WhatsApp New Feature: ಇನ್ನುಮುಂದೆ ಬೇಕಾಬಿಟ್ಟಿಯಾಗಿ ಗ್ರೂಪ್​ಗಳಿಗೆ ಸೇರಿಸಲಾಗದು; ಬಂದಿದೆ ಹೊಸ ಆಯ್ಕೆ

ಅನುಮತಿ ಇಲ್ಲದೆ ಗ್ರೂಪ್​ಗಳಿಗೆ ಆ್ಯಡ್​ ಮಾಡುವುದುನ್ನು ತಡೆಯಲು ಸಂಸ್ಥೆ ಹೊಸ ಫೀಚರ್​ ಪರಿಚಯಿಸಿದೆ.

Rajesh Duggumane | news18
Updated:April 8, 2019, 11:29 PM IST
WhatsApp New Feature: ಇನ್ನುಮುಂದೆ ಬೇಕಾಬಿಟ್ಟಿಯಾಗಿ ಗ್ರೂಪ್​ಗಳಿಗೆ ಸೇರಿಸಲಾಗದು; ಬಂದಿದೆ ಹೊಸ ಆಯ್ಕೆ
ವಾಟ್ಸ್​ಆ್ಯಪ್​​
Rajesh Duggumane | news18
Updated: April 8, 2019, 11:29 PM IST
ವಾಟ್ಸ್​​ಆ್ಯಪ್​ ಬಳಕೆ ಮಾಡುವವರಿಗೆ ಒಂದು ಚಿಂತೆ ಇದ್ದೇ ಇರುತ್ತದೆ. ಅದೇನೆಂದರೆ, ಯಾರೋ ಗುರುತು ಪರಿಚಯವಿಲ್ಲದ ವ್ಯಕ್ತಿಗಳು ಗ್ರೂಪ್​ಗಳಿಗೆ ನಿಮ್ಮನ್ನು ಸೇರಿಸಿಬಿಡುತ್ತಾರೆ. ಇದರಿಂದ ನಿಮ್ಮ ಮೊಬೈಲ್​ ಸಂಖ್ಯೆ ಅನಾಯಾಸವಾಗಿ ಹರಿದು ಹಂಚಿಕೆ ಆಗಿಬಿಡುತ್ತದೆ. ಅಷ್ಟೇ ಅಲ್ಲ, ಆ ಗ್ರೂಪ್​ಗಳಲ್ಲಿ ಬರುವ ಮೆಸೇಜ್​ಗಳಿಂದ ಕಿರಿಕಿರಿ ಬೇರೆ. ಆದರೆ, ಇನ್ನು ಮುಂದೆ ನಿಮಗೆ ಈ ಸಮಸ್ಯೆ ಇರುವುದಿಲ್ಲ. ನಿಮ್ಮ ಅನುಮತಿ ಇಲ್ಲದೆ ಯಾರೊಬ್ಬರೂ ನಿಮ್ಮನ್ನು ಗ್ರೂಪ್​ಗಳಿಗೆ ಸೇರಿಸಿಕೊಳ್ಳಲು ಬರುವುದಿಲ್ಲ. ಹೀಗೊಂದು ಹೊಸ ಫೀಚರ್ ​ಅನ್ನು ವಾಟ್ಸ್​ಆ್ಯಪ್​ ಪರಿಚಯಿಸಿದೆ.

ಚುನಾವಣಾ ಸಮಯವಾದ್ದರಿಂದ ಸಾಕಷ್ಟು ನಕಲಿ ಸಂದೇಶಗಳು ಹುಟ್ಟಿಕೊಳ್ಳುತ್ತಿವೆ. ಇದನ್ನು ತಡೆಯುವ ಉದ್ದೇಶದಿಂದ ವಾಟ್ಸ್​ಆ್ಯಪ್​ ಇತ್ತೀಚೆಗೆ ಹೊಸ ಫೀಚರ್​ ಒಂದನ್ನು ಬಿಡುಗಡೆ ಮಾಡಿತ್ತು. ಈಗ ಅನುಮತಿ ಇಲ್ಲದೆ ಗ್ರೂಪ್​ಗಳಿಗೆ ಆ್ಯಡ್​ ಮಾಡುವುದುನ್ನು ತಡೆಯಲು ಸಂಸ್ಥೆ ಹೊಸ ಫೀಚರ್​ ಪರಿಚಯಿಸಿದೆ.ಈ ಆಯ್ಕೆ ಪಡೆಯಲು ನೀವು ಮಾಡಬೇಕಾದ್ದು ಇಷ್ಟೆ. ಮೊದಲು ವಾಟ್ಸ್​​ಆ್ಯಪ್​​​ ಸೆಟ್ಟಿಂಗ್​ಗೆ ತೆರಳಬೇಕು. ಅಲ್ಲಿ, ಗ್ರೂಪ್​​ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಎವರಿಒನ್​, ಮೈ ಕಾಂಟಾಕ್ಟ್ಸ್​, ನೋಬಡಿ ಎನ್ನುವ ಮೂರು ಆಯ್ಕೆಗಳಿರುತ್ತವೆ. ನೋಬಡಿ ಎನ್ನುವ ಆಯ್ಕೆಯನ್ನು ಸೆಲೆಕ್ಟ್​ ಮಾಡಿದರೆ, ಯಾವುದೇ ವ್ಯಕ್ತಿ ನಿಮ್ಮನ್ನು ಗ್ರೂಪ್​ಗೆ ಸೇರಿಸಿಕೊಳ್ಳಬೇಕು ಎಂದರೂ ನಿಮ್ಮ ಬಳಿ ಅನುಮತಿ ಕೇಳಲೇಬೇಕು. ಮೈ ಕಾಂಟಾಕ್ಟ್​  ಎನ್ನುವ ಆಯ್ಕೆ ಮಾಡಿದರೆ, ನಿಮ್ಮ ಸಂಪರ್ಕದಲ್ಲಿರುವವರು ನಿಮ್ಮನ್ನು ಗ್ರೂಪ್​ಗಳಿಗೆ ಸೇರ್ಪಡೆ ಮಾಡಬಹುದು. ಸದ್ಯ ಈ ಆಯ್ಕೆ ಬೇಟಾ ವರ್ಶನ್​ನಲ್ಲಿದ್ದು, ಶೀಘ್ರವೇ ಈ ಫೀಚರ್​ ಎಲ್ಲರಿಗೂ ಸಿಗಲಿದೆ.

ಇದನ್ನೂ ಓದಿ: ವಾಟ್ಸ್​ಆ್ಯಪ್​ನಲ್ಲಿ ಮಹತ್ತರ ಬದಲಾವಣೆ: ಇನ್ಮುಂದೆ ನಿಮ್ಮ ಮೆಸೇಜ್​ನ ಬಂಡವಾಳ ತಿಳಿಯಲಿದೆ

First published:April 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626