ಕೆಲ ಮೊಬೈಲ್​ನಲ್ಲಿ ವಾಟ್ಸಪ್​ ಸ್ಥಗಿತ: ಈ ಪಟ್ಟಿಯಲ್ಲಿ ನಿಮ್ಮ ಸ್ಮಾರ್ಟ್​ಫೋನ್​ ಇದೆಯೇ ಪರೀಕ್ಷಿಸಿಕೊಳ್ಳಿ

ಕಳೆದ ವರ್ಷಾಂತ್ಯದಲ್ಲಿ ಬ್ಲಾಕ್​ಬೆರಿ ಓಎಸ್, ಬ್ಲಾಕ್​ಬೆರಿ 10, ವಿಂಡೋಸ್​ ಫೋನ್​ 8.0 ಹಾಗೂ ಇದಕ್ಕಿಂತ ಹಳೆಯ ಮಾದರಿಯ ಆಪರೇಟಿಂಗ್ ಸಿಸ್ಟಂ ಹೊಂದಿದ್ದ ಮೊಬೈಲ್​ನಲ್ಲಿ ವಾಟ್ಸಪ್​ ಸೇವೆಯನ್ನು ಸ್ಥಗಿತಗೊಳಿಸಿತ್ತು.

zahir | news18
Updated:December 22, 2018, 3:55 PM IST
ಕೆಲ ಮೊಬೈಲ್​ನಲ್ಲಿ ವಾಟ್ಸಪ್​ ಸ್ಥಗಿತ: ಈ ಪಟ್ಟಿಯಲ್ಲಿ ನಿಮ್ಮ ಸ್ಮಾರ್ಟ್​ಫೋನ್​ ಇದೆಯೇ ಪರೀಕ್ಷಿಸಿಕೊಳ್ಳಿ
ವಾಟ್ಸಪ್​
  • News18
  • Last Updated: December 22, 2018, 3:55 PM IST
  • Share this:
ವಿಶ್ವದ ಜನಪ್ರಿಯ ಮೆಸೇಜಿಂಗ್ ಆ್ಯಪ್​ ವಾಟ್ಸಪ್​ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಲು ಮುಂದಾಗಿದೆ. ಅದರಲ್ಲಿ ಮುಖ್ಯವಾಗಿ 2019ರ ಬಳಿಕ ಕೆಲ ಮೊಬೈಲ್​ನಲ್ಲಿ ವಾಟ್ಸಪ್​ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಹೀಗಾಗಿ ಡಿಸೆಂಬರ್​ 31 ರ ಬಳಿಕ ಕೆಲ ಆಪರೇಟಿಂಗ್ ಸಿಸ್ಟಂಗಳಲ್ಲಿ ವಾಟ್ಸಪ್​ ಬಳಸಲಾಗುವುದಿಲ್ಲ.

ಕೆಲ ವರದಿಗಳ ಮಾಹಿತಿ ಪ್ರಕಾರ ನೋಕಿಯಾ S40 ಗಾಗಿ ವಾಟ್ಸಪ್​ನ್ನು ಅಭಿವೃದ್ಧಿಪಡಿಸಲಾಗುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನೋಕಿಯಾ S40 ಫೋನ್​ನಲ್ಲಿ ವಾಟ್ಸಪ್​​ ಕಾರ್ಯ ನಿರ್ವಹಿಸುವುದಿಲ್ಲ ಎನ್ನಲಾಗಿದೆ.

ಇದಲ್ಲದೆ, ಅಂಡ್ರಾಯ್ಡ್​ ಆವೃತ್ತಿಯ 2.3.7 ಮತ್ತು ಹಿಂದಿನ ಆಪರೇಟಿಂಗ್​ ಸಿಸ್ಟಂಗಳಿರುವ ಮೊಬೈಲ್​ನಲ್ಲೂ ಹಾಗೂ ಐಒಎಸ್ 7​ ಮತ್ತು ಅದಕ್ಕಿಂತ ಹಳೆಯ ಆಪರೇಟಿಂಗ್ ಸಿಸ್ಟಂಗಳಲ್ಲಿ ಕಾರ್ಯ ನಿರ್ವಹಿಸುವ ಐಫೋನ್​ಗಳಲ್ಲಿ ಫೆಬ್ರವರಿ 1, 2020 ರ ನಂತರ ವಾಟ್ಸಪ್​ ಕಾರ್ಯ ನಿರ್ವಹಿಸುವುದಿಲ್ಲ.

ಹಳೆಯ ಮಾದರಿಯ ಅಂಡ್ರಾಯ್ಡ್​ ಮತ್ತು ಹಳೆಯ ಐಒಎಸ್​ 7 ಮೊಬೈಲ್​ಗಳಿಗೆ ಕಂಪೆನಿಯು ಹೊಸ ಫೀಚರ್​ಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಎಂದು ವಾಟ್ಸಪ್​ ತಿಳಿಸಿದೆ. ಮುಂದಿನ ಏಳು ವರ್ಷಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಮಾದರಿಯ ಸ್ಮಾರ್ಟ್​ಫೋನ್​ಗಳನ್ನು ಕೇಂದ್ರೀಕರಿಸಿ ವಾಟ್ಸಪ್​ ಅನ್ನು ಅಭಿವೃದ್ಧಿಪಡಿಸಲು ಸಂಸ್ಥೆಯು ಯೋಜನೆ ಹಾಕಿಕೊಂಡಿದ್ದು, ಇದರಿಂದ ಮುಂಬರುವ ದಿನಗಳಲ್ಲಿ ಮತ್ತಷ್ಟು ಸ್ಮಾರ್ಟ್​ಫೋನ್​ಗಳಲ್ಲಿ ವಾಟ್ಸಪ್​ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ: ಏರ್​​ ಇಂಡಿಯಾದ ವಿವಿಧ ಹುದ್ದೆಗಳಿಗೆ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಅವಕಾಶ

ಈ ವರ್ಷಾಂತ್ಯದಲ್ಲಿ ನೋಕಿಯಾ S40 ಮೊಬೈಲ್​ನಲ್ಲಿ ವಾಟ್ಸಪ್​ ಸ್ಥಗಿತವಾಗಲಿದ್ದು, ಅದಾಗ್ಯೂ ನಿಮ್ಮ ಮೊಬೈಲ್​ನ ಆಪರೇಟಿಂಗ್​ ಸಿಸ್ಟಂನ್ನು ಅಪ್​ಡೇಟ್​ ಮಾಡಿಕೊಳ್ಳುವ ಅವಕಾಶವಿದ್ದರೆ ವಾಟ್ಸಪ್​ ಅಪ್ಲಿಕೇಶನ್ ಬಳಸಿಕೊಳ್ಳಬಹುದು ಎಂದು ಸಂಸ್ಥೆ ಹೇಳಿದೆ.

ಕಳೆದ ವರ್ಷಾಂತ್ಯದಲ್ಲಿ ಬ್ಲಾಕ್​ಬೆರಿ ಓಎಸ್, ಬ್ಲಾಕ್​ಬೆರಿ 10, ವಿಂಡೋಸ್​ ಫೋನ್​ 8.0 ಹಾಗೂ ಇದಕ್ಕಿಂತ ಹಳೆಯ ಮಾದರಿಯ ಆಪರೇಟಿಂಗ್ ಸಿಸ್ಟಂ ಹೊಂದಿದ್ದ ಮೊಬೈಲ್​ನಲ್ಲಿ ವಾಟ್ಸಪ್​ ಸೇವೆಯನ್ನು ಸ್ಥಗಿತಗೊಳಿಸಿತ್ತು.ಇದನ್ನೂ ಓದಿ: ವಿಶೇಷ ಆಫರ್: ಕೇವಲ 101 ರೂ.ಗೆ ಸ್ಮಾರ್ಟ್​ಫೋನ್​ ಖರೀದಿಸುವ ಸುವರ್ಣಾವಕಾಶ

First published:December 22, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ