WhatsApp: ನಂಬರ್​ ಸೇವ್​ ಮಾಡದೆ ವಾಟ್ಸ್​ಆ್ಯಪ್​ ಮೆಸೇಜ್​ ಮಾಡ್ಬೋದು! ಹೇಗೆ ಗೊತ್ತಾ?

WhatsApp Click to Chat: ವಾಟ್ಸ್ಆ್ಯಪ್​ ಇದೀಗ ಕ್ಲಿಕ್ ಟು ಚಾಟ್ ಮೂಲಕ (click to chat) ಮೆಸೇಜ್‌ ಕಳಿಸುವ ವಿಧಾನವನ್ನು ಇನ್ನು ಸುಲಭಗೊಳಿಸಿರುವುದು ಬಳಕೆದಾರರ ಸಂತಸವನ್ನು ಇಮ್ಮಡಿಗೊಳಿಸಿದೆ. ಅದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ

ವಾಟ್ಸ್​ಆ್ಯಪ್​/ WhatsApp

ವಾಟ್ಸ್​ಆ್ಯಪ್​/ WhatsApp

  • Share this:
    ಸ್ಮಾರ್ಟ್‌ ಪೋನ್‌ (Smart phone) ಯುಗದಲ್ಲಿ ವಾಟ್ಸ್​ಆ್ಯಪ್ ಬಳಸದವರಿಲ್ಲ, ನಿತ್ಯ ನಮ್ಮ ಒಡನಾಡಿ ಆಗಿರುವ ವಾಟ್ಸ್​ಆ್ಯಪ್( WhatsApp) ಇಂದು ಸದಾ ನಮ್ಮ ಜೊತೆ ಜೊತೆಯಾಗಿಯೇ ಬೆರತು ಹೋಗಿದೆ. ಕ್ಷಣಕ್ಕೊಮ್ಮೆ ಪೋನ್‌ ತೆಗೆದು ವಾಟ್ಸ್​ಆ್ಯಪ್ ಮೆಸೇಜ್‌(message) ಬಂದಿದ್ಯಾ ಅಂತ ನೋಡುವ ಕುತುಹಲ ಎಂದಿಗೂ ಕಡಿಮೆ ಆಗಲ್ಲ, ಊಟ, ನೀರು ಬೇಕಾದ್ರೆ ಬಿಡ್ತಿವಿ ವಾಟ್ಸ್​ಆ್ಯಪ್ ಮಾತ್ರ ಬಿಡಲ್ಲ ಅಂತಾರೆ ಜನ, ಹಾಗಾಗಿ ವಾಟ್ಸ್​ಆ್ಯಪ್ ನ ಹತ್ತುಹಲವು ವಿಶೇಷಗಳು ಬಳಕೆದಾರರ ಮನದೊಳಗೆ ಮನೆ (home)ಮಾಡಿಕೊಂಡಿದೆ ಎಂದರೆ ತಪ್ಪಾಗಲಾದರು. ಇದೀಗ ಕ್ಲಿಕ್ ಟು ಚಾಟ್ ಮೂಲಕ (click to chat) ಮೆಸೇಜ್‌ ಕಳಿಸುವ ವಿಧಾನವನ್ನು ಇನ್ನು ಸುಲಭಗೊಳಿಸಿರುವುದು ಬಳಕೆದಾರರ ಸಂತಸವನ್ನು ಇಮ್ಮಡಿಗೊಳಿಸಿದೆ. ಅದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ

    ಕಾಂಟ್ಯಾಕ್ಟ್ ಲಿಸ್ಟ್ ಸೇರುವ ಅಗತ್ಯವಿಲ್ಲ

    ವಾಟ್ಸ್​ಆ್ಯಪ್ ನಲ್ಲಿ ಮೆಸೇಜ್ ಕಳಿಸುವುದು ತುಂಬಾ ಸುಲಭ ಮತ್ತು ಸರಳ. ಆದರೆ ಈ ಸರಳ ವಿಧಾನ ಕಠಿಣವಾಗುವುದು ಮತ್ತು ಕಾಂಟ್ಯಾಕ್ಟ್ ನಲ್ಲಿ ಅನವಶ್ಯಕ ನಂಬರ್ ಗಳನ್ನು ಸೇವ್ ಮಾಡಿಕೊಳ್ಳುವಂತೆ ಮಾಡುವುದು ಯಾವಾಗವೆಂದರೆ, ಯಾರಿಗೂ ಅಪರಿಚಿತ ವ್ಯಕ್ತಿಯೊಬ್ಬರು ಮೊದಲ ಬಾರಿಗೆ ಪರಿಚಿತವಾಗಿ ಯಾವುದೋ ಪ್ರಮುಖ ಮೆಸೇಜ್ ಒಂದನ್ನು ಕಳುಹಿಸಬೇಕು ಎಂದಾಗ.. ಹೌದು ಇಂತಹ ಸಂದರ್ಬದಲ್ಲಿ ಆ ವ್ಯಕ್ತಿಯ ಫೋನ್ ನಂಬರ್ ನಮ್ಮ ಕಾಂಟ್ಯಾಕ್ಟ್ ಲಿಸ್ಟ್ ಸೇರುವ ಅಗತ್ಯವಿರುವುದಿಲ್ಲ ಆದರೆ ಮೆಸೇಜ್ ಕಳುಹಿಸುವ ಅಗತ್ಯವಿರುತ್ತೆ.

    ಇದನ್ನು ಓದಿ:WhatsApp: ವಾಟ್ಸ್​ಆ್ಯಪ್​ ಚಾಟ್​ ಡಿಲೀಟ್​ ಆದ್ರೆ ಟೆನ್ಶನ್​ ಮಾಡ್ಬೇಡಿ... ಹೀಗೆ ಮರಳಿ ಪಡಿಬೋದು

    ಮೇಸೇಜ್ ಕಳಿಸಲು ವಾಟ್ಸ್​ಆ್ಯಪ್ ಸುಲಭ ವಿಧಾನವಾಗಿರುವುದರಿಂದ ವಾಟ್ಸ್​ಆ್ಯಪ್ ಮೆಸೇಜ್ ಕಳಿಸಲು ಮುಂದಾದರೆ, ಅವರ ನಂಬರ್ ನ್ನು ಕಾಂಟ್ಯಾಕ್ಟ್ ಪಟ್ಟಿಗೆ ಸೇರಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಇಷ್ಟು ದಿನ ಇತ್ತು. ಆದರೆ ಈ ತಲೆನೋವು ಇನ್ನುಮುಂದೆ ಇರುವುದಿಲ್ಲ. ಚಾಟ್ ಮಾಡುವ ಆಪ್ ವಾಟ್ಸ್​ಆ್ಯಪ್ ನಲ್ಲಿ ಹೊಸ ವೈಶಿಷ್ಟ್ಯವೊಂದು ಸೇರಿಕೊಂಡಿದೆ  ಅದುವೇ “ಕ್ಲಿಕ್ ಟು ಚಾಟ್” . ಇದರ ಮೂಲಕ ನಂಬರ್ ನ್ನು ಕಾಂಟ್ಯಾಕ್ಟ್ ನಲ್ಲಿ ಸೇವ್ ಮಾಡಿಕೊಳ್ಳದೇ ಇದ್ದರೂ ಮೆಸೇಜ್ ಕಳಿಸಲು ಸಾಧ್ಯವಿದೆ.

    ವಾಟ್ಸ್​ಆ್ಯಪ್ ಬಳಕೆದಾರ ತನಗೆ ಅಗತ್ಯವಿಲ್ಲದ, ಅಪರಿಚಿತರ ಉದ್ದ ಪಟ್ಟಿಯನ್ನು ತನ್ನ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಸೇರಿಸಿಕೊಳ್ಳುವ ಮತ್ತು ಅದನ್ನು ಮೈಂಟೈನ್ ಮಾಡುವ ಅಗತ್ಯತೆಯನ್ನು ನಿವಾರಿಸುತ್ತೆ. ಈಗಾಗಲೇ, ಕ್ಲಿಕ್ ಟು ಚಾಟ್ ಆಯ್ಕೆಯು ಆಂಡ್ರಾಯ್ಡ್ ಮತ್ತು ವೆಬ್ ಬಳಕೆದಾರರಿಗೆ ಲಭ್ಯವಿದೆ.

    ನಿಮ್ಮ ಸ್ವಂತ ಲಿಂಕ್ ಅನ್ನು ರಚಿಸಿ

    https://wa.me/<number> ಎಲ್ಲಿಗೆ<number> ಅಂತರಾಷ್ಟ್ರೀಯ ಸ್ವರೂಪದಲ್ಲಿ ಪೂರ್ಣ ಫೋನ್ ಸಂಖ್ಯೆ. ಅಂತರರಾಷ್ಟ್ರೀಯ ಸ್ವರೂಪದಲ್ಲಿ ಫೋನ್ ಸಂಖ್ಯೆಯನ್ನು ಸೇರಿಸುವಾಗ ಯಾವುದೇ ಸೊನ್ನೆಗಳು, ಬ್ರಾಕೆಟ್‌ಗಳು ಅಥವಾ ಡ್ಯಾಶ್‌ಗಳನ್ನು ಬಿಟ್ಟುಬಿಡಿ.

    ಉದಾಹರಣೆಗಳು:

    ಬಳಸಿ: https://wa.me/1XXXXXXXXXX

    ಬಳಸಬೇಡಿ: https://wa.me/+001-(XXX)XXXXXXX

    ತುಂಬಿದ ಸಂದೇಶದೊಂದಿಗೆ ನಿಮ್ಮ ಸ್ವಂತ ಲಿಂಕ್ ಅನ್ನು ರಚಿಸಿ

    ಮೊದಲೇ ತುಂಬಿದ ಸಂದೇಶವು ಚಾಟ್‌ನ ಪಠ್ಯ ಕ್ಷೇತ್ರದಲ್ಲಿ ಸ್ವಯಂಚಾಲಿತವಾಗಿ ಗೋಚರಿಸುತ್ತದೆ. https://wa.me/whatsappphonenumber?text=urlencodedtext ಅನ್ನು ಬಳಸಿ whatsappphonenumber ಅಂತರಾಷ್ಟ್ರೀಯ ಸ್ವರೂಪದಲ್ಲಿ ಪೂರ್ಣ ಫೋನ್ ಸಂಖ್ಯೆ ಮತ್ತು urlencodedtext ಯು URL-ಎನ್ಕೋಡ್ ಮಾಡಲಾದ  ಸಂದೇಶವಾಗಿದೆ.

    ಇದನ್ನು ಓದಿ:WhatsApp ಬಳಸುತ್ತಿದ್ದೀರಾ? ಹಾಗಿದ್ರೆ ಈ 6 ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳಿ

    ಉದಾಹರಣೆ: https://wa.me/1XXXXXXXXXX?text=I'm%20interested%20in%20your%20car%20for%20sale

    ಕೇವಲ  ತುಂಬಿದ ಸಂದೇಶದೊಂದಿಗೆ ಲಿಂಕ್ ರಚಿಸಲು, https://wa.me/?text=urlencodedtext ಬಳಸಿ

    ಉದಾಹರಣೆ: https://wa.me/?text=I'm%20inquiring%20about%20the%20apartment%20listing`

    ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, ನಿಮ್ಮ ಸಂದೇಶವನ್ನು ನೀವು ಕಳುಹಿಸಬಹುದಾದ ಸಂಪರ್ಕಗಳ ಪಟ್ಟಿಯನ್ನು ನಿಮಗೆ ತೋರಿಸಲಾಗುತ್ತದೆ.

    ಅಲ್ಲದೆ, WhatsApp ಬಳಕೆದಾರರು ಚಾಟ್ ಮಾಡಲು ನಿಮ್ಮ ಸ್ವಂತ ಲಿಂಕ್ ಅನ್ನು ರಚಿಸುವ ಪ್ರಕ್ರಿಯೆಯು Android ಮತ್ತು iPhone ಎರಡಕ್ಕೂ ಒಂದೇ ಆಗಿರುತ್ತದೆ ಎಂದು ತಿಳಿಯಬಹುದು
    Published by:vanithasanjevani vanithasanjevani
    First published: