WhatsApp: ವಾಟ್ಸ್‌ಆ್ಯಪ್​ನ ಹೊಚ್ಚ ಹೊಸ ಫೀಚರ್‌ಗಳು ಯಾವುವು ಗೊತ್ತೇ? ಯೂಸರ್ಸ್‌ ತಿಳಿದುಕೊಳ್ಳಬೇಕು ಈ ಮಾಹಿತಿ

WhatsApp Updates: ವಾಟ್ಸ್‌ಆ್ಯಪ್‌ ಬಳಕೆದಾರರು ತಮ್ಮ ಸಂದೇಶಗಳನ್ನು ಅಳಿಸಲು ಸಮಯ-ಮಿತಿಯನ್ನು ಬದಲಾಯಿಸುವ ಯೋಜನೆ ಮಾಡಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖವಾಗಿರುವ ಆ್ಯಪ್ ಎಂದರೆ ವಾಟ್ಸ್‌ಆ್ಯಪ್‌.(WhatsApp) ಮೆಟಾ ಒಡೆತನದ ವಾಟ್ಸ್‌ಆ್ಯಪ್‌ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ನ ವಿಶ್ವದ (Worldwide) ಅತ್ಯಂತ ಜನಪ್ರಿಯ ಆ್ಯಪ್ ಆಗಿದೆ. ಇದು ಜಗತ್ತಿನಾದ್ಯಂತ 2 ಬಿಲಿಯನ್ (200 ಕೋಟಿ) ಬಳಕೆದಾರರನ್ನು ಹೊಂದಿದೆ. ವಾಟ್ಸ್‌ಆ್ಯಪ್‌ ಇತ್ತೀಚೆಗೆ ತನ್ನ ಆ್ಯಂಡ್ರಾಯ್ಡ್ ಆ್ಯಪ್‌ನ (Android app) ಬೀಟಾ ಆವೃತ್ತಿಯಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಲಾದ ಚಾಟ್ ಬ್ಯಾಕಪ್‌ಗಳನ್ನು (Chat Backup) ಬಿಡುಗಡೆ ಮಾಡಿದೆ. ಇದೀಗ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಫೀಚರ್‌ಗಳು ವಾಟ್ಸ್‌ಆ್ಯಪ್‌ಗೆ ಬರಲಿವೆ ಎಂಬುದಾಗಿ ವರದಿ ತಿಳಿಸಿದೆ. ವಾಟ್ಸ್‌ಆ್ಯಪ್‌ ಒಂದಲ್ಲ ಒಂದು ರೀತಿ ಹೊಸ ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಹಾಗಾದ್ರೆ 2022ರಲ್ಲಿ ವಾಟ್ಸ್‌ಆ್ಯಪ್‌ ಯಾವೆಲ್ಲಾ ಹೊಸ ಫೀಚರ್ಸ್(New Features) ಬಳಕೆಗೆ ತರುತ್ತಿದೆ ಎಂಬುದನ್ನು ನೋಡೋಣ.

1) ಸಂದೇಶಗಳನ್ನು ಅಳಿಸಲು ಸಮಯಮಿತಿ
ವಾಟ್ಸ್‌ಆ್ಯಪ್‌ ಬಳಕೆದಾರರು ತಮ್ಮ ಸಂದೇಶಗಳನ್ನು ಅಳಿಸಲು ಸಮಯ-ಮಿತಿಯನ್ನು ಬದಲಾಯಿಸುವ ಯೋಜನೆ ಮಾಡಿದೆ. ಪ್ರಸ್ತುತ, ವಾಟ್ಸ್‌ಆ್ಯಪ್‌ ಬಳಕೆದಾರರಿಗೆ 1 ಗಂಟೆ, 8 ನಿಮಿಷಗಳು ಮತ್ತು 16 ಸೆಕೆಂಡುಗಳವರೆಗೆ ಹಳೆಯ ಸಂದೇಶಗಳನ್ನು ಅಳಿಸಲು ಸಮಯವಿರುತ್ತದೆ. ಈಗ, ಕಂಪನಿಯು ಸಂದೇಶಗಳನ್ನು ಅಳಿಸುವ ಮಿತಿಯನ್ನು 7 ದಿನಗಳು ಮತ್ತು 8 ನಿಮಿಷಗಳ ಸಮಯದವರೆಗೆ ಹೆಚ್ಚಿಸುವ ಯೋಚನೆ ಮಾಡಿದೆ. ಮುಂದಿನ ದಿನಗಳಲ್ಲಿ ಇದನ್ನು ಅಳವಡಿಸಿಕೊಳ್ಳಲು ನಿಧರಿಸಿದೆ.

2) ಆಡಿಯೋ ಸಂದೇಶಗಳಿಗಾಗಿ ಪ್ಲೇಬ್ಯಾಕ್ ನಿಯಂತ್ರಣಗಳು
ವಾಟ್ಸ್‌ಆ್ಯಪ್‌ ಪ್ರಸ್ತುತ ಧ್ವನಿ ರೆಕಾರ್ಡಿಂಗ್‌ಗಳನ್ನು (Voice Recording) ದಾಖಲಿಸುವಾಗ ಅವುಗಳನ್ನು ನಿಲ್ಲಿಸುವ (ವಿರಾಮಗೊಳಿಸುವ) ಫೀಚರ್‌ನ ಮೇಲೆ ಕಾರ್ಯನಿರ್ವಹಿಸುತ್ತಿದೆ. ಈ ಫೀಚರ್ ಬಳಕೆದಾರರಿಗೆ ಹೊಸ ಸಂದೇಶ ನಿಲ್ಲಿಸಲು ಅಥವಾ ಮರು-ರೆಕಾರ್ಡ್ ಮಾಡಲು ಸಹಾಯವಾಗಲಿದೆ.. ವಾಯ್ಸ್ ರೆಕಾರ್ಡಿಂಗ್ ಅನ್ನು ಬಳಕೆದಾರರು ಒಮ್ಮೆ ನಿಲ್ಲಿಸಿದ ನಂತರ ಇನ್ನೊಂದು ರೆಕಾರ್ಡ್ ಬಟನ್ ಅವರಿಗೆ ಕಾಣಿಸುತ್ತದೆ. ಈ ಬಟನ್ ಸ್ಪರ್ಶಿಸುವ ಮೂಲಕ ಧ್ವನಿ ನೋಟ್‌ನ ರೆಕಾರ್ಡಿಂಗ್ ಪುನಾರಂಭಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: WhatsApp: ನಿಮ್ಮ ಕುರಿತು ಏನು ಮಾತಾಡಿಕೊಳ್ಳುತ್ತಾರೆ ಎಂಬ ಕೌತುಕವೇ? ವಾಟ್ಸ್‌ಆ್ಯಪ್‌ ಪ್ರೊಫೈಲ್ ನೀಡುತ್ತೆ ಆ ಮಾಹಿತಿ..!

ಐಓಎಸ್‌ಗಾಗಿ ವಾಟ್ಸ್‌ಆ್ಯಪ್‌ನ ಈ ಫೀಚರ್ ಇನ್ನೂ ಪ್ರಗತಿಯಲ್ಲಿದೆ. ಇದು ಈಗಾಗಲೇ ಆ್ಯಂಡ್ರಾಯ್ಡ್‌ಗಾಗಿ ವಾಟ್ಸ್‌ಆ್ಯಪ್‌ ಬೀಟಾದಲ್ಲಿ ಲಭ್ಯವಿದೆ. ಇದು ಸದ್ಯದಲ್ಲಿಯೇ ವಾಟ್ಸ್‌ಆ್ಯಪ್‌ನ ಬೀಟಾ ಟೆಸ್ಟರ್‌ಗಳಿಗೂ ಲಭ್ಯವಾಗಲಿದೆ. ಆಡಿಯೋ ಸಂದೇಶಗಳ ಪ್ಲೇಬ್ಯಾಕ್ ವೇಗವನ್ನು ಸರಿಹೊಂದಿಸಲು ಬಳಕೆದಾರರಿಗೆ ಅವಕಾಶ ನೀಡಲು ವಾಟ್ಸ್‌ಆ್ಯಪ್‌ ಸಿದ್ಧವಾಗಿದೆ. ಹೊಸ ಫೀಚರ್‌ಗಳಲ್ಲಿ ಬಳಕೆದಾರರು ಧ್ವನಿ ಟಿಪ್ಪಣಿಗಳಲ್ಲಿ ಪ್ಲೇಬ್ಯಾಕ್ ವೇಗವನ್ನು 2 ಪಟ್ಟು ಹೆಚ್ಚಿಸಲು ಸಾಧ್ಯವಾಗುತ್ತದೆ. ಆದಾಗ್ಯೂ, ಬಳಕೆದಾರರು ಪ್ಲೇಬ್ಯಾಕ್ ವೇಗವನ್ನು ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ.

3) ಪ್ರೊಫೈಲ್ ಫೋಟೋ ಗೌಪ್ಯತೆ ಸೆಟ್ಟಿಂಗ್
ವಾಟ್ಸ್‌ಆ್ಯಪ್‌ ಬಳಕೆದಾರರು ತಮ್ಮ ಪ್ರೊಫೈಲ್ ಫೋಟೋ, ಲಾಸ್ಟ್ ಸೀನ್  ಅನ್ನು ನಿರ್ದಿಷ್ಟ ಸಂಪರ್ಕಗಳಿಂದ ಹೈಡ್ ಮಾಡುವಂತೆ ಹೊಸ ಫೀಚರ್ ಬಿಡುಗಡೆ ಮಾಡುತ್ತಿದೆ. ವಾಟ್ಸಾಪ್ ಪ್ರಸ್ತುತ ಬಳಕೆದಾರರಿಗೆ ಮೂರು ಆಯ್ಕೆಗಳನ್ನು ನೀಡುತ್ತದೆ – ಮೈ ಕಾಂಟ್ಯಾಕ್ಟ್, ಎವ್ರಿಒನ್, ನೋಬಡಿ ಅಂತ 3 ಆಯ್ಕೆಗಳನ್ನು ನೀಡಿದೆ. ಮುಂದಿನಗಳಲ್ಲಿ ಇದಕ್ಕೆ ಮೈ ಕಾಂಟ್ಯಾಕ್ಟ್ ಎಕ್ಸೆಪ್ಟ್ ಎಂಬ ಮತ್ತೊಂದು ಹೊಸ ಫೀಚರ್ಸ್ ಅಳವಡಿಸುವ ಸಾಧ್ಯತೆ ಇದೆ.

4) ಫೋಟೋ ಎಡಿಟರ್
ವಾಟ್ಸ್‌ಆ್ಯಪ್‌ ಸದ್ಯ ಫೋಟೋ ಎಡಿಟರ್ ಆಪ್ ಅನ್ನು ತರುವುದಾಗಿ ನವೆಂಬರ್ 2021ರಲ್ಲಿ ಅಧಿಕೃತವಾಗಿ ಘೋಷಿಸಿತ್ತು. ಇದನ್ನು 2022ಕ್ಕೆ ತರುವ ಸಲುವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದೆ. ಹೊಸ ವೈಶಿಷ್ಟ್ಯದೊಂದಿಗೆ, ಬಳಕೆದಾರರು ಯಾವುದೇ ವಾಟ್ಸ್‌ಆ್ಯಪ್‌ ಪರದೆಯಿಂದ ಸ್ಟಿಕ್ಕರ್‌ಗಳು ಮತ್ತು ಪಠ್ಯವನ್ನು ಸೇರಿಸಲು ಅಥವಾ ಕ್ರಾಪ್ ಮಾಡಲು ಮತ್ತು ಫೋಟೋಗಳನ್ನು ತಿರುಗಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಭದ್ರತೆಯ ದೃಷ್ಟಿಯಿಂದ WhatsApp ಬಳಕೆಯನ್ನು ನಿಷೇಧಿಸಿದ ಸೇನೆ.. ಯಾರೆಲ್ಲಾ ಬಳಸುವಂತಿಲ್ಲ?

5) ಸ್ಟಿಕ್ಕರ್ ಮೇಕರ್
ವಾಟ್ಸ್‌ಆ್ಯಪ್‌ ಸದ್ಯ ಸ್ಟಿಕ್ಕರ್- ಮೇಕರ್ ಅನ್ನು ಪ್ರಾರಂಭಿಸುತ್ತಿದೆ. ಪ್ರಸ್ತುತ, ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ಬೇರೆ ಮೂಲಗಳಿಂದ ಸ್ಟಿಕ್ಕರ್ ಪ್ಯಾಕ್‌ಗಳು ಲಭಿಸುತ್ತಿವೆ. ಆದರೆ ಇದು ಮುಂದಿನ ದಿನಗಳಲ್ಲಿ ಮೊಬೈಲ್‌ನಲ್ಲಿಯೇ ಬಿಲ್ಟ್ ಆಗಿ ಬರಲಿವೆ. ಆದಾಗ್ಯೂ, ಐಓಸ್ ಮತ್ತು ಆ್ಯಂಡ್ರಾಯ್ಡ್ ಬಳಕೆದಾರರಿಗೆ ಮೊಬೈಲ್‌ನಲ್ಲಿಯೇ ಸ್ವಂತ ಸ್ಟಿಕ್ಕರ್‌ಗಳನ್ನು ರಚಿಸಲು ಕಂಪನಿಯು ಅನುಮತಿಸಬಹುದು ಎಂದು ವರದಿಯಾಗಿದೆ.
Published by:vanithasanjevani vanithasanjevani
First published: