WhatsApp ಬಳಸುತ್ತಿದ್ದೀರಾ? ಹಾಗಿದ್ರೆ ಈ 6 ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳಿ

WhatsAppನಲ್ಲಿ ಇತ್ತೀಚೆಗೆ ಕೆಲವು ಹೊಸ ವೈಶಿಷ್ಟ್ಯಗಳನ್ನು ನಾವು ನೋಡುತ್ತಿದ್ದೇವೆ. ಈ ಕೆಲವು ವೈಶಿಷ್ಟ್ಯಗಳು ವಾಟ್ಸ್‌ಆ್ಯಪ್‌ ಬಳಸುವವರ ಅನುಭವವನ್ನು ಮತ್ತಷ್ಟು ಸುಧಾರಿಸುತ್ತದೆ.

ವಾಟ್ಸ್ಆ್ಯಪ್

ವಾಟ್ಸ್ಆ್ಯಪ್

  • Share this:
    ವಾಟ್ಸ್‌ಆ್ಯಪ್‌ (WhatsApp) ಅನ್ನು ನಮ್ಮಲ್ಲಿ ಬಹುತೇಕ ಜನರು ಬಳಸುತ್ತಾರಾದರೂ ಅದರಲ್ಲಿನ ಎಲ್ಲ ವೈಶಿಷ್ಟ್ಯಗಳ ಬಗ್ಗೆ ಎಲ್ಲರಿಗೂ ಮಾಹಿತಿ ಇರೋದಿಲ್ಲ. ಕೆಲವರಿಗೆ ಕೇವಲ ಮೆಸೇಜ್ (Messenge) ಕಳುಹಿಸಲು ಮತ್ತು ಸ್ವೀಕರಿಸುವುದು ಮಾತ್ರ ಗೊತ್ತು. ಹಾಗಾಗಿ ವಾಟ್ಸ್‌ಆ್ಯಪ್‌ ಬಳಕೆಯ ಗುಣಮಟ್ಟ ಸುಧಾರಿಸಲು ವಾಟ್ಸ್‌ಆ್ಯಪ್‌ನ ಕೆಲವು ವೈಶಿಷ್ಟ್ಯಗಳ ಪಟ್ಟಿಗಳನ್ನು ಪರಿಚಯಿಸುತ್ತಾ ಬಂದಿದೆ. WhatsAppನಲ್ಲಿ ಇತ್ತೀಚೆಗೆ ಕೆಲವು ಹೊಸ ವೈಶಿಷ್ಟ್ಯಗಳು ಬಳಕೆದಾರರಿಗೆ ಮತ್ತಷ್ಟು ಪ್ರಯೋಜನ ಒದಗಿಸಿದೆ. ಹೀಗಾಗಿ ಮೆಟಾ ಒಡೆತನದ ವಾಟ್ಸ್ಆ್ಯಪ್​ ಪರಿಚಯಿಸಿರುವ ಕೆಲವು ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.

    1) ನಿಮ್ಮ ಪ್ರೈಮರಿ ಫೋನ್ ಇಲ್ಲದೆಯೇ ಮಲ್ಟಿ ಡಿವೈಸ್‌ಗಳಲ್ಲಿ ವಾಟ್ಸ್‌ಆ್ಯಪ್‌ ಬಳಸಿ

    ಈಗ WhatsApp ಮಲ್ಟಿ ಡಿವೈಸ್ ಬೀಟಾ ಪ್ರೋಗ್ರಾಂ ಚಾಲನೆಯಲ್ಲಿದೆ. ಇದು ಸೆಟ್ಟಿಂಗ್‌ಗಳು > ಲಿಂಕ್ಡ್ ಡಿವೈಸಸ್ ವಿಭಾಗದಲ್ಲಿ ಕಾಣಿಸುತ್ತದೆ. ಇದರೊಂದಿಗೆ, WhatsApp ಬಳಕೆದಾರರು ತಮ್ಮ ಫೋನ್‌ಗಳನ್ನು ಸಂಪರ್ಕಿಸದೆಯೇ ಲಿಂಕ್ ಮಾಡಲಾದ ಕಂಪ್ಯಾನಿಯನ್ ಸಾಧನಗಳನ್ನು ಬಳಸಲು ಸಾಧ್ಯವಾಗುತ್ತದೆ. ಒಬ್ಬರು ತಮ್ಮ ಖಾತೆಗೆ ನಾಲ್ಕು ಸಾಧನಗಳನ್ನು ಲಿಂಕ್ ಮಾಡಬಹುದು. ನಿಮ್ಮ ಫೋನ್ ಇಂಟರ್ನೆಟ್ ಸಂಪರ್ಕ ಹೊಂದಿಲ್ಲದಿದ್ದರೂ ಸಹ ನೀವು WhatsApp ವೆಬ್, ಡೆಸ್ಕ್‌ಟಾಪ್ ಮತ್ತು ಪೋರ್ಟಲ್ ಬಳಸಲು ಸಾಧ್ಯವಾಗುತ್ತದೆ. ಆದರೂ, ಮುಖ್ಯ ಸಾಧನದಲ್ಲಿ 14 ದಿನಗಳವರೆಗೆ ಇಂಟರ್ನೆಟ್ ಸಂಪರ್ಕ ಇಲ್ಲದಿದ್ದರೆ, ಲಿಂಕ್ ಮಾಡಲಾದ ಸಾಧನಗಳು ಸ್ವಯಂಚಾಲಿತವಾಗಿ ಲಾಗ್ ಔಟ್ ಆಗುತ್ತವೆ.

    2) ಅಪ್ಲಿಕೇಶನ್‌ನಲ್ಲಿ ಕಸ್ಟಮೈಸ್ ಮಾಡಿದ ಸ್ಟಿಕ್ಕರ್‌ಗಳನ್ನು ರಚಿಸಿ

    ಹೊಸದಾಗಿ ಸೇರಿಸಲಾದ ಸ್ಟಿಕ್ಕರ್ ಮೇಕರ್ ಉಪಕರಣ ಬಳಸಿಕೊಂಡು ನಿಮ್ಮ ಸ್ವಂತ ಕಸ್ಟಮ್ ಸ್ಟಿಕ್ಕರ್‌ಗಳನ್ನು ಮಾಡಲು WhatsApp ಈಗ ನಿಮಗೆ ಅವಕಾಶ ಕೊಡುತ್ತದೆ. ಪ್ಲಾಟ್‌ಫಾರ್ಮ್‌ನ ಸ್ಟಿಕ್ಕರ್ ವಿಭಾಗದಲ್ಲಿ ಅದನ್ನು ಕಾಣಬಹುದು. ಯಾವುದೇ WhatsApp ಚಾಟ್ ತೆರೆದು, ಪೇಪರ್‌ಕ್ಲಿಪ್ ಐಕಾನ್ ಮೇಲೆ ಕ್ಲಿಕ್ ಮಾಡಿ, ತದನಂತರ "ಸ್ಟಿಕ್ಕರ್" ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ. ನಿಮ್ಮ ಕಸ್ಟಮ್ ಸ್ಟಿಕ್ಕರ್ ರಚಿಸಲು ನೀವು ನಂತರ ಫೋಟೋವನ್ನು ಅಪ್‌ಲೋಡ್ ಮಾಡಬಹುದು. WhatsApp ನಿಮಗೆ ಔಟ್‌ಲೈನ್ ಸೇರಿಸಲು, ಫೋಟೋವನ್ನು ಸ್ಟಿಕ್ಕರ್‌ನಲ್ಲಿ ಕ್ರಾಪ್ ಮಾಡಲು ಮತ್ತು ಅದಕ್ಕೆ ಎಮೋಜಿ, ಸ್ಟಿಕ್ಕರ್‌ಗಳು ಅಥವಾ ಪಠ್ಯ ಸೇರಿಸುವ ಅವಕಾಶ ಕೊಡುತ್ತದೆ. ಈ ವೈಶಿಷ್ಟ್ಯವು ಪ್ರಸ್ತುತ WhatsAppನ ವೆಬ್ ಆವೃತ್ತಿಗೆ ಲಭ್ಯವಿದೆ ಮತ್ತು ಮುಂಬರುವ ವಾರಗಳಲ್ಲಿ ಡೆಸ್ಕ್‌ಟಾಪ್ ಆವೃತ್ತಿಗಾಗಿ ಕಸ್ಟಮ್ ಸ್ಟಿಕ್ಕರ್ ವೈಶಿಷ್ಟ್ಯ ಬಿಡುಗಡೆ ಮಾಡಲು ಕಂಪನಿಯು ಯೋಜಿಸಿದೆ.

    3) ಎಲ್ಲಾ WhatApp ಚಿತ್ರಗಳನ್ನು ನೇರವಾಗಿ PCಯಲ್ಲಿ ಡೌನ್‌ಲೋಡ್ ಮಾಡಿ

    ನೀವು WhatsApp ನಲ್ಲಿನ ಫೋಟೋಗಳನ್ನು ನೇರವಾಗಿ ನಿಮ್ಮ PCಯಲ್ಲಿ ಸಂಗ್ರಹಿಸಲು ಬಯಸಿದರೆ, WhatsApp ವೆಬ್ ಬಳಸಿಕೊಂಡು ಅದನ್ನು ಮಾಡಬಹುದು. ನಿಮ್ಮ PC ಅಥವಾ ಲ್ಯಾಪ್‌ಟಾಪ್‌ನಲ್ಲಿ WhatsApp ವೆಬ್ ಲಿಂಕ್ ತೆರೆಯಿರಿ ಮತ್ತು ಯಾವುದೇ ಚಾಟ್‌ಗೆ ಹೋಗಿ. ಕಾಂಟ್ಯಾಕ್ಟ್ ಅಥವಾ ಗ್ರೂಪ್ ಹೆಸರಿನ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮಗೆ "ಮೀಡಿಯಾ" ವಿಭಾಗ ಕಾಣುತ್ತದೆ. ಅದರ ನಂತರ, ನಿಮ್ಮ ಕರ್ಸರ್ ಅನ್ನು ಟಿಕ್ ಮಾರ್ಕ್ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ಎಲ್ಲಾ ಫೋಟೋಗಳನ್ನು ಆಯ್ಕೆ ಮಾಡಿ, ಅವುಗಳನ್ನು ಡೌನ್‌ಲೋಡ್ ಮಾಡಬಹುದು.

    ಇದನ್ನು ಓದಿ: Dubsmash: ಫೆ. 22ರಿಂದ ಡಬ್ಸ್‌ಮ್ಯಾಶ್ ಬಳಕೆಗೆ ಸಿಗಲ್ಲ, ಡೌನ್ಲೋಡ್ ಮಾಡಲು ಸಾಧ್ಯವಿಲ್ಲ!

    4) ವ್ಯೂ ಒನ್ಸ್ ಮೀಡಿಯಾ

    ವಾಟ್ಸ್‌ಆ್ಯಪ್‌ನಲ್ಲಿ ನಿಮಗೊಂದು ಪೋಟೋ ಬಂದಾಗ ನೀವು ಅದನ್ನು ತೆರೆದು ನೋಡಿ, ಚಾಟ್‌ನಿಂದ ಹೊರಬಂದ ನಂತರ ಆ ಫೋಟೋ ಕಣ್ಮರೆಯಾಗುತ್ತದೆ. ಈ ವೈಶಿಷ್ಟ್ಯವನ್ನು ಈ ವರ್ಷದ ಆಗಸ್ಟ್‌ನಲ್ಲಿ ಪ್ರಾರಂಭಿಸಲಾಯಿತು. ವ್ಯೂ ಒನ್ಸ್ ವೈಶಿಷ್ಟ್ಯ ಬಳಸಿಕೊಂಡರೆ ನೀವು ಕಳುಹಿಸುವ ಯಾವುದೇ ಫೋಟೋ ಅಥವಾ ವೀಡಿಯೊವನ್ನು ಇತರರು ತಮ್ಮ ಗ್ಯಾಲರಿಯಲ್ಲಿ ಸೇವ್ ಮಾಡಿಕೊಳ್ಳಲು ಆಗುವುದಿಲ್ಲ. ಆದರೆ, ನೀವು ಹೀಗೆ ಮಾಡಬೇಕು ಎಂದರೆ ಪ್ರತಿಬಾರಿಯೂ ವ್ಯೂ ಒನ್ಸ್ ಆಪ್ಷನ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಒಮ್ಮೆ ನೀವು ವ್ಯೂ ಒನ್ಸ್ ಫೋಟೋ ಅಥವಾ ವಿಡಿಯೋವನ್ನು ಕಳುಹಿಸಿದರೆ, ನಿಮ್ಮ ಸ್ನೇಹಿತರು ಅದನ್ನು ಒಮ್ಮೆ ತೆರೆದು ನೋಡಿದ ಮೇಲೆ WhatsApp ಅದನ್ನು ಅವರಿಗೆ ಮತ್ತೆ ತೋರಿಸುವುದಿಲ್ಲ ಎಂಬುದನ್ನು ಗಮನಿಸಬೇಕು. ಇದರ ಜೊತೆಗೆ, ವ್ಯೂ ಒನ್ಸ್ ವೈಶಿಷ್ಟ್ಯದೊಂದಿಗೆ ಕಳುಹಿಸಲಾದ ಅಥವಾ ಸ್ವೀಕರಿಸಿದ ಫೋಟೋಗಳು ಅಥವಾ ವಿಡಿಯೊಗಳನ್ನು ಫಾರ್ವರ್ಡ್ ಮಾಡಲು, ಸೇವ್ ಮಾಡಲು, ಸ್ಟಾರ್ ಮಾಡಲು ಅಥವಾ ಹಂಚಿಕೊಳ್ಳಲು ಅವಕಾಶ ಇರೋದಿಲ್ಲ.

    5) ನೋಟಿಫಿಕೇಶನ್ ಮ್ಯಾನೇಜರ್

    ಕೆಲವು ಸಂದರ್ಭಗಳಲ್ಲಿ WhatsApp ಸಂದೇಶಗಳ ನೋಟಿಫಿಕೇಶನ್‌ಗಳಿಂದ ಕಿರಿಕಿರಿ ಆಗಬಹುದು. ನೀವು ಸೆಟ್ಟಿಂಗ್‌ಗಳು > ನೋಟಿಫಿಕೇಶನ್ಸ್ > ಹೈ ಪ್ರಿಯಾರಿಟಿ ನೋಟಿಫಿಕೇಶನ್ಸ್‌ಗೆ ಹೋಗಿ ಅದನ್ನು ಆಫ್ ಮಾಡುವ ಮೂಲಕ ಇದನ್ನು ಮಾಡಬಹುದು. ನೀವು ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳ ವಿಭಾಗದಲ್ಲೂ WhatsAppಗಾಗಿ ನೋಟಿಫಿಕೇಶನ್‌ಗಳನ್ನು ಆಫ್ ಮಾಡಬಹುದು.

    ಇದನ್ನು ಓದಿ: Electric plane: ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ವಿಮಾನವಿದು! ಇದರ ವಿಶೇಷತೆ ಏನು ಗೊತ್ತಾ?

    6) ಆಟೋ ಡೌನ್‌ಲೋಡ್ ಸೆಟ್ ಮಾಡಿ

    ಡೀಫಾಲ್ಟ್ ಆಗಿ, WhatsApp ಸ್ವಯಂಚಾಲಿತವಾಗಿ ನಿಮ್ಮ ಸೆಲ್ಯುಲಾರ್ ಸಂಪರ್ಕದ ಮೂಲಕ ಫೋಟೋಗಳನ್ನು ಡೌನ್‌ಲೋಡ್ ಮಾಡುತ್ತದೆ. ನೀವು ಸಾಕಷ್ಟು ಅನಗತ್ಯ ಫೋಟೋಗಳು ಮತ್ತು ವಿಡಿಯೋಗಳನ್ನು ಕಳುಹಿಸುವ ಗ್ರೂಪ್‌ಗಳಲ್ಲಿ ಇದ್ದರೆ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ಟೋರೇಜ್ ಉಳಿಸಲು ನೀವು ಆಟೋ ಡೌನ್‌ಲೋಡ್ ಆಯ್ಕೆಯನ್ನು ಆಫ್ ಮಾಡಬಹುದು. WhatsAppನಲ್ಲಿ ಮೂರು-ಚುಕ್ಕೆಗಳ ಬಟನ್ ಮೇಲೆ ಟ್ಯಾಪ್ ಮಾಡಿ> ಸೆಟ್ಟಿಂಗ್‌ಗಳು> ಸ್ಟೋರೇಜ್ ಅಂಡ್ ಡೇಟಾ> ಮೀಡಿಯಾ ಆಟೋ ಡೌನ್ ಲೋಡ್ ಗೆ ಹೋಗಿ, ಇಲ್ಲಿ, WhatsApp ಯಾವಾಗ ತಾನಾಗಿಯೇ ಮೀಡಿಯಾ ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಕು ಎಂಬುದನ್ನು ನೀವು ಆಯ್ಕೆ ಮಾಡಬಹುದು.
    Published by:Harshith AS
    First published: