ವಾಟ್ಸ್​ಆ್ಯಪ್​ನಲ್ಲಿ ಈ ಫೀಚರ್​ ಬಂದರೆ ತೊಂದರೆ ಗ್ಯಾರೆಂಟಿ..!

2019ರ ಮೊದಲ ಅಪ್​ಡೇಟ್​ ಎಂಬಂತೆ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಲಿದೆ.

zahir | news18
Updated:January 3, 2019, 6:53 PM IST
ವಾಟ್ಸ್​ಆ್ಯಪ್​ನಲ್ಲಿ ಈ ಫೀಚರ್​ ಬಂದರೆ ತೊಂದರೆ ಗ್ಯಾರೆಂಟಿ..!
ಸಾಂದರ್ಭಿಕ ಚಿತ್ರ
  • News18
  • Last Updated: January 3, 2019, 6:53 PM IST
  • Share this:
2018 ರಲ್ಲಿ ವಾಟ್ಸ್​ಆ್ಯಪ್​ ಕಂಪೆನಿಯು ಅನೇಕ ಫೀಚರ್​ಗಳನ್ನು ಪರಿಚಯಿಸಿತ್ತು. ಅದರಲ್ಲಿ ಮುಖ್ಯವಾಗಿ ಸ್ವೈಪ್ ರಿಪ್ಲೈ, ಗ್ರೂಪ್​ ಕಾಲಿಂಗ್, ಸ್ಟಿಕ್ಕರ್ಸ್​ ಸೇರಿದಂತೆ ಹಲವು ಫೀಚರ್​ಗಳು ಬಳಕೆದಾರರ ಮನಗೆದ್ದಿತ್ತು. ಆದರೆ ಈ ವರ್ಷದಲ್ಲಿ ವಾಟ್ಸ್​ಆ್ಯಪ್​ ಪ್ರಸ್ತುತ ಪಡಿಸಲಿರುವ ಆಯ್ಕೆಯಿಂದ ಬಳಕೆದಾರರು ತೊಂದರೆ ಅನುಭವಿಸಲಿದ್ದಾರೆ ಎನ್ನಲಾಗಿದೆ.

2019ರ ಮೊದಲ ಅಪ್​ಡೇಟ್​ ಎಂಬಂತೆ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಲಿದೆ. ಇದರಿಂದ ಇನ್ನು ಮುಂದೆ ಸ್ಟೇಟಸ್​ನಲ್ಲಿ ಬಳಕೆದಾರರಿಗೆ ಜಾಹೀರಾತುಗಳೂ ಕೂಡ ಕಾಣಿಸಲಿದೆ. ಈ ಅಪ್​ಡೇಟ್​ನ್ನು ಪ್ರಾಯೋಗಿಕವಾಗಿ ಈಗಾಗಲೇ ಕೆಲ ಸ್ಮಾರ್ಟ್​ಫೋನ್​ಗಳಲ್ಲಿ ನೀಡಲಾಗಿದ್ದು, ಇದರಿಂದ ಬಳಕೆದಾರರು ಕಿರಿ ಕಿರಿ ಅನುಭವಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಗುಡ್ ​ನ್ಯೂಸ್: ಕೆಲವೇ ದಿನಗಳಲ್ಲಿ ಪೆಟ್ರೋಲ್ ದರ 8 ರೂ. ಇಳಿಕೆ..!

ವಿಶ್ವದಾದ್ಯಂತ 1.5 ಶತಕೋಟಿ ಬಳಕೆದಾರರನ್ನು ಹೊಂದಿರುವ ವಾಟ್ಸ್​ಆ್ಯಪ್​, ಇಲ್ಲಿಯವರೆಗೆ  ಅಪ್ಲಿಕೇಶನ್​ನಲ್ಲಿ ಜಾಹೀರಾತು ಬಿತ್ತರಿಸದೇ ಬಳಕೆ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿತ್ತು.

ಇದನ್ನೂ ಓದಿ: 2000 ರೂಪಾಯಿ ನೋಟ್ ಮುದ್ರಣ ನಿಲ್ಲಿಸಿದ ಸರ್ಕಾರ, ಮುಂದೇನು?

ಹೇಗಿರಲಿದೆ ಆಯ್ಕೆ?
ವಾಟ್ಸ್​ಆ್ಯಪ್​ನಲ್ಲಿ ಈ ಜಾಹೀರಾತುಗಳು ವೀಡಿಯೊ ರೂಪದಲ್ಲಿದೆ. ಈ ಹಿಂದೆ ಫೇಸ್​ಬುಕ್ ಇನ್​ಸ್ಟಾಗ್ರಾಂನಲ್ಲಿ ಪ್ರಕಟಿಸಲಾಗುತ್ತಿದ್ದ ಜಾಹೀರಾತು ವೀಡಿಯೊಗಳ ವೀಡಿಯೊಗಳ ರೀತಿಯಲ್ಲಿ ಇಲ್ಲೂ ವೀಡಿಯೊ ತುಣುಕನ್ನು ಪ್ರಕಟಿಸಲಾಗುತ್ತದೆ. ಈ ವೀಡಿಯೊಗಳು ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ 24 ಗಂಟೆಗಳ ಕಾಲ ಕಾಣಿಸಲಿದೆ. ಇದರಿಂದ ವಾಟ್ಸ್​ಆ್ಯಪ್​ ಬಳಕೆದಾರರಿಗೆ ಕಿರಿ ಕಿರಿ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಹೊಸ ಆಯ್ಕೆಯ ಕುರಿತು ಆರಂಭದಲ್ಲೇ ಅಪಸ್ವರಗಳು ಕೇಳಿ ಬಂದಿದೆ. ಇದರಿಂದ ಬಳಕೆದಾರರ ಇಳಿಕೆಯಾಗಲಿದೆಯೇ? ಎಂಬುದನ್ನು ಕಾದು ನೋಡಬೇಕಿದೆ.
Loading...

ಇದನ್ನೂ ಓದಿ: ಪೆಟ್ರೋಲಿಯಂ ಡೆಲಿವರಿ ಸೇವೆ: ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಡೀಸೆಲ್-ಪೆಟ್ರೋಲ್..!

First published:January 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...