ವಾಟ್ಸಾಪ್ ಅಪ್ಡೇಟ್ ಮಾಡಿ ಡಿಲೀಟ್ ಆದ ಸಂದೇಶವನ್ನು ಮತ್ತೆ ಪಡೆಯಿರಿ
Updated:April 16, 2018, 10:57 PM IST
Updated: April 16, 2018, 10:57 PM IST
ಬೆಂಗಳೂರು: ಜಗತ್ತಿನ ಜನಪ್ರಿಯ ಚಾಟಿಂಗ್ ಆ್ಯಪ್ ವಾಟ್ಸಾಪ್ನಲ್ಲಿ ಹೊಸ ವೈಶಿಷ್ಟ್ಯ ಅಳವಡಿಸಲಾಗಿದ್ದು, ಡಿಲೀಟ್ ಆದ ಸಂದೇಶಗಳನ್ನು ಮತ್ತೆ ಡೌನ್ಲೋಡ್ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ನೀವು ಯಾರಿಗಾದರೂ ಯಾವುದೇ ಮೆಸೇಜ್ ಕಳುಹಿಸಿದಾಗ ಸೆಂಡ್ ಆದರೂ ಡಿಲೀಟ್ ಫ್ರಂ ಆಲ್ ಮೂಲಕ ಡಿಲೀಟ್ ಮಾಡಿ ಅದು ಕಾಣದಂತೆ ಮಾಡಬಹುದಾಗಿತ್ತು. ಈ ಆಫ್ಷನ್ನಲ್ಲಿ ಬದಲಾವಣೆ ತರಲಾಗಿದ್ದು, ಇನ್ನು ಮುಂದೆ ವಾಟ್ಸಾಪ್ನಲ್ಲಿ ಡಿಲೀಟ್ ಆದ ಫೋಟೋ, ವಿಡಿಯೋ, ಫೈಲನ್ನು ವಾಟ್ಸಾಪ್ ಆ್ಯಪ್ ಸರ್ವರ್ ನಿಂದ ಮತ್ತೆ ಡೌನ್ಲೋಡ್ ಮಾಡಿಕೊಳ್ಳಬಹುದು. ಬಳಕೆದಾರರು ಡೌನ್ಲೋಡ್ ಮಾಡಿದ ನಂತ್ರವೂ ಅದು ಸರ್ವರ್ ನಲ್ಲಿ ಸೇವ್ ಆಗಿರುತ್ತದೆ.
ವಾಟ್ಸಾಪ್ನಲ್ಲಿ 30 ದಿನದ ವರೆಗೆ ಮಾತ್ರಾ ಡಾಟಾಗಳು ಸ್ಟೋರ್ ಮಾಡಲಾಗುತ್ತದೆ, ಹೀಗಾಗಿ ಈ ಅವಧಿಯೊಳಗೆ ಡಿಲೀಟ್ ಆದ ದಾಖಲೆಗಳನ್ನು ಮತ್ತೆ ಪಡೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಈವರೆಗೆ ಬಳಕೆದಾರರು ಡೌನ್ಲೋಡ್ ಮಾಡದ ಫೋಟೋ, ವಿಡಿಯೋ ಮಾತ್ರ ವಾಟ್ಸಾಪ್ ಸರ್ವರ್ ನಲ್ಲಿ 30 ದಿನ ಇರುತ್ತಿತ್ತು.
ವಾಟ್ಸಾಪ್ನ ಈ ಸೇವೆ ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ ಫೋನ್ ಬದಲಾಯಿಸುವವರಿಗೆ ಉಪಯೋಗವಾಗಲಿದ್ದು, ಇದರ ಜತೆಯಲ್ಲೇ ಈ ಹಿಂದೆ ಕಾಣಿಸಿಕೊಳ್ಳುತ್ತಿದ್ದ ಟೈಮ್ಸ್ಟ್ಯಾಂಪ್ ತೊಂದರೆಗು ಮುಕ್ತಿ ಕಾಣಿಸಲಾಗಿದೆ.

Loading...