WhatsApp Status: ಇನ್ಮುಂದೆ ವಾಯ್ಸ್ ನೋಟ್ ಸಹ ಸ್ಟೇಟಸ್​​ಗೆ ಹಾಕಬಹುದಂತೆ!

ಇಲ್ಲಿಯವರೆಗೆ ವಾಟ್ಸ್​ಆ್ಯಪ್ ಚಿತ್ರಗಳು, ತುಣುಕುಗಳು, ಬರಹಗಳು ಹಾಗೂ ಹಾಡುಗಳನ್ನು ಹಾಕಬಹುದಾಗಿತ್ತು. ಆದರೆ, ಇದೀಗ ವಾಟ್ಸ್​ಆ್ಯಪ್ ತನ್ನ ಸ್ಟೇಟಸ್ ವೈಶಿಷ್ಟ್ಯಕ್ಕೆ ಇನ್ನಷ್ಟು ವಿಶಿಷ್ಟತೆಯನ್ನು ಅಪ್ಡೇಟ್ ಮಾಡುತ್ತಿದೆ. ಹೌದು, ಈಗ ಸ್ಟೇಟಸ್ ನಲ್ಲಿ ಬಳಕೆದಾರರು ವಾಯ್ಸ್ ನೋಟ್ಸ್ ಗಳನ್ನೂ ಸಹ ಸೇರಿಸಬಹುದಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ವಾಟ್ಸ್​ಆ್ಯಪ್ (WhatsApp)  ಅಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ದಿನ ನಿತ್ಯ ನೂರಾರು ಕಚೇರಿಗಳಲ್ಲಿ ಕೆಲಸದ (Work) ಭಾಗವಾಗಿಯೂ, ಜಗತ್ತಿನಲ್ಲಿ ಕೋಟಿಗಟ್ಟಲೆ ಜನರ ದೈನಂದಿನ ಚಾಟ್, ಸಂಭಾಷಣೆ, ಸಂವಹನ ವೇದಿಕೆಯಾಗಿಯೂ ವಾಟ್ಸ್​ಆ್ಯಪ್ ಬಳಕೆಯಾಗುತ್ತಲೇ ಇದೆ. ಅದರಲ್ಲೂ ವಾಟ್ಸ್​ಆ್ಯಪ್ ಸ್ಟೇಟಸ್  (WhatsApp Status)ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿದೆ. ನಿತ್ಯ ವಾಟ್ಸ್​ಆ್ಯಪ್ ಬಳಸುವವರು ಸ್ಟೇಟಸ್ ಅನ್ನು ಪರಿಶೀಲಿಸದೆ ದಿನ ಮುಕ್ತಾಯಗೊಳಿಸಲಾರರು, ಅದರಂತೆ ಬಹುತೇಕರು ತಮಗನಿಸಿದ್ದನ್ನು, ಇನ್ನೊಬ್ಬರಿಗೆ ಏನಾದರೂ ಪರೋಕ್ಷವಾಗಿ ಹೇಳಬೇಕೆಂದರೆ ಅದನ್ನು ಸ್ಟೇಟಸ್ ಮೂಲಕ ಹಾಕುತ್ತಲೇ ಇರುತ್ತಾರೆ. ಹೀಗೆ ವಾಟ್ಸ್​ಆ್ಯಪ್ ಸ್ಟೇಟಸ್ ಸಹ ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿದೆ ಎಂದರೂ ತಪ್ಪಾಗಲಾರದು.

ವಾಟ್ಸ್​ಆ್ಯಪ್ನ ಹೊಸ ಫೀಚರ್
ಆದರೆ ಇಲ್ಲಿಯವರೆಗೆ ವಾಟ್ಸ್​ಆ್ಯಪ್ ಚಿತ್ರಗಳು, ತುಣುಕುಗಳು, ಬರಹಗಳು ಹಾಗೂ ಹಾಡುಗಳನ್ನು ಹಾಕಬಹುದಾಗಿತ್ತು. ಆದರೆ, ಇದೀಗ ವಾಟ್ಸ್​ಆ್ಯಪ್ ತನ್ನ ಸ್ಟೇಟಸ್ ವೈಶಿಷ್ಟ್ಯಕ್ಕೆ ಇನ್ನಷ್ಟು ವಿಶಿಷ್ಟತೆಯನ್ನು ಅಪ್ಡೇಟ್ ಮಾಡುತ್ತಿದೆ. ಹೌದು, ಈಗ ಸ್ಟೇಟಸ್ ನಲ್ಲಿ ಬಳಕೆದಾರರು ವಾಯ್ಸ್ ನೋಟ್ಸ್ ಗಳನ್ನೂ ಸಹ ಸೇರಿಸಬಹುದಾಗಿದೆ. ಈ ವೈಶಿಷ್ಟ್ಯವನ್ನು ವಾಟ್ಸ್​ಆ್ಯಪ್ ಶೀಘ್ರದಲ್ಲೇ ಜಾರಿಗೆ ತರಬಹುದೇನೋ ಎಂಬ ಸುದ್ದಿ ಓಡಾಡುತ್ತಿದೆ ಎಂದರೆ ತಪ್ಪಾಗಲಾರದು.

ಸ್ಟೇಟಸ್ ಭಾಗಕ್ಕೆ ಧ್ವನಿ ಸೇರಿಸುವ ಕ್ರಿಯೆ
ವಾಟ್ಸ್​ಆ್ಯಪ್ ತರುವ ಅಪ್ಡೇಟ್ ಗಳ ಮೇಲೆ ಕಣ್ಣಿಡುವ WeBetaInfo ಎಂಬ ಸಂಸ್ಥೆಯ ಪ್ರಕಾರ, ವಾಟ್ಸ್​ಆ್ಯಪ್ ಈಗ ಜಿಫ್, ಅಥವಾ ಫೊಟೊ ವಿಡಿಯೋಗಳ ಮೂಲಕ ಬಳಕೆದಾರರು ವಾಯ್ಸ್ ನೋಟ್ಸ್ ಅನ್ನು ಸೇರಿಸುವ ಕುರಿತು ವೈಶಿಷ್ಟ್ಯದ ಪರೀಕ್ಷೆ ನಡೆಸುತ್ತಿದೆ ಎನ್ನಲಾಗಿದೆ. ಸಂಸ್ಥೆಯು ತನ್ನ ಬ್ಲಾಗ್ ಪೋಸ್ಟಿನಲ್ಲಿ "ಆಂಡ್ರಾಯ್ಡ್ ಆಧಾರಿತ ವಾಟ್ಸ್​ಆ್ಯಪ್ ನಲ್ಲಿ ಹೊಸ ಸುಧಾರಣೆಗಳು ಬರಲಿದೆ. ಇಂದು ನಾವು ಅಂತಿಮವಾಗಿ ವಾಟ್ಸ್​ಆ್ಯಪ್ ತನ್ನ ಸುಧಾರಣೆಗಳ ಭಾಗವಾಗಿ ಸ್ಟೇಟಸ್ ಭಾಗದಲ್ಲಿ ವಾಯ್ಸ್ ಆಧಾರಿತ ನೋಟ್ಸ್ ಗಳನ್ನೂ ಸಹ ಸೇರಿಸುವಂತಹ ಪ್ರಕ್ರಿಯೆಗೆ ಇಳಿದೆದೆ ಎಂದು ಘೋಷಿಸಲು ಬಯಸುತ್ತಿದ್ದೇವೆ" ಎಂದು ಬರೆದುಕೊಂಡಿದೆ. ಹೀಗೆ ಮುಂದೆ ಬರಬಹುದಾದ ಸ್ಟೇಟಸ್ ಭಾಗಕ್ಕೆ ಧ್ವನಿ ಸೇರಿಸುವ ಈ ಕ್ರಿಯೆಯನ್ನು "ವಾಯ್ಸ್ ಸ್ಟೇಟಸ್" ಎಂದು ಕರೆಯಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ:  WhatsApp: ಒಂದೇ ಸ್ಮಾರ್ಟ್​​ಫೋನ್​ನಲ್ಲಿ 2 ಖಾತೆ ತೆರೆಯಿರಿ! ಅದಕ್ಕಾಗಿ ಈ ವಿಧಾನ ಅನುಸರಿಸಿ

ಅದು ತನ್ನ ವರದಿಯಲ್ಲಿ ಒಂದು ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದು ಅದರಲ್ಲಿ ಸ್ಟೇಟಸ್ ಪುಟದ ಕೆಳ ಭಾಗದಲ್ಲಿ ಧ್ವನಿ ಅಪ್ಲೋಡ್ ಮಾಡಬಹುದಾದ ಒಂದು ಐಕಾನ್ ಅನ್ನು ಸೇರಿಸಿರುವುದನ್ನು ಕಾಣಬಹುದಾಗಿದೆ. ಇನ್ನು ಗೌಪ್ಯತೆಯ ನೀತಿಗೆ ಸಂಬಂಧಿಸಿದಂತೆ ಸದ್ಯ ಸ್ಟೇಟಸ್ ಗೆ ಅಳವಡಿಸಲಾಗಿರುವ ಸೇಟ್ಟಿಂಗ್ಸ್ ಗಳೆ ಮುಂದುವರೆಯಲಿವೆ ಎಂದು ಹೇಳಲಾಗಿದೆ. ಸ್ಟೇಟಸ್ ಪ್ರೈವಸಿಯಲ್ಲಿ ಕೇವಲ ಆಯ್ದ ಸಂಪರ್ಕಗಳಿಗೆ ಮಾತ್ರವೇ ಈ ವಾಯ್ಸ್ ನೋಟ್ಸ್ ತಲುಪಲಿದೆ ಎನ್ನಲಾಗಿದೆ. ಅಲ್ಲದೆ ವಾಟ್ಸ್​ಆ್ಯಪ್ ನಲ್ಲಿ ಸಾಮಾನ್ಯವಾಗಿರುವಂತೆ ಇದೂ ಸಹ ಎಂಡ್ ಟು ಎಂಡ್ ಎನ್ಕ್ರಿಪ್ಟ್ ಆಗಿರಲಿದೆ.

ವಾಟ್ಸ್​ಆ್ಯಪ್ ಸ್ಟೇಟಸ್ ಬಳಕೆ ಆರಂಭವಾಗಿದ್ದು ಯಾವಾಗ
ಇದು ವಾಟ್ಸ್​ಆ್ಯಪ್ ತಾನು ತನ್ನ ಬಳಕೆದಾರರಿಗಾಗಿ ಪರಿಚಯಿಸುತ್ತಿರುವ ಮತ್ತೊಂದು ಹೊಸ ವೈಶಿಷ್ಟ್ಯ ಎಂತಲೇ ಹೇಳಬಹುದು. ಇತರೆ ವೇದಿಕೆಗಳಾದ ಫೇಸ್‍ಬುಕ್ ಹಾಗೂ ಇನ್ಸ್ಟಾಗ್ರಾಮ್ ಗಳಂತೆ ವಾಟ್ಸ್​ಆ್ಯಪ್ ಮೊದಲ ಬಾರಿಗೆ 2017 ರಲ್ಲಿ ತನ್ನ ಬಳಕೆದಾರರಿಗೆ ಸ್ಟೇಟಸ್ ಅನ್ನು ಪರಿಚಯಿಸಿತ್ತು. ಅಂದಿನಿಂದ ವಾಟ್ಸ್​ಆ್ಯಪ್ ಸ್ಟೇಟಸ್ ಸಾಕಷ್ಟು ಜನಪ್ರೀಯತೆ ಪಡೆದಿದ್ದು ಇಂದಿಗೂ ಇದು ಬಹುತೇಕ ಬಳಕೆದಾರರಿಂದ ನಿರಂತರವಾಗಿ ಬಳಸಲ್ಪಡುತ್ತಿದೆ. ಇದೀಗ ವಾಟ್ಸ್​ಆ್ಯಪ್ ತಾನು ಪರೀಕ್ಷಿಸುತ್ತಿರುವ ಈ ಹೊಸ ವಾಯ್ಸ್ ನೋಟ್ಸ್ ವೈಶಿಷ್ಟ್ಯ ಖಂಡಿತವಾಗಿಯೂ ಬಳಕೆದಾರರಿಂದ ಹೆಚ್ಚಾಗಿ ಪ್ರಶಂಸಿಸಲ್ಪಡಬಹುದು ಎನ್ನುವುದರಲ್ಲಿ ಸಂಶಯವಿಲ್ಲ.

ಇದನ್ನೂ ಓದಿ: WhatsApp ಬಳಕೆದಾರರಿಗೆ ಸಿಹಿ ಸುದ್ದಿ! ಇನ್ಮುಂದೆ ಸಂದೇಶಗಳಿಗೆ ಎಲ್ಲಾ ಎಮೋಜಿ ಮೂಲಕ ಪ್ರತಿಕ್ರಿಯಿಸಬಹುದು

ಆದಾಗ್ಯೂ, ಬಳಕೆದಾರರು ಈ ವೈಶಿಷ್ಟ್ಯ ಬರಲು ಎಲ್ಲಿಯವರೆಗೂ ಕಾಯಬೇಕು ಗೊತ್ತಿಲ್ಲ. ಏಕೆಂದರೆ, ಈ ಬಗ್ಗೆ ವಾಟ್ಸ್​ಆ್ಯಪ್ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಈ ಹಿಂದೆಯೂ ವಾಟ್ಸ್​ಆ್ಯಪ್ ಸಂದೇಶಗಳಿಗೆ ತ್ವರಿತ ಪ್ರತಿಕ್ರಿಯೆ ನೀಡುವ ನಿಮಿತ್ತ ಆರು ಇಮೋಜಿಗಳನ್ನು ಪರಿಚಯಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ ಹಾಗೂ ಆ ವೈಶಿಷ್ಟ್ಯವನ್ನು ಈಗ ಬಹಳಷ್ಟು ಬಳಕೆದಾರರು ಬಳಸುತ್ತಿದ್ದಾರೆ ಕೂಡ. ಅಂದಹಾಗೆ ಈ ಆರು ಇಮೋಜಿಗಳ ಹೊಸ ವೈಶಿಷ್ಟ್ಯ ನಿಮ್ಮ ವಾಟ್ಸ್​ಆ್ಯಪ್ ನಲ್ಲಿ ಬರುತ್ತಿದೆಯೆ? ಇಲ್ಲವೆಂದಾದಲ್ಲಿ ಕೂಡಲೆ ನಿಮ್ಮ ವಾಟ್ಸ್​ಆ್ಯಪ್ ಅಪ್ಡೇಟ್ ಮಾಡಿಕೊಳ್ಳಿ ಹಾಗೂ ವೈಶಿಷ್ಟ್ಯವನ್ನು ಆನಂದಿಸಿ.
Published by:Ashwini Prabhu
First published: