ವಾಟ್ಸ್​ಆ್ಯಪ್​​ ಶೇರ್​ ಮಾಡುವ ಫೈಲ್​ಗಳ ಮೇಲೆ ಕಳ್ಳರ ಕಣ್ಣು: ಹ್ಯಾಕ್​ ಆಗಬಹುದು ಎಚ್ಚರ!

ವಾಟ್ಸ್​ಆ್ಯಪ್​ ಮತ್ತು ಟೆಲಿಗ್ರಾಂ ಅಪ್ಲಿಕೇಶನ್​ನಿಂದ ಕಳುಹಿಸುವ ಮತ್ತು ಸೇವ್​ ಮಾಡುತ್ತಿರುವ ಫೈಲ್​ಗಳು ಸುರಕ್ಷಿತವಲ್ಲ ಎಂಬ ವರದಿಯೊಂದು ಅಧ್ಯಯನದ ಮೂಲಕ ಬೆಳಕಿಗೆ ಬಂದಿದೆ. ಸ್ಮಾರ್ಟ್​ಫೋನ್​ನಲ್ಲಿ ಸೇವ್​​ ಆಗುತ್ತಿರುವ ಫೈಲ್​ಗಳು ಹ್ಯಾಕ್​ ಆಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದೆ.

Harshith AS | news18
Updated:July 18, 2019, 6:17 PM IST
ವಾಟ್ಸ್​ಆ್ಯಪ್​​ ಶೇರ್​ ಮಾಡುವ ಫೈಲ್​ಗಳ ಮೇಲೆ ಕಳ್ಳರ ಕಣ್ಣು: ಹ್ಯಾಕ್​ ಆಗಬಹುದು ಎಚ್ಚರ!
ಪ್ರಾತಿನಿಧಿಕ ಚಿತ್ರ
  • News18
  • Last Updated: July 18, 2019, 6:17 PM IST
  • Share this:
ಜಗತ್ತಿನಾದ್ಯಂತ ಸಾಕಷ್ಟು ಜನರು ವಾಟ್ಸ್​ಆ್ಯಪ್​ ಮತ್ತು ಟೆಲಿಗ್ರಾಂ ಅಪ್ಲಿಕೇಶನ್​ ಅನ್ನು ಬಳಸುತ್ತಾರೆ. ಈ ಆ್ಯಪ್​  ಬಳಸಿಕೊಂಡು ಬ್ಯಾಕಿಂಗ್​ ವ್ಯವಹಾರ ಮತ್ತು ಖಾಸಗಿ ಕೆಲಸವನ್ನು ಸುಲಭೋಚಿತವಾಗಿ ಮಾಡುತ್ತಾರೆ. ಫೋಟೋ, ವಿಡಿಯೋ, ಆಡಿಯೋ ಮಾತ್ರವಲ್ಲದೆ, ಫೈಲ್​​ಗಳನ್ನು ಶೇರ್​ ಮಾಡುತ್ತಾರೆ. ಆದರೆ ಇದರಲ್ಲಿ ಶೇರ್​ ಮಾಡುತ್ತಿರುವ ಫೈಲ್​ಗಳು ಎಷ್ಟು ಸುರಕ್ಷಿತವೆಂದು ತಿಳಿದಿದೆಯಾ? ಹಾಗಿದ್ರೆ, ಈ ಸ್ಟೋರಿ ಓದಿ.

ವಾಟ್ಸ್​ಆ್ಯಪ್​ ಮತ್ತು ಟೆಲಿಗ್ರಾಂ ಅಪ್ಲಿಕೇಶನ್​ನಿಂದ ಕಳುಹಿಸುವ ಮತ್ತು ಸೇವ್​ ಮಾಡುತ್ತಿರುವ ಫೈಲ್​ಗಳು ಸುರಕ್ಷಿತವಲ್ಲ ಎಂಬ ವರದಿಯೊಂದು ಅಧ್ಯಯನದ ಮೂಲಕ ಬೆಳಕಿಗೆ ಬಂದಿದೆ. ಸ್ಮಾರ್ಟ್​ಫೋನ್​ನಲ್ಲಿ ಸೇವ್​​ ಆಗುತ್ತಿರುವ ಫೈಲ್​ಗಳು ಹ್ಯಾಕ್​ ಆಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ತಲೆಕೆಳಗಾಗುತ್ತಾ ಅತೃಪ್ತರ ಲೆಕ್ಕಾಚಾರ?; ಸುಪ್ರೀಂ ತೀರ್ಪು ಸ್ಪೀಕರ್ ಪರ ಬಂದರೆ ಅವರ ಮುಂದಿರುವ ಆಯ್ಕೆಗಳೇನು?

ಗ್ರಾಹಕರು ಬಳಸುವ ಈ ಅಪ್ಲಿಕೇಶನ್​ನಿಂದ ಸ್ಟೋರ್​​ ಆಗುತ್ತಿರುವ ಫೈಲ್​ಗಳು ಸುರಕ್ಷಿತವಾಗಿಲ್ಲ. ಸ್ಮಾರ್ಟ್​ಫೋನ್​ನಲ್ಲಿ ಸ್ಟೋರ್ ಆಗುತ್ತಿರು​ ಅಪ್ಲಿಕೇಶನ್​ ಅನ್ನು ಮಾಲ್ವೇರ್​ಗಳು ಆಕ್ಸಸ್​ ಮಾಡುವ ಸಾಧ್ಯತೆ ಹೆಚ್ಚಿದ್ದು, ಹ್ಯಾಕ್​ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಹಾಗಿದ್ದರೆ, ಯಾವ ಸ್ಟೊರೇಜ್​ ಉತ್ತಮ?

ಮೆಸೆಜಿಂಗ್​ ಆ್ಯಪ್​ ಮೂಲಕ ಸ್ಮಾರ್ಟ್​ಫೋನ್​ನಲ್ಲಿ ಸೇವ್​ ಆಗುತ್ತಿರುವ ಫೈಲ್​ಗಳಿಗೆ ಇಂಟರ್​ನಲ್​ ಸ್ಟೊರೇಜ್ ಉತ್ತಮ ಆಯ್ಕೆಯಾಗಿದೆ. ಎಕ್ಸ್​ಟರ್​ನಲ್​ ಸ್ಟೊರೇಜ್​ನಲ್ಲಿ ದೋಷಗಳ ಕಂಡುಬರುವ ಕಾರಣ ಇಂಟಲ್​ನಲ್ಲಿ ಸ್ಟೊರೇಜ್​​ ಆಯ್ಕೆಯಡಿಯಲ್ಲಿ ಫೈಲ್​ ಸೇವ್​ ಆದಾಗ ಇಂತಹ ಸಮಸ್ಯೆಯಿಂದ ಪಾರಾಗಬಹುದು.
First published:July 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading