Whatapp Update: ವಾಟ್ಸ್ಆ್ಯಪ್​​ನಲ್ಲಿ ಕಾಣಿಸಿಕೊಂಡ ಬ್ಯಾಟರಿ ಬಗ್; ನಿಮ್ಮ ಸ್ಮಾರ್ಟ್​ಫೋನ್​ನಲ್ಲಿದೆಯಾ ಈ ಸಮಸ್ಯೆ?

ವಾಟ್ಸ್​ಆ್ಯಪ್​ 2.19.308 ಆವೃತ್ತಿಯನ್ನು ಬಳಸುತ್ತಿರುವ ಶಿಯೋಮಿ ಮತ್ತು ಒನ್​​ಪ್ಲಸ್​​​ ಬಳಕೆದಾರರಿಗೆ ಈ ಸಮಸ್ಯೆ ಕಾಣಿಸಿಕೊಂಡಿದೆ.

news18-kannada
Updated:November 8, 2019, 9:02 PM IST
Whatapp Update: ವಾಟ್ಸ್ಆ್ಯಪ್​​ನಲ್ಲಿ ಕಾಣಿಸಿಕೊಂಡ ಬ್ಯಾಟರಿ ಬಗ್; ನಿಮ್ಮ ಸ್ಮಾರ್ಟ್​ಫೋನ್​ನಲ್ಲಿದೆಯಾ ಈ ಸಮಸ್ಯೆ?
ವಾಟ್ಸ್ಆ್ಯಪ್​​
news18-kannada
Updated: November 8, 2019, 9:02 PM IST
ಇತ್ತೀಚೆಗೆ ವಾಟ್ಸ್​ಆ್ಯಪ್ ತನ್ನ​ ಆ್ಯಂಡ್ರಾಯ್ಡ್​ ಬಳಕೆದಾರರಿಗಾಗಿ ಹೊಸ ಆಪ್ಡೇಟ್​ವೊಂದನ್ನು ಬಿಡುಗಡೆ ಮಾಡಿತ್ತು. ಆದರೆ ನೂತನ ವರ್ಷನ್​ ಇನ್​​ಸ್ಟಾಲ್​ ಮಾಡಿದ ಬಳಿಕ ಬ್ಯಾಟರಿ ಬೇಗನೆ ಖಾಲಿಯಾಗುತ್ತಿದೆ ಎಂದು ಶಿಯೋಮಿ ಮತ್ತು ಒನ್​ಪ್ಲಸ್​ ಬಳಕೆದಾರರು ದೂರಿದ್ದಾರೆ.

ವಾಟ್ಸ್​ಆ್ಯಪ್​ 2.19.308 ಆವೃತ್ತಿಯನ್ನು ಬಳಸುತ್ತಿರುವ ಶಿಯೋಮಿ ಮತ್ತು ಒನ್​​ಪ್ಲಸ್​​​ ಬಳಕೆದಾರರಿಗೆ ಈ ಸಮಸ್ಯೆ ಕಾಣಿಸಿಕೊಂಡಿದೆ. ಆದರೆ ಈ ಬಗ್ಗೆ ಶಿಯೋಮಿ ಅಥವಾ ಒನ್​ಪ್ಲಸ್​ ಕಂಪೆನಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ನೂತನ ವರ್ಷನ್​ ಬಳಸುಸಿದಾಗ ಸ್ಮಾರ್ಟ್​ಫೋನ್​​ ಬ್ಯಾಟರಿ ಬೇಗ ಖಾಲಿಯಾಗಿ ಸಮಸ್ಯೆ ಉಂಟಾಗಿದೆ ಎಂದು ದೂರಿದ್ದಾರೆ.

ಈ ಹಿಂದೆ ಆ್ಯಂಡ್ರಾಯ್ಡ್​​ 9 ಪೈ ಮತ್ತು ಆ್ಯಂಡ್ರಾಯ್ಡ್​ 10 ಬಳಕೆದಾರರಿಗೆ ಈ ಸಮಸ್ಯೆ ಕಾಣಿಸಿಕೊಂಡಿದೆ. ಮಾತ್ರವಲ್ಲದೆ, ಒನ್​ಪ್ಲಸ್​​ 7ಟಿ ಸ್ಮಾರ್ಟ್​ಫೋನ್​ ಬಳಕೆದಾರರು ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಇನ್ನು ಈ ಬಗ್ಗೆ ರೆಡ್​​ಮಿ, ಗೂಗಲ್​ ಪ್ಲೇ ಸ್ಟೋರ್​, ಒನ್​ಪ್ಲಸ್​ ಫೋರಂನಲ್ಲಿ ಬಳಕೆದಾರರು ಸಮಸ್ಯೆಯ ಕುರಿತು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Rashmika Mandanna: ತುಂಬಾ ಸಿಂಪಲ್ ಆಗಿದ್ದ ರಶ್ಮಿಕಾ ಮಂದಣ್ಣ ಗ್ಲಾಮರ್ ಅವತಾರ ತಾಳಲು ಇವರೇ ಕಾರಣವಂತೆ!

ಇದನ್ನೂಓದಿ: NZ vs ENG: ಅಂದು ನೀಲಿ ಚಿತ್ರತಾರೆ ಇಂದು ಕ್ರಿಕೆಟ್ ಅಂಪೈರ್!

First published:November 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...