WhatsApp: 4 ದಿನ ಬಾಕಿ! ಈ ಆ್ಯಂಡ್ರಾಯ್ಡ್​ ಮತ್ತು ಐಫೋನ್​ಗಳಲ್ಲಿ ವಾಟ್ಸ್​ಆ್ಯಪ್​​ ಕಾರ್ಯನಿರ್ವಹಿಸುದಿಲ್ಲ

WhatsApp ನವೆಂಬರ್​ 1 ರಿಂದ ಕೆಲವೊಂದು ಸಾಧನಗಳಲ್ಲಿ ಕೆಲಸ ಮಾಡುವುದಿಲ್ಲ ತಿಳಿಸಿದೆ. ಆ್ಯಂಡ್ರಾಯ್ಡ್​ 4.0.3 ಅಥವಾ ಅದಕ್ಕಿಂತ ಹಳೆಯ ಮತ್ತು ಐಒಎಸ್​ 9 ಹಾಗೂ ಅದಕ್ಕಿಂತ ಹಳೆಯ ಫೋನ್​ಗಳಿಗೆ ಬೆಂಬಲ ಸೂಚಿಸುವುದಿಲ್ಲ ಎಂದಿದೆ. ಅಷ್ಟು ಮಾತ್ರವಲ್ಲದೆ ಬೆಂಬಲ ಸೂಚಿಸದ ಕೆಲವೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ.

WhatsApp

WhatsApp

  • Share this:
    ಜನಪ್ರಿಯ WhatsApp ವಿಶ್ವದಾದ್ಯಂತ ಬಹುಸಂಖ್ಯಾ ಬಳಕೆದಾರರನ್ನು ಹೊಂದಿದೆ. ಅದಕ್ಕೆ ತಕ್ಕಂತೆ ವಾಟ್ಸ್​ಆ್ಯಪ್ ಕೂಡ ಬೇಕೆನಿಸಿದ ಮತ್ತು ಅವಶ್ಯಕತೆಯಿರುವ ಫೀಚರ್​ಗಳನ್ನು ಅಪ್ಲಿಕೇಶನ್​ನಲ್ಲಿ ನೀಡುತ್ತಾ ಬಂದಿದೆ. ಮಾತ್ರವಲ್ಲದೆ​ ತನ್ನ ಬಳಕೆದಾರರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಸದಾ ಜನಪ್ರಿಯತೆಗಳಿಸುತ್ತಾ ಬಂದಿದೆ. ಆದರೆ ವಾಟ್ಸ್​ಆ್ಯಪ್ ಕೆಲವೊಂದು ಸಾಧನಗಳಲ್ಲಿ ​ ಬೆಂಬಲ ಸೂಚಿಸುವುದಿಲ್ಲವೆಂದಿದೆ. ನವೆಂಬರ್​ 1 ರಿಂದ ತನ್ನ ಕಾರ್ಯವನ್ನು ಸ್ಥಗಿತಗೊಳಿಸಲು ಮುಂದಾಗಿದೆ.

    ವಾಟ್ಸ್​ಆ್ಯಪ್​ ನವೆಂಬರ್​ 1 ರಿಂದ ಕೆಲವೊಂದು ಸಾಧನಗಳಲ್ಲಿ ಕೆಲಸ ಮಾಡುವುದಿಲ್ಲ ತಿಳಿಸಿದೆ. ಆ್ಯಂಡ್ರಾಯ್ಡ್​ 4.0.3 ಅಥವಾ ಅದಕ್ಕಿಂತ ಹಳೆಯ ಮತ್ತು ಐಒಎಸ್​ 9 ಹಾಗೂ ಅದಕ್ಕಿಂತ ಹಳೆಯ ಫೋನ್​ಗಳಿಗೆ ಬೆಂಬಲ ಸೂಚಿಸುವುದಿಲ್ಲ ಎಂದಿದೆ. ಅಷ್ಟು ಮಾತ್ರವಲ್ಲದೆ ಬೆಂಬಲ ಸೂಚಿಸದ ಕೆಲವೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ವಾಟ್ಸ್​ಆ್ಯಪ್ ಬಿಡುಗಡೆ ಮಾಡಿದ ಆಂಡ್ರಾಯ್ಡ್ ಫೋನ್‌ಗಳ (Android) ಪಟ್ಟಿಯಲ್ಲಿ ಸ್ಯಾಮ್‌ಸಂಗ್ (Samsung), ಎಲ್‌ಜಿ (LG), TEಡ್‌ಟಿಇ, ಹುವಾವೇ, ಸೋನಿ (Sony), ಅಲ್ಕಾಟೆಲ್ ಮತ್ತು ಇತರವುಗಳ ಸ್ಮಾರ್ಟ್‌ಫೋನ್‌ಗಳು ಸೇರಿವೆ. ಮತ್ತೊಂದೆಡೆ, ಐಫೋನ್​ಗಳು- ಐಫೋನ್ ಎಸ್ಇ, ಐಫೋನ್ 6 ಎಸ್ ಮತ್ತು ಐಫೋನ್ 6 ಎಸ್ ಅನ್ನು ಒಳಗೊಂಡಿವೆ.

    ಸ್ಯಾಮ್‌ಸಂಗ್‌ಗಾಗಿ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ರೆಂಡ್ ಲೈಟ್, ಗ್ಯಾಲಕ್ಸಿ ಟ್ರೆಂಡ್ II, ಗ್ಯಾಲಕ್ಸಿ SII, ಗ್ಯಾಲಕ್ಸಿ S3 ಮಿನಿ, ಗ್ಯಾಲಕ್ಸಿ ಎಕ್ಸ್‌ಕವರ್ 2, ಗ್ಯಾಲಕ್ಸಿ ಕೋರ್ ಮತ್ತು ಗ್ಯಾಲಕ್ಸಿ ಏಸ್ 2 ನವೆಂಬರ್ ವೇಳೆಗೆ ಬೆಂಬಲವನ್ನು ಕಳೆದುಕೊಳ್ಳುತ್ತವೆ.

    LGs Lucid 2, LG ಆಪ್ಟಿಮಸ್ F7, LG ಆಪ್ಟಿಮಸ್ F5, ಆಪ್ಟಿಮಸ್ L3 II Dual, ಆಪ್ಟಿಮಸ್ F5, ಆಪ್ಟಿಮಸ್ L5, ಆಪ್ಟಿಮಸ್ L5 II, ಆಪ್ಟಿಮಸ್ L5 Dual, ಆಪ್ಟಿಮಸ್ L3 II, ಆಪ್ಟಿಮಸ್ L7, ಆಪ್ಟಿಮಸ್ L7 II Dual, ಆಪ್ಟಿಮಸ್ F6, ಆಪ್ಟಿಮಸ್ ಎಲ್ 4 II ಡ್ಯುಯಲ್, ಆಪ್ಟಿಮಸ್ ಎಫ್ 3, ಆಪ್ಟಿಮಸ್ ಎಲ್ 4 II, ಆಪ್ಟಿಮಸ್ ಎಲ್ 2 II, ಆಪ್ಟಿಮಸ್ ನೈಟ್ರೋ ಎಚ್ಡಿ ಮತ್ತು 4 ಎಕ್ಸ್ ಎಚ್ಡಿ, ಮತ್ತು ಆಪ್ಟಿಮಸ್ ಎಫ್ 3 ಕ್ಯೂ ವಾಟ್ಸಾಪ್ ಬೆಂಬಲವನ್ನುಸೂಚಿಸುವುದಿಲ್ಲ.

    Read Also: Diwali offer 2021: ಕೇವಲ 101 ರೂ. ಪಾವತಿಸಿ ವಿವೋ ಸ್ಮಾರ್ಟ್​ಫೋನ್​ ಖರೀದಿಸಿ!

    ಇದಲ್ಲದೆ, ZTE ಗ್ರ್ಯಾಂಡ್ S ಫ್ಲೆಕ್ಸ್, ZTE V956, ಗ್ರ್ಯಾಂಡ್ X ಕ್ವಾಡ್ V987, ಮತ್ತು ZTE ಗ್ರ್ಯಾಂಡ್ ಮೆಮೊ ಸೇರಿದಂತೆ ಚೀನೀ ತಯಾರಕ ZTE ಯ ಸಾಧನಗಳು WhatsApp ಬೆಂಬಲಿಸುವುದನ್ನು ನಿಲ್ಲಿಸುತ್ತಿದೆ.

    ಹುವಾವೇಯ ಅಸೆಂಡ್ ಜಿ 740, ಅಸೆಂಡ್ ಮೇಟ್, ಅಸೆಂಡ್ ಡಿ ಕ್ವಾಡ್ ಎಕ್ಸ್‌ಎಲ್, ಅಸೆಂಡ್ ಡಿ 1 ಕ್ವಾಡ್ ಎಕ್ಸ್‌ಎಲ್, ಅಸೆಂಡ್ ಪಿ 1 ಎಸ್, ಮತ್ತು ಅಸೆಂಡ್ ಡಿ 2 ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಆಪ್‌ಗೆ ಬೆಂಬಲ ನೀಡುವುದನ್ನು ನಿಲ್ಲಿಸುತ್ತದೆ.

    ಸೋನಿಯ Xperia Miro, Sony Xperia Neo L, ಮತ್ತು Xperia Arc S ಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ, ಅಲ್ಕಾಟೆಲ್, HTC, ಲೆನೊವೊ ಮತ್ತು ಹೆಚ್ಚಿನವುಗಳ ಇತರ ಸಾಧನಗಳಲ್ಲೂ ವಾಟ್ಸ್​ಆ್ಯಪ್​ ಕಾರ್ಯ ಸ್ಥಗಿತ ಮಾಡುತ್ತಿದೆ.

    Read Also: 1.50 ಲಕ್ಷದ ಸ್ಮಾರ್ಟ್​ಫೋನ್​ 60 ಸಾವಿರಕ್ಕೆ! MOTOROLA Razr​ ಖರೀದಿಸುವ ಕನಸನ್ನ ನನಸಾಗಿಸೋ ಸಮಯ

    ಅಂದಹಾಗೆಯೇ ನವೆಂಬರ್ 1 ರಿಂದ ಇವಿಷ್ಟು ಆ್ಯಪ್​ಗಳಲ್ಲಿ ವಾಟ್ಸ್​ಆ್ಯಪ್​ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಎಂದಲ್ಲ. ಸ್ಮಾರ್ಟ್‌ಫೋನ್‌ಗಳು ಭದ್ರತಾ ಅಪ್‌ಡೇಟ್‌ಗಳು, ಹೊಸ ವೈಶಿಷ್ಟ್ಯಗಳನ್ನು ಪಡೆಯುವುದನ್ನು ನಿಲ್ಲಿಸುತ್ತವೆ, ಇದು ಕ್ರಮೇಣ ಅಪ್ಲಿಕೇಶನ್ ನಿಷ್ಕ್ರಿಯಗೊಳ್ಳಲು ಕಾರಣವಾಗುತ್ತದೆ. ಹಾಗಾಗಿ ಹೊಸ ಸ್ಮಾರ್ಟ್​ಫೋನ್​ ಖರೀದಿಸಿ ಅಪ್​ಡೇಟ್​ ಮಾಗುವ ಮೂಲಕ ವಾಟ್ಸ್​ಆ್ಯಪ್​ ಬಳಸಬಹುದಾದ ಆಯ್ಕೆ ಎದುರಿಗಿದೆ.
    Published by:Harshith AS
    First published: