ಪ್ರಪಂಚದಾದ್ಯಂತ ಒಂದು ಅಪ್ಲಿಕೇಶನ್ (Application) ಈಗಲೂ ಸದ್ದು ಮಾಡುತ್ತಿದ್ರೆ ಅದು ವಾಟ್ಸಪ್ ಅಂತಾನೂ ಹೇಳಬಹುದು. ವಾಟ್ಸಪ್ ಅಪ್ಲಿಕೇಶನ್ (WhatsApp Application) ವಿಶ್ವದಾದ್ಯಂತ 2 ಮಿಲಿಯನ್ಗೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಅದ್ರಲ್ಲೂ ಭಾರತದಲ್ಲೇ (Indian) 550 ಮಿಲಿಯನ್ ಬಳಕೆದಾರರಿದ್ದಾರೆ. ಹಲವಾರು ಟೆಕ್ನಾಲಜಿ ಅಪ್ಲಿಕೇಶನ್ಗಳಲ್ಲಿ (Technology Application) ಈ ವರ್ಷ ಅಪ್ಡೇಟ್ಗಳು ಬಂದಿವೆ. ಅದ್ರಲ್ಲೂ ಈ ಬಾರಿ ಅತೀ ಹೆಚ್ಚು ಅಪ್ಡೇಟ್ಸ್ಗಳನ್ನು ಮಾಡಿದ ಅಪ್ಲಿಕೇಶನ್ ಎಂದರೆ ಅದು ವಾಟ್ಪಪ್. ಈ ವರ್ಷ ಜನಪ್ರಿಯ ಮೆಸೇಜಿಂಗ್ ಆ್ಯಪ್ (Messaging App) ವಾಟ್ಸಪ್ ಬಳಕೆದಾರರಿಗೆ ನೀಡಿರುವ ಫೀಚರ್ಸ್ಗಳು ಎಲ್ಲವೂ ಬಹಳಷ್ಟು ಉಪಯುಕ್ತವಾದವುಗಳು. 2022ರಲ್ಲಿ ಸಾಕಷ್ಟು ಅಪ್ಡೇಟ್ಸ್ಗಳನ್ನು ಮಾಡಿದ ವಾಟ್ಸಪ್ನಲ್ಲಿ ಮುಂದಿನ ವರ್ಷ ಇನ್ನೂ 10-15 ಅಪ್ಢೇಟ್ಸ್ಗಳು ಬರಲಿವೆ ಎಂದು ಕಂಪನಿ ತಿಳಿಸಿದೆ.
ಇದೀಗ ವರ್ಷಾಂತ್ಯದಲ್ಲಿ ವಾಟ್ಸಪ್ ಹೊಸ ಅಪ್ಡೇಟ್ ಅನ್ನು ತರುವ ಬಗ್ಗೆ ಯೋಚಿಸಿದ್ದು, ಇನ್ಮುಂದೆ ವಾಟ್ಸಪ್ ಸ್ಟೇಟಸ್ ಹಾಕುವಾಗ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಯಾಕೆಂದರೆ ಇನ್ನುಮುಂದೆ ಬಳಕೆದಾರರಿಗೆ ವಾಟ್ಸಪ್ನಲ್ಲಿ ಸ್ಟೇಟಸ್ ಅನ್ನು ರಿಪೋರ್ಟ್ ಮಾಡುವಂತಹ ಫೀಚರ್ ಬರಲಿದೆ.
ವಾಟ್ಸಪ್ ಸ್ಟೇಟಸ್ ರಿಪೋರ್ಟ್ ಮಾಡ್ಬಹುದು
ಹೌದು, ವಾಟ್ಸಪ್ನಲ್ಲಿ ಇದುವರೆಗೆ ಸ್ಟೇಟಸ್ ಹಾಕುವುದು ಮತ್ತು ಬಳಕೆದಾರರಿಗೆ ಬೇಕಾದ ಹಾಗೆ ತೆಗೆಯಬಹುದಿತ್ತು. ಆದರೆ ಇನ್ಮುಂದೆ ವಾಟ್ಸಪ್ನಲ್ಲಿ ಸ್ಟೇಟಸ್ ಹಾಕುವಾಗ ಎಚ್ಚರದಿಂದ ಇರಬೇಕೆಂದು ಸೂಚಿಸಿದೆ. ವಾಟ್ಸಪ್ ತನ್ನ ಡೆಸ್ಕ್ಟಾಪ್ ಬಳಕೆದಾರರಿಗೆ ಸ್ಟೇಟಸ್ ಅನ್ನು ರಿಪೋರ್ಟ್ ಮಾಡುವಂತಹ ಆಯ್ಕೆಯನ್ನು ನೀಡಲು ಸಿದ್ಧತೆ ನಡೆಸಿದೆ.
ಇದನ್ನೂ ಓದಿ: ಈ ಗ್ಯಾಜೆಟ್ಸ್ಗಳ ಮೇಲೆ ಭಾರೀ ರಿಯಾಯಿತಿ, ಕ್ರಿಸ್ಮಸ್ ಗಿಫ್ಟ್ ಕೊಡೋಕೆ ಸೂಪರ್ ಅವಕಾಶ ಇಲ್ಲಿದೆ
ಇದುವರೆಗೆ ಈ ಆಯ್ಕೆ ವಾಟ್ಸಪ್ ಬಳಕೆದಾರರಿಗೆ ಮೆಸೇಜ್ ಮಾಡುವಲ್ಲಿ ನೀಡಿತ್ತು. ಆದರೆ ಇನ್ನು ಮುಂದಿನ ದಿನಗಳಲ್ಲಿ ಸ್ಟೇಟಸ್ನಲ್ಲೂ ಬರಲಿದೆ ಎಂದಿದ್ದಾರೆ.
ವರದಿಯ ಪ್ರಕಾರ
ಸದ್ಯ ವಾಬೀಟಾಇನ್ಫೋ ವರದಿಯ ಪ್ರಕಾರ, ನಿಮ್ಮ ಕಾಂಟೆಕ್ಟ್ನಲ್ಲಿರುವ ವ್ಯಕ್ತಿಯು ಅಶ್ಲೀಲ ವಿಡಿಯೋವನ್ನು ಸ್ಟೇಟಸ್ನಲ್ಲಿ ಹಂಚಿಕೊಂಡಿದ್ದರೆ ಅಥವಾ ಜನರ ಭಾವನೆಗಳಿಗೆ ಧಕ್ಕೆ ಮಾಡುವಂತಹ ಅಥವಾ ಹಿಂಸೆಯನ್ನು ಉತ್ತೇಜಿಸುವ ಯಾವುದೇ ವಿಷಯಗಳನ್ನು ಸ್ಟೇಟಸ್ನಲ್ಲಿ ಶೇರ್ ಮಾಡಿದ್ದರೆ ಈ ಕುರಿತು ನೋಡುಗರು ರಿಪೋರ್ಟ್ ಮಾಡಬಹುದು. ಪ್ರಸ್ತುತ ವಾಟ್ಸಪ್ ತನ್ನ ಡೆಸ್ಕ್ಟಾಪ್ ವರ್ಷನ್ನಲ್ಲಿ ಈ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ ಎಂದು ಹೇಳಿದೆ.
ಕೋಡ್ ಎಂಟ್ರಿ ಮಾಡಿಯೇ ವಾಟ್ಸಪ್ ಲಾಗಿನ್ ಆಗ್ಬೇಕು
ಭದ್ರತಾ ವಿಚಾರದಲ್ಲಿ ಬಳಕೆದಾರರಿಗೆ ವಾಟ್ಸಪ್ ಇನ್ನಷ್ಟು ಹೆಚ್ಚಿನ ಭದ್ರತೆ ನೀಡಲು ಮುಂದಾಗಿದೆ. ಹೊಸ ಡಿವೈಸ್ಗಳಿಗೆ ಲಾಗಿನ್ ಮಾಡುವಾಗ ಉತ್ತಮ ಭದ್ರತೆಯನ್ನು ನೀಡಲು ವಾಟ್ಸಪ್ ಮುಂದಾಗಿದ್ದು, ಹೊಸ ಪರಿಶೀಲನಾ ಕೋಡ್ ಅನ್ನು ನಮೂದಿಸುವ ಮೂಲಕವೇ ಹೊಸ ಡಿವೈಸ್ನಲ್ಲಿ ಲಾಗ್ಇನ್ ಪ್ರಕ್ರಿಯೆಯಲ್ಲಿ ತೊಡಗಬಹುದು ಎಂದು ತಿಳಿಸಿದೆ.
ಬಹು ಡಿವೈಸ್ಗಳಲ್ಲಿ ಒಂದೇ ಖಾತೆಯನ್ನು ಬಳಕೆ ಮಾಡುವ ಫೀಚರ್ಸ್ ಅನ್ನು ಅನಾವರಣ ಮಾಡಿದ ನಂತರ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ಈ ಸೌಲಭ್ಯ ನೀಡಲಾಗುತ್ತಿದೆ. ಈ ಹೊಸ ಫೀಚರ್ಸ್ ಮೂಲಕ ನೀವು ಹೊಸ ಡಿವೈಸ್ನಲ್ಲಿ ಲಾಗಿನ್ ಮಾಡುವಾಗ 6 ಅಂಕಿಯ ಕೋಡ್ ಅನ್ನು ವಾಟ್ಸ್ಆ್ಯಪ್ನಲ್ಲಿ ನೋಡಬಹುದಾಗಿದೆ. ಹಾಗೆಯೇ ಈ ಕೋಡ್ ಪ್ರಾರ್ಥಮಿಕ ಡಿವೈಸ್ ಅಥವಾ ಮೊಬೈಲ್ಗೆ ಮಾತ್ರ ರವಾನೆಯಾಗುತ್ತದೆ.
ಅಂಡೂ (UNDO) ಫೀಚರ್
ವಾಟ್ಸಪ್ ಕೆಲದಿನಗಳ ಹಿಂದೆ ತನ್ನ ಅಪ್ಲಿಕೇಶನ್ನಲ್ಲಿ ಮೆಸೇಜ್ ಅನ್ನು ಅಂಡೂ ಮಾಡುವ ಫೀಚರ್ಸ್ ಅನ್ನು ಬಿಡುಗಡೆ ಮಾಡಿತ್ತು. ಈ ಮೂಲಕ ಬಳಕೆದಾರರು ಯಾರಿಗಾದರೂ ತಪ್ಪಿ ಮೆಸೇಜ್ ಕಳುಹಿಸಿದ್ದರೆ ಅದನ್ನು ರೀ ಎಡಿಟ್ ಮಾಡಿ ಮತ್ತೆ ಸೆಂಡ್ ಮಾಡುವ ಅವಕಾಶವಿದೆ. ಇದನ್ನು ಬಳಕೆದಾರರು ಡಿಲೀಟ್ ಫಾರ್ ಮಿ ಎಂದು ಕೊಟ್ಟಾಗ ಅದರಲ್ಲಿ ಅಂಡೂ ಎಂಬ ಆಯ್ಕೆ ಕಾಣುತ್ತದೆ. ಅದನ್ನು ಸೆಲೆಕ್ಟ್ ಮಾಡುವ ಮೂಲಕ ಆ್ಯಕ್ಸಿಡೆಂಟಲ್ ಫೀಚರ್ ಅನ್ನು ಬಳಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ