WhatsApp Stickers – ವಾಟ್ಸಾಪ್​ನಲ್ಲಿ ಈದ್ ಶುಭಾಶಯದ ಸ್ಟಿಕರ್ ಮಾಡುವುದು ಹೀಗೆ

Ramzan Festival - ನಮ್ಮಿಷ್ಟದ ಸ್ಟಿಕರ್​ಗಳನ್ನು ಕ್ರಿಯೇಟ್ ಮಾಡಲು ನೆರವಾಗಬಲ್ಲ ಆ್ಯಪ್​ಗಳು ಸಿಗುತ್ತವೆ. ಅದನ್ನು ಬಳಸಿ ನಾವು ವಿಶೇಷ ಸಂದೇಶಗಳಿರುವ ಸ್ಟಿಕರ್​ಗಳನ್ನು ರೂಪಿಸಿ ಆಪ್ತರಿಗೆ ಹಂಚಿಕೊಳ್ಳಬಹುದು.

news18
Updated:May 25, 2020, 12:51 PM IST
WhatsApp Stickers – ವಾಟ್ಸಾಪ್​ನಲ್ಲಿ ಈದ್ ಶುಭಾಶಯದ ಸ್ಟಿಕರ್ ಮಾಡುವುದು ಹೀಗೆ
ಸಾಂದರ್ಭಿಕ ಚಿತ್ರ
  • News18
  • Last Updated: May 25, 2020, 12:51 PM IST
  • Share this:
ಇವತ್ತು ಮುಸ್ಲಿಮರ ಪವಿತ್ರ ಈದ್ ಹಬ್ಬ. ರಂಜಾನ್ ಮಾಸದ ಅಂತ್ಯದ ದಿನ ಈದ್ ಉಲ್ ಫಿತರ್. ರಂಜಾನ್ ಮಾಸದ ಇಡೀ ಒಂದು ತಿಂಗಳು ಉಪವಾಸ ಇರುವ ಮುಸ್ಲಿಮರು ಇವತ್ತು ಉಪವಾಸ ತ್ಯಜಿಸುತ್ತಾರೆ. ಶನಿವಾರವೇ (ಮೇ 23) ಈದ್ ಆಚರಿಸಬೇಕಿತ್ತು. ಆದರೆ, ಚಂದ್ರನ ದರ್ಶನ ಆಗದಿದ್ದರಿಂದ ಮೇ 25ಕ್ಕೆ ಈದ್ ನಿಗದಿಯಾಗಿದೆ.

ಕೊರೋನಾ ವೈರಸ್ ಅಪಾಯ ಇರುವ ಹಿನ್ನೆಲೆಯಲ್ಲಿ ಮುಸ್ಲಿಮರು ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಸಾಧ್ಯವಾದಷ್ಟೂ ಮನೆಯಲ್ಲೇ ಇದ್ದು ಹಬ್ಬ ಆಚರಿಸಬೇಕು. ಯಾರನ್ನೂ ಆಲಂಗಿಸಿ ಶುಭಾಶಯ ಹೇಳಬಾರದು ಎಂದು ಮುಸ್ಲಿಮ್ ಧರ್ಮಗುರುಗಳು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಹಂಚಿಕೆ ವೈರಲ್ ಆಗುತ್ತಿದೆ.

ಇದನ್ನೂ ಓದಿ: Ramadan 2020: ಎಲ್ಲೆಡೆ ಇಂದು ರಂಜಾನ್ ಹಬ್ಬ; ಈದ್ ಶುಭಾಶಯ ತಿಳಿಸಿದ ರಾಜ್ಯ ರಾಜಕೀಯ ನಾಯಕರು

ವಾಟ್ಸಾಪ್​ನಲ್ಲಿ ಈದ್ ಶುಭಾಶಯದ ಸ್ಟಿಕರ್:

ಇವತ್ತು ಪ್ಲೇಸ್ಟೋರ್​ನಲ್ಲಿ ಸಾಕಷ್ಟು ಈದ್ ಸ್ಟಿಕರ್​ಗಳು ಸಿಗುತ್ತವೆ. ಮೊದಲು ನೀವು ವಾಟ್ಸಾಪ್ ಆ್ಯಪ್ ಓಪನ್ ಮಾಡಿ, ಅದರಲ್ಲಿ ಮೆಸೇಜ್ ಕಳುಸಿಸುವ ಜಾಗದಲ್ಲಿ ಇಮೋಜಿ ಐಕಾನ್ ಒತ್ತಿರಿ. ಕೆಳಗೆ ನಿಮಗೆ ಸ್ಟಿಕರ್ ಐಕಾನ್ ಕಾಣುತ್ತದೆ. ಅದನ್ನು ಒತ್ತಿದಾಗ ಸಿಗುವ ಪ್ಲಸ್ ಐಕಾನ್ ಅನ್ನೂ ಒತ್ತಿರಿ. ಆಗ ನಿಮಗೆ ನಿಮ್ಮ ವಾಟ್ಸಾಪ್​ನಲ್ಲಿ ಈ ಮೊದಲೆ ಇನ್​ಸ್ಟಾಲ್ ಆಗಿರುವ ಸ್ಟಿಕರ್​ಗಳ ಪಟ್ಟಿ ಸಿಗುತ್ತದೆ. ಇದರಲ್ಲಿ ಈದ್ ಉಲ್ ಫಿತರ್​ಗೆ ಸಂಬಂಧಿಸಿದ ಸ್ಟಿಕರ್ ಇರಬಹುದು. ಒಂದು ವೇಳೆ ಇಲ್ಲದಿದ್ದರೆ “Get More Stickers” ಆಪ್ಷನ್ ಒತ್ತಿರಿ. ಆಗ ಪ್ಲೇ ಸ್ಟೋರ್​ನಲ್ಲಿ ವಾಟ್ಸಾಪ್ ಸ್ಟಿಕರ್ ಆ್ಯಪ್​ಗಳ(WAStickerApp) ಪಟ್ಟಿ ಸಿಗುತ್ತದೆ. ನೀವು ಪ್ಲೇ ಸ್ಟೋರ್ ಸರ್ಚ್ ಬಾರ್​ನಲ್ಲಿ ಈಗಾಗಲೇ ಇರುವ WAStickerApp ಪದದ ಜೊತೆ Eidಗೆ ಸಂಬಂಧಿಸಿದ ಪದಗಳನ್ನ ಸೇರಿಸಿ ಸರ್ಚ್ ಮಾಡಿ. ಆಗ ನಿಮಗೆ ಕಾಣಿಸುವ ಸೂಕ್ತ ಆ್ಯಪನ್ನ ಇನ್​ಸ್ಟಾಲ್ ಮಾಡಿಕೊಳ್ಳಬಹುದು.

ಹಾಗೆಯೇ, ನಾವೇ ನಮ್ಮಿಷ್ಟದ ಸ್ಟಿಕರ್​ಗಳನ್ನು ಕ್ರಿಯೇಟ್ ಮಾಡಲು ನೆರವಾಗಬಲ್ಲ ಆ್ಯಪ್​ಗಳು ಸಿಗುತ್ತವೆ. ಅದನ್ನು ಬಳಸಿ ನಾವು ವಿಶೇಷ ಸಂದೇಶಗಳಿರುವ ಸ್ಟಿಕರ್​ಗಳನ್ನು ರೂಪಿಸಿ ಆಪ್ತರಿಗೆ ಹಂಚಿಕೊಳ್ಳಬಹುದು.
First published: May 25, 2020, 12:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading