ಆಡಿಯೋ ಸಂದೇಶ ಕೇಳುತ್ತಿರುವ ಸಂದರ್ಭದಲ್ಲಿ ಬೇರೆ ಯಾವುದಾದರೂ ಸಂದೇಶ ನೋಡಬಯಸಿದರೆ ಆಡಿಯೋ ಸಂದೇಶ ನಿಲ್ಲುವುದಿಲ್ಲ, ಬದಲಾಗಿ ನೀವು ಬೇರೆ ಸಂದೇಶ ನೋಡುವಾಗಲೂ ಆಡಿಯೋ ಸಂದೇಶ ಮುಂದುವರೆಯುತ್ತಿರುತ್ತದೆ ಹಾಗೂ ಅದಕ್ಕೆ ಸಂಬಂಧಿಸಿದಂತೆ ಅದರ ವಾಲ್ಯೂಮ್ ಹಾಗೂ ಇತರೆ ನಿಯಂತ್ರಣಗಳನ್ನು ನೀವು ಮಾಡಲು ಶಕ್ತರಾಗುವಂತೆ ಅದರ ನಿಯಂತ್ರಣ ಪ್ಯಾನೆಲ್ ಕೆಳ ಭಾಗದಲ್ಲಿ ಕಾಣುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ