HOME » NEWS » Tech » WHATSAPP UPDATES TERMS OF SERVICE PRIVACY POLICY ASKS USERS TO ACCEPT BY 8 FEBRUARY HG

Whatsapp: ನಿಯಮ ಬದಲಾಯಿಸಲು ಮುಂದಾದ ವಾಟ್ಸ್​​ಆ್ಯಪ್​; ಷರತ್ತು ಒಪ್ಪದೇ ಇದ್ದರೆ ಖಾತೆ​ ಡಿಲೀಟ್​!

WHATSAPP UPDATES: ವಾಟ್ಸ್ಆ್ಯಪ್ ಆ್ಯಂಡ್ರಾಯ್ಡ್​ ಮತ್ತು ಒಎಸ್​ ಬಳಕೆದಾರರಿಗೆ ಗೌಪ್ಯತೆ ನೀತಿಯನ್ನು ಕಳುಹಿಸಿದೆ. ಅಂದರೆ ವಾಟ್ಸ್​​ಆ್ಯಪ್​ ತನ್ನ ನೀತಿಯನ್ನು ನವೀಕರಿಸುತ್ತಿದ್ದು, ಹಾಗಾಗಿ ಎಲ್ಲಾ ಬಳಕೆದಾರ ಸ್ಮಾರ್ಟ್​ಫೋನ್​ಗೆ ಈ ನೋಟಿಫಿಕೇಶನ್​ ರವಾನಿಸಿದೆ.

news18-kannada
Updated:January 6, 2021, 2:23 PM IST
Whatsapp: ನಿಯಮ ಬದಲಾಯಿಸಲು ಮುಂದಾದ ವಾಟ್ಸ್​​ಆ್ಯಪ್​; ಷರತ್ತು ಒಪ್ಪದೇ ಇದ್ದರೆ ಖಾತೆ​ ಡಿಲೀಟ್​!
ವಾಟ್ಸ್ಆ್ಯಪ್
  • Share this:
ಜನಪ್ರಿಯ ವಾಟ್ಸ್​​ಆ್ಯಪ್​ ಸಾಕಷ್ಟು ಬಳಕೆದಾರರನ್ನು ಹೊಂದಿದೆ. ದೇಶ-ವಿದೇಶದಲ್ಲೂ ಅನೇಕರು ವಾಟ್ಸ್​​ಆ್ಯಪ್ ಅನ್ನು ಬಳಸುವ ಮೂಲಕ ಸಂದೇಶ, ಧ್ವನಿ, ಫೋಟೋ, ವಿಡಿಯೋ, ಫೈಲ್​​​ಗಳನ್ನು ಕಳುಹಿಸುತ್ತಾರೆ. ಹಾಗಾಗಿ ಹೆಚ್ಚು ಜನಪ್ರಿಯತೆಯನ್ನು ವಾಟ್ಸ್​​ಆ್ಯಪ್ ಪಡೆದಿದೆ. ಆದರೆ ಇದೀಗ ವ್ಯಾಟ್ಸ್​ಆ್ಯಪ್​​ ಹೊಸ ನೀತಿಯನ್ನು ಜಾರಿಗೆ ತಂದಿದೆ. ಮಂಗಳವಾರದಂದು (ಜ.5) ತನ್ನ ಬಳಕೆದಾರರಿಗೆ ಸೇವಾ ನಿಯಮ ಮತ್ತು ಗೌಪ್ಯತೆ ನೀತಿಯನ್ನು ತಿಳಿಸಲು ನೋಟಿಫಿಕೇಶನ್​ ಕಳುಹಿಸಿದೆ.

ವಾಟ್ಸ್ಆ್ಯಪ್ ಆ್ಯಂಡ್ರಾಯ್ಡ್​ ಮತ್ತು ಒಎಸ್​ ಬಳಕೆದಾರರಿಗೆ ಗೌಪ್ಯತೆ ನೀತಿಯನ್ನು ಕಳುಹಿಸಿದೆ. ಅಂದರೆ ವಾಟ್ಸ್​​ಆ್ಯಪ್​ ತನ್ನ ನೀತಿಯನ್ನು ನವೀಕರಿಸುತ್ತಿದ್ದು, ಹಾಗಾಗಿ ಎಲ್ಲಾ ಬಳಕೆದಾರ ಸ್ಮಾರ್ಟ್​ಫೋನ್​ಗೆ ಈ ನೋಟಿಫಿಕೇಶನ್​ ರವಾನಿಸಿದೆ.

ಇನ್ನು ವಾಟ್ಸ್​​ಆ್ಯಪ್​ ಕಳುಹಿಸಿರುವ ಅಧಿಸೂಚನೆಯಲ್ಲಿ  ಕಂಪನಿ ಡೇಟಾವನ್ನು ಹೇಗೆ ಪ್ರಕ್ರಿಯೆಗೊಳಿಸುತ್ತದೆ ಎಂಬುದನ್ನು ತಿಳಿಸಿದೆ. ಅಂದಹಾಗೆಯೇ ಈ ಹೊಸ ನಿಯಮ ಫೆ 8, 2021ರಿಂದ ಜಾರಿಗೆ ಬರಲಿದೆ.

ಆದರೆ ಬಳಕೆದಾರರು ವಾಟ್ಸ್​​ಆ್ಯಪ್​ ಕಳುಹಿಸಿರುವ ನೋಟಿಫಿಕೇಶನ್​ ಒಪ್ಪದೇ ಇದ್ದರೆ ವಾಟ್ಸ್​​ಆ್ಯಪ್ ಖಾತೆ ಡಿಲೀಟ್​​ ಆಗುತ್ತದೆ. ಹೊಸ ನಿಯಮವನ್ನು ಮತ್ತು ಅದನ್ನು ಒಪ್ಪಿಕೊಳ್ಳುವರಿಗೆ ಮಾತ್ರ ವಾಟ್ಸ್​​ಆ್ಯಪ್ ಬಳಕೆಗೆ ಸಿಗಲಿದೆ.
Youtube Video

ವಾಟ್ಸ್​​ಆ್ಯಪ್​​ ತನ್ನ ವೆಬ್​ಸೈಟ್​ನಲ್ಲಿ ಈ ಬಗ್ಗೆ ಹೇಳಿಕೊಂಡಿದೆ. ಮಾತ್ರವಲ್ಲದೆ, ಹೊಸ ನಿಯಮಗಳು ಮತ್ತು ಅದರ ಕುರಿತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
Published by: Harshith AS
First published: January 6, 2021, 2:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories