HOME » NEWS » Tech » WHATSAPP UPDATE WHATSAPP ANDROID BETA REMOVES THE ABILITY TO SAVE PROFILE PHOTO

WhatsApp Update: ಬದಲಾವಣೆಗೆ ಮುಂದಾದ ವಾಟ್ಸ್​ಆ್ಯಪ್​​: ಇನ್ಮೇಲೆ ಇನ್ನೊಬ್ಬರ ಫೋಟೋ ಕದಿಯುವಂತಿಲ್ಲ

WhatsApp: ವಾಟ್ಸ್​ಆ್ಯಪ್​ ಬಳಕೆದಾರರು ತಮ್ಮ ಕಾಂಟಾಕ್ಟ್​​​ ಲೀಸ್ಟ್​ನಲ್ಲಿರುವ ಪ್ರೊಫೈಲ್​ ಫೋಟೋಗಳನ್ನು ಸೇವ್​ ಮಾಡುವ ಆಯ್ಕೆಯನ್ನು ನೀಡಿತ್ತು. ಇದೀಗ, ವಾಟ್ಸ್​​​ಆ್ಯಪ್​ ಈ ಫೀಚರ್​​​ ಅನ್ನು ತೆಗೆದು ಹಾಕಲು ಮುಂದಾಗಿದೆ.

news18
Updated:June 22, 2020, 12:04 PM IST
WhatsApp Update: ಬದಲಾವಣೆಗೆ ಮುಂದಾದ ವಾಟ್ಸ್​ಆ್ಯಪ್​​: ಇನ್ಮೇಲೆ ಇನ್ನೊಬ್ಬರ ಫೋಟೋ ಕದಿಯುವಂತಿಲ್ಲ
ವಾಟ್ಸ್​​ಆ್ಯಪ್
  • News18
  • Last Updated: June 22, 2020, 12:04 PM IST
  • Share this:

ಸಾಕಷ್ಟು ಬಳಕೆದಾರರನ್ನು ಒಳಗೊಂಡ ವಾಟ್ಸ್ಆ್ಯಪ್​ ಇದೀಗ ಕೆಲ ಬದಲಾವಣೆಯನ್ನು ಮಾಡಲು ಸಜ್ಜಾಗಿದೆ. ವಾಟ್ಸ್​​ಆ್ಯಪ್​​​​ನಲ್ಲಿ ಇದ್ದಂತಹ​ ಪ್ರೊಫೈಲ್​ ಫೋಟೋವನ್ನು ಸೇವ್​​ ಮಾಡಿಕೊಳ್ಳುವ ಸೌಲಭ್ಯವನ್ನು ತೆಗೆದು ಹಾಕಲು ಚಿಂತನೆ ನಡೆಸಿದೆ.


ವಾಟ್ಸ್​ಆ್ಯಪ್​ ಬಳಕೆದಾರರು ತಮ್ಮ ಕಾಂಟ್ಯಾಕ್ಟ್​​​​ ಲೀಸ್ಟ್​ನಲ್ಲಿರುವ ಪ್ರೊಫೈಲ್​ ಫೋಟೋಗಳನ್ನು ಸೇವ್​ ಮಾಡುವ ಆಯ್ಕೆಯನ್ನು ನೀಡಿತ್ತು. ಇದೀಗ, ಈ ಫೀಚರನ್ನು ತೆಗೆದು ಹಾಕಲು ಮುಂದಾಗಿದೆ.



ಇದನ್ನೂ ಓದಿ: ಹೊರಟ್ಟಿ ಮಾತು ಸರ್ಕಾರ ಪತನದ ಮುನ್ಸೂಚನೆ: ಬಸವರಾಜ್​ ಬೊಮ್ಮಾಯಿ

ವಾಟ್ಸ್​ಆ್ಯಪ್​​ ಬೀಟಾ ಆವೃತ್ತಿಯಲ್ಲಿ ಈ ಬದಲಾವಣೆಯನ್ನು ಈಗಾಗಲೇ ಮಾಡಿಕೊಂಡಿದ್ದು, ಆ್ಯಂಡ್ರಾಯ್ಡ್​​ ಬಳಕೆದಾರರು ಪ್ರೊಫೈಲ್​ ಫೋಟೋ ಸೇವ್​​ ಮಾಡುವ ಆಯ್ಕೆ ತೆಗೆದುಹಾಕಿದೆ. ಆದರೆ ಗ್ರೂಪ್​ ಪ್ರೊಫೈಲ್​ ಫೋಟೋಗಳಿಗೆ ಹೊಸ ನಿಯಮ ಅನ್ವಯವಾಗುದಿಲ್ಲ ಎಂದು ಹೇಳಲಾಗಿದೆ. ಒಂದು ವೇಳೆ ಯಾವುದೇ ಪ್ರೊಫೈಲ್​ ಫೋಟೋಗಳನ್ನು ಸೇವ್​ ಮಾಡಬೇಕೆಂದಿರುವ ಬಳಕೆದಾರರು ಸ್ಕ್ರೀನ್​ಶಾಟ್​ ಮೂಲಕ ಫೋಟೋ ಸೇವ್​ ಮಾಡಬಹುದಾಗಿದೆ.


ಇತ್ತೀಚೆಗೆ ಹ್ಯಾಕರುಗಳು ವಾಟ್ಸ್​ಆ್ಯಪ್​ ಮೇಲೆ ಕಣ್ಣು ಹಾಯಿಸಿದ್ದು, ಬಳಕೆದಾರನ ಖಾಸಗಿ ಮಾಹಿತಿಯನ್ನು ಕದಿಯಲು ಪ್ರಯತ್ನಿಸುತ್ತಿದ್ದರು. ಆದರೆ, ಇದನ್ನು ಗಮನಿಸಿದ ವಾಟ್ಸ್​ಆ್ಯಪ್​​ ಸಂಸ್ಥೆ ನೂತನ ವರ್ಷನ್​ವೊಂದನ್ನು ಪ್ಲೇಸ್ಟೋರ್​ನಲ್ಲಿ ಬಿಡುಗಡೆ ಮಾಡಿದೆ. ಹ್ಯಾಕರುಗಳಿಂದ ಮುನ್ನಚ್ಚೆರಿಕೆವಹಿಸುತ್ತಿರುವ ವಾಟ್ಸ್​ಆ್ಯಪ್​ ಇದೀಗ ಪ್ರೊಫೈಲ್​ ಪೋಟೊಗಳ ಸೇವ್​​ ಆಯ್ಕೆಯನ್ನು ಕೂಡ ತೆಗೆದು ಹಾಕಲು ಮುಂದಾಗಿದೆ.
First published: May 18, 2019, 4:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories