ಪೇಟಿಎಂ ರೀತಿಯಲ್ಲಿ ವಾಟ್ಸ್ಆ್ಯಪ್​ನಲ್ಲೂ ಸ್ಕ್ಯಾನಿಂಗ್ ಸಿಸ್ಟಂ


Updated:March 27, 2018, 8:15 PM IST
ಪೇಟಿಎಂ ರೀತಿಯಲ್ಲಿ ವಾಟ್ಸ್ಆ್ಯಪ್​ನಲ್ಲೂ ಸ್ಕ್ಯಾನಿಂಗ್ ಸಿಸ್ಟಂ

Updated: March 27, 2018, 8:15 PM IST
- ನ್ಯೂಸ್18 ಕನ್ನಡ

ಬೆಂಗಳೂರು: ಕ್ಯಾಶ್​ಲೆಸ್ ವಹಿವಾಟಿಗೆ ದೇಶದ ಗಮನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಆನ್​ಲೈನ್ ಪೇಮೆಂಟ್ ಸೇವೆ ಕೊಡುವ ಪೇಟಿಎಂನಂಥ ಆ್ಯಪ್​ಗಳು ಶುರುವಾಗಿವೆ. ಕೆಲ ಹಾಲಿ ಆನ್​ಲೈನ್ ದಿಗ್ಗಜ ಕಂಪನಿಗಳೂ ಈ ಆನ್​ಲೈನ್ ಪೇಮೆಂಟ್ ಸೇವೆಯ ಕ್ಷೇತ್ರಕ್ಕೆ ಧುಮುಕಿವೆ. ಈ ಲಿಸ್ಟ್​ಗೆ ವಾಟ್ಸಾಪ್​ ಕೂಡ ಸೇರ್ಪಡೆಯಾಗಿದೆ. ಇತ್ತೀಚೆಗಷ್ಟೇ ವಾಟ್ಸಾಪ್​ನಲ್ಲಿ ಸೆಂಡ್ ಟು ಯುಪಿಐ ಐಡಿ ಎಂಬ ಹೊಸ ಫೀಚರ್ ಸೇರ್ಪಡೆಯಾಗಿತ್ತು. ಇದೀಗ ಕ್ಯುಆರ್ ಕೋಡ್ ಸ್ಕ್ಯಾನಿಂಗ್ ಮಾಡುವ ಫೀಚರ್ ಸೇರ್ಪಡೆಯಾಗಿದೆ.

ವಾಟ್ಸಾಪ್​ನ 2.18.93 ಬೀಟಾ ಆವೃತ್ತಿಯಲ್ಲಿ ಈ ಹೊಸ ಫೀಚರ್ ಲಭ್ಯವಿದೆ. ಇದರ ಮೂಲಕ ವಾಟ್ಸಾಪಿಗರು ಹಣದ ವಹಿವಾಟು ನ ಡೆಸಲು ಸಾಧ್ಯವಿದೆ.

ಇದೇ ವೇಳೆ, ಕ್ಯೂಆರ್ ಸ್ಕ್ಯಾನಿಂಗ್ ಜೊತೆಗೆ ಇನ್ನೂ ಒಂದು ಹೊಸ ಫೀಚರ್​ಗಳು ವಾಟ್ಸಾಪ್​ಗೆ ಸೇರ್ಪಡೆಯಾಗಿವೆ. ಅಡ್ವಾನ್​ಸ್ಡ್ ಜಿಫ್ ಮತ್ತು ಸ್ಟಿಕರ್ಸ್ ಸರ್ಚ್ ಎಂಬ ಹೊಸ ಫೀಚರ್ ಲಭ್ಯವಿದೆ.
First published:March 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ